ನವದೆಹಲಿ: ಫೋನ್ಪೇ ಸಂಸ್ಥೆ (PhonePe) ತನ್ನ ಪೇಮೆಂಟ್ ಆ್ಯಪ್ನಲ್ಲಿ ಯುಪಿಐ ಲೈಟ್ ಫೀಚರ್ (UPI Lite) ಅನ್ನು ಅಳವಡಿಸಿದ್ದು, ಇದು ಸಾರ್ವಜನಿಕ ಬಳಕೆಗೆ ಚಾಲನೆಗೊಂಡಿದೆ. ಪೇಟಿಎಂ ಸಂಸ್ಥೆ ಮಾರ್ಚ್ ತಿಂಗಳಲ್ಲಿ ಯುಪಿಐ ಲೈಟ್ ಫೀಚರ್ ಅನ್ನು ಲೈವ್ಗೊಳಿಸಿತ್ತು. ಪೇಮೆಂಟ್ ಪ್ಲಾಟ್ಫಾರ್ಮ್ನಲ್ಲಿರುವ ವ್ಯಾಲಟ್ ಜೊತೆಗೆ ಯುಪಿಐ ಲೈಟ್ ಕೂಡ ಇರಲಿದೆ. ಯುಪಿಐ ವ್ಯಾಲಟ್ ಮತ್ತು ಯುಪಿಐ ಲೈಟ್ ಎರಡೂ ಕೂಡ ಬಹುತೇಕ ಒಂದೇ ರೀತಿಯ ಫೀಚರ್ ಹೊಂದಿವೆಯಾದರೂ ಯುಪಿಐ ಲೈಟ್ನಲ್ಲಿ 200 ರೂ ಒಳಗಿನ ವಹಿವಾಟು ಮಾತ್ರ ಸಾಧ್ಯ. ಯುಪಿಐ ವ್ಯಾಲಟ್ ಮತ್ತು ಯುಪಿಐ ಲೈಟ್ನಿಂದಾಗಿ ಬ್ಯಾಂಕುಗಳ ಮೇಲೆ ಅನಗತ್ಯ ಹೊರೆ ಕಡಿಮೆ ಆಗಲು ಸಾಧ್ಯವಿದೆ. ಹಣದ ವಹಿವಾಟೂ ಕೂಡ ಸುಗಮಗೊಳ್ಳಲಿದೆ.
ಪೇಟಿಎಂ ಮತ್ತು ಫೋನ್ಪೇಯಂಥ ಯುಪಿಐ ಆ್ಯಪ್ಗಳಲ್ಲಿ ಯುಪಿಐ ಲೈಟ್ ಫೀಚರ್ ಅನ್ನು ಆ್ಯಕ್ಟಿವೇಟ್ ಮಾಡಬಹುದು. ಯುಪಿಐ ವ್ಯವಸ್ಥೆಯನ್ನು ರೂಪಿಸಿದ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಸಂಸ್ಥೆಯೇ ಯುಪಿಐ ಲೈಟ್ ಅನ್ನೂ ತಂದಿರುವುದು. ಇದು ಆನ್–ಡಿವೈಸ್ ಫೀಚರ್ ಆಗಿದೆ. ಪೇಟಿಎಂ ಮತ್ತು ಫೋನ್ಪೇನಲ್ಲಿರುವ ವ್ಯಾಲಟ್ಗೆ ಇದನ್ನು ಹೋಲಿಸಬಹುದು. 200 ರೂ ಒಳಗಿನ ಮೊತ್ತದ ವಹಿವಾಟುಗಳಿಗೆ ಯುಪಿಐ ಲೈಟ್ ಅನ್ನು ಬಳಸಬಹುದು. ಯಾವುದೇ ಸಮಯದಲ್ಲಿ ಗರಿಷ್ಠ 200 ರೂಳಗಿನ ಮೊತ್ತ ಯುಪಿಐ ಲೈಟ್ನಲ್ಲಿರಿಸಬಹುದು. ನಾವು ಪೇಮೆಂಟ್ ಮಾಡುವಾಗ, ಮೊತ್ತವು 200 ರೂ ಒಳಗಿದ್ದರೆ ಯುಪಿಐ ಲೈಟ್ ಅನ್ನು ಡೀಫಾಲ್ಟ್ ಆಯ್ಕೆಯಾಗಿ ಮಾಡಬೇಕು ಎಂಬ ನಿಯಮ ಇದೆ.
