AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡು ವರ್ಷದಲ್ಲಿ ಪಿಎಫ್ ಎಕ್ಸೆಂಪ್ಷನ್ ಬಿಟ್ಟುಕೊಟ್ಟ 27 ಸಂಸ್ಥೆಗಳು; ಇಪಿಎಫ್​ಒ ವ್ಯಾಪ್ತಿಗೆ ಸೇರ್ಪಡೆಯಾದ 30,000 ಉದ್ಯೋಗಿಗಳು

Surrender of EPF exemption by 27 entities: ಉದ್ಯೋಗಿಗಳ ಪಿಎಫ್ ಖಾತೆಗಳ ನಿರ್ವಹಣೆಗೆ ಎಕ್ಸೆಂಪ್ಷನ್ ಹಕ್ಕು ಪಡೆದಿರುವ ಒಂದು ಸಾವಿರಕ್ಕೂ ಹೆಚ್ಚು ಸಂಸ್ಥೆಗಳ ಪೈಕಿ 27 ಸಂಸ್ಥೆಗಳು ಎಕ್ಸೆಂಪ್ಷನ್ ಬಿಟ್ಟುಕೊಟ್ಟಿವೆ. ಇದರೊಂದಿಗೆ ಈ 27 ಸಂಸ್ಥೆಗಳಲ್ಲಿನ 30,000 ಉದ್ಯೋಗಿಗಳ ಪಿಎಫ್ ಖಾತೆಯಲ್ಲಿರುವ 1,688 ಕೋಟಿ ರೂ ಹಣದ ನಿರ್ವಹಣೆ ಹೊಣೆ ಇಪಿಎಫ್​ಒ ಸಂಸ್ಥೆಗೆ ವರ್ಗಾವಣೆ ಆದಂತಾಗಿದೆ. ಇಪಿಎಫ್​ಒ ಬಳಿ ಇರುವ ಒಟ್ಟಾರೆ ಇಪಿಎಫ್ ನಿಧಿ 21 ಲಕ್ಷ ಕೋಟಿ ರೂಗೂ ಹೆಚ್ಚು.

ಎರಡು ವರ್ಷದಲ್ಲಿ ಪಿಎಫ್ ಎಕ್ಸೆಂಪ್ಷನ್ ಬಿಟ್ಟುಕೊಟ್ಟ 27 ಸಂಸ್ಥೆಗಳು; ಇಪಿಎಫ್​ಒ ವ್ಯಾಪ್ತಿಗೆ ಸೇರ್ಪಡೆಯಾದ 30,000 ಉದ್ಯೋಗಿಗಳು
ಇಪಿಎಫ್​ಒ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 14, 2024 | 7:09 PM

Share

ನವದೆಹಲಿ, ಜುಲೈ 14: ಕಳೆದ ಎರಡು ವರ್ಷದಲ್ಲಿ 27 ಸಂಸ್ಥೆಗಳು ತಮ್ಮ ಪಿಎಫ್ ಎಕ್ಸೆಂಪ್ಷನ್ ಅನ್ನು ಬಿಟ್ಟುಕೊಟ್ಟಿವೆ. ಇದರೊಂದಿಗೆ ಆ ಸಂಸ್ಥೆಗಳ ಉದ್ಯೋಗಿಗಳ ಪಿಎಫ್ ಫಂಡ್ ನಿರ್ವಹಣೆ ಹೊಣೆ ಇಪಿಎಫ್​ಒಗೆ ವರ್ಗಾವಣೆ ಆದಂತಾಗಿದೆ. ಈ ಕ್ರಮದಿಂದಾಗಿ ಈ 27 ಸಂಸ್ಥೆಗಳಲ್ಲಿನ 30,000 ಉದ್ಯೋಗಿಗಳ ಪಿಎಫ್ ಖಾತೆ ನಿರ್ವಹಣೆ, ಮತ್ತು ಆ ಖಾತೆಗಳಲ್ಲಿನ 1,688 ಕೋಟಿ ರೂ ಹಣವನ್ನು ಇಪಿಎಫ್​ಒ ಸಂಸ್ಥೆಯೇ ನಿರ್ವಹಣೆ ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಇಪಿಎಫ್​​ಒ ಸಂಸ್ಥೆಯ ಕಾರ್ಯನಿರ್ವಹಣೆಯ ವೈಖರಿ ಬದಲಾಗಿದ್ದು, ಹಣ ಕ್ಲೇಮ್ ಮಾಡುವ ಕ್ರಮ, ಸೆಟಲ್ಮೆಂಟ್ ಮಾಡಲಾಗುವ ಸಮಯ, ವಿವಿಧ ಸೇವೆಗಳಲ್ಲಿ ಸುಧಾರಣೆ ಇವೆಲ್ಲವೂ ಸಕಾರಾತ್ಮಕ ರೀತಿಯಲ್ಲಿ ಬದಲಾವಣೆ ಆಗಿದೆ. ಇದರಿಂದಾಗಿ, ಪಿಎಫ್ ಎಕ್ಸೆಂಪ್ಷನ್ ಇರುವ ಸಂಸ್ಥೆಗಳು ಒಂದೊಂದಾಗಿ ತಮ್ಮ ಜವಾಬ್ದಾರಿಯನ್ನು ಇಪಿಎಫ್​ಒಗೆ ವರ್ಗಾಯಿಸುತ್ತಿವೆ.

