Petrol Price Today: ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಮಾರ್ಚ್​ 13 ರಂದು ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ, ವಿವರ ಇಲ್ಲಿದೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸೋಮವಾರ ಕಚ್ಚಾ ತೈಲ ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ. WTI ಕಚ್ಚಾ ಇಂದು 0.46 ಡಾಲರ್ (0.60 ಶೇಕಡಾ) ಹೆಚ್ಚಾಗಿದೆ ಮತ್ತು ಪ್ರತಿ ಬ್ಯಾರೆಲ್‌ 77.14 ಡಾಲರ್​ಗೆ ಮಾರಾಟವಾಗುತ್ತಿದೆ.

Petrol Price Today: ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಮಾರ್ಚ್​ 13 ರಂದು ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ, ವಿವರ ಇಲ್ಲಿದೆ
ಪೆಟ್ರೋಲ್Image Credit source: Aajtak.in
Follow us
ನಯನಾ ರಾಜೀವ್
|

Updated on: Mar 13, 2023 | 7:08 AM

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸೋಮವಾರ ಕಚ್ಚಾ ತೈಲ ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ. WTI ಕಚ್ಚಾ ಇಂದು 0.46 ಡಾಲರ್ (0.60 ಶೇಕಡಾ) ಹೆಚ್ಚಾಗಿದೆ ಮತ್ತು ಪ್ರತಿ ಬ್ಯಾರೆಲ್‌ 77.14 ಡಾಲರ್​ಗೆ ಮಾರಾಟವಾಗುತ್ತಿದೆ. ಗಮನಾರ್ಹವಾಗಿ, ಈ ವರ್ಷ ಇಲ್ಲಿಯವರೆಗೆ, ಕಚ್ಚಾ ತೈಲದ ಬೆಲೆಯಲ್ಲಿ ತೀವ್ರ ಜಿಗಿತ ಕಂಡುಬಂದಿಲ್ಲ. ದೇಶದ ತೈಲ ಮಾರುಕಟ್ಟೆ ಕಂಪನಿಗಳು ಪ್ರತಿದಿನ ಬೆಳಗ್ಗೆ ಪೆಟ್ರೋಲ್ ಮತ್ತು ಡೀಸೆಲ್‌ನ ಹೊಸ ದರಗಳನ್ನು ಬಿಡುಗಡೆ ಮಾಡುತ್ತವೆ.

ಇಂದು ದೇಶದ ಬಹುತೇಕ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ, ಉತ್ತರ ಪ್ರದೇಶದಲ್ಲಿ ಪೆಟ್ರೋಲ್ ಲೀಟರ್‌ಗೆ 33 ಪೈಸೆ ಏರಿಕೆಯಾಗಿ 96.63 ರೂ.ಗೆ ಮತ್ತು ಡೀಸೆಲ್ ಲೀಟರ್‌ಗೆ 89.80 ರೂ.ಗೆ ತಲುಪಿದೆ. ಪಶ್ಚಿಮ ಬಂಗಾಳದಲ್ಲಿ ಪೆಟ್ರೋಲ್ ಬೆಲೆ 44 ಪೈಸೆ ಏರಿಕೆಯಾಗಿ 107.26 ರೂ. ಮತ್ತು ಡೀಸೆಲ್ 41 ಪೈಸೆ ಏರಿಕೆಯಾಗಿ ಪ್ರತಿ ಲೀಟರ್‌ಗೆ 93.90 ರೂ.ಗೆ ತಲುಪಿದೆ.

ಮತ್ತಷ್ಟು ಓದಿ: Petrol Price Today: ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಮಾರ್ಚ್​ 12 ರಂದು ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ, ವಿವರ ಇಲ್ಲಿದೆ

ಹರಿಯಾಣದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ 28 ಪೈಸೆಯಷ್ಟು ಹೆಚ್ಚಾಗಿದೆ. ಹಿಮಾಚಲ ಪ್ರದೇಶದಲ್ಲಿ ಪೆಟ್ರೋಲ್ ದರ 63 ಪೈಸೆ ಇಳಿಕೆಯಾಗಿ 95.07 ರೂ.ಗೆ ಮತ್ತು ಡೀಸೆಲ್ ಬೆಲೆ 57 ಪೈಸೆ ಇಳಿಕೆಯಾಗಿ 84.38 ರೂ.ಗೆ ತಲುಪಿದೆ.

