Sukanya Samriddhi Yojana: ತಿಂಗಳಿಗೆ 10,000 ರೂ ಕಟ್ಟಿ, 52 ಲಕ್ಷ ರಿಟರ್ನ್ ಪಡೆಯಿರಿ; ಇದು ಸುಕನ್ಯ ಸಮೃದ್ಧಿ ಯೋಜನೆ ವಿಶೇಷತೆ

Good Savings and Investment Plan: ಸುಕನ್ಯಾ ಸಮೃದ್ಧಿ ಯೋಜನೆಯನ್ನು 10 ವರ್ಷದೊಳಗಿನ ಬಾಲಕಿಯರ ಹೆಸರಿನಲ್ಲಿ ಮಾಡಿಸಬಹುದು. ಈ ಯೋಜನೆಯಲ್ಲಿ ತಿಂಗಳಿಗೆ 10,000 ರೂನಂತೆ 15 ವರ್ಷ ಕಟ್ಟಿದರೆ ಮೆಚ್ಯೂರಿಟಿ ಬಳಿಕ ನಿಮ್ಮ ಹಣ 52 ಲಕ್ಷ ರೂ ಆಗುತ್ತದೆ.

Sukanya Samriddhi Yojana: ತಿಂಗಳಿಗೆ 10,000 ರೂ ಕಟ್ಟಿ, 52 ಲಕ್ಷ ರಿಟರ್ನ್ ಪಡೆಯಿರಿ; ಇದು ಸುಕನ್ಯ ಸಮೃದ್ಧಿ ಯೋಜನೆ ವಿಶೇಷತೆ
ಉಳಿತಾಯ ಯೋಜನೆ
Follow us
|

Updated on: May 22, 2023 | 1:53 PM

ಸರ್ಕಾರದಿಂದ ಕೆಲ ಪ್ರಮುಖವಾದ ಉಳಿತಾಯ ಯೋಜನೆಗಳು (Savings Plans) ಸಾರ್ವಜನಿಕರಿಗೆ ಲಭ್ಯ ಇವೆ. ಇವುಗಳು ತೆರಿಗೆ ಲಾಭದ ಕಾರಣಕ್ಕೆ ಈಗಲೂ ಜನಾಕರ್ಷಣೆಯಾಗಿ ಉಳಿದಿವೆ. ಇಂಥ ಯೋಜನೆಗಳಲ್ಲಿ ಸುಕನ್ಯ ಸಮೃದ್ಧಿ ಯೋಜನೆಯೂ ಒಂದು. ಹೆಣ್ಮಕ್ಕಳ ಕ್ಷೇಮಾಭ್ಯುದಯದ ದೃಷ್ಟಿಯಿಂದ ಈ ಯೋಜನೆ ರೂಪಿಸಲಾಗಿದೆ. ಠೇವಣಿ ಹಣಕ್ಕೆ ಸರ್ಕಾರವೇ ಗ್ಯಾರಂಟಿ ಎನಿಸಿದೆ. ಬಡ್ಡಿ ಬರುವುದರ ಜೊತೆಗೆ ತೆರಿಗೆ ಅನುಕೂಲವನ್ನೂ ಒದಗಿಸುತ್ತದೆ.

ಹೆಣ್ಮಗುವಿನ ಓದು ಮತ್ತು ಮದುವೆ ಖರ್ಚಿಗಾಗಿ ಸುಕನ್ಯಾ ಸಮೃದ್ಧಿ ಯೋಜನೆ ಅನುಕೂಲ

ಸುಕನ್ಯಾ ಸಮೃದ್ಧಿ ಯೋಜನೆಯನ್ನು ಆಗ ತಾನೆ ಹುಟ್ಟಿದ ಹೆಣ್ಮಗುವಿನ ಹೆಸರಿನಲ್ಲಿ ಆಕೆಯ ಪೋಷಕರು ಮಾಡಿಸಬಹುದು. ಅಥವಾ 10 ವರ್ಷದೊಳಗಿನ ಬಾಲಕಿಯರ ಹೆಸರಿನಲ್ಲಿ ಮಾಡಿಸಬಹುದು.

ಬಾಲಕಿಯ ವಯಸ್ಸು 14 ವರ್ಷ ಪೂರ್ಣಗೊಳ್ಳುವವರೆಗೂ ಕಂತುಗಳನ್ನು ಕಟ್ಟಲು ಅವಕಾಶ ಇದೆ. ಬಾಲಕಿಯ ವಯಸ್ಸು 18 ವರ್ಷ ದಾಟಿದಾಗ ಮೆಚ್ಯೂರಿಟಿಯ ಅರ್ಧ ಮೊತ್ತವನ್ನು ಹಿಂಪಡೆಯುವ ಅವಕಾಶ ಇರುತ್ತದೆ. ಬಾಲಕಿಯ ವಯಸ್ಸು 21 ವರ್ಷ ದಾಟಿದಾಗ ಪೂರ್ತಿ ಮೆಚ್ಯೂರಿಟಿ ಹಣ ಹಿಂಪಡೆಯಬಹುದು.

