ರೀಟೇಲ್ ಬಳಿಕ ಹೋಲ್​ಸೇಲ್ ಹಣದುಬ್ಬರ ಏರಿಕೆ ಸರದಿ; ಜೂನ್ ತಿಂಗಳಲ್ಲಿ ಶೇ. 3.4ರಷ್ಟು ಡಬ್ಲ್ಯುಪಿಐ ಇನ್​ಫ್ಲೇಶನ್

WPI Inflation in June 2024: ಹೋಲ್​ಸೇಲ್ ಮಾರಾಟ ಹಣದುಬ್ಬರ ಮೇ ತಿಂಗಳಲ್ಲಿ ಶೇ. 2.6ರಷ್ಟಿದ್ದದ್ದು ಜೂನ್ ತಿಂಗಳಲ್ಲಿ ಶೇ. 3.4ಕ್ಕೆ ಏರಿದೆ. ತಯಾರಿತ ಉತ್ಪನ್ನಗಳು ಮತ್ತು ಆಹಾರವಸ್ತುಗಳ ಹೋಲ್​ಸೇಲ್ ಬೆಲೆ ಏರಿಕೆಯು ಹಣದುಬ್ಬರ ಹೆಚ್ಚಳಕ್ಕೆ ಪ್ರಮುಖ ಕಾರಣ. ಕಳೆದ ವಾರಾಂತ್ಯದಲ್ಲಿ ಬಿಡುಗಡೆ ಆದ ದತ್ತಾಂಶದ ಪ್ರಕಾರ ರೀಟೇಲ್ ಹಣದುಬ್ಬರ ಶೇ. 5.08ಕ್ಕೆ ಏರಿದೆ.

ರೀಟೇಲ್ ಬಳಿಕ ಹೋಲ್​ಸೇಲ್ ಹಣದುಬ್ಬರ ಏರಿಕೆ ಸರದಿ; ಜೂನ್ ತಿಂಗಳಲ್ಲಿ ಶೇ. 3.4ರಷ್ಟು ಡಬ್ಲ್ಯುಪಿಐ ಇನ್​ಫ್ಲೇಶನ್
ಹಣದುಬ್ಬರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 15, 2024 | 3:20 PM

ನವದೆಹಲಿ, ಜುಲೈ 15: ಸಗಟು ಮಾರಾಟ ದರ ಆಧಾರಿತ ಹಣದುಬ್ಬರ ಜೂನ್ ತಿಂಗಳಲ್ಲಿ ಶೇ. 3.4ರಷ್ಟಿದೆ. ಮೇ ತಿಂಗಳಲ್ಲಿ ಶೇ. 2.6ರಷ್ಟಿದ್ದ ಹೋಲ್​ಸೇಲ್ ದರದ ಹಣದುಬ್ಬರ ಈಗ 80 ಮೂಲಾಂಕಗಳಷ್ಟು ಏರಿಕೆ ಆಗಿದೆ. ಇಂದು ಸೋಮವಾರ ಸರ್ಕಾರ ದತ್ತಾಂಶ ಬಿಡುಗಡೆ ಮಾಡಿದ್ದು, ಅದರ ಪ್ರಕಾರ, ಆಹಾರ ಮತ್ತು ಉತ್ಪಾದಿತ ಉತ್ಪನ್ನಗಳ ಬೆಲೆ ಏರಿಕೆ ದರ ತೀವ್ರವಾಗಿ ಹೆಚ್ಚಳವಾಗಿದೆ. ಡಬ್ಲ್ಯುಪಿಐ ಹಣದುಬ್ಬರ ಅಥವಾ ಸಗಟು ಹಣದುಬ್ಬರದ ಈ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿರುವುದು ಸಗಟು ಆಹಾರ ಬೆಲೆ ಹಣದುಬ್ಬರವೇ. ಮೇ ತಿಂಗಳಲ್ಲಿ ಶೇ. 7.4ರಷ್ಟಿದ್ದ ಹೋಲ್​ಸೇಲ್ ಫೂಡ್ ಇನ್​ಫ್ಲೇಶನ್ ಈ ಜೂನ್ ತಿಂಗಳಲ್ಲಿ ಶೇ. 8.7ಕ್ಕೆ ಏರಿಕೆ. 1.3 ಪ್ರತಿಶತದಷ್ಟು ಹಣದುಬ್ಬರ ಏರಿಕೆ ಆಗಿರುವುದು ಕಂಡುಬಂದಿದೆ.

