Home Rent: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಮನೆ ಬಾಡಿಗೆ ಬಲು ದುಬಾರಿ; ಮತ್ತೆ ಹಣದುಬ್ಬರ ಭೀತಿ

ಕಳೆದ ವರ್ಷ ಸತತತ 10 ತಿಂಗಳುಗಳಿಂದ ಆರ್​ಬಿಐ ಸಹನೆಯ ಮಟ್ಟಕ್ಕಿಂತ ಮೇಲಿದ್ದ ಚಿಲ್ಲರೆ ಹಣದುಬ್ಬರ ಪ್ರಮಾಣ ಡಿಸೆಂಬರ್​​ನಲ್ಲಿ ಶೇ 5.72ಕ್ಕೆ ಇಳಿಕೆಯಾಗಿತ್ತು.

Home Rent: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಮನೆ ಬಾಡಿಗೆ ಬಲು ದುಬಾರಿ; ಮತ್ತೆ ಹಣದುಬ್ಬರ ಭೀತಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on:Jan 17, 2023 | 3:14 PM

ನವದೆಹಲಿ: ದೇಶದ ಪ್ರಮುಖ ನಗರಗಳಲ್ಲಿ ಮನೆ ಬಾಡಿಗೆ (Home Rent) ದರ ಗಣನೀಯವಾಗಿ ಹೆಚ್ಚಾಗುತ್ತಿದ್ದು, ಹಣದುಬ್ಬರ ಹೆಚ್ಚಾಗುವ ಆತಂಕಕ್ಕೆ ಕಾರಣವಾಗಿದೆ. ಹಣದುಬ್ಬರದ ವಿರುದ್ಧ ಹೋರಾಡುತ್ತಿರುವ ಆರ್​ಬಿಐಗೆ (RBI) ಹೊಸ ತಲೆನೋವಾಗಿ ಪರಿಣಮಿಸಿದೆ. ದೇಶದ ಗ್ರಾಹಕ ದರ ಆಧಾರಿತ ಹಣದುಬ್ಬರದಲ್ಲಿ ಶೇ 10.07ರಷ್ಟು ಮನೆ ಬಾಡಿಗೆ ಮತ್ತು ಪೂರಕ ವೆಚ್ಚಗಳಿವೆ. ಕಳೆದ ಒಂದು ವರ್ಷದಿಂದ ಆಹಾರ ವಸ್ತುಗಳ ದರ ಹೆಚ್ಚಳದ ಬಗ್ಗೆ ತಲೆಕೆಡಿಸಿಕೊಂಡಿದ್ದ ಆರ್​​ಬಿಐಗೆ ಈಗ ಹೊಸ ತಲೆನೋವು ಸೃಷ್ಟಿಯಾಗಿದೆ ಎಂದು ‘ರಾಯಿಟರ್ಸ್’ ಸುದ್ದಿಸಂಸ್ಥೆ ವರದಿ ಮಾಡಿದೆ. ವಸತಿ ಪರಿಸ್ಥಿತಿ ಜಿಗುಟಾಗಿದ್ದು, ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಆರ್​ಬಿಐ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ನಗರ ವಸತಿ ಹಣದುಬ್ಬರ 2022ರ ಡಿಸೆಂಬರ್​​ನಲ್ಲಿ ಶೇ 4.47ಕ್ಕೆ ಹೆಚ್ಚಳವಾಗಿತ್ತು. ಅದಕ್ಕಿಂತ ಹಿಂದಿನ ವರ್ಷ ಡಿಸೆಂಬರ್​​ನಲ್ಲಿ ಶೇ 3.61 ಹಾಗೂ 202ರ ಡಿಸೆಂಬರ್​ನಲ್ಲಿ ಶೇ 3.21ರಷ್ಟಿತ್ತು ಎಂಬುದು ಕೇಂದ್ರ ಸಾಂಖ್ಯಿಕ ಮತ್ತು ಯೋಜನಾನುಷ್ಠಾನ ಸಚಿವಾಲಯದ ಅಂಕಿಅಂಶಗಳಿಂದ ತಿಳಿದುಬಂದಿದೆ. 2019ರ ನಂತರ ಅತಿಹೆಚ್ಚಿನ ಮಟ್ಟದಲ್ಲಿದ್ದ ನಗರ ವಸತಿ ಹಣದುಬ್ಬರ ಅಕ್ಟೋಬರ್​​ನಲ್ಲಿ ಶೇ 4.58 ಇತ್ತು. ನವೆಂಬರ್​ ಮತ್ತು ಡಿಸೆಂಬರ್​​​ನಲ್ಲಿ ತುಸು ಇಳಿಕೆಯಾಗಿದೆ.

ಕಳೆದ ವರ್ಷ ಸತತತ 10 ತಿಂಗಳುಗಳಿಂದ ಆರ್​ಬಿಐ ಸಹನೆಯ ಮಟ್ಟಕ್ಕಿಂತ ಮೇಲಿದ್ದ ಚಿಲ್ಲರೆ ಹಣದುಬ್ಬರ ಪ್ರಮಾಣ ಡಿಸೆಂಬರ್​​ನಲ್ಲಿ ಶೇ 5.72ಕ್ಕೆ ಇಳಿಕೆಯಾಗಿತ್ತು. ಆದಾಗ್ಯೂ ಆಹಾರ ಮತ್ತು ಇಂಧನ ದರ ಹೊರತುಪಡಿಸಿದ ಮುಖ್ಯ ಹಣದುಬ್ಬರ ಶೇ 6ರ ಸನಿಹದಲ್ಲೇ ಇದೆ.

