Daily Horoscope 23 November 2024: ನಕಾರಾತ್ಮಕತೆಗೆ ಅವಕಾಶ ಬೇಡ, ಪ್ರಯಾಣ ಅನಿವಾರ್ಯವಾದರೆ ಮಾಡಿ

Daily Horoscope 23 November 2024: ನವೆಂಬರ್ 23, 2024ರ ಶನಿವಾರ ಇಂದಿನ ಗ್ರಹಗಳ ಸಂಚಾರ ಹೇಗಿದೆ? ಯಾವ ರಾಶಿಯವರಿಗೆ ಶುಭವಾಗಲಿದೆ? ಯಾವ ರಾಶಿಯವರಿಗೆ ಅಶುಭವಾಗಲಿದೆ? ಸೇರಿದಂತೆ ರಾಹು ಕಾಲ, ಯಮಘಂಡ, ಗುಳಿಕ ಕಾಲ ಸಮಯವನ್ನೂ ಸಹ ತಿಳಿದುಕೊಳ್ಳಿ.

Daily Horoscope 23 November 2024: ನಕಾರಾತ್ಮಕತೆಗೆ ಅವಕಾಶ ಬೇಡ, ಪ್ರಯಾಣ ಅನಿವಾರ್ಯವಾದರೆ ಮಾಡಿ
ನಕಾರಾತ್ಮಕತೆಗೆ ಅವಕಾಶ ಬೇಡ, ಪ್ರಯಾಣ ಅನಿವಾರ್ಯವಾದರೆ ಮಾಡಿ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ

Updated on: Nov 23, 2024 | 12:03 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಅನುರಾಧಾ, ಮಾಸ: ಕಾರ್ತಿಕ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಮಘಾ, ಯೋಗ: ಐಂದ್ರ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 38 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 05 ಗಂಟೆ 59 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 09:29 ರಿಂದ 10:54ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 01:44 ರಿಂದ 03:09 ರವರೆಗೆ, ಗುಳಿಕ ಕಾಲ ಸಂಜೆ 06:39 ರಿಂದ 08:04 ರವರೆಗೆ.

ಮೇಷ ರಾಶಿ: ಪ್ರಯಾಣ ದೂರವೆನಿಸದರೂ ಮಾಡುವುದು ಅನಿವಾರ್ಯ. ನೆಮ್ಮದಿಯನ್ನು ಭಂಗ ಮಾಡುವ ವಿಚಾರವನ್ನು ಮರೆಯುವುದು ಉತ್ತಮ. ನಿಮಗೆ ಗೌರವವು ಪ್ರಾಪ್ತವಾಗುವ ಸಾಧ್ಯತೆ ಇದೆ. ಆರ್ಥಿಕ ಸಮಸ್ಯೆಯಾದೀತು. ಶತ್ರುಗಳನ್ನು ಬೌದ್ಧಿಕವಾಗಿ ಸೋಲಿಸಬಹುದು. ಆಸ್ತಿಯ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವುದು ಕಷ್ಟವಾದೀತು. ಸರ್ಕಾರದ ಕೆಲಸವು ವಿಳಂಬವಾಗಿ ನಿಮಗೆ ಬೇಸರವಾಗುವುದು. ರಾಜಕಾರಣಿಗಳ ಕೆಲಸಕ್ಕೆ ಪ್ರಶಂಸೆಯು ಸಿಗುವುದು. ನಿಮ್ಮ ನಡೆಯಿಂದ ವಿರೋಧಿಗಳು ಹುಟ್ಟಿಕೊಳ್ಳಬಹುದು. ನಿಮ್ಮ ಅಮೂಲ್ಯ ವಸ್ತುಗಳ ಹರಣವಾಗಬಹುದು. ಹೊಸ ವಾಹನ ಖರೀದಿ ಮಾಡುವುದನ್ನು ಕೈ ಬಿಡುವಿರಿ. ಸಂಪತ್ತಿನ ರಕ್ಷಣೆಯನ್ನು ಮಾಡಿಕೊಳ್ಳುವುದು ಇಂದು ಅಸಾಧ್ಯವಾಗುವುದು. ನಿಮ್ಮ ಅಮೂಲ್ಯ ವಸ್ತುವನ್ನು ನಿಮಗೆ ಗೊತ್ತಿಲ್ಲದೇ ಇನ್ನೊಬ್ಬರಿಗೆ ಕೊಟ್ಟು ಬಿಡುವಿರಿ. ತಂದೆಯ ಮಾತು ಹಿಡಿಸದೇಹೋಗಬಹುದು. ಯಾವ ಕರ್ಮವನ್ನಾದರೂ ಫಲ ಬರುವತನಕ ಕಾಯುವುದೇ ಮುಖ್ಯ.

