AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WhatsApp Banking: ಪ್ರಮುಖ ಬ್ಯಾಂಕ್​ಗಳ ವಾಟ್ಸ್​ಆ್ಯಪ್ ಸೇವೆಯನ್ನು ಪಡೆಯುವುದು ಹೇಗೆ? ಇಲ್ಲಿದೆ ಟಿಪ್ಸ್

WhatsApp banking Service; ನೀವು ಎಸ್​ಬಿಐ, ಎಚ್​ಡಿಎಫ್​ಸಿ, ಐಸಿಐಸಿಐ, ಬ್ಯಾಂಕ್ ಆಫ್ ಬರೋಡ, ಆ್ಯಕ್ಸಿಸ್ ಬ್ಯಾಂಕ್ ಇವುಗಳ ಗ್ರಾಹಕರಾಗಿದ್ದರೆ ವಾಟ್ಸ್​ಆ್ಯಪ್ ಸೇವೆಗಳಿಗೆ ಹೇಗೆ ನೋಂದಾಯಿಸಿಕೊಳ್ಳಬಹುದು ಎಂಬ ಮಾಹಿತಿ ಇಲ್ಲಿದೆ.

WhatsApp Banking: ಪ್ರಮುಖ ಬ್ಯಾಂಕ್​ಗಳ ವಾಟ್ಸ್​ಆ್ಯಪ್ ಸೇವೆಯನ್ನು ಪಡೆಯುವುದು ಹೇಗೆ? ಇಲ್ಲಿದೆ ಟಿಪ್ಸ್
ವಾಟ್ಸ್​ಆ್ಯಪ್ ಬ್ಯಾಂಕಿಂಗ್ ಸೇವೆ (ಸಾಂದರ್ಭಿಕ ಚಿತ್ರ)
TV9 Web
| Edited By: |

Updated on: Dec 23, 2022 | 6:03 PM

Share

ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ಕ್ಷೇತ್ರದ ಬಹುತೇಕ ಎಲ್ಲ ಪ್ರಮುಖ ಬ್ಯಾಂಕ್​ಗಳು (Major Banks) ಈಗ ವಾಟ್ಸ್​ಆ್ಯಪ್ (WhatsApp) ಮೂಲಕ ಬ್ಯಾಂಕಿಂಗ್ ಸೇವೆಗಳನ್ನು (Banking Services) ನೀಡುತ್ತಿವೆ. ಡಿಜಿಟಲ್ ಬ್ಯಾಂಕಿಂಗ್ (Digital Banking) ಉಪಕ್ರಮಗಳ ಇತ್ತೀಚಿನ ಒಂದು ಭಾಗ ವಾಟ್ಸ್​ಆ್ಯಪ್ ಬ್ಯಾಂಕಿಂಗ್ (WhatsApp banking). ಡಿಜಿಟಲ್ ಬ್ಯಾಂಕಿಂಗ್​ನಿಂದಾಗಿ ಎಲ್ಲ ವಯಸ್ಸಿನ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಗಳನ್ನು ಪಡೆಯವುದು ಬಹಳ ಸುಲಭ ಮತ್ತು ಸರಳವಾಗಿದೆ. ನೀವು ಎಸ್​ಬಿಐ, ಎಚ್​ಡಿಎಫ್​ಸಿ, ಐಸಿಐಸಿಐ, ಬ್ಯಾಂಕ್ ಆಫ್ ಬರೋಡ, ಆ್ಯಕ್ಸಿಸ್ ಬ್ಯಾಂಕ್ ಇವುಗಳ ಗ್ರಾಹಕರಾಗಿದ್ದರೆ ವಾಟ್ಸ್​ಆ್ಯಪ್ ಸೇವೆಗಳಿಗೆ ಹೇಗೆ ನೋಂದಾಯಿಸಿಕೊಳ್ಳಬಹುದು ಎಂಬ ಮಾಹಿತಿ ಇಲ್ಲಿದೆ.

