ಭಾರತದ ಚುನಾವಣೆ ಬಗ್ಗೆ ತಪ್ಪು ಹೇಳಿಕೆ ನೀಡಿದ ಜುಕರ್‌ಬರ್ಗ್; ಮೆಟಾ ಕ್ಷಮೆಯಾಚನೆ

ಭಾರತ ಸೇರಿದಂತೆ ಅಧಿಕಾರದಲ್ಲಿರುವ ಹಲವು ದೇಶಗಳ ಸರ್ಕಾರಗಳು ಕೊವಿಡ್ ನಂತರ ಅಧಿಕಾರ ಕಳೆದುಕೊಂಡಿವೆ ಎಂದು ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಹೇಳಿಕೆ ನೀಡಿದ್ದು ಭಾರತ ಸರ್ಕಾರದ ಆಕ್ರೋಶಕ್ಕೆ ಕಾರಣವಾಗಿತ್ತು. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಈ ಬಗ್ಗೆ ಎಕ್ಸ್​ನಲ್ಲಿ ಅಸಮಾಧಾನ ಹೊರಹಾಕಿ, ಮೆಟಾ ಸತ್ಯ ಸಂಗತಿಯನ್ನು ಜನರಿಗೆ ನೀಡಬೇಕೇ ವಿನಃ ತಪ್ಪು ಮಾಹಿತಿ ನೀಡಬಾರದು ಎಂದಿದ್ದರು. ಈ ಹಿನ್ನೆಲೆಯಲ್ಲಿ ಜುಕರ್​​ಬರ್ಗ್ ಹೇಳಿಕೆಗೆ ಮೆಟಾ ಕ್ಷಮೆಯಾಚಿಸಿದೆ. ಇದು ಗೊತ್ತಿಲ್ಲದೆ ನಡೆದ ತಪ್ಪು ಎಂದು ಮೆಟಾ ಹೇಳಿದೆ.

ಭಾರತದ ಚುನಾವಣೆ ಬಗ್ಗೆ ತಪ್ಪು ಹೇಳಿಕೆ ನೀಡಿದ ಜುಕರ್‌ಬರ್ಗ್; ಮೆಟಾ ಕ್ಷಮೆಯಾಚನೆ
Zuckerberg - ashwini vaishnaw
Follow us
ಸುಷ್ಮಾ ಚಕ್ರೆ
|

Updated on: Jan 15, 2025 | 5:21 PM

ನವದೆಹಲಿ: ಭಾರತೀಯ ಚುನಾವಣೆಗಳ ಕುರಿತು ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ನೀಡಿದ ಹೇಳಿಕೆಗಳ ಕುರಿತು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರ ಟೀಕೆಗೆ ಇನ್‌ಸ್ಟಾಗ್ರಾಮ್‌ನ ಮಾತೃ ಕಂಪನಿಯಾದ ಮೆಟಾ ಇಂದು ಪ್ರತಿಕ್ರಿಯಿಸಿದೆ. ಇದೊಂದು ಅಜಾಗರೂಕತೆಯಿಂದ ನಡೆದ ತಪ್ಪು ಎಂದಿರುವ ಮೆಟಾ ತನ್ನ ಮುಂದಿನ ಪ್ರಯತ್ನಗಳಿಗೆ ಭಾರತದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದೆ.

