Credit Card Closure: ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡುವುದು ಹೇಗೆ? ಇಲ್ಲಿದೆ ಪೂರ್ತಿ ವಿವರ

| Updated By: Ganapathi Sharma

Updated on: Nov 07, 2022 | 4:40 PM

Credit Cards; ನೀವು ಅನೇಕ ಕ್ರೆಡಿಟ್ ಕಾರ್ಡ್​ಗಳನ್ನು ಹೊಂದಿದ್ದು, ಆ ಪೈಕಿ ಬೇಡದೇ ಇರುವುದನ್ನು ಕ್ಲೋಸ್ ಮಾಡಬೇಕೆಂದಿದ್ದರೆ ಹೇಗೆ ಮಾಡಬಹುದು ಎಂಬ ಪೂರ್ತಿ ವಿವರ ಇಲ್ಲಿದೆ.

Credit Card Closure: ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡುವುದು ಹೇಗೆ? ಇಲ್ಲಿದೆ ಪೂರ್ತಿ ವಿವರ
ಸಾಂದರ್ಭಿಕ ಚಿತ್ರ
Follow us on

ಕ್ರೆಡಿಟ್ ಕಾರ್ಡ್ (Credit Card) ಅನ್ನು ಕ್ಲೋಸ್ ಮಾಡಲು ಬಯಸಿದ್ದೀರಾ? ಈಗ ಹೊಸ ಕ್ರೆಡಿಟ್ ಕಾರ್ಡ್​ಗೆ ಅರ್ಜಿ ಸಲ್ಲಿಸಿದಷ್ಟೇ ಸುಲಭವಾಗಿ ಕಾರ್ಡ್ ಅನ್ನು ಕ್ಲೋಸ್ ಸಹ ಮಾಡಬಹುದು. ನೀವು ಅನೇಕ ಕ್ರೆಡಿಟ್ ಕಾರ್ಡ್​ಗಳನ್ನು ಹೊಂದಿದ್ದು, ಆ ಪೈಕಿ ಬೇಡದೇ ಇರುವುದನ್ನು ಕ್ಲೋಸ್ ಮಾಡಬೇಕೆಂದಿದ್ದರೆ ಹೇಗೆ ಮಾಡಬಹುದು ಎಂಬ ಪೂರ್ತಿ ವಿವರ ಇಲ್ಲಿದೆ.

ಗ್ರಾಹಕ ಸೇವಾ ಸಂಖ್ಯೆಗೆ ಕರೆ ಮಾಡುವ ಮೂಲಕ

ಯಾವ ಬ್ಯಾಂಕ್​ನ ಕ್ರೆಡಿಟ್​​ ಕಾರ್ಡ್ ಹೊಂದಿದ್ದೀರೋ ಅದರ ಗ್ರಾಹಕ ಸೇವಾ ವಿಭಾಗಕ್ಕೆ (ಕಸ್ಟಮರ್ ಸರ್ವೀಸ್ ಡಿಪಾರ್ಟ್​ಮೆಂಟ್) ಕರೆ ಮಾಡಿ ಕ್ರೆಡಿಟ್ ಕಾರ್ಡ್ ರದ್ದತಿ ಅಥವಾ ಕ್ಲೋಸ್​ ಮಾಡಲು ಮನವಿ ಮಾಡಬಹುದು.

ಇದನ್ನೂ ಓದಿ
Petrol Price on November 7: ಕಚ್ಚಾ ತೈಲದ ಬೆಲೆ ಇಳಿಕೆಯಾದರೂ ಕುಸಿತವಾಗಿಲ್ಲ ಪೆಟ್ರೋಲ್, ಡೀಸೆಲ್ ದರ
ನೋಟು ಅಮಾನ್ಯೀಕರಣದ 6 ವರ್ಷಗಳ ನಂತರವೂ ಜನರಲ್ಲಿರುವ ನಗದು ₹ 30.88 ಲಕ್ಷ ಕೋಟಿ
Personal Finance: ಮನಿ9 ಭಾರತದ ಮೊದಲ ಮತ್ತು ಅತಿದೊಡ್ಡ ಸ್ವತಂತ್ರ ಪರ್ಸನಲ್ ಫೈನಾನ್ಸ್​ ಸಮೀಕ್ಷೆಯ ಅವಲೋಕನ
Bank Holidays: ಬ್ಯಾಂಕ್ ಗ್ರಾಹಕರೇ ಗಮನಿಸಿ; ನ. 7ರಿಂದ 1 ವಾರದೊಳಗೆ 5 ದಿನ ಬ್ಯಾಂಕ್​ಗಳಿಗೆ ರಜೆ