ವೃಷಭ ರಾಶಿ: ಗುದ್ದಾಟದಿಂದ ಮೈ ಕೈಗೆ ನೋವಾಗಬಹುದು, ಕಾರ್ಯ ಮಾತ್ರ ಆಗದು. ನಿಮ್ಮ ಮಾತುಗಳು ಆಪ್ತರ ಹೃದಯಕ್ಕೆ ನಾಟಿವುದು. ಸ್ಥಿರಾಸ್ತಿಯ ಖರೀದಿಯ ಯೋಗವಿದ್ದರೂ ಯೋಗವಿದೆ. ವಿವಾಹಕ್ಕೆ ಅನ್ಯರಿಂದ ಅಡಚಣೆ ಬರಬಹುದು. ಕನ್ನಡ ಶುದ್ಧವಾಗಿದ್ದರೆ, ನೋಡುವ ವಸ್ತುವೂ ಶುದ್ಧವೇ. ಆದಾಯಕ್ಕಿಂತ ಹೆಚ್ಚು ಖರ್ಚು ಹೆಚ್ಚಿದ್ದು ನಿಮಗೆ ನಿಯಂತ್ರಣವು ಕಷ್ಟವಾದೀತು. ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಕಳೆದುಹೋಗಬಹದು. ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲಿ ಸಹೋದರನಿಂದ ವಂಚನೆಯಾದ ಅನುಮಾನ ಇರುವುದು. ಅನಾರೋಗ್ಯದ ಕಾರಣ ವಿಶ್ರಾಂತಿಯಿಂದ ಅನಿವಾರ್ಯವಾಗುವುದು. ಮುಖವಾಡವನ್ನು ತೆರೆಯಲು ನಿಮ್ಮಿಂದಾಗದು. ಪರಿಚಿತರು ನಿಮ್ಮ ವಸ್ತುವನ್ನು ಕಾಣೆ ಮಾಡುವರು. ವಿವಾಹದ ಮಾತುಕತೆಯು ಗೊಂದಲದಲ್ಲಿ ಮುಕ್ತಾಯವಾಗಬಹುದು. ನಿಮ್ಮ ಅತಿಯಾದ ಉತ್ಸಾಹದಿಂದಲೇ ಇಂದಿನ ಕಾರ್ಯವು ಬೇಗ ಮುಗಿಯಬಹುದು.

ಮಿಥುನ ರಾಶಿ: ಅನ್ಯರ ಜೊತೆ ಮಾತಿಗೆ ಮಾತು ಬೆಳೆಯುವುದು. ಇಂದು ನಿಮ್ಮ ಜವಾಬ್ದಾರಿಯವ ಕೆಲಸಗಳ ಜೊತೆ ಸಹೋದ್ಯೋಗಿಯ ಕಾರ್ಯವನ್ನೂ ಮಾಡಬೇಕಾದೀತು. ನಿಮ್ಮ ಬಾಲಿಶವಾದ ಮಾತುಗಳು ನಿಮ್ಮ ವ್ಯಕ್ತಿತ್ವವನ್ನು ತೋರಿಸುವುದು. ವಿದ್ಯಾಭ್ಯಾಸದ ವಿಚಾರಕ್ಕೆ ವಾಗ್ವಾದವಾಗಬಹುದು. ಕೆಲಸದಲ್ಲಿ ಪಯತ್ನಪೂರ್ವಕ ಹಿನ್ನಡೆ ಮಾಡಿಸುವರು. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆಯನ್ನು ನಿರಾಕರಿಸುವಿರಿ. ನಿಮ್ಮ ಆಸ್ತಿಯನ್ನು ಪಡೆಯಲು ಬೇರೆಯವರ ದೃಷ್ಟಿ ಇರುವುದು. ಕೆಲವರಿಗೆ ನಿಮ್ಮ ಉಪಕಾರವು ಸಿಗುವುದು.‌ ನಿಮ್ಮನ್ನು ಕುಟುಂಬವು ನಿರ್ಲಕ್ಷ್ಯಿಸಿದಂತೆ ಕಾಣುವುದು. ಸಂಗಾತಿಯಿಂದ ಶುಭ ಸಮಾಚಾರವು ಇರಲಿದೆ. ನಿಮ್ಮ ಅಸಹಕಾರವೂ ಕಾರ್ಯ ಹಾನಿಗೆ ಕಾರಣವಾಗುವುದು. ಸ್ನೇಹಿತರ ಜೊತೆ ಸುತ್ತಾಟದಿಂದ ಖರ್ಚು ಬರಬಹುದು. ತಮ್ಮ ಗುರುವನ್ನು ಶಿಷ್ಯರು ಭೇಟಿ ಮಾಡಲಿದ್ದು, ಉಡುಗೊರೆಯನ್ನು ನೀಡುವರು. ಹೂಡಿಕೆಯನ್ನು ಎಲ್ಲಿ ಮಾಡಬೇಕು ಎಂದುಕೊಂಡು ಮಿತವಾಗಿ ಮಾಡಿ.

