Tata Neu FD: ಟಾಟಾ ನ್ಯೂ ಪ್ಲಾಟ್​ಫಾರ್ಮ್​ನಲ್ಲಿ ಫಿಕ್ಸೆಡ್ ಡೆಪಾಸಿಟ್; ಶೇ. 9.1ರವರೆಗೆ ಬಡ್ಡಿ

|

Updated on: Jan 12, 2025 | 1:02 PM

Tata Neu platform for fixed deposits: ಟಾಟಾ ಡಿಜಿಟಲ್​ನ ಸೂಪರ್ ಆ್ಯಪ್ ಟಾಟಾ ನ್ಯೂನಲ್ಲಿ ಫಿಕ್ಸೆಡೆ ಡೆಪಾಸಿಟ್​ಗಳಿಗೆ ಶೇ. 9.1ರವರೆಗೆ ಬಡ್ಡಿ ಸಿಗುತ್ತದೆ. ವಿವಿಧ ಬ್ಯಾಂಕುಗಳು ಮತ್ತು ಎನ್​ಬಿಎಫ್​ಸಿಗಳು, ಸ್ಮಾಲ್ ಫೈನಾನ್ಸ್ ಬ್ಯಾಂಕುಗಳ ಹಣಕಾಸು ಸೇವೆಗಳು ಈ ಪ್ಲಾಟ್​ಫಾರ್ಮ್​ನಲ್ಲಿ ಲಭ್ಯ ಇವೆ. ಬ್ಯಾಂಕುಗಳಲ್ಲಿ ಎಫ್​ಡಿ ತೆರೆಯಬೇಕಾದರೆ ಸೇವಿಂಗ್ಸ್ ಅಕೌಂಟ್ ಬೇಕು. ಆದರೆ, ಟಾಟಾ ನ್ಯೂನಲ್ಲಿ ನೇರವಾಗಿ ಎಫ್​ಡಿ ತೆರೆಯಬಹುದು.

Tata Neu FD: ಟಾಟಾ ನ್ಯೂ ಪ್ಲಾಟ್​ಫಾರ್ಮ್​ನಲ್ಲಿ ಫಿಕ್ಸೆಡ್ ಡೆಪಾಸಿಟ್; ಶೇ. 9.1ರವರೆಗೆ ಬಡ್ಡಿ
ಫಿಕ್ಸೆಡ್ ಡೆಪಾಸಿಟ್
Follow us on

ನವದೆಹಲಿ, ಜನವರಿ 12: ಟಾಟಾ ಡಿಜಿಟಲ್​ನ ಸೂಪರ್ ಆ್ಯಪ್ ಆದ ಟಾಟಾ ನ್ಯೂ (Tata Neu) ಪ್ಲಾಟ್​ಫಾರ್ಮ್​ನಲ್ಲಿ ಆಕರ್ಷಕ ಎಫ್​ಡಿ ಆಫರ್​ಗಳಿವೆ. ಕನಿಷ್ಠ ಫಿಕ್ಸೆಡ್ ಮೊತ್ತ 1,000 ರೂನಿಂದ ಆರಂಭವಾಗುತ್ತದೆ. ಕಮರ್ಷಿಯಲ್ ಬ್ಯಾಂಕುಗಳಿಗಿಂತ ಹೆಚ್ಚು ಬಡ್ಡಿ ನೀಡಲಾಗುತ್ತದೆ. ನಿಶ್ಚಿತ ಠೇವಣಿಗಳಿಗೆ ಶೇ. 9.1ರವರೆಗೆ ಬಡ್ಡಿ ಸಿಗುತ್ತದೆ. ಎಲ್ಲವೂ ಆನ್​ಲೈನ್​ನಲ್ಲೇ ನಡೆಯಲಿದ್ದು ಕೆಲವೇ ನಿಮಿಷಗಳಲ್ಲಿ ನೀವು ಠೇವಣಿ ತೆರೆಯಬಹುದು. ಈ ಎಫ್​ಡಿ ಮುಖಾಂತರ ಟಾಟಾ ಡಿಜಿಟಲ್ ಸಂಸ್ಥೆ ರೀಟೇಲ್ ಹೂಡಿಕೆ ಮಾರುಕಟ್ಟೆಗೆ ಅಡಿ ಇಟ್ಟಂತಾಗಿದೆ.

ಸೇವಿಂಗ್ಸ್ ಅಕೌಂಟ್ ತೆರೆಯುವ ಅಗತ್ಯ ಇಲ್ಲ…

ನೀವು ಬ್ಯಾಂಕುಗಳಲ್ಲಿ ಫಿಕ್ಸೆಡ್ ಡೆಪಾಸಿಟ್ ತೆರೆಯಬೇಕಾದರೆ ಆ ಬ್ಯಾಂಕಲ್ಲಿ ಉಳಿತಾಯ ಖಾತೆ ಹೊಂದಿರಬೇಕು. ಆದರೆ, ಟಾಟಾ ನ್ಯೂನಲ್ಲಿ ಅದರ ಅಗತ್ಯವೇ ಇರುವುದಿಲ್ಲ. ನೀವು ನೇರವಾಗಿ ನಿಶ್ಚಿತ ಠೇವಣಿ ತೆರೆಯಲು ಸಾಧ್ಯ. ಕೇವಲ 10 ನಿಮಿಷದೊಳಗೆ ಹೂಡಿಕೆ ಪೂರ್ಣಗೊಳಿಸಲು ಸಾಧ್ಯ.

