Financial Mistakes: ಆರ್ಥಿಕವಾಗಿ ಸದೃಢರಾಗಬೇಕೇ? ಈ ತಪ್ಪುಗಳನ್ನು ಮಾಡಲೇಬೇಡಿ

| Updated By: Ganapathi Sharma

Updated on: Nov 07, 2022 | 2:26 PM

Common Financial Mistakes; ನಾವು ಮಾಡುವ ಕೆಲವು ಸಾಮಾನ್ಯ ತಪ್ಪುಗಳೇ ನಮ್ಮನ್ನು ಹಣಕಾಸಿನ ಮುಗ್ಗಟ್ಟಿಗೆ ಸಿಲುಕಿಸಬಲ್ಲವು. ಹೀಗಾಗಿ ಆರ್ಥಿಕವಾಗಿ ಸದೃಢರಾಗಿರಬೇಕು ಎಂಬ ಬಯಕೆ ನಿಮ್ಮದಾಗಿದ್ದರೆ ಈ ಸಾಮಾನ್ಯ ತಪ್ಪುಗಳನ್ನು ಮಾಡಲೇಬೇಡಿ.

Financial Mistakes: ಆರ್ಥಿಕವಾಗಿ ಸದೃಢರಾಗಬೇಕೇ? ಈ ತಪ್ಪುಗಳನ್ನು ಮಾಡಲೇಬೇಡಿ
ಸಾಂದರ್ಭಿಕ ಚಿತ್ರ
Follow us on

ಆರ್ಥಿಕವಾಗಿ ಹೆಚ್ಚು ಸದೃಢರಾಗಬೇಕು, ನಮ್ಮ ಬಳಿ ಯಾವಾಗಲೂ ಹೆಚ್ಚು ಹಣ ಇರಬೇಕು ಎಂಬ ಆಸೆ ಜನಸಾಮಾನ್ಯರಲ್ಲಿ ಸಹಜ. ಬೆಲೆ ಏರಿಕೆ (Price Rise), ಹೆಚ್ಚುತ್ತಿರುವ ಖರ್ಚು-ವೆಚ್ಚಗಳ ಮಧ್ಯೆ ಆರ್ಥಿಕ ಸ್ಥಿತಿಯಲ್ಲಿ (Economic Condition) ಸಮತೋಲನ ಕಾಯ್ದುಕೊಳ್ಳುವುದೇ ಬಡ, ಮಧ್ಯಮ ವರ್ಗ, ಮೇಲ್ಮಧ್ಯಮ ವರ್ಗದ ಜನರ ಬಹುದೊಡ್ಡ ಸವಾಲಾಗಿದೆ. ಇಂಥ ಪರಿಸ್ಥಿತಿಯಲ್ಲೂ ನಾವು ಮಾಡುವ ಕೆಲವು ಸಾಮಾನ್ಯ ತಪ್ಪುಗಳೇ ನಮ್ಮನ್ನು ಹಣಕಾಸಿನ ಮುಗ್ಗಟ್ಟಿಗೆ ಸಿಲುಕಿಸಬಲ್ಲವು. ಹೀಗಾಗಿ ಆರ್ಥಿಕವಾಗಿ ಸದೃಢರಾಗಿರಬೇಕು ಎಂಬ ಬಯಕೆ ನಿಮ್ಮದಾಗಿದ್ದರೆ ಈ ಸಾಮಾನ್ಯ ತಪ್ಪುಗಳನ್ನು ಮಾಡಲೇಬೇಡಿ.

