Investment: 6 ತಿಂಗಳಿಂದ 1 ವರ್ಷದವರೆಗೆ ಹೂಡಿಕೆ ಮಾಡಲು ಯಾವ ಪ್ಲಾನ್​​ಗಳು ಬೆಸ್ಟ್?

Short term investment options: ಮಕ್ಕಳ ಫೀಸ್, ಇನ್ಷೂರೆನ್ಸ್ ಪ್ರೀಮಿಯಮ್ ಇತ್ಯಾದಿ ಅಗತ್ಯಗಳಿಗೆ ಬೇಕಾದ ಹಣಕ್ಕಾಗಿ ಅಲ್ಪಾವಧಿ ಹೂಡಿಕೆ ಸೂಕ್ತ. ಇಂಥ ಅಲ್ಪಾವಧಿ ಹೂಡಿಕೆ ಆಯ್ಕೆಗಳು ಹಲವಿವೆ. ಆರ್​​ಡಿಯಿಂದ ಹಿಡಿದು ಸ್ಮಾಲ್ ಸೇವಿಂಗ್ಸ್ ಬ್ಯಾಂಕುಗಳಲ್ಲಿ ಉಳಿತಾಯ ಖಾತೆಯವರೆಗೂ ನಿಮಗೆ ಹೂಡಿಕೆ ಆಯ್ಕೆಗಳುಂಟು.

Investment: 6 ತಿಂಗಳಿಂದ 1 ವರ್ಷದವರೆಗೆ ಹೂಡಿಕೆ ಮಾಡಲು ಯಾವ ಪ್ಲಾನ್​​ಗಳು ಬೆಸ್ಟ್?
ಹೂಡಿಕೆ

Updated on: Jul 04, 2025 | 11:44 AM

ಇವತ್ತು ಹಣ ಕೂಡಿಡುವುದು ಬಹಳ ಅಗತ್ಯ. ಕೂಡಿಟ್ಟ ಹಣವನ್ನು ಎಲ್ಲಾದರೂ ಹೂಡಿಕೆ ಮಾಡಿ ಬೆಳೆಸುವುದೂ ಕೂಡ ಮುಖ್ಯ. ನೀವು ದೀರ್ಘಾವಧಿ ದೃಷ್ಟಿಯಿಂದ ಹೂಡಿಕೆ ಮಾಡುವುದು ಒಳ್ಳೆಯ ಯೋಜನೆ. ಆದರೆ, ದಿಢೀರ್ ಎಮರ್ಜೆನ್ಸಿ ವೆಚ್ಚದ ಪರಿಸ್ಥಿತಿ ಬಂದು ಬಿಡಬಹುದು. ವರ್ಷದ ಇನ್ಷೂರೆನ್ಸ್ ಪ್ರೀಮಿಯಮ್​​ಗಳನ್ನು ಕಟ್ಟಬೇಕಾಗಬಹುದು. ಮಕ್ಕಳ ಶಾಲೆಯ ಫೀಸ್ ಕಟ್ಟಬೇಕಾಗಬಹುದು. ಹೀಗೆ ಒಂದು ವರ್ಷಕ್ಕೊಮ್ಮೆಯೋ ಅಥವಾ 6 ತಿಂಗಳಿಗೊಮ್ಮೆಯೋ ವೆಚ್ಚ ಬರಬಹುದು. ನೀವು ದೀರ್ಘಾವಧಿಗೆಂದು ಮಾಡಿದ ಹೂಡಿಕೆಯನ್ನು ಇಂಥ ಅಗತ್ಯಗಳಿಗೆ ಹಿಂಪಡೆಯುವುದು ಸೂಕ್ತ ಎನಿಸುವುದಿಲ್ಲ. ಹೀಗಾಗಿ, ಅಲ್ಪಾವಧಿಗೆ ಸೂಕ್ತವಾಗಿರುವ ಯೋಜನೆಗಳಲ್ಲಿ (short term investment plan) ನಿರ್ದಿಷ್ಟ ಹೂಡಿಕೆಗಳನ್ನು ಮಾಡಬಹುದು. ಅಂಥ ಕೆಲ ಪ್ಲಾನ್​ಗಳ ವಿವರ ಇಲ್ಲಿದೆ…

ಫಿಕ್ಸೆಡ್ ಡೆಪಾಸಿಟ್​​ನಲ್ಲಿ ಹೂಡಿಕೆ

ಇದು ಬಹಳ ಸಾಮಾನ್ಯವಾಗಿ ಬಳಕೆಯಲ್ಲಿರುವ ಠೇವಣಿ ಸ್ಕೀಮ್. ಒಂದು ವಾರದಿಂದ ಆರಂಭವಾಗಿ 10 ವರ್ಷಗಳವರೆಗೆ ವಿವಿಧ ಅವಧಿಗಳಿಗೆ ಠೇವಣಿ ಇಡಲು ಆಯ್ಕೆಗಳಿವೆ. ನಿಶ್ಚಿತ ಠೇವಣಿ ಪ್ಲಾನ್​​ಗಳಲ್ಲಿ ಬಡ್ಡಿದರ ಶೇ. 5ರಿಂದ 9ರವರೆಗೂ ಇರುತ್ತದೆ.

