Petrol Diesel Price on July 16: ಕಚ್ಚಾತೈಲ ಬೆಲೆ ಏರಿಕೆ, ನಿಮ್ಮ ನಗರಗಳಲ್ಲಿ ಇಂಧನ ಬೆಲೆ ಎಷ್ಟಿದೆ ತಿಳಿಯಿರಿ

|

Updated on: Jul 16, 2024 | 6:57 AM

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯಲ್ಲಿ ಏರಿಕೆಯಾಗಿದೆ. ಏತನ್ಮಧ್ಯೆ, ಭಾರತೀಯ ತೈಲ ಮಾರುಕಟ್ಟೆ ಕಂಪನಿಗಳು ದೇಶದ ಎಲ್ಲಾ ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಸ್ಥಿರವಾಗಿರಿಸಿವೆ.

Petrol Diesel Price on July 16: ಕಚ್ಚಾತೈಲ ಬೆಲೆ ಏರಿಕೆ, ನಿಮ್ಮ ನಗರಗಳಲ್ಲಿ ಇಂಧನ ಬೆಲೆ ಎಷ್ಟಿದೆ ತಿಳಿಯಿರಿ
ಪೆಟ್ರೋಲ್
Image Credit source: GB News
Follow us on

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯಲ್ಲಿ ಏರಿಕೆ ಕಾಣುತ್ತಿದೆ. ಜುಲೈ 16, ಮಂಗಳವಾರದಂದು ಬ್ರೆಂಟ್​ ಕಚ್ಚಾತೈಲ ಕೂಡ ಪ್ರತಿ ಬ್ಯಾರೆಲ್​ಗೆ 85.07ರಂತೆ ವಹಿವಾಟು ನಡೆಸುತ್ತಿದೆ. ಹಾಗೂ ಡಬ್ಲ್ಯೂಟಿಐ ಕಚ್ಚಾತೈಲ ಪ್ರತಿ ಬ್ಯಾರೆಲ್​ಗೆ 82.32 ಡಾಲರ್​ನಲ್ಲಿ ವಹಿವಾಟು ನಡೆಸುತ್ತಿದೆ. ಭಾರತೀಯ ತೈಲ ಕಂಪನಿಗಳು ಇತ್ತೀಚೆಗೆ ನವೀಕರಿಸಿರುವ ದರದ ಪ್ರಕಾರ ಇಂದಿನ ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ರಾಷ್ಟ್ರೀಯ ತೈಲ ಕಂಪನಿಗಳು ಪ್ರತಿದಿನ ನವೀಕರಿಸುತ್ತವೆ.

ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 94.72 ರೂ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 87.62 ರೂ.
ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 103.44 ರೂ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 89.97 ರೂ.
ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 104.95 ರೂ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 91.76 ರೂ.
ಚೆನ್ನೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 100.75 ರೂ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 92.34 ರೂ.

ಬೆಂಗಳೂರು ಮತ್ತು ಇತರ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು
ನೋಯ್ಡಾ: ಪ್ರತಿ ಲೀಟರ್ ಪೆಟ್ರೋಲ್ ರೂ 94.83 ಮತ್ತು ಡೀಸೆಲ್ ಲೀಟರ್‌ಗೆ ರೂ 87.96

ಗುರುಗ್ರಾಮ: ಪೆಟ್ರೋಲ್ ಲೀಟರ್‌ಗೆ 95.19 ಮತ್ತು ಡೀಸೆಲ್ ಲೀಟರ್‌ಗೆ 88.05 ರೂ.

ಬೆಂಗಳೂರು: ಪೆಟ್ರೋಲ್ ಲೀಟರ್‌ಗೆ 102.86 ಮತ್ತು ಡೀಸೆಲ್ ಲೀಟರ್‌ಗೆ 88.94 ರೂ.

