Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುತ್ತಿಗೆದಾರರು ಪತ್ನಿಯರ ಒಡವೆ ಒತ್ತೆಯಿಟ್ಟು ಬೀದಿಗೆ ಬಂದಿದ್ದಾರೆ, ಖರ್ಗೆಯಿಂದ ಉಡಾಫೆ ಮಾತು ಬೇಡ: ಕುಮಾರಸ್ವಾಮಿ

ಗುತ್ತಿಗೆದಾರರು ಪತ್ನಿಯರ ಒಡವೆ ಒತ್ತೆಯಿಟ್ಟು ಬೀದಿಗೆ ಬಂದಿದ್ದಾರೆ, ಖರ್ಗೆಯಿಂದ ಉಡಾಫೆ ಮಾತು ಬೇಡ: ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 15, 2025 | 1:30 PM

ತೆರಿಗೆ ಸಂಗ್ರಹದಲ್ಲೂ ಸಿದ್ದರಾಮಯ್ಯ ಸರ್ಕಾರ ಬಹಳ ಹಿಂದೆ ಬಿದ್ದಿದೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ₹ 1.85 ಲಕ್ಷ ಕೋಟಿ ಸಂಗ್ರಹದ ಗುರಿಯಿಟ್ಟುಕೊಂಡಿದ್ದ ಸರ್ಕಾರ ಕಳೆದ 9 ತಿಂಗಳಲ್ಲಿ ಕೇವಲ ₹ 1.23 ಲಕ್ಷ ಕೋಟಿ ತೆರಿಗೆ ಮಾತ್ರ ಸಂಗ್ರಹಿಸಿದೆ, ಉಳಿದ ಮೂರು ತಿಂಗಳಲ್ಲಿ ₹ 62,000 ಕೋಟಿ ತೆರಿಗೆ ಹಣವನ್ನು ಅದು ಸಂಗ್ರಹಿಸಬೇಕಿದೆ ಎಂದು ಕುಮಾರಸ್ವಾಮಿ ಹೇಳಿದರು.

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಉಡಾಫೆ ಮಾತುಗಳನ್ನಾಡುವುದು ಬಿಟ್ಟು ಗುತ್ತಿಗೆದಾರರ ಬಾಕಿ ಬಿಲ್​ಗಳನ್ನು ಬಿಡುಗಡೆ ಮಾಡುವತ್ತ ಗಮನ ಹರಿಸಬೇಕೆಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿದರು. ತಮಗೆ ಬಿಡುಗಡೆಯಾಗಬೇಕಿರುವ ಬಿಲ್ ಗಳನ್ನು ಗುತ್ತಿಗೆದಾರರು ಧೈರ್ಯದಿಂದ ಕೇಳಬೇಕು, ಅವರೇನೂ ಭಿಕ್ಷುಕರಲ್ಲ, ಸಣ್ಣ ಗುತ್ತಿಗೆದಾರರು ತಮ್ಮ ಮನೆ ಹೆಣ್ಣುಮಕ್ಕಳ ಒಡವೆಗಳನ್ನು ಗಿರವಿ ಇಟ್ಟು ಕಾಮಗಾರಿಗಳನ್ನು ಪೂರೈಸಿದ್ದಾರೆ, ಬ್ಯಾಂಕ್ ಸಾಲಗಳನ್ನು ತೀರಿಸಲಾಗದೆ ಬೀದಿಗೆ ಬಂದಿದ್ದಾರೆ, ಗುತ್ತಿಗೆದಾರರ ಎಲ್ ಓಸಿಗಳನ್ನು ರಿಲೀಸ್ ಮಾಡೋದು ಸಹ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ಹೇಳಿದ ಕುಮಾರಸ್ವಾಮಿ, ಖರ್ಗೆ ಹಿಂದಿನ ಸರ್ಕಾರದ ಮೇಲೆ ಗೂಬೆ ಕೂರಿಸುವ ಬದಲು ಗುತ್ತಿಗೆದಾರರ ಬಾಕಿಗಳನ್ನು ಬಿಡುಗಡೆ ಮಾಡಬೇಕೆಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ರೈತರಿಗೆ ಭೂಮಿಯನ್ನು ಸರ್ಕಾರ ಕೊಡಬೇಕು, ನಾನು ಹೇಗೆ ಕೊಡಲು ಸಾಧ್ಯ? ಹೆಚ್ ಡಿ ಕುಮಾರಸ್ವಾಮಿ