ಕರ್ಕಾಟಕ ರಾಶಿ: ಬೇಗ ತೃಪ್ತಿಯಾಗುವ ಸಾಧ್ಯತೆ ಇದೆ. ಭೂ ವ್ಯವಹಾರವನ್ನು ಅನುಭವಿಗಳ ಜೊತೆ ಇದ್ದು ಮಾಡಿ. ನಿಮ್ಮಿಂದಾಗಿ ಕುಟುಂಬದ ಕಲಹವು ನಿಲ್ಲುವುದು. ಇಂದಿನ ಕಾರ್ಯದಲ್ಲಿ ಜಯವನ್ನು ಗಳಿಸುವಿರಿ. ತೋರಿಕೆಯನ್ನು ಹೆಚ್ಚು ಕಾಲ ಇಟ್ಟುಕೊಳ್ಳಲಾಗದು. ರಾಜಕಾರಣಿಗಳಿಗೆ ಸಮಾಜದಿಂದ ಗೌರವವನ್ನು ಪಡೆಯಬೇಕು ಎನ್ನುವ ಆಸೆ ಇರಲಿದೆ. ವಿದ್ಯಾರ್ಥಿಗಳು ಓದಲಿ ಸಮಯವು ಸಿಗದೇ ಕಷ್ಟವಾಗುವುದು. ಮಿತ್ರನಿಗೆ ಗೊತ್ತಿಲ್ಲದೇ ಹಣವನ್ನು ಪಡೆಯುವಿರಿ. ವಿದ್ಯಾಭ್ಯಾಸದ ಸಾಲವು ಮುಕ್ತಾಯವಾಗುವುದು. ಬಹಳ ದಿನಗಳ ಅನಂತರ ಉತ್ತಮ ಭೋಜನವು ಸಿಗವುದು. ಆರೋಪದ ಬಗ್ಗೆ ಏನನ್ನೂ ನೀವು ಹೇಳಲಾರಿರಿ. ಬಂಧುಗಳ ಪ್ರೀತಿಯು ನಿಮಗೆ ಸಿಗುವುದು. ಸಾಲದಿಂದ ಮುಕ್ತರಾಗಲು ನಿಮಗೆ ಸಾಧ್ಯವಾಗದು. ತಾಳ್ಮೆಯನ್ನೂ ನೀವು ಕಳೆದುಕೊಳ್ಳುವಿರಿ. ನೀವು ದ್ವೇಷಿಸುವವರ ಬಳಿಯೇ ಸಹಾಯ ಕೇಳುವಿರಿ. ಇಂದು ಮನೆಯವರು ನಿಮ್ಮ ಯಾವ ಮಾತನ್ನೂ ಒಪ್ಪಿಕೊಳ್ಳಲಾರರು.

