Crorepati: 10,000 ರೂ ಎಸ್​ಐಪಿಯಿಂದ ಎಷ್ಟು ದಿನದಲ್ಲಿ ಕೋಟ್ಯಾಧಿಪತಿಯಾಗಬಹುದು? ಇಲ್ಲಿದೆ ಲೆಕ್ಕಾಚಾರ

|

Updated on: May 23, 2023 | 7:08 PM

How Fast to Earn Rs 1 Crore: ಸದ್ಯ ಒಳ್ಳೆಯ ಲಾಭ ತಂದುಕೊಡುವ ಎಸ್​ಐಪಿಗಳಿವೆ. ಹಾಗಂತ ಈ ಎಸ್​ಐಪಿಗಳಿಂದ ದಿಢೀರ್ ಕೋಟ್ಯಾಧಿಪತಿಯಾಗಲು ಸಾಧ್ಯವಿಲ್ಲ. ನೀವು ನಿರ್ದಿಷ್ಟ ಮತ್ತು ವಾಸ್ತವ ಗುರಿ ಇಟ್ಟುಕೊಂಡು ಹೂಡಿಕೆ ಮಾಡಿದರೆ ತಕ್ಕ ಪ್ರತಿಫಲ ಉಂಟು.

Crorepati: 10,000 ರೂ ಎಸ್​ಐಪಿಯಿಂದ ಎಷ್ಟು ದಿನದಲ್ಲಿ ಕೋಟ್ಯಾಧಿಪತಿಯಾಗಬಹುದು? ಇಲ್ಲಿದೆ ಲೆಕ್ಕಾಚಾರ
ಹಣ
Follow us on

ಈಗ ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್​ಗಳು (SIP) ಹೆಚ್ಚೆಚ್ಚು ಜನಪ್ರಿಯವಾಗುತ್ತಿವೆ. ಜನರು ಈ ಸ್ಕೀಮ್​ಗಳಲ್ಲಿ ಹೂಡಿಕೆ ಮಾಡಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಸದ್ಯ ಒಳ್ಳೆಯ ಲಾಭ ತಂದುಕೊಡುವ ಎಸ್​ಐಪಿಗಳಿವೆ. ಹಾಗಂತ ಈ ಎಸ್​ಐಪಿಗಳಿಂದ ದಿಢೀರ್ ಕೋಟ್ಯಾಧಿಪತಿಯಾಗಲು ಸಾಧ್ಯವಿಲ್ಲ. ಲಕ್ಷ ರುಪಾಯಿ ಹಾಕಿ ಒಂದು ವರ್ಷದಲ್ಲಿ ಕೋಟಿ ರೂ ರಿಟರ್ನ್ ಸಿಗುವುದಿಲ್ಲ. ನೀವು ನಿರ್ದಿಷ್ಟ ಮತ್ತು ವಾಸ್ತವ ಗುರಿ ಇಟ್ಟುಕೊಂಡು ಹೂಡಿಕೆ ಮಾಡಿದರೆ ತಕ್ಕ ಪ್ರತಿಫಲ ಉಂಟು. ಆದರೆ, ಈಗಿರುವ ಮ್ಯೂಚುವಲ್ ಫಂಡ್ ಆಧಾರಿತ ಎಸ್​ಐಪಿಗಳ ಹಿಂದಿನ ಕಾರ್ಯಸಾಧನೆಯನ್ನು ಗಮನಿಸುವುದಾದರೆ ಸರಾಸರಿಯಾಗಿ ವರ್ಷಕ್ಕೆ ಇವು ಶೇ. 12ರಷ್ಟು ರಿಟರ್ನ್ ಕೊಡಬಲ್ಲುವು ಎಂದು ನಂಬಿಕೊಳ್ಳಬಹುದು.

ಈ ಲೆಕ್ಕಾಚಾರದಲ್ಲಿ ನಾವು ಒಂದು ಎಸ್​ಐಪಿಯಿಂದ ನಮಗೆ ಎಷ್ಟು ಆದಾಯ ಬರುತ್ತದೆ ಎಂದು ಅಂದಾಜು ಮಾಡಬಹುದು. ಎಸ್​ಐಪಿಯಲ್ಲಿ ಹೂಡಿಕೆ ಮಾಡುವವರಲ್ಲಿ ಬಹುತೇಕರು ಸಂಬಳದಾರರೇ. ವರ್ಷಕ್ಕೆ ಅವರ ಸಂಬಳ ಶೇ. 10ರಷ್ಟು ಹೆಚ್ಚಾಗುತ್ತದೆ ಎಂದು ಭಾವಿಸಿ ಶೇ. 5ರಷ್ಟು ಎಸ್​ಐಪಿ ಹೂಡಿಕೆ ಪ್ರತೀ ವರ್ಷವೂ ಹೆಚ್ಚಿಸುತ್ತಾ ಹೋಗುವುದ ಪ್ರಾಯೋಗಿಕವಾಗಿ ಸರಿಯೂ ಹೌದು. ಇದು ಹೂಡಿಕೆದಾರರಿಗೆ ಹೆಚ್ಚು ರಿಸ್ಕ್ ಎನಿಸದು. ಹೂಡಿಕೆ ಮೊತ್ತವೂ ಹೆಚ್ಚುತ್ತದೆ.

