ಜುಲೈ 17, ಮೊಹರಂ ಹಬ್ಬಕ್ಕೆ ಬ್ಯಾಂಕ್ ಮತ್ತು ಷೇರುಮಾರುಕಟ್ಟೆಗೆ ರಜೆ ಇದೆಯಾ? ಇಲ್ಲಿದೆ ಪಟ್ಟಿ

Muharram fetival holiday: ಜುಲೈ 17, ಬುಧವಾರದಂದು ಮೊಹರಂ ಹಬ್ಬ ಇದ್ದು ರಾಷ್ಟ್ರೀಯ ರಜೆ ಎಂದು ಪರಿಗಣಿತವಾಗಿದೆ. ಕರ್ನಾಟಕವೂ ಸೇರಿದಂತೆ ಹೆಚ್ಚಿನ ರಾಜ್ಯಗಳಲ್ಲಿ ಮೊಹರಂ ಹಬ್ಬಕ್ಕೆ ರಜೆ ಇದೆ. ಬಿಎಸ್​ಇ ಮತ್ತು ಎನ್​ಎಸ್​ಇ ಷೇರುವಿನಿಯಮ ಕೇಂದ್ರಗಳಿಗೆ ಯಾವ್ಯಾವತ್ತು ರಜೆ ಇರುತ್ತದೆ ಅದರ ಪಟ್ಟಿ ಇಲ್ಲಿದೆ....

ಜುಲೈ 17, ಮೊಹರಂ ಹಬ್ಬಕ್ಕೆ ಬ್ಯಾಂಕ್ ಮತ್ತು ಷೇರುಮಾರುಕಟ್ಟೆಗೆ ರಜೆ ಇದೆಯಾ? ಇಲ್ಲಿದೆ ಪಟ್ಟಿ
ಮುಹರಂ ಹಬ್ಬ
Follow us
|

Updated on:Jul 16, 2024 | 3:24 PM

ನವದೆಹಲಿ, ಜುಲೈ 16: ನಾಳೆ ಬುಧವಾರ ಮುಸ್ಲಿಮರ ಮೊಹರಂ ಹಬ್ಬ ಇದ್ದು ರಾಷ್ಟ್ರೀಯ ರಜೆಗಳಲ್ಲಿ ಅದೂ ಒಂದಿದೆ. ಮೊಹರಂ ಎಂಬುದು ಇಸ್ಲಾಮಿಕ್ ಕ್ಯಾಲಂಡರ್​ನಲ್ಲಿ ಒಂದು ಮಾಸದ ಹೆಸರು. ಕ್ಯಾಲಂಡರ್​ನ ಮೊದಲ ತಿಂಗಳೂ ಹೌದು. ನಾಲ್ಕು ಪವಿತ್ರ ಮಾಸಗಳಲ್ಲಿ ಮೊಹರಂ ಕೂಡ ಒಂದು. ಮೊಹರಂಗೆ ಭಾರತದಲ್ಲಿ ಸರ್ಕಾರ ರಜೆ ಇದೆ. ಅಂತೆಯೇ ಕರ್ನಾಟಕವೂ ಒಳಗೊಂಡಂತೆ ಬಹುತೇಕ ಕಡೆ ಬ್ಯಾಂಕುಗಳಿಗೆ ಜುಲೈ 17ರಂದು ರಜೆ ಇರುತ್ತದೆ. ಷೇರು ಮಾರುಕಟ್ಟೆಯೂ ನಾಳೆ ಬಂದ್ ಆಗಿರುತ್ತದೆ.

ಮೊಹರಂ ಹಬ್ಬಕ್ಕೆ ಯಾವ್ಯಾವ ರಾಜ್ಯಗಳಲ್ಲಿ ಬ್ಯಾಂಕ್ ರಜೆ ಇದೆ, ಪಟ್ಟಿ

  • ಕರ್ನಾಟಕ
  • ಮಧ್ಯಪ್ರದೇಶ
  • ತಮಿಳುನಾಡು
  • ಆಂಧ್ರಪ್ರದೇಶ
  • ತೆಲಂಗಾಣ
  • ರಾಜಸ್ತಾನ
  • ಜಮ್ಮು
  • ಉತ್ತರಪ್ರದೇಶ
  • ಬಂಗಾಳ
  • ದೆಹಲಿ
  • ಬಿಹಾರ
  • ಛತ್ತೀಸ್​ಗಡ
  • ಜಾರ್ಖಂಡ್
  • ಹಿಮಾಚಲಪ್ರದೇಶ
  • ಮೇಘಾಲಯ
  • ತ್ರಿಪುರಾ
  • ಮಿಜೋರಾಂ