ಸಿಂಹ ರಾಶಿ: ಸಂಗಾತಿಯಿಂದ ಬಹಳ ದಿನಗಳ ಅನಂತರ ಪ್ರಶಂಸೆ ಸಿಗುವುದು. ನೀವು ಇಂದು ಕೆಲವು ಅನಿರೀಕ್ಷಿತ ಸವಾಲನ್ನು ಸ್ವೀಕರಿಸುವಿರಿ. ಗಣ್ಯರ ಜೊತೆ ಮಾತುಕತೆ ನಡೆಸುವಿರಿ. ದೂರವಾಣಿಯ ಕರೆಯಿಂದ ನಿಮಗೆ ಆತಂಕ ಎದುರಾಗಬಹುದು. ಕುಟುಂಬದ ಕಾರ್ಯದಿಂದ ಆಯಾಸವು ಬರಲಿದೆ. ನೀವು ಇಷ್ಟಪಟ್ಟಿದ್ದನ್ನು ಕಳೆದುಕೊಳ್ಳುವ ಸಂದರ್ಭವು ಬರಬಹುದು. ಪತ್ನಿಯ ಕಡೆಯವರಿಂದ ಅಹಿತಕರವಾದ ಮಾತುಗಳು ಕೇಳಿಬರಬಹುದು. ಭವಿಷ್ಯಕ್ಕಾಗಿ ಹಣವನ್ನು ಯಾರಿಗೂ ಹೇಳದೇ ಗೌಪ್ಯವಾಗಿ ಇಡುವಿರಿ. ಪುಣ್ಯಸ್ಥಳದ ಸಂಚಾರಕ್ಕೆ ನೀವು ತಯಾರಿ ಮಾಡಿಕೊಳ್ಳುವಿರಿ. ಇನ್ನೊಬ್ಬರ ಬಗ್ಗೆ ಗೊತ್ತಿಲ್ಲದೇ ಮಾತಡುವುದು ಸರಿಯಾಗದು. ಉನ್ನತ ಸ್ಥಾನಮಾನವನ್ನು ಪಡೆಯಲು ಬಹಳ ಉತ್ಸಾಹವಿರಲಿದೆ. ಕಾಲವನ್ನು ವ್ಯರ್ಥ ಮಾಡಲು ಮನಸ್ಸು ಇಲ್ಲದಿದ್ದರೂ ಅನಿವಾರ್ಯವಾದೀತು.

ಕನ್ಯಾ ರಾಶಿ: ಸಾಮಾಜಿಕ ಬೆಳವಣಿಗೆಯಿಂದ ತೊಂದರೆ ಬರುವ ಸಾಧ್ಯತೆ ಇದೆ. ಚರಾಸ್ತಿಯ ಖರೀದಿಯ ಬಗ್ಗೆ ಆಪ್ತರಿಂದ ಒತ್ತಾಯವು ಬರಬಹುದು. ಹಿತಶತ್ರುಗಳಿಂದ ಹಲವು ತೊಂದರೆಗಳು ಬರಬಹುದು. ಹೊಗಳಿಕೆಯನ್ನು ಬಹಳ ಸಂಕೋಚದಿಂದ ಪಡೆಯುವಿರಿ. ಬಂಧುಗಳು ಮನಸ್ಸಿಗೆ ನೋವಾಗುವ ಮಾತುಗಳನ್ನು ಆಡಿದರೂ ಅದನ್ನು ಮನಸ್ಸಿನಲ್ಲಿ ಇರಿಸಿಕೊಳ್ಳುವುದಿಲ್ಲ. ಪ್ರೀತಿಯ ವಿಚಾರದಲ್ಲಿ ಬುದ್ಧಿವಾದವನ್ನು ಹೇಳುವರು. ದೌರ್ಬಲ್ಯವನ್ನು ಹಿಮ್ಮೆಟ್ಟಿಸುವುದು ಕಷ್ಟವಾದೀತು. ಸರಳವಾಗಿರಲು ಇರುವುದು ನಿಮಗೆ ಆಗದು. ಇನ್ನೊಬ್ಬರ ಜೊತೆ ಮಾತನಾಡುವಾಗ ಹೆದರಿಕೆ ಇರುವುದು. ನೆಮ್ಮದಿಯನ್ನು ಏಕಾಂತದಲ್ಲಿ ಪಡೆದುಕೊಳ್ಳುವಿರಿ. ಪತ್ನಿಯ ಮಾತಿನಂತೆ ನಡೆಯುವುದು ಕಷ್ಟವಾಗಿ ಸಿಡುಕು ಮಾತುಗಳು ಬರಬಹುದು. ನಿಮ್ಮವರನ್ಮು ನಿಮ್ಮವರೆನ್ನಲು ಹಿಂಜರಿಯುವಿರಿ. ಆಲಸ್ಯ ಮನೋಭಾವವನ್ನು ಕಡಿಮೆ ಮಾಡಿಕೊಂಡು ಯಾವುದರೊಂದು ಕಾರ್ಯದಲ್ಲಿ ತೊಡಗಿ.

