Car Loan: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುತ್ತೀರಾ? ಕಾರ್ ಲೋನ್ ಪಡೆಯುವ ಮುನ್ನ ಈ ವಿಚಾರ ತಿಳಿದಿರಿ

|

Updated on: Jul 21, 2023 | 5:22 PM

Think Before Taking Loan For Used Car: ಯೂಸ್ಡ್ ಕಾರು ಅಥವಾ ಸೆಕೆಂಡ್ ಹ್ಯಾಂಡ್ ಕಾರುಗಳಿಗೆ ಬೇಡಿಕೆ ಕಡಿಮೆ ಆಗಿಲ್ಲ. ಈ ಹಳೆಯ ಕಾರುಗಳಿಗೂ ಸಾಲ ಸಿಗುತ್ತದೆ. ಆದರೆ, ಬಡ್ಡಿ ದರ ತುಸು ಹೆಚ್ಚಿರುತ್ತದೆ. ಆದ್ದರಿಂದ ಕಾರ್ ಲೋನ್ ಪಡೆಯುವ ಮುನ್ನ ಎಚ್ಚರ ವಹಿಸಿ.

Car Loan: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುತ್ತೀರಾ? ಕಾರ್ ಲೋನ್ ಪಡೆಯುವ ಮುನ್ನ ಈ ವಿಚಾರ ತಿಳಿದಿರಿ
ಯೂಸ್ಡ್ ಕಾರು
Follow us on

ಕಾರು ಇವತ್ತಿನ ದಿನಗಳಲ್ಲಿ ಲಕ್ಷುರಿ ವಸ್ತುವಾಗಿ ಉಳಿದಿಲ್ಲ. ಅದೀಗ ವೈಯಕ್ತಿಕವಾಗಿ ಅಗತ್ಯ ಸಾರಿಗೆ ಸಾಧನವಾಗಿದೆ. ಹೊಸ ಕಾರುಗಳನ್ನು ಖರೀದಿಸಲಾಗದ ಸಾಕಷ್ಟು ಸಂಖ್ಯೆಯ ಜನರು ಸೆಕೆಂಡ್ ಹ್ಯಾಂಡ್ ಕಾರು ಅಥವಾ ಯೂಸ್ಡ್ ಕಾರನ್ನು (Used Car) ಖರೀದಿಸುತ್ತಾರೆ. ಹೊಸ ಸ್ವಿಫ್ಟ್ ಡಿಜೈರ್ ಕಾರು ಶೂರೂಮ್​ನಲ್ಲಿ 7 ಲಕ್ಷ ರೂನಿಂದ 11 ಲಕ್ಷ ರೂವರೆಗೆ ಬೆಲೆ ಹೊಂದಿದೆ. ಉತ್ತಮ ಸ್ಥಿತಿಯಲ್ಲಿರುವ ಬಳಸಿದ ಕಾರು 4ರಿಂದ 6 ಲಕ್ಷ ರೂಗೆ ಲಭ್ಯ ಇರುತ್ತದೆ. ಆದರೂ ಹೆಚ್ಚಿನ ಮಂದಿಗೆ ಅದು ದೊಡ್ಡ ಮೊತ್ತವೇ ಆಗಿರುತ್ತದೆ. ಅದಕ್ಕಾಗಿ ಸಾಲ ಮಾಡಬೇಕಾಗಬಹುದು. ಯೂಸ್ಡ್ ಕಾರಿನ ಖರೀದಿಗೆ ನೀವು ಕಾರ್ ಲೋನ್ (Car Loan) ಮಾಡಿಸುವುದಾದರೆ ಈ ಮುಂದಿನ ಕೆಲ ಅಂಶಗಳು ಗಮನದಲ್ಲಿರಲಿ:

ಬಡ್ಡಿ ದರ ಎಷ್ಟಿದೆ ಮೊದಲು ವಿಚಾರಿಸಿ

ಈಗ ಬಹುತೇಕ ಕಾರ್ ಕಂಪನಿಗಳು ಯೂಸ್ಡ್ ಕಾರ್ ವಿಭಾವನ್ನು ಹೊಂದಿರುತ್ತವೆ. ಅಲ್ಲಿ ಕಾರುಗಳ ಬೆಲೆ ಹೆಚ್ಚಾದರೂ ಉತ್ತಮ ಸ್ಥಿತಿಯಲ್ಲಿರುವ ಕಾರುಗಳಿರುತ್ತವೆ. ಅಲ್ಲಿಯೇ ವಿವಿಧ ಬ್ಯಾಂಕುಗಳ ವತಿಯಿಂದ ಕಾರ್ ಲೋನ್ ಕೊಡಿಸುವ ಆಫರ್ ಇರುತ್ತದೆ. ಈ ಸಂದರ್ಭದಲ್ಲಿ ನೀವು ಕಾರ್ ಲೋನ್ ಪಡೆಯುವ ಮುನ್ನ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ವಿಧಿಸುವ ಬಡ್ಡಿ ದರ ಎಷ್ಟೆಂದು ತಿಳಿಯುವುದನ್ನು ಮರೆಯದಿರಿ.

ಸಾಮಾನ್ಯವಾಗಿ ಹೊಸ ಕಾರಿಗೆ ವರ್ಷಕ್ಕೆ ಬಡ್ಡಿ ಶೇ. 8.6ರಿಂದ ಶುರುವಾಗಿ ಶೇ. 15ರವರೆಗೂ ಇರುತ್ತದೆ. ಯುಸ್ಡ್ ಕಾರ್ ಆದರೆ ಬಡ್ಡಿ ದರ ಶೇ. 9.25ರಿಂದ ಆರಂಭವಾಗಿ ಶೇ. 25ಕ್ಕಿಂತಲೂ ಹೆಚ್ಚು ಮಟ್ಟಕ್ಕೆ ಹೋಗಬಹುದು. ಹೀಗಾಗಿ ಬಡ್ಡಿ ಮೇಲೆ ನಿಗಾ ಇರಲಿ.