ಅತಿಯಾದ, ಅನಾವಶ್ಯಕ ಖರ್ಚು

ಅತಿಯಾದ, ಅನಾವಶ್ಯಕ ಖರ್ಚಿನ ಮೇಲೆ ಮೊದಲು ಹಿಡಿತ ಸಾಧಿಸಬೇಕು. ಒಂದು ಬಾರಿ ಹೊರಗಡೆ ತೆರಳಿ ಊಟ ಮಾಡಬೇಕು ಅಥವಾ ಏನಾದರೂ ತಿನ್ನಬೇಕು, ಖರೀದಿಸಬೇಕು, ಸಿನಿಮಾಗೆ ಹೋಗಬೇಕು ಅನ್ನಿಸುವುದು ಸಹಜ. ಆದರೆ, ಪ್ರತಿ ದಿನ ಅಥವಾ ಪ್ರತಿ ವಾರ ಹೀಗೆಯೇ ಮಾಡುತ್ತಾ ಹೋದರೆ ಸಮಸ್ಯೆಗೆ ಸಿಲುಕುವುದು ಸಹಜ. ಅನಾವಶ್ಯಕ ವಸ್ತುಗಳನ್ನು ಖರೀದಿಸುವುದು, ಬೇಡದಿದ್ದರೂ ಆಫರ್ ಇದೆ ಎಂದು ಖರೀದಿ ಮಾಡುವುದರಿಂದಜೇಬು ಬರಿದಾಗಬಹುದು. ಪ್ರತಿ ವಾರ ಕನಿಷ್ಠ 25 ರೂ. ನೀವು ಖರ್ಚು ಮಾಡುತ್ತೀರೆಂದುಕೊಳ್ಳಿ, ವರ್ಷಕ್ಕೆ ಎಷ್ಟಾಯ್ತು? ಏನಿಲ್ಲವೆಂದರೂ 1,200 ರೂ. ಸುಮ್ಮನೇ ಖರ್ಚಾಗುತ್ತದೆ. ಹೀಗಾಗಿ ತೀರಾ ಅನಿವಾರ್ಯವಲ್ಲದ ಖರ್ಚಿನ ಮೇಲೆ ಹಿಡಿತ ಸಾಧಿಸಿ.

ಇದನ್ನೂ ಓದಿ
Petrol Price on November 7: ಕಚ್ಚಾ ತೈಲದ ಬೆಲೆ ಇಳಿಕೆಯಾದರೂ ಕುಸಿತವಾಗಿಲ್ಲ ಪೆಟ್ರೋಲ್, ಡೀಸೆಲ್ ದರ
ನೋಟು ಅಮಾನ್ಯೀಕರಣದ 6 ವರ್ಷಗಳ ನಂತರವೂ ಜನರಲ್ಲಿರುವ ನಗದು ₹ 30.88 ಲಕ್ಷ ಕೋಟಿ
Personal Finance: ಮನಿ9 ಭಾರತದ ಮೊದಲ ಮತ್ತು ಅತಿದೊಡ್ಡ ಸ್ವತಂತ್ರ ಪರ್ಸನಲ್ ಫೈನಾನ್ಸ್​ ಸಮೀಕ್ಷೆಯ ಅವಲೋಕನ
Bank Holidays: ಬ್ಯಾಂಕ್ ಗ್ರಾಹಕರೇ ಗಮನಿಸಿ; ನ. 7ರಿಂದ 1 ವಾರದೊಳಗೆ 5 ದಿನ ಬ್ಯಾಂಕ್​ಗಳಿಗೆ ರಜೆ

ಎಂದೂ ಮುಗಿಯದ ಬಿಲ್​ಗಳು…

ಪ್ರತಿ ತಿಂಗಳು ಬಿಲ್ ಪಾವತಿ ಮಾಡುವಂಥ ವಸ್ತುಗಳು ನಿಮಗೆ ನಿಜವಾಗಿಯೂ ತೀರಾ ಅನಿವಾರ್ಯವೇ ಎಂದು ಪ್ರಶ್ನಿಸಿಕೊಳ್ಳಿ. ಕೇಬಲ್ ಟಿವಿ, ಮ್ಯೂಸಿಕ್ ಸೇವೆಗಳು, ಅತ್ಯಾಧುನಿಕ ಜಿಮ್ ಸದಸ್ಯತ್ವ ಇವುಗಳಿಗೆಲ್ಲ ಪ್ರತಿ ತಿಂಗಳು ಪಾವತಿಸುವ ಮುನ್ನ ನಿಮಗೆ ತೀರಾ ಅಗತ್ಯ ಯಾವುದು ಎಂಬುದನ್ನು ಆಯ್ಕೆ ಮಾಡಿಕೊಳ್ಳಿ. ಹಣಕಾಸಿನ ಸಂಕಷ್ಟದಲ್ಲಿದ್ದಾಗ, ಅಥವಾ ಇನ್ನಷ್ಟು ಉಳಿತಾಯ ಮಾಡಬೇಕು ಎಂಬ ಇಚ್ಛೆಯಲ್ಲಿದ್ದಾಗ ತಿಂಗಳ ಪಾವತಿಗಳ ಬಗ್ಗೆ ಹೆಚ್ಚು ಗಮನಹರಿಸುವುದು ಒಳ್ಳೆಯದು.

