ಸಿಎಲ್ಪಿ ಸಭೆಯಲ್ಲಿ ಮಾತಿನ ಚಕಮಕಿ ನಡೆದ ಮರುಕ್ಷಣವೇ ಟಿವಿಗಳಲ್ಲಿ ಬಿತ್ತರವಾಗಿದೆ: ಸತೀಶ್ ಜಾರಕಿಹೊಳಿ
ಪಕ್ಷ ಮತ್ತು ಸರ್ಕಾರಗಳಲ್ಲಿ ತಿಕ್ಕಾಟ ನಡೆಯುತ್ತಿರುತ್ತದೆ ಅದೇನೂ ಹೊಸದಲ್ಲ, ನಾಯಕರ ನಡುವೆ ಭಿನ್ನಾಭಿಪ್ರಾಯಗಳು ತಲೆದೋರುತ್ತವೆ, ಒಮ್ಮೆ ತಾವು ಸರಿಯಾದರೆ ಇನ್ನೊಂದು ಸಲ ಬೇರೆಯವರ ಕೈ ಮೇಲಾಗುತ್ತದೆ, ರಾಜಕೀಯದಲ್ಲಿ ಇದೆಲ್ಲ ಇದ್ದಿದ್ದೇ, ತಮ್ಮ ಮಾತಿಗೆ ಮಾನ್ಯತೆ ಸಿಗಬೇಕೆಂದರೆ ಕಾಯಬೇಕಾಗುತ್ತದೆ ಎಂದು ಜಾರಕಿಹೊಳಿ ಹೇಳಿದರು.
ಬೆಂಗಳೂರು: ತಮ್ಮ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆಯಲ್ಲಿ ತಮ್ಮ ಮತ್ತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ನಡೆದ ಮಾತಿಕ ಚಕಮಕಿಯ ಬಗ್ಗೆ ಹೇಳೋದೇನಿಲ್ಲ, ಸಭೆಯಲ್ಲಿ ಅದು ನಡೆದ ಮರುಕ್ಷಣವೇ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗಿದೆ ಎಂದು ಮುಗುಳ್ನಗುತ್ತಾ ಹೇಳಿದರು. ಬೆಳಗಾವಿಯಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣದ ಶ್ರೇಯಸ್ಸು ಒಬ್ಬರಿಗೆ ಮಾತ್ರ ನೀಡೋದು ಸರಿಯಲ್ಲ, ಅದಕ್ಕಾಗಿ ತಾನು, ರಮೇಶ್ ಜಾರಕಿಹೊಳಿ, ಹಲವಾರು ಮಾಜಿ ಮತ್ತು ಹಾಲಿ ಶಾಸಕರು ಕಾಂಟ್ರಿಬ್ಯೂಟ್ ಮಾಡಿದ್ದಾರೆ ಎಂದು ಸಭೆಯಲ್ಲಿ ಹೇಳಿದ್ದು ಸತ್ಯ ಎಂದು ಜಾರಕಿಹೊಳಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಹಿಂದೆ ಹೇಳಿದ್ದನ್ನೇ ಪುನರಾವರ್ತಿಸಿದರು!
Latest Videos