AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Easy EMI: ಸಾಲ ನಿಭಾಯಿಸುವ ತಂತ್ರಗಳು; ಇಎಂಐ ಹೊರೆ ತಗ್ಗಿಸುವುದು ಹೇಗೆ?; ಇಲ್ಲಿದೆ ಟಿಪ್ಸ್

How To Manage Loans: ಸಾಲ ಪಡೆಯುವುದು ಈಗ ಸುಲಭ, ಆದರೆ, ಅದನ್ನು ತೀರಿಸುವುದು ಬಹಳ ಕಷ್ಟ. ಬಹಳ ಸಂಯಮ, ಸಂಪನ್ಮೂಲ ಬೇಕಾಗುತ್ತದೆ. ಹೆಚ್ಚು ಹೊರೆಯಿಲ್ಲದೇ ಸಾಲದ ಕಂತುಗಳನ್ನು ಹೇಗೆ ಕಟ್ಟುವುದು, ಈ ಬಗ್ಗೆ ಒಂದಷ್ಟು ಸಲಹೆ ಇಲ್ಲಿದೆ

Easy EMI: ಸಾಲ ನಿಭಾಯಿಸುವ ತಂತ್ರಗಳು; ಇಎಂಐ ಹೊರೆ ತಗ್ಗಿಸುವುದು ಹೇಗೆ?; ಇಲ್ಲಿದೆ ಟಿಪ್ಸ್
ಸಾಲ ನಿಭಾಯಿಸುವ ತಂತ್ರಗಳು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 19, 2023 | 2:05 PM

ಸಾಲ ಮಾಡಿಯಾದ್ರೂ ತುಪ್ಪ ತಿನ್ನು ಅನ್ನೋ ನಾಣ್ನುಡಿಯನ್ನು ಕೇಳಿರಬಹುದು. ಇವತ್ತಿನ ದಿನಗಳಲ್ಲಿ ಸಾಲ ಮಾಡದವರನ್ನು ಹುಡುಕುವುದು, ಸಾವಿಲ್ಲದ ಮನೆಯಲ್ಲಿ ಸಾಸಿವೆ ಹುಡುಕಿದಂತೆ. ಇದು ತುಸು ಅತಿಶಯೋಕ್ತಿ ಎನಿಸಿದರೂ ಸಾಲ ಮಾಡದವರು ಇರುವುದು ತೀರಾ ಅಪರೂಪ ಎನ್ನುವುದು ಸತ್ಯ. ಇವತ್ತು ಹಣ ಸಾಕಾಗದೇ ಸಾಲ ಮಾಡಬೇಕೆಂದಿಲ್ಲ, ತೆರಿಗೆ ಉಳಿಸಲೂ ಸಾಲ (Loan) ಪಡೆಯುವವರಿದ್ದಾರೆ. ಏನೇ ಆದರೂ ಸಾಲ ಸಾಲವೇ.

ಸಾಲಗಳಲ್ಲಿ ಗೃಹಸಾಲ (Home Loan) ಬಹಳ ಮುಖ್ಯವಾದುದು. ಸ್ವಂತ ಸೂರಿನ ಕನಸು ಹೊಂದಿರುವವರು ಲಕ್ಷ, ಕೋಟಿಗಟ್ಟಲೆ ಗೃಹ ಸಾಲ ಪಡೆಯುತ್ತಾರೆ. ಇವುಗಳ ಇಎಂಐ ಏನಿಲ್ಲವೆಂದರೂ ತಿಂಗಳಿಗೆ 15 ಸಾವಿರದಿಂದ 60 ಸಾವಿರ ರೂವರೆಗೂ ಇರಬಹುದು. ಗೃಹ ಸಾಲ ಪೂರ್ತಿ ತೀರಿಸುವ ಹೊತ್ತಿಗೆ ಎರಡು ಪಟ್ಟು ಹೆಚ್ಚು ಮೊತ್ತದ ಬಡ್ಡಿಯನ್ನೇ ಕಟ್ಟಿರುತ್ತೇವೆ. ದೊಡ್ಡ ಸಾಲವೋ, ಸಣ್ಣ ಸಾಲವೂ, ನಾವು ಹೊರೆಯಿಲ್ಲದೇ ಅದನ್ನು ತೀರಿಸುವ ಬಗೆ ಹೇಗೆ? ಕೆಲ ತಜ್ಞರ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಒಂದಿಷ್ಟು ಸಲಹೆಗಳನ್ನು ಇಲ್ಲಿ ನೀಡಿದ್ದೇವೆ.