ತುಲಾ ರಾಶಿ: ಇಂದಿನ ದಿನ ದುಃಖಾಂತವಾಗಬಹುದು. ನೀವೇ ಮಾಡಿಕೊಂಡ ತಪ್ಪಿನಿಂದ ಪಶ್ಚಾತ್ತಾಪ ಪಡಬೇಕಾದೀತು. ತರಬೇತುದಾರರಿಗೆ ಹೆಚ್ಚಿನ ಮನ್ನಣೆಯು ಬರಲಿದೆ. ನಿಮ್ಮ ಲಾಭವನ್ನು ಹೆಚ್ಚು ಮಾಡಿಕೊಳ್ಳುವಿರಿ. ಸಂತೋಷದ ಸಮಯವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವಿರಿ. ಕಾಲಹರಣ ಮಾಡಲು ಅನವಶ್ಯಕ ಮಾತುಗಳನ್ನು ಆಡುವಿರಿ. ಆಲಸ್ಯ ಮನೋಭಾವವನ್ನು ಕಡಿಮೆ ಮಾಡಿಕೊಳ್ಳಿ. ನೀವು ಅಪವಾದದ ಸಂಕೋಲೆಯಲ್ಲಿ ಸಿಕ್ಕಿಬೀಳಬಹುದು. ಆಕಸ್ಮಿಕ ಧನಲಾಭವು ನಿಮಗೆ ಸ್ವಲ್ಪ ಸಮಾಧಾನ ತರಬಹುದು. ಉದ್ಯೋಗದಲ್ಲಿ ಅವಘಡವು ಸಂಭವಿಸುವ ಸಾಧ್ಯತೆ ಇದೆ. ಎಲ್ಲರಿಗೂ ಆಕರ್ಷಕವಾಗಿ ನೀವು ಕಾಣುವಿರಿ. ಯಾರು ಏನೇ ಅಂದರೂ ನಿಮ್ಮ ನಿರ್ಧಾರವನ್ನು ಬದಲಿಸಲು ನೀವು ಒಪ್ಪುವುದಿಲ್ಲ. ಇಷ್ಟಪಟ್ಟಿದ್ದು ನಿಮ್ಮದಾಗದೇ ಇರುವುದು ನಿಮ್ಮ ಉದ್ವೇಗಕ್ಕೆ ಕಾರಣವಾಗುವುದು. ಆದಾಯಕ್ಕೆ ಸರಿಯಾದ ಪ್ರಮಾಣವಿರಲಿ.

ವೃಶ್ಚಿಕ ರಾಶಿ: ಸಾಂಸಾರಿಕ ಜಂಜಾಟದಿಂದ ಬಿಡುಗಡೆಯಾಗಲು ಪ್ರಯತ್ನಿಸುವಿರಿ. ಯಾರಂದಿಗೋ ಸ್ಪರ್ಧೆ ಮಾಡುವುದಕ್ಕಿಂತ ಬಲಾಬಲವನ್ನು ಅರಿತು ಮುನ್ನಡೆದರೆ ನಿಮಗೇ ಕ್ಷೇಮ. ದಾಂಪತ್ಯದ ಒಳ ಜಗಳವು ಕುಟುಂಬಕ್ಕೆ ಗೊತ್ತಾಗಲಿದೆ. ದುರಭ್ಯಾಸವನ್ನು ರೂಢಿಸಿಕೊಳ್ಳುವಿರಿ. ದಾನ ಮಾಡುವುದು ಒಳ್ಳೆಯದೇ. ಆದರೆ ಒಳ್ಳೆಯದನ್ನು ಮಾತ್ರ ದಾನ ಮಾಡಿ. ನಿಮ್ಮ ಶತ್ರುಗಳು ಬಲಗೊಳ್ಳುವ ಸಾಧ್ಯತೆ ಇದೆ. ಚರಾಸ್ತಿಯ ಸಲುವಾಗಿ ಕಾನೂನು ಹೋರಾಟ ಮಾಡಬೇಕಾದೀತು. ನಿಮ್ಮ ದುರ್ಬಲ್ಯವು ಇನ್ನೊಬ್ಬರಿಗೆ ಆಹಾರವಾಗಬಹುದು. ನೇರವಾದ ಮಾತಿನಿಂದ ತೊಂದರೆಯಾಗಬಹುದು. ಸಹನೆಯನ್ನು ನೀವು ಪ್ರಯತ್ನದಿಂದ ಬೆಳೆಸಿಕೊಳ್ಳಬೇಕಾದೀತು. ದೇಹಕ್ಕೆ ಬಲವಾದ ಪೆಟ್ಟು ಬೀಳಬಹುದು. ಅಪರಿಚಿತರ ಜೊತೆ ಮಾತನಾಡಲು ಮುಜುಗರಪಟ್ಟುಕೊಳ್ಳಬಹುದು. ಆರಾಮದಿಂದ ದಿನ ಕಳೆಯಬೇಕು ಎಂದು ಅನ್ನಿಸಬಹುದು.