ಇದನ್ನೂ ಓದಿ: Bengaluru House Rent: ಬೆಂಗಳೂರಿನ ಬಾಡಿಗೆ ನಿವಾಸಿಗಳಿಗೆ ದರ ಏರಿಕೆಯ ಶಾಕ್; ಮನೆ ಬಾಡಿಗೆ ಶೇ 45ರವರೆಗೆ ಹೆಚ್ಚಳ

‘ಪ್ರಮುಖ ಹಣದುಬ್ಬರ ಇನ್ನೂ ಹೆಚ್ಚಾಗಿಯೇ ಇದೆ. ವಸತಿ ಹಣದುಬ್ಬರದಲ್ಲಿನ ಏರಿಕೆಯು ಒಟ್ಟಾರೆ ಹಣದುಬ್ಬರದ ಮೇಲೆ ಪರಿಣಾಮ ಬೀರಲಿದೆ’ ಎಂದು ಬ್ಯಾಂಕ್ ಆಫ್ ಬರೋಡದ ಅರ್ಥಶಾಸ್ತ್ರಜ್ಞೆ ಅದಕಿತಿ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚಿನ ಹಣದುಬ್ಬರ ಒತ್ತಡಕ್ಕೆ ಆಹಾರೇತರ ದರ ಹೆಚ್ಚಳ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.

ಮನೆ ಬಾಡಿಗೆ ಶೇ 20ರಿಂದ 25ರಷ್ಟು ಏರಿಕೆ

ದೇಶದ ಪ್ರಮುಖ 7 ನಗರಗಳಲ್ಲಿ 2022ರಲ್ಲಿ ಮನೆ ಬಾಡಿಗೆ ದರ ಸರಾಸರಿ ಶೇ 20ರಿಂದ 25ರಷ್ಟು ಏರಿಕೆಯಾಗಿದೆ. ಕೆಲವೆಡೆ ಶೇ 30ರಷ್ಟು ಹೆಚ್ಚಾಗಿದೆ ಎಂದು ರಿಯಲ್​ ಎಸ್ಟೇಟ್ ಕನ್ಸಲ್ಟೆನ್ಸಿ ಸಂಸ್ಥೆ ಅನರಾಕ್ ತಿಳಿಸಿದೆ. ಹೈಬ್ರಿಡ್ ಉದ್ಯೋಗದ ಮಾದರಿ, ದೊಡ್ಡ ಮನೆಗಳಿಗೆ ಬೇಡಿಕೆಯಂಥ ಕೆಲವು ಕಾರಣಗಳಿಂದ ಪ್ರಮುಖ ಹಣದುಬ್ಬರ ಇನ್ನೂ ಜಿಗುಟಾಗಿಯೇ ಇದೆ ಎಂದು ಕ್ರೆಡಿಟ್ ರೇಟಿಂಗ್ ಏಜೆನ್ಸಿ ಕೇರ್​ಎಡ್ಜ್ ಗ್ರೂಪ್​​ನ ಮುಖ್ಯ ಅರ್ಥಶಾಸ್ತ್ರಜ್ಞೆ ರಜನಿ ಸಿನ್ಹಾ ಹೇಳಿದ್ದಾರೆ.

ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ವಸತಿ ದುಬಾರಿ

ಆರ್​ಬಿಐಯ ವಸತಿ ದರ ಸೂಚ್ಯಂಕದ ಪ್ರಕಾರ, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ವಸತಿ ದರದಲ್ಲಿ ಕ್ರಮೇಣ ಹೆಚ್ಚಳವಾಗುತ್ತಿದೆ. ಕಳೆದ ವರ್ಷ ಸೆಪ್ಟೆಂಬರ್​​ಗೆ ಕೊನೆಗೊಂಡ ತ್ರೈಮಾಸಿಕ ಅವಧಿಯಲ್ಲಿ ಇದು ದಶಕದ ಗರಿಷ್ಠ ಮಟ್ಟದಲ್ಲಿತ್ತು. ಬೆಂಗಳೂರು, ಕೋಲ್ಕತ್ತ, ಮುಂಬೈ, ಪುಣೆ, ಹೈದರಾಬಾದ್, ಚೆನ್ನೈ ನಗರಗಳಲ್ಲಿ ಅಕ್ಟೋಬರ್ – ಡಿಸೆಂಬರ್​ ಅವಧಿಯಲ್ಲಿ ಸರಾಸರಿ ವಸತಿ ದರ ಶೇ 4ರಿಂದ 7ರಷ್ಟು ಹೆಚ್ಚಾಗಿದೆ ಎಂದು ಅನರಾಕ್ ಅಂಕಿಅಂಶಗಳಿಂದ ತಿಳಿದುಬಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:14 pm, Tue, 17 January 23

ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