ಸಾಲಗಳನ್ನು ನಿಭಾಯಿಸುವ ಅಂಶಗಳು

ಆರ್​ಬಿಐ ಆಗಾಗ ರೆಪೋ ದರಗಳನ್ನು ಏರಿಳಿಕೆ ಮಾಡುತ್ತಿರುತ್ತದೆ. ಬಡ್ಡಿ ದರ ಇಳಿದಾಗ ನೀವು ಸಾಲ ತೆಗೆದುಕೊಂಡಿರುವ ಬ್ಯಾಂಕ್ ಕೂಡ ಬಡ್ಡಿ ದರ ಇಳಿಸಿದೆಯಾ ಎಂದು ಖಾತ್ರಿಪಡಿಸಿಕೊಳ್ಳಿ. ಅಗತ್ಯಬಿದ್ದರೆ ಬ್ಯಾಂಕ್ ಮ್ಯಾನೇಜರನ್ನು ಸಂಪರ್ಕಿಸಿ ವಿಚಾರಿಸಿ.

ಇದನ್ನೂ ಓದಿ: Adani Effect: ಅದಾನಿ ಷೇರು ಏನಾದರಾಗಲೀ, ಭಾರತದ ಬುಲ್​ಸ್ಟ್ರೀಟ್ ಜಗ್ಗೋದು ಕಷ್ಟ

ಇಎಂಐ ಮೊತ್ತ ಹೆಚ್ಚಿಸಿ: ನಿಮ್ಮಲ್ಲಿ ಆದಾಯ ಹೆಚ್ಚಾಗಿ ಹೆಚ್ಚು ಹಣವನ್ನು ಸಾಲದ ಕಂತುಗಳಿಗೆ ಕಟ್ಟಲು ಸಮರ್ಥರಿದ್ದರೆ ಆಗ ಇಎಂಐ ಮೊತ್ತವನ್ನು ಹೆಚ್ಚಿಸಿಕೊಳ್ಳಿ. ಇದರಿಂದ ಬೇಗ ಕಂತುಗಳು ಮುಗಿಯುತ್ತವೆ. ಹೆಚ್ಚು ಬಡ್ಡಿ ಕಟ್ಟುವುದೂ ತಪ್ಪುತ್ತದೆ.

ಇಎಂಇ ಕಡಿಮೆ ಮಾಡಿ: ಒಂದು ವೇಳೆ ನಿಮಗೆ ಇತರ ಅಗತ್ಯ ಕಮಿಟ್ಮೆಂಟ್​ಗಳು ಬಂದುಬಿಟ್ಟು ಸಾಲದ ಕಂತು ಕಟ್ಟುವುದು ಕಷ್ಟ ಎನಿಸಿದರೆ ಬ್ಯಾಂಕ್ ಮ್ಯಾನೇಜರ್ ಜೊತೆ ಮಾತನಾಡಿ ಇಎಂಐ ಸಂಖ್ಯೆಯನ್ನು ಹೆಚ್ಚಿಸಲು ಸಾಧ್ಯವಾ ಎಂದು ಕೇಳಿ. ಕಂತುಗಳು ಹೆಚ್ಚಾದರೆ ಇಎಂಐ ಮೊತ್ತ ತುಸು ಕಡಿಮೆ ಆಗುತ್ತದೆ.

ಹೆಚ್ಚುವರಿ ಹಣ ಇದ್ದರೆ ಸಾಲಕ್ಕೆ ಕಟ್ಟಿ: ನಿಮಗೆ ದಿಢೀರನೇ ಒಂದಷ್ಟು ಹಣ ಲಭ್ಯವಾದರೆ ಅದನ್ನು ಸಾಲಕ್ಕೆ ಕಟ್ಟುವುದು ಹೆಚ್ಚು ಸೂಕ್ತ. ಇದರಿಂದ ಸಾಲದ ಹೊರೆ ತಗ್ಗುತ್ತದೆ. ನೀವು ಸಾಲ ಪಡೆಯುವ ಮುನ್ನ ಬ್ಯಾಂಕ್ ಜೊತೆ ಈ ವಿಚಾರ ಮಾಡಿ ಇಂಥ ಸಾಧ್ಯತೆಯನ್ನು ವಿಚಾರಿಸಿದ್ದರೆ ಉತ್ತಮ. ಈಗಲೂ ಬ್ಯಾಂಕ್ ಸಂಪರ್ಕಿಸಿ ವಿಚಾರಿಸಿ.