ಚಂಡೀಗಢ: ಪ್ರತಿ ಲೀಟರ್ ಪೆಟ್ರೋಲ್ 94.24 ರೂ. ಮತ್ತು ಡೀಸೆಲ್ ಲೀಟರ್ ಗೆ 82.40 ರೂ

ಹೈದರಾಬಾದ್: ಪೆಟ್ರೋಲ್ ಲೀಟರ್‌ಗೆ 107.41 ರೂ. ಮತ್ತು ಡೀಸೆಲ್ ಲೀಟರ್‌ಗೆ 95.65 ರೂ.

ಜೈಪುರ: ಪೆಟ್ರೋಲ್ ಲೀಟರ್‌ಗೆ 104.88 ಮತ್ತು ಡೀಸೆಲ್ ಲೀಟರ್‌ಗೆ 90.36 ರೂ.

ಪಾಟ್ನಾ: ಪೆಟ್ರೋಲ್ ಲೀಟರ್‌ಗೆ 105.18 ಮತ್ತು ಡೀಸೆಲ್ ಲೀಟರ್‌ಗೆ 92.04 ರೂ.

ಲಕ್ನೋ: ಪ್ರತಿ ಲೀಟರ್ ಪೆಟ್ರೋಲ್ 94.65 ರೂ. ಮತ್ತು ಡೀಸೆಲ್ ಲೀಟರ್‌ಗೆ 87.76 ರೂ. ಇದೆ.

ಮತ್ತಷ್ಟು ಓದಿ: Petrol Diesel Price on July 15: ಬೆಂಗಳೂರು, ದೆಹಲಿ ಸೇರಿದಂತೆ ದೇಶದ ಬಹುತೇಕ ಕಡೆ ಇಂಧನ ಬೆಲೆ ಸ್ಥಿರ

ಎಲ್ಲಾ ನಗರಗಳಲ್ಲಿ ಬೆಲೆ ಏಕೆ ವಿಭಿನ್ನವಾಗಿದೆ
ದೇಶದ ಎಲ್ಲಾ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ವಿಭಿನ್ನವಾಗಿವೆ. ಏಕೆಂದರೆ ಪೆಟ್ರೋಲ್ ಮತ್ತು ಡೀಸೆಲ್ ಜಿಎಸ್‌ಟಿ ವ್ಯಾಪ್ತಿಗೆ ಬರುವುದಿಲ್ಲ. ರಾಜ್ಯ ಸರ್ಕಾರವು ಇದರ ಮೇಲೆ ವ್ಯಾಟ್ (ಮೌಲ್ಯವರ್ಧಿತ ತೆರಿಗೆ) ವಿಧಿಸುತ್ತದೆ, ಅದರ ದರಗಳು ವಿಭಿನ್ನವಾಗಿವೆ. ಈ ಕಾರಣದಿಂದಾಗಿ ಎಲ್ಲಾ ನಗರಗಳಲ್ಲಿ ಅವುಗಳ ಬೆಲೆಗಳು ವಿಭಿನ್ನವಾಗಿವೆ.

ಪೆಟ್ರೋಲ್, ಡೀಸೆಲ್ ನಿಖರ ಬೆಲೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ನಗರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ನೀವು ಸುಲಭವಾಗಿ ತಿಳಿದುಕೊಳ್ಳಬಹುದು. ಇದಕ್ಕಾಗಿ ತೈಲ ಮಾರುಕಟ್ಟೆ ಕಂಪನಿಗಳ ವೆಬ್‌ಸೈಟ್‌ಗೆ ಹೋಗಬೇಕು ಅಥವಾ ಎಸ್‌ಎಂಎಸ್ ಕಳುಹಿಸಬೇಕು. ನೀವು ಇಂಡಿಯನ್ ಆಯಿಲ್ ಗ್ರಾಹಕರಾಗಿದ್ದರೆ, ನೀವು RSP ಜೊತೆಗೆ 9224992249 ಸಂಖ್ಯೆಗೆ SMS ಕಳುಹಿಸಬಹುದು ಮತ್ತು ನೀವು BPCL ಗ್ರಾಹಕರಾಗಿದ್ದರೆ ನೀವು RSP ಬರೆಯುವ ಮೂಲಕ 9223112222 ಸಂಖ್ಯೆಗೆ SMS ಕಳುಹಿಸಬಹುದು.

ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