AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೈಜುಸ್ ವಿರುದ್ಧ ಇನ್ಸಾಲ್ವೆನ್ಸಿ ಕ್ರಮ: ಬಿಸಿಸಿಐ ಅರ್ಜಿ ಸ್ವೀಕರಿಸಿದ ಎನ್​ಸಿಎಲ್​ಟಿ; ಏನಾಗುತ್ತೆ ಇನ್ಸಾಲ್ವೆನ್ಸಿ ಪ್ರಕ್ರಿಯೆಯಲ್ಲಿ?

BCCI insolvency petition against Byju's: ಬೈಜುಸ್ ವಿರುದ್ಧ ಇನ್ಸಾಲ್ವೆನ್ಸಿ ಕ್ರಮ ಜರುಗಿಸುವಂತೆ ಬಿಸಿಸಿಐ ಕಳೆದ ವರ್ಷಸಲ್ಲಿಸಿದ್ದ ಅರ್ಜಿಯನ್ನು ಎನ್​ಸಿಎಲ್​ಟಿ ಸ್ವೀಕರಿಸಿದೆ. ಬೆಂಗಳೂರು ಎನ್​ಸಿಎಲ್​ಟಿಯಲ್ಲಿ ಈ ಅರ್ಜಿ ವಿಚಾರಣೆ ನಡೆಯಲಿದೆ. ಬೆಂಗಳೂರು ಕ್ರಿಕೆಟ್ ತಂಡದ ಪ್ರಾಯೋಜಕತ್ವ ಪಡೆದಿದ್ದ ಬೈಜುಸ್, ಆ ಸಂಬಂಧ ಕೊಡಬೇಕಿರುವ ಹಣದಲ್ಲಿ 158 ಕೋಟಿ ರೂ ಬಾಕಿ ಉಳಿಸಿಕೊಂಡಿದೆ. ಹೀಗಾಗಿ, ಬಿಸಿಸಿಐ ಇನ್ಸಾಲ್ವೆನ್ಸಿ ಕ್ರಮಕ್ಕೆ ಅರ್ಜಿ ಹಾಕಿತ್ತು.

ಬೈಜುಸ್ ವಿರುದ್ಧ ಇನ್ಸಾಲ್ವೆನ್ಸಿ ಕ್ರಮ: ಬಿಸಿಸಿಐ ಅರ್ಜಿ ಸ್ವೀಕರಿಸಿದ ಎನ್​ಸಿಎಲ್​ಟಿ; ಏನಾಗುತ್ತೆ ಇನ್ಸಾಲ್ವೆನ್ಸಿ ಪ್ರಕ್ರಿಯೆಯಲ್ಲಿ?
ಬೈಜುಸ್ vs ಬಿಸಿಸಿಐ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 16, 2024 | 12:42 PM

Share

ನವದೆಹಲಿ, ಜುಲೈ 16: ಭಾರತೀಯ ಕ್ರಿಕೆಟ್ ತಂಡದ ಪ್ರಾಯೋಜಕತ್ವ ಪಡೆದು ಕೋಟ್ಯಂತರ ರೂ ಹಣ ನೀಡದ ಬೈಜುಸ್ ವಿರುದ್ಧ ಬಿಸಿಸಿಐ ಸಲ್ಲಿಸಿದ್ದ ಇನ್ಸಾಲ್ವೆನ್ಸಿ ಅರ್ಜಿಯನ್ನು ನ್ಯಾಯಮಂಡಳಿ ಸ್ವೀಕರಿಸಿದೆ. ಬೈಜುಸ್​ನ ಮಾಲೀಕ ಸಂಸ್ಥೆ ಥಿಂಕ್ ಅಂಡ್ ಲರ್ನ್ ಪ್ರೈ ಲಿ ವಿರುದ್ಧ ಇನ್ಸಾಲ್ವೆನ್ಸಿ ಕ್ರಮ (Insolvency proceedings) ಜರುಗಿಸುವಂತೆ ಎನ್​ಸಿಎಲ್​ಟಿ ಮುಂದೆ ಬಿಸಿಸಿಐ ಕಳೆದ ವರ್ಷ ಮನವಿ ಅರ್ಜಿ ಸಲ್ಲಿಸಿತ್ತು. ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯು (NCLT) ಬಿಸಿಸಿಐನ ಈ ಅರ್ಜಿಯನ್ನು ಸ್ವೀಕರಿಸಿದೆ. ಬೆಂಗಳೂರು ಪೀಠದ ನ್ಯಾಯಮಂಡಳಿಯಲ್ಲಿ ಈ ಪ್ರಕರಣದ ವಿಚಾರಣೆ ನಡೆಯಲಿದೆ.

ಭಾರತೀಯ ಕ್ರಿಕೆಟ್ ತಂಡದ ಪ್ರಾಯೋಜಕತ್ವದಲ್ಲಿ ಬಿಸಿಸಿಐಗೆ ಬೈಜುಸ್ 158 ಕೋಟಿ ರೂ ಹಣ ಬಾಕಿ ಉಳಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಎನ್​ಸಿಎಲ್​ಟಿಯ ಬೆಂಗಳೂರು ಪೀಠದಲ್ಲಿ ಬಿಸಿಸಿಐ ಕಳೆದ ವರ್ಷ ಇನ್ಸಾಲ್ವೆನ್ಸಿ ಕ್ರಮಕ್ಕೆ ಮನವಿ ಮಾಡಿ ಅರ್ಜಿ ಸಲ್ಲಿಸಿತ್ತು. ಬೈಜುಸ್​ನ ಸಾಲು ಸಾಲು ಸಂಕಷ್ಟಕ್ಕೆ ಇದು ಮತ್ತೊಂದು ಸೇರ್ಪಡೆಯಾಗಿದೆ.