ಲಿಖಿತ ಮನವಿ ಸಲ್ಲಿಸುವ ಮೂಲಕ

ಕ್ರೆಡಿಟ್ ಕಾರ್ಡ್ ರದ್ದು ಅಥವಾ ಕ್ಲೋಸ್ ಮಾಡುವಂತೆ ನಿಮಗೆ ಕಾರ್ಡ್ ಒದಗಿಸಿಕೊಟ್ಟ ಬ್ಯಾಂಕ್​ ಮ್ಯಾನೇಜರ್​ಗೆ ಲಿಖಿತ ಮನವಿ ಅಥವಾ ಅರ್ಜಿ ಸಲ್ಲಿಸಬಹುದು. ಅರ್ಜಿಯಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ಸಂಖ್ಯೆ, ಹೆಸರು, ವಿಳಾದ ಹಾಗೂ ಸಂಪರ್ಕ ಸಂಖ್ಯೆ ನಮೂದಿಸಬೇಕು.

ಇ-ಮೇಲ್ ಮೂಲಕ ಕ್ರೆಡಿಟ್ ಕಾರ್ಡ್ ರದ್ದತಿ

ಕ್ರೆಡಿಟ್ ಕಾರ್ಡ್ ನೀಡಿದ ಸಂಸ್ಥೆಗೆ ಇ-ಮೇಲ್ ಸಂದೇಶ ಕಳುಹಿಸುವ ಮೂಲಕ ಕಾರ್ಡ್ ರದ್ದತಿಗೆ ಮನವಿ ಮಾಡಬಹುದು. ನಿಮ್ಮ ವೈಯಕ್ತಿಕ ವಿವರ, ಯಾವ ಕ್ರೆಡಿಟ್ ಕಾರ್ಡ್​ ರದ್ದು ಮಾಡಬೇಕು ಎಂಬುದನ್ನು ಮೇಲ್​​ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿರಬೇಕು.

ಆನ್​ಲೈನ್ ಮನವಿ ಸಲ್ಲಿಕೆ

ಕೆಲವು ಬ್ಯಾಂಕ್​ಗಳು ಆನ್​ಲೈನ್ ಮೂಲಕ ಕ್ರೆಡಿಟ್ ಕಾರ್ಡ್ ರದ್ದತಿಗೆ ಮನವಿ ಸಲ್ಲಿಸುವ ಅವಕಾಶ ನೀಡಿವೆ. ಈ ರೀತಿ ಮನವಿ ಸಲ್ಲಿಸಲು ಮೊದಲು ಬ್ಯಾಂಕ್​ ವೆಬ್​ಸೈಟ್​ ಕ್ಲಿಕ್ ಮಾಡಿ. ಅರ್ಜಿ ನಮೂನೆಯನ್ನು ಓಪನ್ ಮಾಡಿ ಅದರಲ್ಲಿ ವಿವರಗಳನ್ನು ಭರ್ತಿ ಮಾಡಿ ಸಬ್​ಮಿಟ್ ಮಾಡಿ. ಆದರೆ, ಈ ರೀತಿಯ ಅರ್ಜಿ ಸಲ್ಲಿಸುವಾಗ ಬ್ಯಾಂಕ್​ನ ಅಧಿಕೃತ ವೆಬ್​ಸೈಟ್​​ನಲ್ಲೇ ಅರ್ಜಿ ಸಲ್ಲಿಸುತ್ತಿದ್ದೀರಿ ಎಂಬುದನ್ನು ಖಾತರಿಪಡಿಸಿಕೊಳ್ಳಿ. ಇಲ್ಲವಾದಲ್ಲಿ ವಿವರಗಳ ದುರ್ಬಳಕೆಯಾಘುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