ಧನು ರಾಶಿ: ಏನಾದರೂ ಮಾಡಿ, ಆದರೆ ಮನಸ್ಸಿಗೆ ತೃಪ್ತಿ ತರುವಂತೆ ಇರಲಿ. ಇನ್ನೊಬ್ಬರ ಅನುಕರಣೆಯನ್ನು ಮಾಡುವುದು ಇಷ್ಟವಾದರೂ ಬೇಸರವಾಗದಂತೆ ಇರಲಿ. ಕೆಲಸಕ್ಕೋಸ್ಕರ ನಿಮ್ಮನ್ನು ಹೊಗಳುವರು. ಕೆಲಸ ಕಾರ್ಯಗಳಲ್ಲಿ ಪೂರ್ಣಜಯವು ಪ್ರಾಪ್ತವಾಗದು. ಯಾವುದರ ಮೌಲ್ಯವನ್ನೂ ನೋಡಿ ಊಹಿಸಲಾಗದು. ನೀವು ಸ್ವಾರ್ಥಿಗಳಂತೆ ಕಾಣುವಿರಿ ಅಷ್ಟೇ. ಎಲ್ಲವೂ ನಿಮ್ಮದಾಗಬೇಕು ಎನ್ನುವ ಬಯಕೆ ಇರಿವುದು. ಆರ್ಥಿಕತೆಯ ವೃದ್ಧಿಗಾಗಿ ತಂತ್ರವನ್ನು ಮಾಡುವಿರಿ. ಪ್ರಭಾವೀ ವ್ಯಕ್ತಿಗೆ ಮೆಚ್ಚಿಸಿ ಅಧಿಕಾರವನ್ನು ಪಡೆಯುವಿರಿ. ಸಿಗದ ವಸ್ತುವಿನ ಬಗ್ಗೆ ಅತಿಯಾದ ಮೋಹವನ್ನು ಬೆಳೆಸಿಕೊಳ್ಳುವುದು ಬೇಡ. ಔಪಚಾರಿಕ ಮಾತುಕತೆಗಳಿಂದ ಮನಸ್ಸು ಹಗುರಾಗುವುದು. ನಿಮ್ಮ ಪ್ರಯಾಣವನ್ನು ಮೊಟಕುಗೊಳಿಸಿ ಮನೆಗೆ ಬರುವಿರಿ. ನಿಮ್ಮ ತಪ್ಪಿನಿಂದ ಪಶ್ಚಾತ್ತಾಪ ಪಡಬೇಕಾದೀತು. ಮನಸ್ಸು ಬಹಳ ಚಂಚಲವಾಗಿ ಇರುವಿದು. ರಾಜಕಾರಣಿಗಳಿಗೆ ಸಮಾಜದಿಂದ ಗೌರವವನ್ನು ಪಡೆಯಬೇಕು ಎನ್ನುವ ಆಸೆ ಇರಲಿದೆ.

