AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಯಲ್ ಎಸ್ಟೇಟ್ ಸೇರಿ ಶ್ರೀಮಂತಿಕೆ ಹೆಚ್ಚಿಸಬಲ್ಲ ಮೂರು ಕ್ಷೇತ್ರಗಳಿವು: ಸಿಎ ಕೌಶಿಕ್ ಅನಿಸಿಕೆ

Nitin Kaushik's 3 Steps to Financial Freedom: ಚಾರ್ಟರ್ಡ್ ಅಕೌಂಟೆಂಟ್ ನಿತಿನ್ ಕೌಶಿಕ್ ಅವರು ಹಣಕಾಸು ಸ್ವಾತಂತ್ರ್ಯ ಮತ್ತು ಸಂಪತ್ತು ಸೃಷ್ಟಿಗೆ ಮೂರು ಪ್ರಮುಖ ಅಂಶಗಳನ್ನು ತಿಳಿಸಿದ್ದಾರೆ. ರಿಯಲ್ ಎಸ್ಟೇಟ್, ಬ್ಯುಸಿನೆಸ್ ಹಾಗೂ ಕ್ಯಾಷ್ ಫ್ಲೋ ಪ್ರಾಮುಖ್ಯತೆಯನ್ನು ಅವರು ಒತ್ತಿಹೇಳುತ್ತಾರೆ. ಪದವಿಗಳಿಗಿಂತ ನೈಜ ಆಸ್ತಿಗಳೇ ನಿವೃತ್ತಿ ನಂತರ ಕೈಹಿಡಿಯುತ್ತವೆ ಎಂದು ಹೇಳುವ ಮೂಲಕ ಮಧ್ಯಮವರ್ಗದವರ ಭವಿಷ್ಯಕ್ಕೆ ಸ್ಪಷ್ಟ ಮಾರ್ಗದರ್ಶನ ನೀಡಿದ್ದಾರೆ.

ರಿಯಲ್ ಎಸ್ಟೇಟ್ ಸೇರಿ ಶ್ರೀಮಂತಿಕೆ ಹೆಚ್ಚಿಸಬಲ್ಲ ಮೂರು ಕ್ಷೇತ್ರಗಳಿವು: ಸಿಎ ಕೌಶಿಕ್ ಅನಿಸಿಕೆ
ಹಣ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 10, 2025 | 2:27 PM

Share

ಚೆನ್ನಾಗಿ ಓದಿ, ಒಳ್ಳೆಯ ಸಂಬಳದ ಕೆಲಸ ಗಿಟ್ಟಿಸಿಕೊಂಡುಬಿಟ್ಟರೆ ಲೈಫ್ ಸೆಟಲ್ ಎನಿಸಬಹುದು. ಆದರೂ ಕೂಡ ಬಹಳ ಜನರು ರಿಟೈರ್ ಆಗುವಾಗ ಪಿಎಫ್ ಹಣ ಬಿಟ್ಟರೆ ಬ್ಯಾಂಕ್ ಬ್ಯಾಲನ್ಸ್ 5-10 ಲಕ್ಷ ರೂ ಮಾತ್ರವೇ ಹೊಂದಿರುತ್ತಾರೆ. ಒಂದು ಮನೆ ಸಂಪಾದಿಸಿ ಅದರ ಇಎಂಐ ಅನ್ನು ರಿಟೈರ್ ಆಗುವವರೆಗೂ ಕಟ್ಟುತ್ತಲೇ ಇರುತ್ತಾರೆ. ಇದು ಹೆಚ್ಚಿನ ಮಧ್ಯಮವರ್ಗದವರ ಪಾಡು. ಹಾಗಾದರೆ ಹಣಕಾಸು ಸ್ವಾತಂತ್ರ್ಯಕ್ಕೆ (Financial Freedom) ಏನು ಮಾಡಬೇಕು? ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ನಿತಿನ್ ಕೌಶಿಕ್ ತಮ್ಮ ಎಕ್ಸ್ ಪೋಸ್ಟ್​ವೊಂದರಲ್ಲಿ, ಶ್ರೀಮಂತಿಕೆ ಹೊಂದಲು ಸಹಾಯವಾಗುವ ಮೂರು ಅಂಶಗಳನ್ನು ತಿಳಿಸಿದ್ದಾರೆ.

ಮೊದಲನೆಯದು, ರಿಯಲ್ ಎಸ್ಟೇಟ್. ಇದು ಪಾಸಿವ್ ಇನ್ಕಮ್ ಸೃಷ್ಟಿಸಬಲ್ಲುದು. ಎರಡನೆಯದು, ಉದ್ದಿಮೆಗಾರಿಕೆ. ಮೂರನೆಯದು, ಕ್ಯಾಷ್​ಫ್ಲೋ. ಅಂದರೆ, ನಿಮಗೆ ಬೇಕೆಂದಾಗ ಸುಲಭವಾಗಿ ತೆಗೆಯಲು ಸಾಧ್ಯವಾಗಿಸುವ ಹಣ. ಈ ಮೂರು ಅಂಶಗಳು ನಿಮ್ಮನ್ನು ಶ್ರೀಮಂತಿಕೆ ಕಡೆಗೆ ಕರೆದೊಯ್ಯಬಲ್ಲುವು ಎಂಬುದು ನಿತಿನ್ ಕೌಶಿಕ್ ಅನಿಸಿಕೆ.