ಪಿಎಫ್ ಎಕ್ಸೆಂಪ್ಷನ್ ಎಂದರೇನು?

ಇಪಿಎಫ್ ಯೋಜನೆ ಪ್ರಕಾರ ಒಂದು ಸಂಸ್ಥೆಯ ಉದ್ಯೋಗಿಗೆ ಪಿಎಫ್ ಖಾತೆ ತೆರೆಯಲಾಗುತ್ತದೆ. ಅದಕ್ಕೆ ಉದ್ಯೋಗಿಯ ಸಂಬಳದಿಂದ ಒಂದಷ್ಟು ಹಣವನ್ನು ಸೇರಿಸಲಾಗುತ್ತದೆ. ಕಂಪನಿಯೂ ಸಮಪಾಲು ಹಾಕುತ್ತದೆ. ಈ ಖಾತೆಯಲ್ಲಿ ಜಮೆಯಾಗುವ ಹಣವನ್ನು ಇಪಿಎಫ್​ಒ ಸಂಸ್ಥೆ ಬಾಂಡ್ ಮಾರುಕಟ್ಟೆ ಇತ್ಯಾದಿ ಕಡೆ ಹೂಡಿಕೆ ಮಾಡುತ್ತದೆ. ಈ ಖಾತೆಯಲ್ಲಿರುವ ಹಣಕ್ಕೆ ನಿರ್ದಿಷ್ಟ ವಾರ್ಷಿಕ ಬಡ್ಡಿಹಣವನ್ನು ಇಪಿಎಫ್​ಒ ಸೇರಿಸುತ್ತದೆ. ಆದರೆ, ಕೆಲ ಸಂಸ್ಥೆಗಳು ತಮ್ಮ ಉದ್ಯೋಗಿಗಳ ಇಪಿಎಫ್ ಖಾತೆಯಲ್ಲಿರುವ ಹಣವನ್ನು ತಾವೇ ನಿರ್ವಹಣೆ ಮಾಡುವುದಾಗಿ ಹೇಳಿ ಇಪಿಎಫ್​ಒದಿಂದ ಎಕ್ಸೆಂಪ್ಷನ್​ಗೆ ಅನುಮತಿ ಪಡೆದಿರುತ್ತವೆ.

ಇದನ್ನೂ ಓದಿ: EPF: 2023-24ರ ಸಾಲಿನಲ್ಲಿ ಇಪಿಎಫ್ ಹಣಕ್ಕೆ ಶೇ. 8.25ರ ಬಡ್ಡಿ; ಹಣಕಾಸು ಸಚಿವಾಲಯದಿಂದ ಅನುಮೋದನೆ

2023ರ ಮಾರ್ಚ್ 31ರವರೆಗೆ ಪಿಎಫ್ ಎಕ್ಸೆಂಪ್ಷನ್ ಪಡೆದ ಸಂಸ್ಥೆಗಳ ಸಂಖ್ಯೆ 1,002 ಇದೆ. ಒಟ್ಟು 31,20,323 ಪಿಎಫ್ ಸದಸ್ಯರು ಇಲ್ಲಿದ್ದಾರೆ. ಒಟ್ಟಾರೆ ಇವರ ಖಾತೆಯಲ್ಲಿರುವ ಮತ್ತ 3.52 ಲಕ್ಷ ಕೋಟಿ ರೂ. ಈ ಒಂದು ಸಾವಿರ ಕಂಪನಿಗಳ ಪೈಕಿ 27 ಕಂಪನಿಗಳು ಕಳೆದ ಎರಡು ವರ್ಷದಲ್ಲಿ ತಮ್ಮ ಇಪಿಎಫ್ ಎಕ್ಸೆಂಪ್ಷನ್ ಸೌಲಭ್ಯವನ್ನು ಮರಳಿಸಿವೆ.

ಇಪಿಎಫ್​ಒ ಬಳಿ ಒಟ್ಟಾರೆ ಇರುವ ಫಂಡ್ 2022-23ರ ಹಣಕಾಸು ವರ್ಷದಲ್ಲಿ 21.3 ಲಕ್ಷ ಕೋಟಿ ರೂ. ವರ್ಷದಿಂದ ವರ್ಷಕ್ಕೆ ಈ ಫಂಡ್ ಬೆಳೆಯುತ್ತಲೇ ಇದೆ. 2021-22ರಲ್ಲಿ 18.3 ಲಕ್ಷ ಕೋಟಿ ರೂ ಇತ್ತು. ಒಂದು ವರ್ಷದಲ್ಲಿ ಶೇ. 16.7ರಷ್ಟು ಫಂಡ್ ಗಾತ್ರ ಬೆಳೆದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