ಕ್ರೆಡಿಟ್ ಸ್ಕೋರ್ ಗಮನದಲ್ಲಿರಲಿ: ನಿಮ್ಮೆಲ್ಲಾ ಸಾಲದ ಕಂತುಗಳನ್ನು ನಿಗದಿತ ಅವಧಿಯಲ್ಲಿ ಕಟ್ಟಿದರೆ ಮತ್ತು ಕ್ರೆಡಿಟ್ ಕಾರ್ಡ್ ಬಿಲ್ಲುಗಳನ್ನೂ ನಿಯಮಿತವಾಗಿ ಕಟ್ಟುತ್ತಾ ಬಂದಿದ್ದಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಸಹಜವಾಗಿ ಉತ್ತಮವಾಗಿರುತ್ತದೆ. ಬ್ಯಾಂಕ್​ನಿಂದ ನಿಮಗೆ ಅತ್ಯುತ್ತಮ ಬಡ್ಡಿ ದರದಲ್ಲಿ ಸಾಲದ ಆಫರ್ ಸಿಗುತ್ತದೆ. ನೀವು ಈಗಾಗಲೇ ಗೃಹಸಾಲ ಪಡೆದಿದ್ದು, ಕ್ರೆಡಿಟ್ ಸ್ಕೋರ್ ಕೂಡ ಉತ್ತಮವಾಗಿದ್ದರೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಬಲ್ಲ ಇತರ ಬ್ಯಾಂಕ್​ಗೆ ನಿಮ್ಮ ಈಗಿನ ಸಾಲವನ್ನು ಟ್ರಾನ್ಸ್​ಫರ್ ಮಾಡಬಹುದು. ಈ ರೀತಿಯ ಲೋನ್ ಟ್ರಾನ್ಸ್​ಫರ್ ಈಗ ಸಾಮಾನ್ಯ.

ಓವರ್​ಡ್ರಾಫ್ಟ್ ಸೌಲಭ್ಯ: ನಿಮ್ಮಲ್ಲಿ ಹೆಚ್ಚುವರಿ ಆದಾಯದ ನಿರೀಕ್ಷೆ ಇದ್ದರೆ ಗೃಹ ಸಾಲ ಪಡೆಯುವಾಗ ಓವರ್​ಡ್ರಾಫ್ಟ್ ಸೌಲಭ್ಯ ಪಡೆಯಬಹುದು. ಈ ಸೌಲಭ್ಯದಲ್ಲಿ ಸಾಲಕ್ಕೆ ತುಸು ಹೆಚ್ಚಿನ ಬಡ್ಡಿ ದರ ಇರುತ್ತದೆಯಾದರೂ ನಿಮ್ಮಲ್ಲಿನ ಹೆಚ್ಚುವರಿ ಹಣವನ್ನು ಓವರ್​ಡ್ರಾಫ್ಟ್ ಖಾತೆಯಲ್ಲಿ ಇರಿಸಬಹುದು. ಇದರಿಂದ ಬಡ್ಡಿ ಉಳಿಸಬಹುದು.

ಬ್ಯಾಂಕಿಂಗ್ ಇತ್ಯಾದಿ ಮತ್ತಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:05 pm, Sun, 19 February 23

Daily Devotional: ಅಸಹಾಯಕರ ಶಾಪ ಹೇಗೆ ಪರಿಣಾಮ ಬೀರುತ್ತೆ ಗೊತ್ತಾ?
Daily Devotional: ಅಸಹಾಯಕರ ಶಾಪ ಹೇಗೆ ಪರಿಣಾಮ ಬೀರುತ್ತೆ ಗೊತ್ತಾ?
ಈ ರಾಶಿಯವರಿಗೆ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಆರ್ಥಿಕ ಲಾಭ, ಸಂತೋಷ
ಈ ರಾಶಿಯವರಿಗೆ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಆರ್ಥಿಕ ಲಾಭ, ಸಂತೋಷ
ಇದು ಆತ್ಮದ ಹಾಡು; ‘ಶಿವಂ ಶಿವಂ ಸನಾತನಂ’ ಬಗ್ಗೆ ವಿಜಯ್ ಪ್ರಕಾಶ್ ಮಾತು
ಇದು ಆತ್ಮದ ಹಾಡು; ‘ಶಿವಂ ಶಿವಂ ಸನಾತನಂ’ ಬಗ್ಗೆ ವಿಜಯ್ ಪ್ರಕಾಶ್ ಮಾತು
ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