ಪಿಎನ್​ಬಿ ವಾಟ್ಸ್​ಆ್ಯಪ್ ಬ್ಯಾಂಕಿಂಗ್ ಸೌಲಭ್ಯ (PNB)

ಪಂಜಾಬ್ ನ್ಯಾಷನಲ್ ಬ್ಯಾಂಕ್ ಈಗ ಖಾತೆದಾರರಿಗೆ ಮತ್ತು ಖಾತೆ ಇಲ್ಲದವರಿಗೂ ವಾಟ್ಸ್​ಆ್ಯಪ್ ಮೂಲಕ ಸೇವೆ ಒದಗಿಸುತ್ತಿದೆ. ಬ್ಯಾಂಕ್​ ಅನೇಕ ಸೇವೆಗಳು ವಾಟ್ಸ್​ಆ್ಯಪ್ ಮೂಲಕ ಲಭ್ಯವಿವೆ. ಈ ಬ್ಯಾಂಕ್​ನ ವಾಟ್ಸ್​ಆ್ಯಪ್ ಸೇವೆಗಳನ್ನು ಪಡೆಯಲು ಗ್ರಾಹಕರು +91-9264092640 ಈ ಸಂಖ್ಯೆಯನ್ನು ಕಾಂಟ್ಯಾಕ್ಟ್ ಲಿಸ್ಟ್​ನಲ್ಲಿ ಆ್ಯಡ್ ಮಾಡಿರಬೇಕು. ನಂತರ ನೋಂದಾಯಿತ ಮೊಬೈಲ್​ ಸಂಖ್ಯೆಯಿಂದ +91-9264092640 ಈ ಸಂಖ್ಯೆಗೆ ಮೆಸೇಜ್ ಕಳುಹಿಸಬೇಕು.

ಎಸ್​ಬಿಐ ವಾಟ್ಸ್​ಆ್ಯಪ್ ಬ್ಯಾಂಕಿಂಗ್ ಸೌಲಭ್ಯ (SBI)

ಬ್ಯಾಂಕ್​ನಲ್ಲಿ ನೋಂದಾಯಿಸಿರುವ ಮೊಬೈಲ್ ಸಂಖ್ಯೆಯಿಂದ +919022690226 ಇದಕ್ಕೆ ‘ಹಾಯ್ (Hi)’ ಸಂದೇಶ ಕಳುಹಿಸಿ. ನಂತರ ಚಾಟ್​​-ಬಾಟ್​ನಲ್ಲಿ ಬರುವ ಸೂಚನೆಗಳನ್ನು ಅನುಸರಿಸಿ ಅಥವಾ WAREG A/C No ಎಂದು ಟೈಪ್ ಮಾಡಿ ಇದರ ಮುಂದೆ ಖಾತೆ ಸಂಖ್ಯೆಯನ್ನು ನಮೂದಿಸಿ ಎಸ್​ಎಂಎಸ್ ಕಳುಹಿಸಿ. ನೋಂದಾವಣೆ ಪ್ರಕ್ರಿಯೆಗಳನ್ನು ಪೂರೈಸಿದ ಬಳಿಕ ಎಸ್​ಬಿಐ ವಾಟ್ಸ್​ಆ್ಯಪ್ ಬ್ಯಾಂಕಿಂಗ್ ಸೌಲಭ್ಯ ದೊರೆಯುತ್ತದೆ.

ಎಚ್​ಡಿಎಫ್​​ಸಿ ಬ್ಯಾಂಕ್ ವಾಟ್ಸ್​ಆ್ಯಪ್ ಬ್ಯಾಂಕಿಂಗ್ (HDFC Bank)

ಎಚ್​ಡಿಎಫ್​​ಸಿ ಬ್ಯಾಂಕ್ ವಾಟ್ಸ್​ಆ್ಯಪ್ ಮೂಲಕ ದಿನದ 24 ಗಂಟೆಯೂ ವಾರದ ಎಲ್ಲ ದಿನಗಳಲ್ಲಿಯೂ 90+ ಸೇವೆಗಳನ್ನು ನೀಡುತ್ತಿದೆ. ಗ್ರಾಹಕರು ಚಾಟ್ ಮಾಡುವ ಮೂಲಕ ಸೇವೆಗಳನ್ನು ಪಡೆಯಬಹುದಾಗಿದೆ. ಸಂಪೂರ್ಣ ಎನ್​ಕ್ರಿಪ್ಟೆಡ್ ಸೇವೆಯನ್ನು ಬ್ಯಾಂಕ್ ನೀಡುತ್ತಿದೆ. ಆದರೆ, ಬ್ಯಾಂಕ್​ನಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆಗೆ ಮಾತ್ರ ಈ ಸೇವೆಗಳು ದೊರೆಯುತ್ತವೆ. ಕಾಂಟ್ಯಾಕ್ಟ್​ ಲಿಸ್ಟ್​ನಲ್ಲಿ 70700 22222 ಈ ಸಂಖ್ಯೆಯನ್ನು ಆ್ಯಡ್ ಮಾಡಿ ‘Hi’ ಸಂದೇಶ ಕಳುಹಿಸುವ ಮೂಲಕ ನೋಂದಾಯಿಸಿಕೊಳ್ಳಬಹುದು.