– ದೆಹಲಿಯಲ್ಲಿ ಲೀಟರ್‌ಗೆ ಪೆಟ್ರೋಲ್ 96.72 ರೂ ಮತ್ತು ಡೀಸೆಲ್ 89.62 ರೂ. – ಮುಂಬೈನಲ್ಲಿ ಪೆಟ್ರೋಲ್ 106.31 ರೂ ಮತ್ತು ಡೀಸೆಲ್ 94.27 ರೂ – ಕೋಲ್ಕತ್ತಾದಲ್ಲಿ ಪೆಟ್ರೋಲ್ 106.03 ರೂ ಮತ್ತು ಡೀಸೆಲ್ 92.76 ರೂ -ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 101.94 ರೂ., ಡೀಸೆಲ್ 87.89 ರೂ. ಇದೆ.

– ನೋಯ್ಡಾದಲ್ಲಿ ಪೆಟ್ರೋಲ್ 96.65 ರೂ ಗೆ ಮತ್ತು ಡೀಸೆಲ್ ಲೀಟರ್‌ಗೆ 89.82 ರೂಗೆಏರಿದೆ. -ಗಾಜಿಯಾಬಾದ್‌ನಲ್ಲಿ 96.58 ರೂ. ಮತ್ತು ಡೀಸೆಲ್ ಲೀಟರ್‌ಗೆ 89.75 ರೂ. – ಲಕ್ನೋದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 96.57 ರೂ ಮತ್ತು ಡೀಸೆಲ್ 89.76 ರೂ ಆಗಿದೆ. – ಪಾಟ್ನಾದಲ್ಲಿ ಪೆಟ್ರೋಲ್ ಲೀಟರ್‌ಗೆ 107.59 ರೂ.ಮತ್ತು ಡೀಸೆಲ್ 94.36 ರೂ. – ಪೋರ್ಟ್ ಬ್ಲೇರ್‌ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 84.10 ರೂ ಮತ್ತು ಡೀಸೆಲ್ 79.74 ರೂ ಆಗಿದೆ.

ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಬದಲಾವಣೆ ಮತ್ತು ಹೊಸ ದರಗಳನ್ನು ನೀಡಲಾಗುತ್ತದೆ. ನೀವು ಎಸ್‌ಎಂಎಸ್ ಮೂಲಕ ಪೆಟ್ರೋಲ್ ಡೀಸೆಲ್‌ನ ದೈನಂದಿನ ದರವನ್ನು ಸಹ ತಿಳಿಯಬಹುದು. ಇಂಡಿಯನ್ ಆಯಿಲ್ ಗ್ರಾಹಕರು RSP ಮತ್ತು ಅವರ ಸಿಟಿ ಕೋಡ್ ಅನ್ನು 9224992249 ಗೆ ಕಳುಹಿಸುವ ಮೂಲಕ ಮಾಹಿತಿಯನ್ನು ಪಡೆಯಬಹುದು ಮತ್ತು BPCL ಗ್ರಾಹಕರು RSP ಮತ್ತು ಅವರ ಸಿಟಿ ಕೋಡ್ ಅನ್ನು ಟೈಪ್ ಮಾಡುವ ಮೂಲಕ 9223112222 ಗೆ SMS ಕಳುಹಿಸುವ ಮೂಲಕ ಮಾಹಿತಿಯನ್ನು ಪಡೆಯಬಹುದು. ಆದರೆ, HPCL ಗ್ರಾಹಕರು HPPrice ಮತ್ತು ಅವರ ಸಿಟಿ ಕೋಡ್ ಅನ್ನು 9222201122 ಗೆ ಕಳುಹಿಸುವ ಮೂಲಕ ಬೆಲೆಯನ್ನು ತಿಳಿದುಕೊಳ್ಳಬಹುದು.

ವಾಣಿಜ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