ಉತ್ತರಾಖಂಡ್​ನಲ್ಲಿ ಹರೇಲಾ ದಿನದ ಹಬ್ಬಕ್ಕೆ ಇಂದು ಜುಲೈ 16ರಂದು ಬ್ಯಾಂಕ್ ರಜೆ ಇರುತ್ತದೆ. ಇದೇ ಹಬ್ಬಕ್ಕೆ ಹಿಮಾಚಲಪ್ರದೇಶದ ಕೆಲ ಭಾಗಗಳಲ್ಲಿ ರಜೆ ಇದೆ.

ಇದನ್ನೂ ಓದಿ: ಎಸ್​ಬಿಐನಿಂದ ಒಂದು ತಿಂಗಳ ಅಂತರದಲ್ಲಿ ಎರಡನೇ ಬಾರಿ ಎಂಸಿಎಲ್​ಆರ್ ದರ ಹೆಚ್ಚಳ; ಏರಿಕೆ ಆಗಲಿದೆ ಬಡ್ಡಿ

ಷೇರು ಮಾರುಕಟ್ಟೆ ಮೊಹರಂಗೆ ಬಂದ್

ಜುಲೈ 17, ಬುಧವಾರದಂದು ಮುಹರಂ ಹಬ್ಬಕ್ಕೆ ಷೇರು ಮಾರುಕಟ್ಟೆಗೆ ರಜೆ ಇದೆ. ಈಕ್ವಿಟಿ ಸೆಗ್ಮೆಂಟ್ ಮಾತ್ರವಲ್ಲ, ಕರೆನ್ಸಿ ಡಿರೈವೇಟಿವ್ಸ್, ಕಮಾಡಿಟಿ ಡಿರೈವೇಟಿವ್ಸ್ ಸೆಗ್ಮೆಂಟ್ ಕೂಡ ಬುಧವಾರ ಮುಚ್ಚಿರುತ್ತದೆ. ಈ ವರ್ಷಾಂತ್ಯದವರೆಗೂ ಮೊಹರಂ ಅನ್ನೂ ಒಳಗೊಂಡಂತೆ ಆರು ದಿನಗಳಿಗೆ ಷೇರು ಮಾರುಕಟ್ಟೆ ರಜೆ ಹೊಂದಿರುತ್ತದೆ. ದೀಪಾವಳಿ, ಸ್ವಾತಂತ್ರ್ಯೋತ್ಸವ ಮೊದಲಾದ ದಿನಗಳೂ ಈ ರಜಾ ಪಟ್ಟಿಯಲ್ಲಿವೆ. ಷೇರು ಮಾರುಕಟ್ಟೆ ಈ ಕೆಳಗಿನ ದಿನಗಳಲ್ಲಿ ಬಂದ್ ಆಗಿರುತ್ತದೆ:

  • ಜುಲೈ 17: ಮೊಹರಂ
  • ಆಗಸ್ಟ್ 15: ಸ್ವಾತಂತ್ರ್ಯೋತ್ಸವ
  • ಅಕ್ಟೋಬರ್ 2: ಗಾಂಧಿ ಜಯಂತಿ
  • ನವೆಂಬರ್ 1: ದೀಪಾವಳಿ
  • ನವೆಂಬರ್ 15: ಗುರುನಾನಕ್ ಜಯಂತಿ
  • ಡಿಸೆಂಬರ್ 25: ಕ್ರಿಸ್ಮಸ್

ಇಲ್ಲಿ ಭಾರತದ ಷೇರು ಮಾರುಕಟ್ಟೆ ಎಂದರೆ, ನ್ಯಾಷನಲ್ ಸ್ಟಾಕ್ ಎಕ್ಸ್ ಎಕ್ಸ್​ಚೇಂಜ್ (ಎನ್​ಎಸ್​ಇ) ಮತ್ತು ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ (ಬಿಎಸ್​ಇ). ಈ ಎರಡೂ ಷೇರು ವಿನಿಮಯ ಕೇಂದ್ರಗಳು ಮೊಹರಂಗೆ ಬಂದ್ ಆಗಿರುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:06 am, Tue, 16 July 24

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್