ಮಕರ ರಾಶಿ: ನಾಯಕ ಸ್ಥಾನದಲ್ಲಿ ಇರುವವರಿಗೆ ಭಯವು ಕಾಡಬಹುದು. ಸ್ಥಿರಾಸ್ತಿಯ ವಿಚಾರದಲ್ಲಿ ಸೋದರರ ನಡುವೆ ಮಾತುಗಳು ಬರಬಹುದು. ಉದ್ಯಮವು ಯಶಸ್ಸಿನ ಒಂದೊಂದೇ ಹಂತವನ್ನು ಏರಲಿದೆ. ಸಹೋದರರ ಬಾಂಧವ್ಯವು ಸಡಿಲಾಗುವುದು. ಇಂದಿನ‌ ಕಾರ್ಯದಲ್ಲಿ ರೋಚಕತೆ ಕಾಣಿಸುವುದು. ಹತ್ತಾರು ವಿಚಾರಗಳನ್ನು ನೀವು ಒಂದೇ ಬಾರಿ ಅಲೋಚಿಸುವಿರಿ. ಇಬ್ಬರ ನಡುವಿನ ಜಗಳದಲ್ಲಿ ಮಧ್ಯಸ್ತಿಕೆ ವಹಿಸುವಿರಿ. ಸಮಾರಂಭಗಳಿಗೆ ಹೋಗುವ ಸಾಧ್ಯತೆ ಇದೆ. ಆರ್ಥಿಕತೆಯನ್ನು ದೃಢವಾಗಿ ಇಟ್ಟುಕೊಳ್ಳಬೇಕು. ನಿಮ್ಮ ನಿರ್ಧಾರವನ್ನು ಬದಲು ಮಾಡಿದ್ದಕ್ಕೆ ಬೇಸರವಾದೀತು. ಹೇಳಲಾಗದ ಒಂದು ವಿಚಾರವನ್ನು ಹೇಳಲು ಭಯವು ನಿಮ್ಮನ್ನು ಕಾಡಬಹುದು. ಆಭರಣವನ್ನು ಖರೀದಿಸಲು ಸಂಗಾತಿಯನ್ನು ಪೀಡಿಸುವಿರಿ. ಏಕಾಂತವು ಬೇಕು ಎಂದು ಅನ್ನಿಸದೇ ಇದ್ದರೂ ಹಾಗಯೇ ಇರುವಿರಿ. ಏಕಾಂತವು ಬೇಕು ಎನಿಸಬಹುದು. ನಿಮ್ಮ ಆಸ್ತಿಯನ್ನು ಪಡೆಯಲು ಬೇರೆಯವರ ದೃಷ್ಟಿ ಇರುವುದು. ನಿಮ್ಮ ಮೌನವೂ ನಿಮ್ಮರಿಗೆ ಸಹ್ಯವಾಗದು.

ಕುಂಭ ರಾಶಿ: ಇಂದು ನಿಮ್ಮನ್ನು ಮೆಚ್ಚಿಸಿ ನಿಮ್ಮಿಂದ ಸಂಪತ್ತನ್ನು ಪಡೆಯಬಹುದು. ಇಷ್ಟು ದಿನ ಕಷ್ಟವೆಂದುಕೊಂಡಿದ್ದ ಸಮಸ್ಯೆಯು ಸರಳವಾಗಿ ಇತ್ಯರ್ಥವಾಗುವುದು. ಖಾಸಗಿ ಉದ್ಯೋಗದಲ್ಲಿ ನಿಮಗೆ ಮನ್ನಣೆಯು ಸಿಗುವುದು. ಸಹೋದ್ಯೋಗಿಗಳ ಜೊತೆ ಆತ್ಮೀಯತೆ ಬೆಳೆಯುವುದು. ನಿಮ್ಮ ಸಂತೋಷಕ್ಕೆ ಅಡ್ಡಿಯಾಗುವ ಕೆಲಸವನ್ನು ಮಾಡಲಾರಿರಿ. ವಿದ್ಯಾರ್ಥಿಗಳ ಬಗ್ಗೆ ಅಸಮಾಧನವು ಇರುವುದು. ಉದ್ವೇಗಕ್ಕೆ ಒಳಗಾಗುವ ಸಂದರ್ಭವು ಬರಬಹುದು. ಧನಲಾಭದ ನಿರೀಕ್ಷೆಯಲ್ಲಿ ನೀವು ಇರುವುದಿಲ್ಲ. ದ್ವೇಷವನ್ನು ಮರೆತು ಪ್ರೀತಿಯಿಂದ ಇರುವಿರಿ. ಆಪದ್ಧನವನ್ನು ವಿನಿಯೋಗ ಮಾಡುವ ಸ್ಥಿತಿಯು ಬರುವುದು. ದುರಾಲೋಚನೆಯು ನಿಮ್ಮ ಸಂತೋಷಕ್ಕೆ ತೊಂದರೆಯನ್ನು ಕೊಡಬಹುದು. ಮನೆಗೆ ಬೇಕಾಗಿ ವಸ್ತುಗಳನ್ನು ಖರೀದಿಸುವಿರಿ. ಸಾಧ್ಯವೆನಿಸಿದ ಕಾರ್ಯವನ್ನಷ್ಟನ್ನೇ ಮಾಡಿ. ತಂತ್ರಜ್ಞರಿಗೆ ಕೆಲವು ಅವಕಾಶಗಳು ಸಿಗಬಹುದು. ವ್ಯವಹಾರದಿಂದ ಏಕಾಂತ ಬೇಕೆನಿಸಬಹುದು. ಯಾರದ್ದಾರೂ ಸಲಹೆಯನ್ನು ಪಡೆದು ನಿಮ್ಮ ನಿರ್ಧಾರವನ್ನು ಬದಲಿಸಬಹುದು.