ಇದನ್ನೂ ಓದಿSBI: ಎಸ್​ಬಿಐನಿಂದ ಬಿಡುಗಡೆ ಆಗಲಿವೆ ಇನ್​ಫ್ರಾ ಬಾಂಡ್​ಗಳು; 10,000 ಕೋಟಿ ರೂ ಮೊತ್ತದ ಸಾಲಕ್ಕೆ ಯೋಜನೆ

ಹಳೆಯ ಕಾರಿಗೆ ಸಾಲಕ್ಕೆ ಯಾಕೆ ಹೆಚ್ಚು ಬಡ್ಡಿದರ?

ಕಾರು ದಿನಗಳೆದಂತೆ ಮೌಲ್ಯ ಕಳೆದುಕೊಳ್ಳುವ ವಸ್ತು. ಈ ಕಾರಣಕ್ಕೆ ಕಾರಿನ ಪೂರ್ಣಮೊತ್ತವನ್ನು ಸಾಲವಾಗಿ ಕೊಡಲಾಗುವುದಿಲ್ಲ. ಒಂದು ವೇಳೆ ನೀವು ಸಾಲಮರುಪಾವತಿ ಮಾಡದೇ ಇದ್ದರೆ ನಿಮ್ಮ ಕಾರನ್ನು ಹರಾಜಿ ಹಾಕಿ ಬಂದ ದುಡ್ಡನ್ನು ಸಾಲಕ್ಕೆ ಮುರಿದುಕೊಳ್ಳಲಾಗುತ್ತದೆ. ಕಾರು ಮಾರಿದಾಗ ಹೆಚ್ಚಿನ ಮೊತ್ತಕ್ಕೆ ಅದು ಸೇಲ್ ಆಗದೇ ಇರಬಹುದು. ಹಳೆಯ ಕಾರಿನ ವಿಚಾರದಲ್ಲಿ ಬ್ಯಾಂಕುಗಳಿಗೆ ಇನ್ನೂ ಹೆಚ್ಚಿನ ರಿಸ್ಕ್ ಇರುತ್ತದೆ. ಹೀಗಾಗಿ, ಕಾರಿನ ಬೆಲೆಯ ಶೇ. 70ರಷ್ಟು ಮೊತ್ತವನ್ನು ಮಾತ್ರ ಸಾಲವಾಗಿ ನೀಡಲಾಗುತ್ತದೆ. ಜೊತೆಗೆ ಅದನ್ನು ಅಸುರಕ್ಷಿತ ಸಾಲವಾಗಿ ಪರಿಗಣಿಸಿ, ಹೆಚ್ಚಿನ ಬಡ್ಡಿ ದರ ವಿಧಿಸಲಾಗುತ್ತದೆ.

ಕಾರ್ ಲೋನ್ ಬಿಟ್ಟು ಪರ್ಯಾಯ ಮಾರ್ಗವೇನಿದೆ?

  1. ನೀವು ಗೃಹಸಾಲ ಪಡೆದಿದ್ದರೆ ಅದಕ್ಕೆ ಟಾಪ್ ಅಪ್
  2. ಪರ್ಸನಲ್ ಲೋನ್
  3. ಗೋಲ್ಡ್ ಲೋನ್
  4. ಇನ್ಷೂರೆನ್ಸ್, ಎಫ್​ಡಿ, ಮ್ಯೂಚುವಲ್ ಫಂಡ್ ಇತ್ಯಾದಿ ಯೂಡಿಕೆಗಳನ್ನು ಒತ್ತೆ ಇಟ್ಟು ಸಾಲ

ಇದನ್ನೂ ಓದಿPost Office Schemes: ಪೋಸ್ಟ್ ಆಫೀಸ್ ಸ್ಕೀಮ್​ಗಳ ಬಗ್ಗೆ ಕುತೂಹಲವಾ? ಇಲ್ಲಿದೆ ವಿವಿಧ ಯೋಜನೆಗಳು, ಬಡ್ಡಿ ದರಗಳ ವಿವರ

ನಿಮ್ಮಲ್ಲಿ ಚಿನ್ನ, ಗೃಹಸಾಲ, ಇನ್ವೆಸ್ಟ್​ಮೆಂಟ್ ಮೇಲೆ ಸಾಲ ಪಡೆಯುವುದು ಸಾಧ್ಯವಾಗದಿದ್ದರೆ ಪರ್ಸನಲ್ ಲೋನ್ ಪಡೆಯಬಹುದು. ಆದರೆ, ಕಾರ್ ಲೋನ್​ಗೆ ಎಷ್ಟು ಬಡ್ಡಿ ದರ ಇದೆ ಮತ್ತು ಪರ್ಸನಲ್ ಲೋನ್​ಗೆ ಎಷ್ಟು ಬಡ್ಡಿ ದರ ಇದೆ ಎಂದು ಹೋಲಿಕೆ ಮಾಡಿ ನೋಡಿ. ಪರ್ಸನಲ್ ಲೋನ್​ಗೆ ಸಾಮಾನ್ಯವಾಗಿ ಶೇ. 15ರಿಂದ ಶೇ. 18ರವರೆಗೂ ಬಡ್ಡಿ ದರ ಇರುತ್ತದೆ. ಕಾರ್ ಲೋನ್​ನಲ್ಲಿ ಇದಕ್ಕಿಂತ ಕಡಿಮೆ ಬಡ್ಡಿ ದರ ಇದ್ದರೆ ಅದನ್ನೇ ಪಡೆಯುವುದು ಉತ್ತಮ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