ಕೋವಿಡ್ ಸಾಂಕ್ರಾಮಿಕವು (Covid-19) ಕಳೆದ 2-3 ವರ್ಷಗಳಲ್ಲಿ ಜನರ ಆರೋಗ್ಯ, ಹಣಕಾಸಿನ (Finance) ಮೇಲೆ ಬಹಳಷ್ಟು ಪರಿಣಾಮ ಬೀರಿದೆ. ಅನೇಕರು ಆರೋಗ್ಯ ಸಮಸ್ಯೆಗಳನ್ನು ಎದುರಿಸಿದರೆ ಇನ್ನು ಅನೇಕ ಮಂದಿ ಸಂಪತ್ತನ್ನು (Wealth) ಕಳೆದುಕೊಂಡಿದ್ದಾರೆ. ಹಲವಾರು ಜನರಿಗೆ ಸಾಂಕ್ರಾಮಿಕದಿಂದಾಗಿ ಅನಾರೋಗ್ಯ, ಸಂಪತ್ತು ನಾಶ ಆಗಿದೆ. ಉತ್ತಮ ಆರೋಗ್ಯ ಮತ್ತು ಹಣ ವೃದ್ಧಿಗೆ ಮನೆಯ ವಾಸ್ತು (Vatu Tips) ಕೂಡ ಕಾರಣ ಎಂದಿದ್ದಾರೆ ವಾಸ್ತು ತಜ್ಞೆ ದೀಪಾ ಜೋಶಿ. ಗುರುದೇವ್ ಕಾಶ್ಯಪ್ ಅವರು ಸ್ಥಾಪಿಸಿರುವ ‘ಅಖಿಲ ಭಾರತ ಅತೀಂದ್ರಿಯ ವಿಜ್ಞಾನಗಳ ಸಂಸ್ಥೆ’ಯಲ್ಲಿ ಕಾರ್ಯನಿರ್ವಹಿಸುತ್ತಿರುವ ದೀಪಾ ಜೋಶಿ, ಹಣಕಾಸಿಗೆ ಸಂಬಂಧಿಸಿದ ವಾಸ್ತು ವಿಚಾರಗಳ ಬಗ್ಗೆ ಮಾಧ್ಯಮವೊಂದರ ಜತೆ ಮಾಹಿತಿ ಹಂಚಿಕೊಂಡಿದ್ದಾರೆ. ಮನೆಯೊಳಗಿನ ಪ್ರತಿಯೊಂದು ಪ್ರದೇಶಕ್ಕೂ ಅದರದ್ದೇ ಆದ ಮಹತ್ವ ಇದೆ. ಅಡುಗೆ ಮಾಡುವ, ತಿನ್ನುವ, ಕುಳಿತುಕೊಳ್ಳುವ, ಕೆಲಸ ಮಾಡುವ ಮತ್ತು ಮಲಗುವ ಜಾಗಗಳಿಗೆ ಅವುಗಳದ್ದೇ ಆದ ಮಹತ್ವ ಇದೆ. ಇವುಗಳು ನಮ್ಮ ಮೇಲೆ ಪರಿಣಾಮ ಬೀರುತ್ತವೆ. ಮನುಷ್ಯನ ದೇಹದಲ್ಲಿ ವಿವಿಧ ಅಂಗಗಳಿಗೆ ಹೇಗೆ ಅದರದ್ದೇ ಆದ ಮಹತ್ವ ಇದೆಯೋ ಮನೆಯೊಳಗಿನ ಜಾಗಗಳೂ ಹಾಗೆಯೇ. ಮನೆಯ ವಿವಿಧ ಭಾಗಗಳ ವಾಸ್ತು ಕೂಡ ಮುಖ್ಯ ಎಂದು ಅವರು ಹೇಳಿದ್ದಾರೆ.
ಉದ್ಯೋಗ ಗಳಿಸಿಕೊಳ್ಳಲು ನಿಮ್ಮ ಅರ್ಹತೆ, ಕೌಶಲ ಹೇಗೆ ಮುಖ್ಯವೋ ಅದೇ ರೀತಿ ವಾಸ್ತು ಕೂಡ ಮುಖ್ಯ. ನಿಮ್ಮ ಹಣೆಬರಹಕ್ಕೆ ಸ್ಪಷ್ಟ ರೂಪ ನೀಡುವಲ್ಲಿ ವಾಸ್ತು ಮುಖ್ಯ ಪಾವತ್ರವಹಿಸುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು. ಉತ್ತಮ ಉದ್ಯೋಗ ಸಿಗಬೇಕಾದರೆ ಮನೆಯ ವಾಸ್ತು ಸರಿಯಾಗಿರಬೇಕು. ದಿನದ 24 ಗಂಟೆಯ ಅವಧಿಯಲ್ಲಿ ಸರಾಸರಿ 14ರಿಂದ 15 ತಾಸು ಮನೆಯಲ್ಲೇ ಇರುತ್ತೇವೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿ ಇದ್ದರೆ ಅದು ನಿಮ್ಮ ದೈನಂದಿನ ಚಟುವಟಿಕೆಗಳ ಮೇಲೆ, ಜೀವನಶೈಲಿಯ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ ದೀಪಾ ಜೋಶಿ.
ಇದನ್ನೂ ಓದಿ: Cash Transaction: ಎಚ್ಚರ, ಮನೆಯಲ್ಲಿ ಹೆಚ್ಚೆಚ್ಚು ನಗದು ಇಟ್ಟುಕೊಳ್ಳುವವರು ನೀವಾದರೆ ಈ ವಿಚಾರಗಳನ್ನು ತಿಳಿದಿರಿ
ಉತ್ತಮ ಹಣ ಗಳಿಕೆಗೆ ಮತ್ತು ಕನಸಿನ ಉದ್ಯೋಗವನ್ನು ನನಸಾಗಿಸಿಕೊಳ್ಳಲು ಅವರು ನೀಡಿರುವ ಕೆಲವು ವಾಸ್ತು ಸಲಹೆಗಳು ಇಲ್ಲಿವೆ;
ಈ ಮೇಲಿನ ಸಲಹೆಗಳನ್ನು ಅನುಸರಿಸುವುದರ ಜತೆಗೆ ದೇವರ ಜತೆ ನಂಬಿಕೆ ಇಡಬೇಕು. ಮನೆಯ ಹಿರಿಯರ ಆಶೀರ್ವಾದ ಪಡೆಯಬೇಕು. ಬಳಿಕ ನಿಮ್ಮ ಕರ್ತವ್ಯ ಮಾಡಿದರೆ ಉತ್ತಮ ಫಲಿತಾಂಶ ಕಾಣಬಹುದು ಎಂದು ದೀಪಾ ಜೋಶಿ ಸಲಹೆ ನೀಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