ಇದನ್ನೂ ಓದಿSukanya Samriddhi Yojana: ತಿಂಗಳಿಗೆ 10,000 ರೂ ಕಟ್ಟಿ, 52 ಲಕ್ಷ ರಿಟರ್ನ್ ಪಡೆಯಿರಿ; ಇದು ಸುಕನ್ಯ ಸಮೃದ್ಧಿ ಯೋಜನೆ ವಿಶೇಷತೆ

10,000 ರೂ ಎಸ್​ಐಪಿಯಿಂದ 17 ವರ್ಷದಲ್ಲಿ ಕೋಟ್ಯಾಧಿಪತಿ

ಉದಾಹರಣೆಗೆ ನೀವು 10,000 ರೂ ಎಸ್​ಐಪಿ ಪ್ಲಾನ್ ಆಯ್ದುಕೊಂಡಿದ್ದೀರಿ ಎಂದಿಟ್ಟುಕೊಳ್ಳಿ. ತಿಂಗಳಿಗೆ 10,000 ರೂ ಕಟ್ಟಬೇಕು. ಒಂದು ವರ್ಷದ ಬಳಿಕ ಶೇ. 5ರಷ್ಟು ಹೂಡಿಕೆ ಹೆಚ್ಚಿಸಬೇಕು. ಅಂದರೆ, 500 ರೂನಷ್ಟು ಹೆಚ್ಚು ಮಾಡಿದರೆ 2ನೇ ವರ್ಷದಲ್ಲಿ ನೀವು ತಿಂಗಳಿಗೆ ಕಟ್ಟುವ ಹಣ 10,500 ರೂ ಆಗುತ್ತದೆ. ಮುಂದಿನ ವರ್ಷವೂ ನೀವು ಶೇ. 5ರಷ್ಟು ಹೂಡಿಕೆ ಹೆಚ್ಚಿಸುತ್ತಾ ಹೋಗಬೇಕು. ಇದೇ ರೀತಿ ನೀವು ಪ್ರತೀ ವರ್ಷವೂ ಹೂಡಿಕೆ ಹೆಚ್ಚಿಸುತ್ತಾ ಹೋದಲ್ಲಿ 17 ವರ್ಷ 10 ತಿಂಗಳಲ್ಲಿ 1 ಕೋಟಿ ರೂ ಒಡೆಯರಾಗಬಲ್ಲಿರಿ. ಗಮನಿಸಿ, ಇಲ್ಲಿ ಎಸ್​ಐಪಿ ಪ್ಲಾನ್ ಶೇ. 12ರಷ್ಟು ದರದಲ್ಲಿ ಬೆಳೆದರೆ ಇದು ಸಾಧ್ಯ. ನಿಮ್ಮ ಅದೃಷ್ಟಕ್ಕೆ ಅದಕ್ಕಿಂತ ಹೆಚ್ಚಿನ ಸಿಎಜಿಆರ್ ಇದ್ದರೆ ಇನ್ನೂ ಬೇಗ ಕೋಟ್ಯಾಧಿಪತಿಯಾಗಬಹುದು.

5 ವರ್ಷದೊಳಗೆ ಕೋಟಿ ರೂ ಕುಬೇರನಾಗಲು ಎಷ್ಟು ಮೊತ್ತದ ಎಸ್​ಐಪಿ ಬೇಕಾಗುತ್ತದೆ?

ನಿಮಗೆ ಆದಷ್ಟೂ ಬೇಗ ಕೋಟ್ಯಾಧಿಪತಿಯಾಗುವ ಅಸೆ ಇರಬಹುದು. ಅದನ್ನು ಸಾಕಾರಗೊಳಿಸಲು ಹೂಡಿಕೆ ಹಣ ಹೆಚ್ಚಿರಬೇಕು. ಎಸ್​ಐಪಿ ಮೂಲಕ ನೀವು 5 ವರ್ಷದೊಳಗೆ ಕೋಟ್ಯಾಧಿಪತಿ ಆಗಬೇಕೆಂದರೆ 1 ಲಕ್ಷ ರೂಗಳ ಎಸ್​ಐಪಿ ಪಡೆಯಬೇಕು.

ಇದನ್ನೂ ಓದಿLIC: ಎಲ್​ಐಸಿ ಪಾಲಿಸಿ ಧಮಾಕ; ದಿನಕ್ಕೆ 45 ರೂ ಕಟ್ಟಿ, 25 ಲಕ್ಷ ಪಡೆಯಿರಿ; ನೋಡಿ ಈ ಪಾಲಿಸಿ ಡೀಟೇಲ್ಸ್

ತಿಂಗಳಿಗೆ 1 ಲಕ್ಷ ರೂ ಹೂಡಿಕೆ ಮಾಡುತ್ತಾ ಹೋಗಬೇಕು. ವರ್ಷದ ಬಳಿಕ ಶೇ. 5ರಷ್ಟು ಹೂಡಿಕೆ ಹೆಚ್ಚಿಸಬೇಕು. ಈ ರೀತಿ ನೀವು ಹೂಡಿಕೆ ಮಾಡುತ್ತಾ ಹೋದರೆ, ಹಾಗು ಎಸ್​ಐಪಿಯು ಶೇ. 12 ದರದಲ್ಲಿ ಲಾಭ ಮಾಡುತ್ತಾ ಹೋದಲ್ಲಿ 4 ವರ್ಷ 5 ತಿಂಗಳಲ್ಲಿ ನಿಮ್ಮ ಹೂಡಿಕೆ 1 ಕೋಟಿ ರೂಗೆ ಬೆಳೆಯುತ್ತದೆ.

ಆದರೆ, ಯಾವ ಮ್ಯೂಚುವಲ್ ಫಂಡ್​ನ ಎಸ್​ಐಪಿಯಲ್ಲಿ ನೀವು ಹೂಡಿಕೆ ಮಾಡುತ್ತೀರಿ ಎಂಬುದು ಮುಖ್ಯ. ಇದನ್ನು ನಿರ್ದರಿಸಲು ಸೂಕ್ತ ಹಣಕಾಸು ಸಲಹೆಗಾರರನ್ನು ಸಂಪರ್ಕಿಸುವುದು ಯೋಗ್ಯ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