ಎರವಲು ಪಡೆದ ಹಣದಲ್ಲಿ ವಿಲಾಸಿ ಜೀವನ

ಅಗತ್ಯವಸ್ತುಗಳ ಖರೀದಿಗೆ ಕ್ರೆಡಿಟ್ ಕಾರ್ಡ್ ಬಳಸುವುದು ಸಹಜ. ಆದರೆ, ಕ್ರೆಡಿಟ್ ಕಾರ್ಡ್ ಇದೆ ಎಂದು ನಮ್ಮ ಬಿಲ್ ಪಾವತಿಯ ಸಾಮರ್ಥ್ಯವನ್ನೂ ಮೀರಿ ಖರ್ಚು ಮಾಡುವುದು, ಆಮೇಲೆ ಹೆಚ್ಚು ಮೊತ್ತದ ಬಡ್ಡಿ ಪಾವತಿಸುವುದು ಒಳ್ಳೆ ಆಯ್ಕೆಯಲ್ಲ. ಕ್ರೆಡಿಟ್ ಸ್ಕೋರ್ ಹೆಚ್ಚಿಸಿಕೊಳ್ಳುವುದಕ್ಕಾಗಿ ಕ್ರೆಡಿಟ್ ಕಾರ್ಡ್ ಅನ್ನು ಬಳಸಿಕೊಳ್ಳುವುದೇನೋ ಉತ್ತಮ. ಆದರೆ ನಿಮ್ಮ ತಿಂಗಳ ಬಜೆಟ್​ ಬಗ್ಗೆ ಗಮನ ಇಟ್ಟುಕೊಂಡು ಖರ್ಚು ಮಾಡುವುದು ಉತ್ತಮ. ಇಲ್ಲವಾದರೆ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡಿ ನಷ್ಟ ಅನುಭವಿಸುವ ಸಾಧ್ಯತೆಯೇ ಹೆಚ್ಚು.