ಭಾರತ ಸೇರಿದಂತೆ ಅನೇಕ ದೇಶಗಳ ಆಡಳಿತ ಸರ್ಕಾರಗಳು ಕೊವಿಡ್ ಬಳಿಕ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಕೊವಿಡ್ ಸಂದರ್ಭವನ್ನು ಸರಿಯಾಗಿ ನಿರ್ವಹಿಸದೇ ಇದ್ದುದು ಜನ ವಿಶ್ವಾಸ ಕಡಿಮೆಯಾಗಲು ಕಾರಣವಾಗಿರಬಹುದು ಎಂದು ಹೇಳಿದ್ದರು. ಆದರೆ, ಭಾರತದಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ 3ನೇ ಅವಧಿಗೆ 2024ರ ಚುನಾವಣೆಯಲ್ಲಿ ಗೆದ್ದು ಮೋದಿ ಮತ್ತೊಮ್ಮೆ ಪ್ರಧಾನಿಯಾಗಿದ್ದರು. ಹೀಗಾಗಿ, ಮಾರ್ಕ್ ಜುಕರ್​ಬರ್ಗ್ ಭಾರತದ ಚುನಾವಣೆಯ ಬಗ್ಗೆ ತಪ್ಪು ಹೇಳಿಕೆ ನೀಡಿದ್ದನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಖಂಡಿಸಿದ್ದರು. ಅಲ್ಲದೆ, ಮಾರ್ಕ್ ಜುಕರ್​ಬರ್ಗ್ ಭಾರತದ ಬಗ್ಗೆ ನೀಡಿದ ತಪ್ಪು ಹೇಳಿಕೆಗೆ ಭಾರತದ ಐಟಿ ಮತ್ತು ಸಂವಹನ ವ್ಯವಹಾರಗಳ ಸಂಸದೀಯ ಸಮಿತಿ ಮೆಟಾಗೆ ಸಮನ್ಸ್​ ನೀಡುವುದಾಗಿ ಘೋಷಿಸಿತ್ತು. ಆದರೆ, ಸಮನ್ಸ್ ನೀಡುವ ಮೊದಲೇ ಮೆಟಾ ಭಾರತ ಸರ್ಕಾರದ ಕ್ಷಮೆ ಯಾಚನೆ ಮಾಡಿದೆ.

ಇದನ್ನೂ ಓದಿ: ಕಾಂಗ್ರೆಸ್​ನ ಕೊಳಕು ಸತ್ಯ ಬಯಲು; ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆಗೆ ಬಿಜೆಪಿ ತಿರುಗೇಟು

ದಿ ಜೋ ರೋಗನ್ ಎಕ್ಸ್‌ಪೀರಿಯೆನ್ಸ್‌ನಲ್ಲಿ ಕಾಣಿಸಿಕೊಂಡ ಜುಕರ್‌ಬರ್ಗ್, ಕೊವಿಡ್-19 ಸಾಂಕ್ರಾಮಿಕ ರೋಗದ ನಂತರ ಭಾರತ ಸೇರಿದಂತೆ ಪ್ರಪಂಚದಾದ್ಯಂತದ ಸರ್ಕಾರಗಳು ಮತದಾರರ ನಂಬಿಕೆಯನ್ನು ಹೇಗೆ ಕಳೆದುಕೊಂಡವು ಎಂದು ಹೇಳಿದ್ದರು. 2024 ಪ್ರಪಂಚದಾದ್ಯಂತ ದೊಡ್ಡ ಚುನಾವಣಾ ವರ್ಷವಾಗಿತ್ತು. ಈ ಚುನಾವಣೆಗಳ ಮೇಲೆ ಕೊವಿಡ್​ನ ಪರಿಣಾಮವೇನೆಂಬುದನ್ನು ನಾವೆಲ್ಲರೂ ಗಮನಿಸಿದ್ದೇವೆ. ಭಾರತ ಸೇರಿದಂತೆ 2024ರಲ್ಲಿ ಚುನಾವಣೆಗಳನ್ನು ನಡೆಸಿದ ಹಲವಾರು ದೇಶಗಳಲ್ಲಿ ಅಧಿಕಾರದಲ್ಲಿರುವವರು ಅಧಿಕಾರ ಕಳೆದುಕೊಂಡರು ಎಂದು ಜುಕರ್​ಬರ್ಗ್ ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಜುಕರ್‌ಬರ್ಗ್ ಅವರ ಹೇಳಿಕೆಗಳನ್ನು ವಾಸ್ತವಿಕವಾಗಿ ತಪ್ಪು ಎಂದು ಕರೆದಿದ್ದರು. ಭಾರತದ 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಎನ್​ಡಿಎ ಗೆದ್ದಿದೆ. ನರೇಂದ್ರ ಮೋದಿ 3ನೇ ಬಾರಿ ಪ್ರಧಾನಿಯಾಗಿದ್ದಾರೆ. ಇದು ಮೋದಿಯವರ ನಾಯಕತ್ವದ ಮೇಲಿನ ಜನರ ನಂಬಿಕೆಯನ್ನು ಸೂಚಿಸುತ್ತದೆ ಎಂದು ಹೇಳಿದ್ದರು.