ಇದನ್ನೂ ಓದಿ: Great Returns: 10,000 ರೂ ಎಸ್ಐಪಿ 23 ವರ್ಷದಲ್ಲಿ 1.14 ಕೋಟಿ ರೂ; ಗಮನ ಸೆಳೆದ ಹೈಬ್ರಿಡ್ ಮ್ಯೂಚುವಲ್ ಫಂಡ್
ಪೇಮೆಂಟ್ ಆ್ಯಪ್ನಲ್ಲಿ ಪೇಮೆಂಟ್ ಮಾಡಲು ಮೂರು ಅಯ್ಕೆಗಳು ಸಿಗುತ್ತವೆ. ಒಂದು ನೇರವಾಗಿ ಬ್ಯಾಂಕ್ನಿಂದ ಹಣ ವರ್ಗಾವಣೆ ಮಾಡುವುದು, ಇನ್ನೊಂದು ವ್ಯಾಲಟ್ ಫೀಚರ್, ಮತ್ತೊಂದು ಯುಪಿಐ ಲೈಟ್ ಫೀಚರ್. ವಹಿವಾಟು ಮಾಡುವಾಗ ವ್ಯಾಲಟ್ ಮತ್ತು ಲೈಟ್ನಲ್ಲಿರುವ ಹಣ ಸಾಕಾಗದಿದ್ದಾಗ ಬ್ಯಾಂಕ್ನಿಂದ ಹಣ ರವಾನೆ ಮಾಡಬೇಕಾಗುತ್ತದೆ. ಇದರಿಂದ ಬ್ಯಾಂಕ್ಗಳಿಗೆ ತುಸು ಹೊರೆಯಾಗುತ್ತದೆ. ಬ್ಯಾಂಕ್ ಮೂಲಕ ವಹಿವಾಟು ಮಾಡುವಾಗ ಪಿನ್ ನಂಬರ್ ನಮೂದಿಸಬೇಕಾಗುತ್ತದೆ. ಅದೇ ಯುಪಿಐ ವ್ಯಾಲಟ್ ಮತ್ತು ಯುಪಿಐ ಲೈಟ್ ಮೂಲಕ ವಹಿವಾಟು ಮಾಡುವುದಾದರೆ ಬ್ಯಾಂಕ್ ಖಾತೆಯ ಪಾಸ್ವರ್ಡ್ ಹಾಕುವ ಅವಶ್ಯಕತೆ ಇರುವುದಿಲ್ಲ.
ವ್ಯಾಲಟ್ ಅಥವಾ ಲೈಟ್ ಎಂಬುದು ಒಂದು ರೀತಿಯಲ್ಲಿ ನೀವು ಹಣ ಇಟ್ಟುಕೊಳ್ಳುವ ಪರ್ಸ್ ಇದ್ದಂತೆ. ಒಂದಿಷ್ಟು ಹಣವನ್ನು ಪ್ಯಾಕೆಟ್ಗೆ ಹಾಕಿ, ಅದನ್ನು ವೆಚ್ಚಕ್ಕೆ ಬಳಸುತ್ತೀರಿ. ಅದೇ ರೀತಿ, ಬ್ಯಾಂಕ್ ಖಾತೆಯಿಂದ ಮೊದಲೇ ಒಂದಿಷ್ಟು ಹಣವನ್ನು ವ್ಯಾಲಟ್ ಅಥವಾ ಲೈಟ್ಗೆ ಹಾಕಿದರೆ ಆಗ ಪದೇ ಪದೇ ಬ್ಯಾಂಕ್ ವ್ಯವಸ್ಥೆಯನ್ನು ಬಳಸುವ ಅವಶ್ಯಕತೆ ಬೀಳುವುದಿಲ್ಲ.
ಇದನ್ನೂ ಓದಿ: YouTube Money: ಯೂಟ್ಯೂಬ್ನಿಂದ ಹಣ ಮಾಡುವುದು ಹೇಗೆ? ಕನಿಷ್ಠ ಎಷ್ಟು ವೀಕ್ಷಣೆ ಆಗಬೇಕು? ಮಹತ್ವದ ವಿವರ ಇಲ್ಲಿದೆ
ಒಂದು ಪೇಮೆಂಟ್ ಆ್ಯಪ್ನಲ್ಲಿ ಪ್ರೀಪೇಟ್ ಇನ್ಸ್ಟ್ರುಮೆಂಟ್ ಆಗಿ ವ್ಯಾಲಟ್ ಮತ್ತು ಯುಪಿಐ ಲೈಟ್ ಇವೆ. ಪೇಟಿಎಂ ಮತ್ತು ಫೋನ್ಪೇ, ಈ ಎರಡರಲ್ಲೂ ಈ ಫೀಚರ್ಗಳಿವೆ. ಯುಪಿಐ ಲೈಟ್ಗೆ 2 ಸಾವಿರ ರೂವರೆಗೂ ಹಣ ತುಂಬಿಸಬಹುದು. ವ್ಯಾಲಟ್ಗೆ ಎಷ್ಟು ಬೇಕಾದರೂ ಹಣ ರವಾನಿಸಬಹುದು.