ಇದನ್ನೂ ಓದಿ: ಷೇರುಗಳಲ್ಲಿ ಹೆಚ್ಚು ವರ್ಷ ಹಣ ಇಟ್ಟರೆ ಹೆಚ್ಚು ಫಲವಾ? ಇದೆಲ್ಲಾ ಮಿಥ್ ಎನ್ನುತ್ತಾರೆ ಸಮೀರ್ ಅರೋರಾ

ರೆಕರಿಂಗ್ ಡೆಪಾಸಿಟ್​​ನಲ್ಲಿ ಹೂಡಿಕೆ

ನಿಮ್ಮ ಉಳಿತಾಯ ಹಣವನ್ನು ಹೂಡಿಕೆ ಮಾಡಲು ರೆಕರಿಂಗ್ ಡೆಪಾಸಿಟ್ ಬಹಳ ಒಳ್ಳೆಯ ಆಯ್ಕೆ. ಎಸ್​​ಐಪಿ ರೀತಿಯಲ್ಲಿ ನೀವು ಪ್ರತೀ ತಿಂಗಳು ಹಣ ತುಂಬಿಸುತ್ತಾ ಹೋಗಬಹುದು. ಇದೂ ಕೂಡ 6 ತಿಂಗಳಿಂದ ಹಿಡಿದು 2 ವರ್ಷದವರೆಗಿನ ಅವಧಿಗಳಿಗೆ ಪ್ಲಾನ್​ಗಳನ್ನು ಹೊಂದಿರುತ್ತದೆ. ಇದಕ್ಕೆ ಸಿಗುವ ಬಡ್ಡಿದರ ಶೇ. 5.5ರಿಂದ 7ರವರೆಗೂ ಇದೆ.

ಲಿಕ್ವಿಡ್ ಮ್ಯೂಚುವಲ್ ಫಂಡ್​​ಗಳಲ್ಲಿ ಹೂಡಿಕೆ

ಮ್ಯೂಚುವಲ್ ಫಂಡ್​​ಗಳಲ್ಲಿ ನೀವು ನಿಗದಿ ಅವಧಿಗೆ ಮುಂಚೆ ವಿತ್​​ಡ್ರಾ ಮಾಡಿದರೆ ಎಕ್ಸಿಡ್ ಲೋಡ್ ಆಗಿ ನಿರ್ದಿಷ್ಟ ಶುಲ್ಕ ತೆರಬೇಕಾಗುತ್ತದೆ. ಅದೆ ನೀವು ಲಿಕ್ವಿಡ್ ಮ್ಯುಚುವಲ್ ಫಂಡ್​​ಗಳನ್ನು ಆಯ್ಕೆ ಮಾಡಿಕೊಂಡರೆ ಎಕ್ಸಿಡ್ ಲೋಡ್ ಇರುವುದಿಲ್ಲ. ಯಾವಾಗ ಬೇಕಾದರೂ ನೀವು ಹಣ ಹಿಂಪಡೆಯಬಹುದು. ಇಂಥ ಫಂಡ್​​ಗಳು ಟ್ರೆಷರಿ ಬಿಲ್, ಬಾಂಡ್​​ಗಳ ಮೇಲೆ ಹೂಡಿಕೆ ಮಾಡುತ್ತವೆ. ವರ್ಷಕ್ಕೆ ಸುಮಾರು ಶೇ. 6ರಿಂದ 7ರಷ್ಟು ರಿಟರ್ನ್ ನಿರೀಕ್ಷಿಸಬಹುದು.

ಇದನ್ನೂ ಓದಿ: ಪೋಸ್ಟ್ ಆಫೀಸ್ ಅಪ್​ಡೇಟ್; ಆರ್​​ಬಿಐ ದರ ಇಳಿಸಿದರೂ ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿಯಲ್ಲಿ ಇಲ್ಲ ಇಳಿಕೆ

ಕಾರ್ಪೊರೇಟ್ ಬಾಂಡ್, ಸರ್ಕಾರಿ ಬಾಂಡ್​​ಗಳಲ್ಲಿ ಹೂಡಿಕೆ ಮಾಡಬಹುದು. ಇವೂ ಕೂಡ ಒಂದು ವರ್ಷದ ಮೆಚ್ಯುರಿಟಿ ಆಯ್ಕೆಗಳಿರುತ್ತವೆ. ಕೆಲ ಸ್ಮಾಲ್ ಫೈನಾನ್ಸ್ ಬ್ಯಾಂಕುಗಳಲ್ಲಿ ನೀವು ಎಸ್​ಬಿ ಖಾತೆ ತೆರೆದು ಅದರಲ್ಲಿ ಹಾಗೇ ಹಣ ಬಿಟ್ಟರೂ ಎಫ್​​​ಡಿಗೆ ಸಿಗುವಷ್ಟು ಬಡ್ಡಿ ಸಿಗುತ್ತದೆ. ಪೋಸ್ಟ್ ಬ್ಯಾಂಕ್​ನ ಆರ್​​​ಡಿ, ಟರ್ಮ್ ಡೆಪಾಸಿಟ್ ಪ್ಲಾನ್​ಗಳೂ ಲಭ್ಯ ಉಂಟು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