ಇನ್ಸಾಲ್ವೆನ್ಸಿ ಎಂದರೇನು?

ಇನ್ಸಾಲ್ವೆನ್ಸಿ ಅಂಡ್ ಬ್ಯಾಂಕ್ರಪ್ಟ್ಸಿ ಕೋಡ್ (Insolvency and Bankruptcy Code) ಅನ್ನು ದಿವಾಳಿ ಸಂಹಿತೆ ಎಂದು ಕರೆಯಲಾಗುತ್ತದೆ. ಇಲ್ಲಿ ಇನ್ಸಾಲ್ವೆನ್ಸಿ ಎಂದರೆ ಸರಿಯಾದ ಸಮಯಕ್ಕೆ ಸಾಲ ಮರುಪಾವತಿಸಲು ವಿಫಲವಾಗುವುದು. ಹಣ ಪಾವತಿಸಲು ಡೀಫಾಲ್ಟ್ ಆದಾಗ ಇನ್ಸಾಲ್ವೆನ್ಸಿ ಕಾನೂನು ಅನ್ವಯ ಆಗುತ್ತದೆ.

ಇದನ್ನೂ ಓದಿ: ಜುಲೈ 17, ಮೊಹರಂ ಹಬ್ಬಕ್ಕೆ ಬ್ಯಾಂಕ್ ಮತ್ತು ಷೇರುಮಾರುಕಟ್ಟೆಗೆ ರಜೆ ಇದೆಯಾ? ಇಲ್ಲಿದೆ ಪಟ್ಟಿ

ಇನ್ನು ಬ್ಯಾಂಕ್ರಪ್ಟ್ಸಿ ಎಂದರೆ ಸಾಲ ಪಡೆದ ವ್ಯಕ್ತಿ ಅಥವಾ ಸಂಸ್ಥೆ ಸಾಲ ಮರುಪಾವತಿಸಲು ಸಾಧ್ಯವಿಲ್ಲ ಎಂದಾಗ ಆ ಸ್ಥಿತಿಯನ್ನು ಬ್ಯಾಂಕ್ರಪ್ಟ್ಸಿ ಅಥವಾ ದಿವಾಳಿತನ ಎಂದು ಪರಿಗಣಿಸಲಾಗುತ್ತದೆ. ವ್ಯಕ್ತಿ ಅಥವಾ ಸಂಸ್ಥೆ ತನ್ನ ದಿವಾಳಿತವನ್ನು ಸ್ವಯಂ ಆಗಿ ಘೋಷಿಸಿಕೊಳ್ಳಬಹುದು. ಅಥವಾ ಸಾಲಗಾರರು ಕೋರ್ಟ್ ಮೂಲಕ ಹೋಗಿ ದಿವಾಳಿ ಘೋಷಿಸಬಹುದು.

ಇನ್ಸಾಲ್ವೆನ್ಸಿ ಪ್ರೊಸೀಡಿಂಗ್ ಹೇಗಿರುತ್ತೆ?

ಬಿಸಿಸಿಐಗೆ ಬಾಕಿ ಇರುವ ಹಣವನ್ನು ಬೈಜುಸ್ ಕೊಡಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಇನ್ಸಾಲ್ವೆನ್ಸಿ ಕ್ರಮಕ್ಕೆ ಅರ್ಜಿ ಹಾಕಲಾಗಿದೆ. ನ್ಯಾಯಾಲಯದಲ್ಲಿ ವಿಚಾರಣೆ ಆಗಿ ಬೈಜುಸ್ ವಿರುದ್ಧ ಇನ್ಸಾಲ್ವೆನ್ಸಿ ಕ್ರಮಕ್ಕೆ ಆದೇಶ ಕೊಟ್ಟರೆ, ಆಗ ಬೈಜುಸ್ ಬಳಿ ಇರುವ ಆಸ್ತಿಪಾಸ್ತಿಗಳನ್ನು ಜಫ್ತಿ ಮಾಡಿಕೊಂಡು, ಅದನ್ನು ಮಾರಿ, ಬಂದ ಹಣದಲ್ಲಿ ಸಾಲಕ್ಕೆ ಜಮೆ ಮಾಡಲಾಗುತ್ತದೆ.

ಇದನ್ನೂ ಓದಿ: Bengaluru Real Estate: ಮನೆ ಖರೀದಿಸಲು ಎನ್​ಆರ್​ಐಗಳಿಗೆ ಬೆಂಗಳೂರೇ ಇಷ್ಟವಂತೆ; ಕಾರಣಗಳಿವು…

ಇನ್ಸಾಲ್ವೆನ್ಸಿ ಮಾತ್ರವಲ್ಲ ಬ್ಯಾಂಕ್ರಪ್ಸಿಯಲ್ಲೂ ಇದೇ ಕ್ರಮವನ್ನು ಅನುಸರಿಸಲಾಗುತ್ತದೆ. ಗೋಲ್ಡ್ ಲೋನ್ ಪಡೆದು ಸಾಲ ಮರುಪಾವತಿಸದೇ ಇದ್ದಾಗ ಅಡ ಇಡಲಾಗಿದ್ದ ಚಿನ್ನವನ್ನು ಬ್ಯಾಂಕುಗಳು ಹರಾಜಿಗೆ ಹಾಕಿ ಅದರಿಂದ ಬಂದ ಹಣವನ್ನು ಸಾಲಕ್ಕೆ ವಜಾ ಹಾಕಿಕೊಳ್ಳುತ್ತವೆ. ಅಂಥದ್ದೇ ರೀತಿಯ ಪ್ರಕ್ರಿಯೆ ಇನ್ಸಾಲ್ವೆನ್ಸಿ ಕಾನೂನಿನಡಿ ಮಾಡಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:40 pm, Tue, 16 July 24

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