ಐಸಿಐಸಿಐ ಬ್ಯಾಂಕ್ ಬ್ಯಾಂಕ್ ವಾಟ್ಸ್​ಆ್ಯಪ್ ಸೇವೆ (ICICI Bank)

ಐಸಿಐಸಿಐ ಬ್ಯಾಂಕ್ ಬ್ಯಾಂಕ್ ವಾಟ್ಸ್​ಆ್ಯಪ್ ಸೇವೆ ಪಡೆಯಲು +91 8640086400 ಸಂಖ್ಯೆಯನ್ನು ಸೇವ್ ಮಾಡಿಕೊಂಡು ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ‘Hi’ ಸಂದೇಶ ಕಳುಹಿ. 9542000030 ಸಂಖ್ಯೆಗೆ ಡಯಲ್ ಮಾಡುವ ಮೂಲಕ ಅಥವಾ OPTIN ಎಂದು ಎಸ್​ಎಂಎಸ್ ಕಳುಹಿಸುವ ಮೂಲಕವೂ ವಾಟ್ಸ್​ಆ್ಯಪ್ ಸೇವೆ ಪಡೆಯಲು ಆರಂಭಿಸಬಹುದು.

ಆ್ಯಕ್ಸಿಸ್ ಬ್ಯಾಂಕ್ ವಾಟ್ಸ್​ಆ್ಯಪ್ ಸೇವೆ (Axis Bank)

7036165000 ಈ ಸಂಖ್ಯೆಗೆ ಎಸ್​ಎಂಎಸ್ ಕಳುಹಿಸುವ ಅಥವಾ ಮಿಸ್ಡ್ ಕಾಲ್ ಕೊಟ್ಟು ನಂತರ ‘ಸಬ್​ಸ್ಕ್ರೈಬ್’ ಎಂದು ಮೆಸೇಜ್ ಕಳುಹಿಸುವ ಮೂಲಕ ವಾಟ್ಸ್​ಆ್ಯಪ್ ಬ್ಯಾಂಕಿಂಗ್ ಸೌಲಭ್ಯ ಪಡೆಯಬಹುದು. ಅಕೌಂಟ್ಸ್, ಚೆಕ್, ಕ್ರೆಡಿಟ್ ಕಾರ್ಡ್, ಟರ್ಮ್ ಡಿಪಾಸಿಟ್, ಲೋನ್ ಸೇರಿದಂತೆ ಹಲವು ಸೇವೆಗಳನ್ನು ಬ್ಯಾಂಕ್ ವಾಟ್ಸ್​ಆ್ಯಪ್ ಮೂಲಕ ನೀಡುತ್ತಿದೆ. ಆ್ಯಕ್ಸಿಸ್ ಬ್ಯಾಂಕ್ ಗ್ರಾಹಕರಲ್ಲದವರಿಗೂ ಸಹ ‘ಅಪ್ಲೈ ಫಾರ್ ಪ್ರಾಡಕ್ಟ್ಸ್’, ಸಮೀಪದ ಎಟಿಎಂ, ಶಾಖೆ, ಸಾಲದ ಕೇಂದ್ರ ಹುಡುಕುವ ಸೇವೆಗಳು ವಾಟ್ಸ್​​ಆ್ಯಪ್ ಮೂಲಕ ಲಭ್ಯವಿವೆ.

ಬ್ಯಾಂಕ್ ಆಫ್ ಬರೋಡ ವಾಟ್ಸ್​ಆ್ಯಪ್ ಸೇವೆ (Bank of Baroda)

ಬ್ಯಾಂಕ್ ಆಫ್ ಬರೋಡ ಗ್ರಾಹಕರು ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 8433888777ಗೆ ‘Hi’ ಸಂದೇಶ ಕಳುಹಿಸಿ ವಾಟ್ಸ್​ಆ್ಯಪ್ ಸೇವೆಗಳನ್ನು ಎನೇಬಲ್ ಮಾಡಿಕೊಳ್ಳಬಹುದು. ಭಾರತದ ಮತ್ತು ಅಂತಾರಾಷ್ಟ್ರೀಯ ಮಟ್ಟದ ಗ್ರಾಹಕರಿಗೂ ಈ ಸೇವೆ ಲಭ್ಯವಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