Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈತರಿಗೆ ಭೂಮಿಯನ್ನು ಸರ್ಕಾರ ಕೊಡಬೇಕು, ನಾನು ಹೇಗೆ ಕೊಡಲು ಸಾಧ್ಯ? ಹೆಚ್ ಡಿ ಕುಮಾರಸ್ವಾಮಿ

ರೈತರಿಗೆ ಭೂಮಿಯನ್ನು ಸರ್ಕಾರ ಕೊಡಬೇಕು, ನಾನು ಹೇಗೆ ಕೊಡಲು ಸಾಧ್ಯ? ಹೆಚ್ ಡಿ ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 14, 2025 | 4:16 PM

ಹಬ್ಬದ ಪ್ರಯುಕ್ತ ಕುಮಾರಸ್ವಾಮಿಯವರು ತರಾತುರಿಯಲ್ಲಿದ್ದರು ಅನಿಸುತ್ತದೆ. ಇವತ್ತು ಮಕರ ಸಂಕ್ರಾಂತಿ ಹಬ್ಬ, ಎಲ್ಲರೂ ಎಳ್ಳುಬೆಲ್ಲ ತಿಂದು ಸಂತೋಷವಾಗಿ ನೆಮ್ಮದಿಯಾಗಿ ಇರೋಣ ಎಂದು ಹೇಳುವ ಅವರು ರಾಜಕಾರಣದ ವಿಷಯಗಳನ್ನು ನಾಳೆ ಮಾತಾಡೋಣ ಅನ್ನುತ್ತಾರೆ. ಬುಧವಾರ ದೆಹಲಿಗೆ ಹೊಗುತ್ತಿದ್ದೇನೆ, ಅದರೆ ಅದಕ್ಕೆ ಮೊದಲು ಒಂದು ಸುದ್ದಿಗೋಷ್ಠಿ ನಡೆಸಿ ಎಲ್ಲ ವಿಷಯಗಳನ್ನು ಮಾತಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳುತ್ತಾರೆ.

ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಗುರು ಸಿದ್ಧರಾಮೇಶ್ವರ 852ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಡಿಕೆ ಶಿವಕುಮಾರ್ ಅವರಿಗೆ ಭೂಮಿ ನೀಡುವ ವಿಷಯದಲ್ಲಿ ತಿರುಗೇಟು ನೀಡಿದರು. ರೈತರಿಗೆ ಸರ್ಕಾರ ಭೂಮಿ ನೀಡಬೇಕಾಗಿದೆ, ಸರ್ಕಾರ ನಡೆಸುತ್ತಿರುವವರು ಅವರು ಮತ್ತು ಸಮಿತಿಗಳು ಕೂಡ ಅವರ ನೇತೃತ್ವದಲ್ಲೇ ಇವೆ, ನಾನು ಹೇಗೆ ಭೂಮಿ ಕೊಡುವುದು ಸಾಧ್ಯ? ಅವರೇ ಭೂಮಿ ಕೊಡಬೇಕಾಗಿದ್ದು, ತಾನಲ್ಲ, ವಿಷಯದ ಬಗ್ಗೆ ನಾಳೆ ದೆಹಲಿಗೆ ಹೋಗುವ ಮೊದಲು ಸವಿಸ್ತಾರವಾಗಿ ಮಾತಾಡುತ್ತೇನೆ ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬಿಜೆಪಿ ನಾಯಕರ ಜೊತೆ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾದ ಹೆಚ್ ಡಿ ಕುಮಾರಸ್ವಾಮಿ