ಇದನ್ನೂ ಓದಿ: ಒಂದೂವರೆ ಲಕ್ಷಕ್ಕಿಂತ ಹೆಚ್ಚು ಸಂಬಳ; ಸೇವಿಂಗ್ಸ್ ಶೂನ್ಯ; ಇವತ್ತಿನ ಸುಖ ಮುಖ್ಯವೋ, ಭವಿಷ್ಯದ ಸುಖ ಮುಖ್ಯವೋ? ನೀವೇನಂತೀರಿ?

ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ನೀವು ಮನೆ ಅಥವಾ ಅಂಗಡಿಯನ್ನೇ ಕಟ್ಟಿ ಬಾಡಿಗೆಗೆ ಕೊಡಬಹುದು. ಬಾಡಿಗೆ ಆದಾಯ ಬಹುತೇಕ ನಿಲ್ಲುವುದೇ ಇಲ್ಲ. ಇದು ನಿಜವಾದ ಪಾಸಿವ್ ಇನ್ಕಮ್. ನೀವು ಉದ್ಯೋಗದಲ್ಲಿರಲಿ, ಬ್ಯುಸಿನೆಸ್ ಮಾಡುತ್ತಿರಲಿ, ರಿಯಲ್ ಎಸ್ಟೇಟ್​ನಿಂದ ಪಾಸಿವ್ ಇನ್ಕಮ್ ಬರುತ್ತಲೇ ಇರುತ್ತದೆ.

ನಿತಿನ್ ಕೌಶಿಕ್ ಅವರ ಎಕ್ಸ್ ಪೋಸ್ಟ್

ನಿತಿನ್ ಕೌಶಿಕ್ ಅವರು ಉದ್ಯಮಶೀಲತೆಯ ಅಂಶವನ್ನು ಪ್ರಸ್ತಾಪಿಸುತ್ತಾರೆ. ನೀವು ಉದ್ಯೋಗ ಮಾಡಿದರೆ ಸಂಬಳದಿಂದ ಸೀಮಿತ ಆದಾಯ ಸಿಗುತ್ತದೆ. ಬ್ಯುಸಿನೆಸ್ ಮಾಡಿದರೆ ಲಾಭವನ್ನು ಎಷ್ಟು ಬೇಕಾದರೂ ಹೆಚ್ಚಿಸಿಕೊಳ್ಳಲು ಅವಕಾಶ ಇರುತ್ತದೆ.

ಇದನ್ನೂ ಓದಿ: ಸಾಲ ಬಳಸಿ ಸಾಹುಕಾರರಾದವರಿದ್ದಾರೆ… ಒಳ್ಳೆ ಸಾಲ, ಕೆಟ್ಟ ಸಾಲ ಮಧ್ಯೆ ವ್ಯತ್ಯಾಸ ತಿಳಿದಿರಿ…

ಮೂರನೇ ಅಂಶ ಕ್ಯಾಷ್ ಫ್ಲೋನದ್ದು. ನಿಮಗೆ ಬೇಕೆಂದಾಗ ಬಳಸಿಕೊಳ್ಳಲು ಕ್ಯಾಷ್ ಇದ್ದಾಗ ಅನಿರೀಕ್ಷಿತ ಹೂಡಿಕೆ ಅವಕಾಶಗಳನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ತುರ್ತು ವೆಚ್ಚ ಬಂದಾಗ ಅದು ನೆರವಾಗುತ್ತದೆ. ಇಲ್ಲದಿದ್ದರೆ ಸಾಲದ ಸುಳಿಗೆ ಸಿಲುಕಬೇಕಾಗುತ್ತದೆ.

ಇದೇ ವೇಳೆ ಕೌಶಿಕ್ ಅವರು ಸಂಪತ್ತು ಸೃಷ್ಟಿಗೆ ಅಪ್ರಸ್ತುತವಾದ ಅಂಶಗಳನ್ನೂ ಹೆಸರಿಸಿದ್ದಾರೆ. ಅವರ ಪ್ರಕಾರ ಪದವಿಗಳು (ಉದ್ಯೋಗಸ್ತರದಲ್ಲಿ) ನಿರರ್ಥಕ. ನೀವು ನಿವೃತ್ತರಾದರೆ ನಿಮ್ಮ ಕೈಹಿಡಿಯುವುದು ಈ ಪದವಿಗಳಲ್ಲ, ನೈಜ ಆಸ್ತಿಗಳು ಎಂದೆನ್ನುತ್ತಾರೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