ಇದನ್ನೂ ಓದಿ: ಮೃತ ವ್ಯಕ್ತಿಯ ಸಾಲಕ್ಕೆ ಕುಟುಂಬಸ್ಥರು ಹೊಣೆಗಾರರಾ? ಕಾನೂನು ಏನು ಹೇಳುತ್ತೆ? ಇಲ್ಲಿದೆ ಡೀಟೇಲ್ಸ್

ಟಾಟಾ ನ್ಯೂ ಒಂದು ಪ್ಲಾಟ್​ಫಾರ್ಮ್ ಮಾತ್ರ…

ಟಾಟಾ ನ್ಯೂ ಎಂಬುದು ಫಿಕ್ಸೆಡ್ ಡೆಪಾಸಿಟ್​ಗಳಿಗೆ ಒಂದು ಮಾರುಕಟ್ಟೆ ಇದ್ದಂತೆ. ವಿವಿಧ ಕಮರ್ಷಿಯಲ್ ಬ್ಯಾಂಕುಗಳು, ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಶ್ರೀರಾಮ್ ಫೈನಾನ್ಸ್, ಬಜಾಜ್ ಫೈನಾನ್ಸ್ ಇತ್ಯಾದಿ ಎನ್​ಬಿಎಫ್​ಸಿಗಳಿಗೆ ಟಾಟಾ ನ್ಯೂ ವೇದಿಕೆ ಆಗಿದೆ. ಗ್ರಾಹಕರು ಯಾವ ಬ್ಯಾಂಕ್​ನದ್ದಾದರೂ ಎಫ್​ಡಿ ಆಯ್ದುಕೊಳ್ಳಬಹುದು. 5 ಲಕ್ಷ ರೂವರೆಗಿನ ಠೇವಣಿಗಳಿಗೆ ಸರ್ಕಾರದಿಂದ ಖಾತ್ರಿ ಇರುತ್ತದೆ.

ಟಾಟಾ ನ್ಯೂ ತನ್ನ ಪ್ಲಾಟ್​ಫಾರ್ಮ್​ನಲ್ಲಿ ಫಿಕ್ಸೆಡ್ ಡೆಪಾಸಿಟ್ ಮಾತ್ರವಲ್ಲ, ಆರ್​ಡಿಯನ್ನೂ ಸದ್ಯದಲ್ಲೇ ಪರಿಚಯಿಸಲಿದೆ. ಈಗಾಗಲೇ ಕಡಿಮೆ ಬಡ್ಡಿದರದಲ್ಲಿ ಸಾಲವನ್ನೂ ಈ ಪ್ಲಾಟ್​ಫಾರ್ಮ್​​ನಲ್ಲಿ ನೀಡಲಾಗುತ್ತಿದೆ.

ಇದನ್ನೂ ಓದಿ: MSSC scheme: ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್; ಠೇವಣಿ ಮೊತ್ತ, ಅವಧಿ, ಬಡ್ಡಿ ಇತ್ಯಾದಿ ವಿವರ

ಶ್ರೀರಾಮ್ ಫೈನಾನ್ಸ್​ನಂತಹ ಹಣಕಾಸು ಸಂಸ್ಥೆಗಳು ಫಿಕ್ಸೆಡ್ ಡೆಪಾಸಿಟ್​ಗೆ ಹೆಚ್ಚಿನ ಬಡ್ಡಿ ಆಫರ್ ಮಾಡುತ್ತವೆ. ಟಾಟಾ ನ್ಯೂನಲ್ಲಿ ಇವುಗಳನ್ನು ಪಡೆಯುವ ಅವಕಾಶ ಇದೆ. ಹೆಚ್ಚೆಚ್ಚು ಬ್ಯಾಂಕುಗಳು ಈ ಪ್ಲಾಟ್​ಫಾರ್ಮ್​ನಲ್ಲಿ ಲಿಸ್ಟ್ ಆಗುವ ನಿರೀಕ್ಷೆ ಇದೆ.

ಟಾಟಾ ನ್ಯೂ ಪ್ಲಾಟ್​ಫಾರ್ಮ್​ನಲ್ಲಿ ಹಣಕಾಸು ಸೇವೆ ಮಾತ್ರವಲ್ಲ, ದಿನಸಿ ವಸ್ತು, ಔಷಧ, ಗಿಫ್ಟ್ ಕಾರ್ಡ್ ಇತ್ಯಾದಿ ಉತ್ಪನ್ನಗಳು ಮತ್ತು ಸೇವೆಗಳು ಸಿಗುತ್ತವೆ. ಯುಪಿಐ ಪೇಮೆಂಟ್ ಸೌಲಭ್ಯ ಇದೆ. ಬಿಲ್ ಪಾವತಿಯನ್ನು ಇದೇ ಆ್ಯಪ್​ನಲ್ಲಿ ಮಾಡಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