ತೀರಾ ಅನಿವಾರ್ಯವಲ್ಲದೆ ಹೊಸ ಕಾರು ಖರೀದಿ

ಪ್ರತಿ ವರ್ಷ ಲಕ್ಷಾಂತರ ಹೊಸ ಕಾರುಗಳು ಮಾರಾಟವಾಗುತ್ತವೆ. ಕೆಲವು ಗ್ರಾಹಕರು ಪೂರ್ಣ ಪ್ರಮಾಣದಲ್ಲಿ ಹಣ ಪಾವತಿಸಿ ಖರೀದಿಸಲು ಶಕ್ತರಾಗಿರುತ್ತಾರೆ. ಪೂರ್ತಿ ಮೊತ್ತ ಪಾವತಿ ಮಾಡಿ ಖರೀದಿಸಲು ಸಾಧ್ಯವಾಗದ ಸ್ಥಿತಿ ಇದ್ದರೆ ಇದನ್ನು ಅಶಕ್ತತೆ ಎಂದೇ ಪರಿಗಣಿಸಬಹುದು. ಇಂಥ ಸಂದರ್ಭದಲ್ಲಿ ಅವಶ್ಯಕತೆಗಳು, ಆದ್ಯತೆಗಳನ್ನು ನೋಡಿಕೊಂಡು ತೀರಾ ಅನಿವಾರ್ಯವಾದರಷ್ಟೇ ಕಾರು ಖರೀದಿಸುವುದು ಒಳ್ಳೆಯದು. ಎರವಲು ಹಣ ಪಡೆದು ಕಾರು ಖರೀದಿಸಿದರೆ ಅದು ಯಾವತ್ತೂ ಗಳಿಕೆ ತಂದುಕೊಡದ ಹೂಡಿಕೆ ಎಂಬುದು ಗಮನದಲ್ಲಿರಲಿ. ಅನೇಕರು ಪ್ರತಿ ಎರಡು ಅಥವಾ ಮೂರು ವರ್ಷಗಳಿಗೊಮ್ಮೆ ತಮ್ಮ ಕಾರುಗಳನ್ನು ಮಾರಾಟ ಮಾಡಿ ಹೊಸದನ್ನು ಕೊಂಡುಕೊಳ್ಳುತ್ತಾರೆ. ಇದರಿಂದ ಹಣವನ್ನೂ ಕಳೆದುಕೊಳ್ಳುತ್ತಾರೆ. ಹೀಗಾಗಿ ಕಾರು ಅಥವಾ ಇನ್ಯಾವುದೇ ವಾಹನ ಖರೀದಿ ವೇಳೆ, ಅದು ರಿಟರ್ನ್ಸ್ ತಂದು ಕೊಡದ ಸ್ವತ್ತು ಎಂಬುದನ್ನು ನೆನಪಿಡಿ.

ಮನೆಗಾಗಿ ಅತಿಯಾದ ಖರ್ಚು

ಮನೆ ಖರೀದಿ ವೇಳೆಯೂ ಬಹಳ ಎಚ್ಚರಿಕೆಯ ಹೆಜ್ಜೆ ಇಡಬೇಕು. ನಮ್ಮ ಕುಟುಂಬ, ವಾಸದ ಅಗತ್ಯ ಲೆಕ್ಕಹಾಕಿಕೊಂಡು ಎಷ್ಟು ಬೇಕೋ ಅಷ್ಟೇ ದೊಡ್ಡ ಮನೆ ಖರೀದಿ ಅಥವಾ ಕಟ್ಟಿಸುವುದು ಒಳ್ಳೆಯದು. ಅತಿಯಾದ ಸಲಾ ಮಾಡಿ, ದೀರ್ಘಾವಧಿಗೆ ಬಡ್ಡಿ ಕಟ್ಟಿಕೊಂಡು ವಿಲಾಸಿ ಬಂಗಲೆ ಕಟ್ಟುವುದರಿಂದ ಹಣಕಾಸಿನ ಅಪಾಯಕ್ಕೆ ಸಿಲುಕಬೇಕಾಗಬಹದು.

ಹಣಕಾಸು ಯೋಜನೆ ರೂಪಿಸಿ, ಹೂಡಿಕೆ ಬಗ್ಗೆ ತಿಳಿಯಿರಿ

ಪ್ರಸ್ತುತ ಏನಾಗುತ್ತಿದೆ? ಅರ್ಥವ್ಯವಸ್ಥೆ ಹೇಗಿದೆ? ಹಣಕಾಸಿನ ಯೋಜನೆ ಹೇಗಿದೆ ಎಂಬುದರಿಂದ ನಿಮ್ಮ ಹಣಕಾಸಿನ ಭವಿಷ್ಯ ನಿರ್ಧರಿಸಲ್ಪಡುತ್ತದೆ. ದೈನಂದಿನ ಇತರ ಕೆಲಸಗಳ ಜತೆ ಹಣಕಾಸಿನ ಯೋಜನೆ ರೂಪಿಸುವುದಕ್ಕಾಗಿ ತುಸು ಸಮಯ ಮೀಸಲಿಡಿ. ಹೂಡಿಕೆಗಳು ಮತ್ತು ಪ್ರಯೋಜನಗಳ ಬಗ್ಗೆ ಅಧ್ಯಯನ ಮಾಡಿ ಸೂಕ್ತ ಎನಿಸಿದ ಕಡೆ ಹೂಡಿಕೆ ಮಾಡಿ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