ಇದನ್ನೂ ಓದಿ: 2024ರ ಚುನಾವಣೆಯಲ್ಲಿ ಮೋದಿ ಸೋಲು; ಸುಳ್ಳು ಮಾಹಿತಿ ನೀಡಿದ ಮಾರ್ಕ್ ಜುಕರ್‌ಬರ್ಗ್ ಬಗ್ಗೆ ಅಶ್ವಿನಿ ವೈಷ್ಣವ್ ಟೀಕೆ

ಸಚಿವ ಅಶ್ವಿನಿ ವೈಷ್ಣವ್ ಟೀಕೆಗೆ ಪ್ರತಿಕ್ರಿಯೆಯಾಗಿ, ಮೆಟಾದ ಸಾರ್ವಜನಿಕ ನೀತಿಯ ಉಪಾಧ್ಯಕ್ಷ ಶಿವಂತ್ ತುಕ್ರಾಲ್ ಎಕ್ಸ್​ನಲ್ಲಿ ಪೋಸ್ಟ್ ಮಾಡಿ ಕ್ಷಮೆಯಾಚಿಸಿದ್ದಾರೆ. ಆತ್ಮೀಯ ಸಚಿವ ಅಶ್ವಿನಿ ವೈಷ್ಣವ್ ಅವರ ಪೋಸ್ಟ್ ಅನ್ನು ನಾವು ಗಮನಿಸಿದ್ದೇವೆ. 2024ರ ಚುನಾವಣೆಯಲ್ಲಿ ಅನೇಕ ಅಧಿಕಾರದಲ್ಲಿರುವ ಪಕ್ಷಗಳು ಮರು ಆಯ್ಕೆಯಾಗಿಲ್ಲ ಎಂಬ ಮಾರ್ಕ್ ಜುಕರ್​ಬರ್ಗ್ ಅವರ ಅಭಿಪ್ರಾಯವು ಹಲವಾರು ದೇಶಗಳ ವಿಷಯದಲ್ಲಿ ನಿಜವಾಗಿದೆ. ಆದರೆ ಭಾರತಕ್ಕೆ ಇದು ಅನ್ವಯಿಸುವುದಿಲ್ಲ. ಈ ಅಜಾಗರೂಕ ತಪ್ಪಿಗೆ ನಾವು ಕ್ಷಮೆಯಾಚಿಸುತ್ತೇವೆ. ಭಾರತವು ಮೆಟಾಗೆ ಬಹಳ ಪ್ರಮುಖ ದೇಶವಾಗಿ ಉಳಿದಿದೆ. ಭಾರತದ ಭವಿಷ್ಯದ ಹೃದಯಭಾಗದಲ್ಲಿರಲು ನಾವು ಎದುರು ನೋಡುತ್ತಿದ್ದೇವೆ ಎಂದು ಪೋಸ್ಟ್ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹಿಂದೆ ಇಂದಿರಾ ಗಾಂಧಿಯನ್ನು ಇಬ್ರಾಹಿಂ ಅವಾಚ್ಯ ಪದಗಳಿಂದ ನಿಂದಿಸಿದ್ದರು:ಶಾಸಕ
ಹಿಂದೆ ಇಂದಿರಾ ಗಾಂಧಿಯನ್ನು ಇಬ್ರಾಹಿಂ ಅವಾಚ್ಯ ಪದಗಳಿಂದ ನಿಂದಿಸಿದ್ದರು:ಶಾಸಕ
ಮಧ್ಯರಾತ್ರಿ ಬಿಗ್​ಬಾಸ್ ಮನೆಯಿಂದ ಹೊರ ಹೋದವರ್ಯಾರು?
ಮಧ್ಯರಾತ್ರಿ ಬಿಗ್​ಬಾಸ್ ಮನೆಯಿಂದ ಹೊರ ಹೋದವರ್ಯಾರು?