ಇದನ್ನೂ ಓದಿ: ಕಾರು ಖರೀದಿಗೆ ಸಾಲ ಪಡೆಯಲು ಯೋಚಿಸುತ್ತಿದ್ದೀರಾ? ಕಡಿಮೆ ಬಡ್ಡಿ, ಇಎಂಐ ಸೇರಿ ಈ ಅಂಶಗಳು ಗಮನದಲ್ಲಿರಲಿ

ಕಾರ್ಡ್ ರದ್ದತಿ ಮನವಿಗೂ ಮುನ್ನ ನೆನಪಿಟ್ಟುಕೊಳ್ಳಲೇಬೇಕಾದ ಅಂಶಗಳು

  • ಕಾರ್ಡ್ ಕ್ಲೋಸ್ ಮಾಡಲು ಅರ್ಜಿ ಸಲ್ಲಿಸುವ ಮುನ್ನ ಬಾಕಿ ಮೊತ್ತವನ್ನು ಸಂಪೂರ್ಣವಾಗಿ ಪಾವತಿ ಮಾಡಿರಬೇಕು.
  • ಕ್ರೆಡಿಟ್ ಕಾರ್ಡ್ ನೀಡಿದ ಸಂಸ್ಥೆಯು ನಿಗದಿಪಡಿಸಿರುವ ಕ್ಲೋಸ್ / ರದ್ದತಿ ಮಾನದಂಡಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ.
  • ಕಾರ್ಡ್ ರದ್ದತಿ ಮನವಿ ಸಲ್ಲಿಸುವ ಮುನ್ನ ರಿವಾರ್ಡ್ ಪಾಯಿಂಟ್​ಗಳ ಪ್ರಯೋಜನ ಪಡೆದುಕೊಳ್ಳಿ. ಒಮ್ಮೆ ಕಾರ್ಡ್ ರದ್ದಾದರೆ, ಆ ಬಳಿಕ ನಿಮಗೆ ಯಾವುದೇ ರಿವಾರ್ಡ್ ಪಾಯಿಂಟ್ ಆಗಲಿ, ಆಫರ್​ಗಳನ್ನಾಗಲಿ ಉಪಯೋಗಿಸಲು ಆಗುವುದಿಲ್ಲ.
  • ಸ್ವಯಂಚಾಲಿತ ಬಿಲ್ ಪಾವತಿ ಚಾಲೂ ಮಾಡಿದ್ದರೆ ಅವುಗಳನ್ನೆಲ್ಲ ಮೊದಲು ರದ್ದುಗೊಳಿಸಿ. ಇಲ್ಲದಿದ್ದರೆ ಬ್ಯಾಂಕ್​ ನಿಮ್ಮ ರದ್ದತಿ ಅರ್ಜಿಯನ್ನು ತಿರಸ್ಕರಿಸುವ ಸಾಧ್ಯತೆ ಇದೆ.
  • ಕ್ರೆಡಿಟ್ ಕಾರ್ಡ್ ರದ್ದತಿ ಅರ್ಜಿ ಸಲ್ಲಿಸಿದ ಬಳಿಕ, ಅದು ಯಾವಾಗ ರದ್ದಾಗುತ್ತದೆ ಎಂಬ ನಿರ್ದಿಷ್ಟ ದಿನಾಂಕವನ್ನು ತಿಳಿದುಕೊಳ್ಳಿ. ಇಲ್ಲವಾದಲ್ಲಿ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗಿ ಬರುವ ಸಾಧ್ಯತೆಯೂ ಇದೆ.

ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದ ಇನ್ನಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:37 pm, Mon, 7 November 22