ಮೀನ ರಾಶಿ: ಅಗತ್ಯವಿದ್ದಲ್ಲಿ ನಿಮ್ಮ ಸಹಾಯವು ಸಿಗಲಿದೆ. ಹೊರಗಿನ ಆಹಾರವು ನಿಮ್ಮ ಮೇಲೆ ಇಂದು ದುಷ್ಪರಿಣಾಮ ಬೀರಿ, ಅದನ್ನು ತ್ಯಜಿಸುವಿರಿ. ಪೂರ್ವಾಗ್ರಹವಿಲ್ಲದೇ ಮಾತನಾಡುವುದು ಸೂಕ್ತ. ಮಿತ್ರರ ಸಲಹೆಗಳು ನಿಮಗೆ ಪೂರಕ ಮಾನಸಿಕತೆಯನ್ನು ತಂದುಕೊಡಬಹುದು.‌ ಅಪಕ್ವತೆಯನ್ನು ಹೇಳಿಕೊಳ್ಳಲಾಗದು. ಇಂದಿನ ನಿಮ್ಮ ಪ್ರಯತ್ನವು ಸಂಪೂರ್ಣವಾಗಿ ಇರಲಿ. ಯಶಸ್ಸನ್ನು ಪಡೆಯುವ ಹಂಬಲದಿಂದ ಏನಾದರೂ ಮಾಡಿಕೊಳ್ಳುವಿರಿ. ಸಿಕ್ಕ ಸೌಲಭ್ಯವನ್ನು ದುರುಪಯೋಗ ಮಾಡಿಕೊಳ್ಳುವಿರಿ. ಹೂಡಿಕೆಯತ್ತ ಗಮನಹರಿಸುವುದು ಬೇಡ. ದುರ್ಬಲರಿಗೆ ಅಲ್ಪ ಸಹಾಯವನ್ನು ಮಾಡುವಿರಿ. ನಕಾರಾತ್ಮಕತೆಗೆ ಅವಕಾಶ ಬೇಡ. ಪ್ರಯಾಣವು ಅನಿವಾರ್ಯವಾದರೆ ಮಾಡಿ. ಅನಗತ್ಯ ಖರ್ಚನ್ನು ನಿಲ್ಲಿಸುವಿರಿ. ಸಾಮಾಜಿಕ ಚಿಂತನೆಯನ್ನು ಬೆಳೆಸಿಕೊಳ್ಳುವುದು ಉತ್ತಮ. ಬೇಡದ ವಿಚಾರಗಳಿಂದ ನಿಮ್ಮ ತಲೆ ಹಾಳಾಗಬಹುದು. ನಿಮ್ಮ ನಡೆಯಿಂದ ವಿರೋಧಿಗಳು ಹುಟ್ಟಿಕೊಳ್ಳಬಹುದು.

ಲೋಹಿತ ಹೆಬ್ಬಾರ್-8762924271 (what’s app only)

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