ಮತ್ತೊಂದು ವಿಶೇಷತೆ ಎಂದರೆ, ಕಳೆದ 16 ತಿಂಗಳಲ್ಲಿ ಇದೇ ಮೊದಲ ಬಾರಿಗೆ ತಯಾರಿತ ಉತ್ಪನ್ನಗಳಿಗೆ ಬೆಲೆ ಏರಿಕೆ ಬಿಸಿ ತಾಕಿದೆ. ಈ ಮ್ಯಾನುಫ್ಯಾಕ್ಚರ್ಡ್ ಪ್ರಾಡಕ್ಟ್​​ಗಳ ಹಣದುಬ್ಬರ 2023ರ ಫೆಬ್ರುವರಿಯಿಂದ ಒಂದಂಕಿಯ ಒಳಗೆಯೇ ಇತ್ತು. ಮೇನಲ್ಲಿ ಶೇ. 0.8ರಷ್ಟಿದ್ದ ಇದರ ಹಣದುಬ್ಬರ ಜೂನ್ ತಿಂಗಳಲ್ಲಿ ಶೇ. 1.43ಕ್ಕೆ ಏರಿದೆ. ಡಬ್ಲ್ಯುಪಿಐ ಇಂಡೆಕ್ಸ್​ನಲ್ಲಿ ಈ ತಯಾರಿತ ಉತ್ಪನ್ನಗಳ ಪಾಲು ಮೂರನೇ ಎರಡರಷ್ಟಿದೆ. ಇದೂ ಕೂಡ ಸಗಟು ಮಾರಾಟ ದರ ಸೂಚ್ಯಂಕ ಏರಲು ಇನ್ನೊಂದು ಪ್ರಮುಖ ಕಾರಣವಾಗಿದೆ.

ಒಟ್ಟಾರೆ ಡಬ್ಲ್ಯುಪಿಐ ಅಥವಾ ಸಗಟು ದರ ಹಣದುಬ್ಬರ ಜೂನ್ ತಿಂಗಳಲ್ಲಿ ಶೇ. 3.4ಕ್ಕೆ ಏರಿರುವುದು ಅನಿರೀಕ್ಷಿತವಲ್ಲ. ಇತ್ತೀಚೆಗೆ, ಹಣದುಬ್ಬರ ಸತತವಾಗಿ ಹೆಚ್ಚುತ್ತಾ ಬಂದಿದೆ. ರೀಟೇಲ್ ಹಣದುಬ್ಬರ ಕೂಡ ಜೂನ್ ತಿಂಗಳಲ್ಲಿ ಹೆಚ್ಚಾಗಿದೆ. ಮೇ ತಿಂಗಳಲ್ಲಿ ಶೇ. 4.75ರಷ್ಟಿದ್ದ ರೀಟೇಲ್ ಇನ್​ಫ್ಲೇಶನ್ ಜೂನ್ ತಿಂಗಳಲ್ಲಿ ಶೇ. 5.08ಕ್ಕೆ ಏರಿದೆ. ಹಣ್ಣು ತರಕಾರಿ, ಬೇಳೆ ಕಾಳು ಇತ್ಯಾದಿ ಆಹಾರವಸ್ತುಗಳ ಹಣದುಬ್ಬರವು ಚಿಲ್ಲರೆ ಮಾರಾಟ ದರ ಆಧಾರಿತ ಹಣದುಬ್ಬರವನ್ನು ಹೆಚ್ಚಿಸಿದೆ.

ಇದನ್ನೂ ಓದಿ: ಜೂನ್ ತಿಂಗಳಲ್ಲಿ ಹಣದುಬ್ಬರ ಶೇ. 5.08; ತರಕಾರಿ ಬೆಲೆ ಏರಿಕೆ ಪ್ರಮುಖ ಕಾರಣ

ಸಗಟು ಹಣದುಬ್ಬರದ ಏರಿಕೆಗೂ ಆಹಾರವಸ್ತು ಬೆಲೆ ಏರಿಕೆಯೇ ಪ್ರಮುಖ ಕಾರಣ. ಇನ್ನು, ಮ್ಯಾನುಫ್ಯಾಕ್ಚರಿಂಗ್ ಉದ್ಯಮದಲ್ಲಿನ ಉತ್ಪನ್ನಗಳ ಹೋಲ್​ಸೇಲ್ ದರದಲ್ಲಿ ಏರಿಕೆ ಆಗಿರುವುದು ಕಾರ್ಪೊರೇಟ್ ಲಾಭದ ಮಾರ್ಜಿನ್ ಅನ್ನು ಕಡಿಮೆ ಮಾಡಬಹುದು ಎನ್ನುವ ಅಂಶವನ್ನು ತಜ್ಞರು ಎತ್ತಿ ತೋರಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