ಎಸ್​ಬಿಐನಿಂದ ಒಂದು ತಿಂಗಳ ಅಂತರದಲ್ಲಿ ಎರಡನೇ ಬಾರಿ ಎಂಸಿಎಲ್​ಆರ್ ದರ ಹೆಚ್ಚಳ

SBI raises MCLR rates: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ವಿವಿಧ ಅವಧಿಯ ಸಾಲದ ಮೇಲೆ ಎಂಸಿಎಲ್​ಆರ್ ದರಗಳನ್ನು 10 ಮೂಲಾಂಕಗಳಷ್ಟು ಹೆಚ್ಚಳ ಮಾಡಿದೆ. ಒಂದು ವರ್ಷ, ಎರಡು ವರ್ಷ, ಮೂರು ತಿಂಗಳು ಮತ್ತು ಆರು ತಿಂಗಳ ಅವಧಿ ಸಾಲದ ಮೇಲೆ ಅದರ ಎಂಸಿಎಲ್​ಆರ್ ದರ ಏರಿಕೆ ಆಗಿದೆ. ಎಂಸಿಎಲ್​ಆರ್ ಎಂಬುದು ಬೆಂಚ್​ಮಾರ್ಕ್ ರೇಟ್ ಆಗಿದ್ದು, ಅದರ ಆಧಾರದ ಮೇಲೆ ಸಾಲದ ಮೇಲೆ ಬಡ್ಡಿ ನಿಗದಿ ಮಾಡಲಾಗುತ್ತದೆ.

ಎಸ್​ಬಿಐನಿಂದ ಒಂದು ತಿಂಗಳ ಅಂತರದಲ್ಲಿ ಎರಡನೇ ಬಾರಿ ಎಂಸಿಎಲ್​ಆರ್ ದರ ಹೆಚ್ಚಳ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
Follow us
|

Updated on: Jul 15, 2024 | 11:13 AM

ನವದೆಹಲಿ, ಜುಲೈ 15: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಎಂಸಿಎಲ್​ಆರ್ ದರವನ್ನು ಇಂದು ಸೋಮವಾರ ಶೇ. 5ರಿಂದ 10 ಮೂಲಾಂಕಗಳಷ್ಟು ಏರಿಕೆ ಮಾಡಿದೆ. ವಿವಿಧ ಅವಧಿಯ ಎಂಸಿಎಲ್​ಆರ್ ದರಗಳನ್ನು ಹೆಚ್ಚಿಸಿದೆ. ಇದರೊಂದಿಗೆ ಎಸ್​ಬಿಐನ ಎಲ್ಲಾ ರೀತಿಯ ಸಾಲಗಳಿಗೆ ಬಡ್ಡಿದರವೂ ಹೆಚ್ಚಳವಾಗಲಿದೆ. ಸಾಲಕ್ಕೆ ಕಟ್ಟಲಾಗುತ್ತಿರುವ ಇಎಂಐಗೂ ಸಹಜವಾಗಿ ಹೆಚ್ಚಾಗಲಿದೆ. ಒಂದು ತಿಂಗಳ ಅವಧಿಯಲ್ಲಿ ಎಸ್​ಬಿಐ ತನ್ನ ಎಂಸಿಎಲ್​ಆರ್ ದರಗಳನ್ನು ಹೆಚ್ಚಿಸುತ್ತಿರುವುದು ಇದು ಎರಡನೇ ಬಾರಿ. ಜೂನ್ ತಿಂಗಳ ಮಧ್ಯಭಾಗದಲ್ಲಿ ಎಸ್​ಬಿಐ ಒಂದು ವರ್ಷದ ಸಾಲದ ಅವಧಿಗೆ ಎಂಸಿಎಲ್​ಆರ್ ದರಗಳನ್ನು ಶೇ. 8.65ರಿಂದ ಶೇ. 8.75ಕ್ಕೆ ಹೆಚ್ಚಿಸಿತ್ತು. ಅಂದರೆ ಹತ್ತು ಬೇಸಿಸ್ ಪಾಯಿಂಟ್​ಗಳಷ್ಟು ಹೆಚ್ಚಿಸಿತ್ತು.

  • ಒಂದು ವರ್ಷದ ಸಾಲ ಅವಧಿಯ ಮೇಲೆ ಎಂಸಿಎಲ್​ಆರ್ ದರವನ್ನು 10 ಮೂಲಾಂಕಗಳಷ್ಟು ಹೆಚ್ಚಿಸಿದೆ. ಶೇ. 8.75ರಷ್ಟಿದ್ದ ಎಂಸಿಎಲ್​ಆರ್ ದರ ಶೇ. 8.85ಕ್ಕೆ ಏರಿಕೆ ಆಗಿದೆ.
  • ಎರಡು ವರ್ಷದ ಅವಧಿಯ ಸಾಲದ ಮೇಲೆ ಎಂಸಿಎಲ್​ಆರ್ ದರವನ್ನು ಶೇ. 8.85ರಿಂದ ಶೇ. 8.95ಕ್ಕೆ ಏರಿಸಲಾಗಿದೆ
  • ಮೂರು ತಿಂಗಳ ಸಾಲದ ಅವಧಿಯ ಎಂಸಿಎಲ್​ಆರ್ ದರವನ್ನು ಶೇ. 8.3ರಿಂದ ಶೇ. 8.4ಕ್ಕೆ ಹೆಚ್ಚಿಸಿದೆ.
  • ಆರು ತಿಂಗಳ ಸಾಲದ ಅವಧಿಯ ಎಂಸಿಎಲ್​ಆರ್ ದರವನ್ನು ಶೇ. 8.65ರಿಂದ ಶೇ. 8.75ಕ್ಕೆ ಹೆಚ್ಚಿಸಲಾಗಿದೆ.

ಇದನ್ನೂ ಓದಿ: ಎರಡು ವರ್ಷದಲ್ಲಿ ಪಿಎಫ್ ಎಕ್ಸೆಂಪ್ಷನ್ ಬಿಟ್ಟುಕೊಟ್ಟ 27 ಸಂಸ್ಥೆಗಳು; ಇಪಿಎಫ್​ಒ ವ್ಯಾಪ್ತಿಗೆ ಸೇರ್ಪಡೆಯಾದ 30,000 ಉದ್ಯೋಗಿಗಳು

ಏನಿದು ಎಂಸಿಎಲ್​ಆರ್ ದರ?

ಎಂಸಿಎಲ್​ಆರ್ ಎಂದರೆ ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್. ಆರ್​ಬಿಐ ಸಾಮಾನ್ಯವಾಗಿ ಇದನ್ನು ನಿಗದಿ ಮಾಡುತ್ತದೆ. ಇದು ಒಂದು ಬ್ಯಾಂಕ್ ಸಾಲ ನೀಡುವಾಗ ಇರಿಸಬೇಕಾದ ಕನಿಷ್ಠ ಬಡ್ಡಿದರ. ಇದಕ್ಕಿಂತ ಕಡಿಮೆ ದರಕ್ಕೆ ಬ್ಯಾಂಕ್ ಸಾಲ ಕೊಡುವಂತಿಲ್ಲ.

ಬ್ಯಾಂಕುಗಳೂ ಕೂಡ ಎಂಸಿಎಲ್​ಆರ್ ದರಗಳನ್ನು ಏರಿಸಬಹುದು. ಒಂದು ಬ್ಯಾಂಕ್ ತನ್ನ ಗ್ರಾಹಕರಿಗೆ ಸಾಲ ನೀಡಬೇಕೆಂದರೆ ಹಣ ಬೇಕು. ಎಫ್​ಡಿ ಇತ್ಯಾದಿ ಠೇವಣಿ ಮೂಲಕ ಅದು ಸಾರ್ವಜನಿಕವಾಗಿ ಹಣ ಸಂಗ್ರಹಿಸುತ್ತದೆ. ಕೆಲವೊಮ್ಮೆ ಅದು ಆರ್​ಬಿಐನಿಂದಲೂ ಅಥವಾ ಬೇರೆ ಮಾರುಕಟ್ಟೆಯಿಂದಲೋ ಫಂಡಿಂಗ್ ಪಡೆಯಬಹುದು. ಇದಕ್ಕೆ ಅದು ವ್ಯಯಿಸುವ ದರವೇ ಎಂಸಿಎಲ್​ಆರ್ ಆಗುತ್ತದೆ.

ಇದನ್ನೂ ಓದಿ: ಬಜೆಟ್​ನಲ್ಲಿ ಪಿಎಂ ಕಿಸಾನ್ ಯೋಜನೆಯ 6,000 ರೂ ಮೊತ್ತ ಹೆಚ್ಚಳ ಆಗುತ್ತಾ?

ಬ್ಯಾಂಕ್ ನಿಗದಿಪಡಿಸಿದ ಎಂಸಿಎಲ್​ಆರ್ ದರ ಅಥವಾ ಬೆಂಚ್​ಮಾರ್ಕ್ ದರದ ಆಧಾರದ ಮೇಲೆ ಸಾಲಗಳಿಗೆ ಬಡ್ಡಿದರ ನಿಗದಿ ಮಾಡಲಾಗುತ್ತದೆ. ಹೀಗಾಗಿ, ಎಂಸಿಎಲ್​ಆರ್ ದರ ಹೆಚ್ಚಾದರೆ, ಗೃಹ ಸಾಲದಿಂದ ಹಿಡಿದು ವೈಯಕ್ತಿಕ ಸಾಲದವರೆಗೆ ಎಲ್ಲಾ ಸಾಲಗಳಿಗೂ ಬಡ್ಡಿದರ ಹೆಚ್ಚುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್