ಪಕ್ಷದಲ್ಲಿ ತಿಕ್ಕಾಟ ಇದ್ದೇ ಇರುತ್ತದೆ, ಅದರೆ ಅನ್ಯೋನ್ಯವಾಗಿದ್ದೇವೆ: ಶಾಸಕ
ಪಕ್ಷದಲ್ಲಿ ತಿಕ್ಕಾಟ ಇದ್ದೇ ಇರುತ್ತದೆ, ಅದರೆ ಅನ್ಯೋನ್ಯವಾಗಿದ್ದೇವೆ: ಶಾಸಕ
ಸರಿಗಮ ವಿಜಿ ಅಂತಿಮ ದರ್ಶನ, ಅಂತಿಮ ಸಂಸ್ಕಾರ ಇನ್ನಿತರೆ ಮಾಹಿತಿ
ಸರಿಗಮ ವಿಜಿ ಅಂತಿಮ ದರ್ಶನ, ಅಂತಿಮ ಸಂಸ್ಕಾರ ಇನ್ನಿತರೆ ಮಾಹಿತಿ
ತೆರಿಗೆ ಹಣ ಸಂಗ್ರಹದಲ್ಲೂ ಸರ್ಕಾರ ಭಾರೀ ಹಿಂದೆ ಬಿದ್ದಿದೆ: ಕುಮಾರಸ್ವಾಮಿ
ತೆರಿಗೆ ಹಣ ಸಂಗ್ರಹದಲ್ಲೂ ಸರ್ಕಾರ ಭಾರೀ ಹಿಂದೆ ಬಿದ್ದಿದೆ: ಕುಮಾರಸ್ವಾಮಿ
ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ
ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ
ಪ್ರಭಾಕರ್ ಜೊತೆ ಸರಿಗಮ ವಿಜಿಗೆ ಇತ್ತು ಒಳ್ಳೆಯ ಒಡನಾಟ
ಪ್ರಭಾಕರ್ ಜೊತೆ ಸರಿಗಮ ವಿಜಿಗೆ ಇತ್ತು ಒಳ್ಳೆಯ ಒಡನಾಟ
ಕಾಂಗ್ರೆಸ್​ನ ನೂತನ ಪ್ರಧಾನ​ ಕಚೇರಿ‘ಇಂದಿರಾ ಭವನ’ ಉದ್ಘಾಟಿಸಿದ ಸೋನಿಯಾ
ಕಾಂಗ್ರೆಸ್​ನ ನೂತನ ಪ್ರಧಾನ​ ಕಚೇರಿ‘ಇಂದಿರಾ ಭವನ’ ಉದ್ಘಾಟಿಸಿದ ಸೋನಿಯಾ
ಹೋಲಿ ಡಿಪ್ ಆಧ್ಯಾತ್ಮಿಕ ಅನುಭೂತಿಯನ್ನು ನೀಡುತ್ತದೆ: ರಷ್ಯನ್ ಮಹಿಳೆ
ಹೋಲಿ ಡಿಪ್ ಆಧ್ಯಾತ್ಮಿಕ ಅನುಭೂತಿಯನ್ನು ನೀಡುತ್ತದೆ: ರಷ್ಯನ್ ಮಹಿಳೆ
ನೂತನ ಎಐಸಿಸಿ ಕಟ್ಟಡಕ್ಕೆ ಇಂದಿರಾ ಗಾಂಧಿ ಭವನ್ ಎಂದು ಹೆಸರಿಡಲಾಗಿದೆ
ನೂತನ ಎಐಸಿಸಿ ಕಟ್ಟಡಕ್ಕೆ ಇಂದಿರಾ ಗಾಂಧಿ ಭವನ್ ಎಂದು ಹೆಸರಿಡಲಾಗಿದೆ