ಇದನ್ನೂ ಓದಿTravel Scams: ಆನ್​ಲೈನ್​ನಲ್ಲಿ ಟಿಕೆಟ್, ಹೋಟೆಲ್ ಬುಕ್ ಮಾಡುತ್ತೀರಾ? ಸ್ಕ್ಯಾಮ್​ಗಳಿಗೆ ಬಲಿಯಾಗದಿರಿ ಜೋಕೆ; ನೀವು ಎಚ್ಚರ ವಹಿಸಬೇಕಾದ ಸಂಗತಿಗಳನ್ನು ತಿಳಿದಿರಿ

ಬಡ್ಡಿ ದರ ಶೇ. 7.6; ಕಂತಿನ ಹಣ ತಿಂಗಳಿಗೆ 250ರಿಂದ 1.5 ಲಕ್ಷ ರೂವರೆಗೆ

ಅಂಚೆ ಕಚೇರಿ, ಬ್ಯಾಂಕ್ ಇತ್ಯಾದಿ ಕಡೆ ಈ ಯೋಜನೆ ಪಡೆಯಬಹುದು. ಸರ್ಕಾರ ಇದರ ಠೇವಣಿಗೆ ಶೇ. 7.6ರಷ್ಟು ಬಡ್ಡಿ ಕೊಡುತ್ತದೆ. ವರ್ಷಕ್ಕೆ ಕಟ್ಟುವ ಕಂತಿನ ಹಣ 250 ರೂನಿಂದ ಆರಂಭವಾಗುತ್ತದೆ. ಒಂದೂವರೆ ಲಕ್ಷ ರೂವರೆಗೂ ಒಂದು ವರ್ಷದಲ್ಲಿ ಕಂತು ಕಟ್ಟಬಹುದು.

ಎಸ್​ಎಸ್​ವೈ ಮೆಚ್ಯೂರಿಟಿ ಹಣ 52 ಲಕ್ಷ ಸಾಧ್ಯವಾಗಿಸುವುದು ಹೇಗೆ?

ನೀವು ಮಗು ಹುಟ್ಟಿದಾಗಲೇ ಸ್ಕೀಮ್ ಪಡೆದುಕೊಂಡರೆ 15 ವರ್ಷ ಕಂತು ಕಟ್ಟುವ ಅವಕಾಶ ಇರುತ್ತದೆ. ನೀವು ಒಂದು ವರ್ಷಕ್ಕೆ 1,20,000 ರೂನಂತೆ ಕಂತು ಕಟ್ಟಿದರೆ 21 ವರ್ಷ ಬಳಿಕ ಮೆಚ್ಯೂರ್ ಆಗುವ ಮೊತ್ತ 52,74,457 ರೂ ಆಗುತ್ತದೆ. ವರ್ಷಕ್ಕೆ 1.2 ಲಕ್ಷ ರೂ ಎಂದರೆ ತಿಂಗಳಿಗೆ 10,000 ರೂ ಆಗುತ್ತದೆ.

ಇದನ್ನೂ ಓದಿLIC: ಎಲ್​ಐಸಿ ಪಾಲಿಸಿ ಧಮಾಕ; ದಿನಕ್ಕೆ 45 ರೂ ಕಟ್ಟಿ, 25 ಲಕ್ಷ ಪಡೆಯಿರಿ; ನೋಡಿ ಈ ಪಾಲಿಸಿ ಡೀಟೇಲ್ಸ್

ಒಂದು ವೇಳೆ ಗರಿಷ್ಠ ಕಂತು ಹಣವಾದ ವರ್ಷಕ್ಕೆ 1.5 ಲಕ್ಷ ರೂ ಕಟ್ಟಿದರೆ ಮೆಚ್ಯೂರ್ ಆದಾಗ ಜಮೆಯಾಗುವ ಮೊತ್ತ 63 ಲಕ್ಷ ರೂ.

ಸುಕನ್ಯ ಸಮೃದ್ಧಿ ಯೋಜನೆಯಿಂದ ಆದಾಯ ತೆರಿಗೆ ಲಾಭ

ಸುಕನ್ಯ ಸಮೃದ್ಧಿ ಯೋಜನೆಯಲ್ಲಿ ನೀವು ವರ್ಷಕ್ಕೆ 1.5 ಲಕ್ಷ ರೂವರೆಗೆ ಹೂಡಿಕೆ ಮಾಡಲು ಸಾಧ್ಯ. ಈ ಯೋಜನೆ ಆದಾಯ ತೆರಿಗೆ ವಿನಾಯಿತಿ ಪಡೆದಿದೆ. ನೀವು ಐಟಿ ರಿಟರ್ನ್ ವೇಳೆ ಇದರ ಹೂಡಿಕೆಯನ್ನು ತೋರಿಸಿ 1.5 ಲಕ್ಷ ರೂವರೆಗೆ ಡಿಡಕ್ಷನ್ ಪಡೆಯಬಹುದು. ಹಾಗೆಯೇ, ಈ ಯೋಜನೆಯ ಮೆಚ್ಯೂರಿಟಿ ಹಣಕ್ಕೆ ಯಾವುದೇ ತೆರಿಗೆಯೂ ಇರುವುದಿಲ್ಲ. ಪೂರ್ಣ ಮೊತ್ತ ನಿಮ್ಮ ಕೈಸೇರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