Fuel Price on November 1: ಕಳೆದ ಐದೂವರೆ ತಿಂಗಳಿನಿಂದ ಯಥಾಸ್ಥಿತಿಯಲ್ಲಿದ್ದ ಪೆಟ್ರೋಲ್ (Petrol Rate) ಮತ್ತು ಡೀಸೆಲ್ ಬೆಲೆ (Diesel Price) ಇಂದು ಕುಸಿತವಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ತುಸು ಇಳಿಕೆಯಾಗಿದ್ದು, ಇಂದಿನಿಂದ (ನವೆಂಬರ್ 1) ಹೊಸ ದರ ಜಾರಿಗೆ ಬರಲಿದೆ. ಮೇ 22ರಂದು ಕೇಂದ್ರ ಸರ್ಕಾರವು ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡಿತ್ತು. ಇದಾದ ನಂತರ ಇದೀಗ 40 ಪೈಸೆ ಇಳಿಕೆ ಮಾಡಿದ್ದು, ಇಂದು ಬೆಳಗ್ಗೆ 6 ಗಂಟೆಯಿಂದ ಹೊಸ ಬೆಲೆ ಜಾರಿಗೆ ಬಂದಿದೆ.
ಕಳೆದ 24 ಗಂಟೆಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ದೊಡ್ಡ ಕುಸಿತ ಕಂಡುಬಂದಿದೆ. ಇಂದು ಬೆಳಗ್ಗೆ ಬಿಡುಗಡೆ ಮಾಡಿದ ಇತ್ತೀಚಿನ ದರದಲ್ಲಿ ಸರ್ಕಾರಿ ತೈಲ ಕಂಪನಿಗಳು ಯುಪಿ ಮತ್ತು ಬಿಹಾರದ ಹಲವು ನಗರಗಳಲ್ಲಿ ತೈಲ ಬೆಲೆಯನ್ನು ಕಡಿಮೆ ಮಾಡಿವೆ. ಆದರೆ, ಇಂದಿಗೂ ದೆಹಲಿ-ಮುಂಬೈ ಸೇರಿದಂತೆ ದೇಶದ 4 ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಬೆಂಗಳೂರಿನಲ್ಲಿ ಇಂದಿನ ಪೆಟ್ರೋಲ್ ದರ 101.52 ರೂ. ಆಗಿದೆ. ಡಿಸೇಲ್ ಬೆಲೆ 87.47 ರೂ. ಆಗಿದೆ. ದೆಹಲಿಯಲ್ಲಿ ಪೆಟ್ರೋಲ್ 96.65 ರೂ ಮತ್ತು ಡೀಸೆಲ್ ಲೀಟರ್‌ಗೆ 89.82 ರೂ., ಮುಂಬೈನಲ್ಲಿ ಪೆಟ್ರೋಲ್ 106.31 ರೂ ಮತ್ತು ಡೀಸೆಲ್ ಲೀಟರ್‌ಗೆ 94.27 ರೂ., ಚೆನ್ನೈನಲ್ಲಿ ಪೆಟ್ರೋಲ್ 102.63 ರೂ ಮತ್ತು ಡೀಸೆಲ್ ಲೀಟರ್‌ಗೆ 94.24 ರೂ., ಕೋಲ್ಕತ್ತಾದಲ್ಲಿ ಪೆಟ್ರೋಲ್ 106.03 ರೂ ಮತ್ತು ಡೀಸೆಲ್ ಲೀಟರ್‌ಗೆ 92.76 ರೂ ಆಗಿದೆ. ಕಚ್ಚಾ ತೈಲದ ಬೆಲೆಯು ಕೆಲವು ಸಮಯದಿಂದ ಪ್ರತಿ ಬ್ಯಾರೆಲ್‌ಗೆ 95 ಡಾಲರ್‌ಗಿಂತ ಕಡಿಮೆಯಾಗಿದೆ. 5 ತಿಂಗಳಿಗೂ ಹೆಚ್ಚು ಕಾಲ ಸ್ಥಿರವಾಗಿ ಹಿಡಿದ ನಂತರ ಇಂಧನ ಬೆಲೆಯಲ್ಲಿ ಇಳಿಕೆಯಾಗಿದೆ.
ಇದನ್ನೂ ಓದಿ: Petrol Price Today: ಬೆಂಗಳೂರು, ಮುಂಬೈ ಸೇರಿದಂತೆ ದೇಶದ ವಿವಿಧೆಡೆ ಇಂದಿನ ಪೆಟ್ರೋಲ್ ಬೆಲೆ ಹೀಗಿದೆ
ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಹೊರಡಿಸಿದ ದರದ ಪ್ರಕಾರ, ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಜಿಲ್ಲೆಯಲ್ಲಿ (ನೋಯ್ಡಾ) ಪೆಟ್ರೋಲ್ 35 ಪೈಸೆಯಿಂದ 96.65 ರೂ.ಗೆ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 32 ಪೈಸೆಯಿಂದ 89.82 ರೂ.ಗೆ ಇಳಿದಿದೆ. ಇದಲ್ಲದೆ, ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 1 ಪೈಸೆಯಷ್ಟು ಕಡಿಮೆಯಾಗಿ 96.57 ರೂ.ಗೆ ಇಳಿದಿದೆ. ಡೀಸೆಲ್ ಬೆಲೆ ಲೀಟರ್‌ಗೆ 1 ಪೈಸೆ ಇಳಿದು 89.76 ರೂ.ಗೆ ತಲುಪಿದೆ. ಇಂದು ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅಗ್ಗವಾಗಿದೆ. ಇಲ್ಲಿ ಪೆಟ್ರೋಲ್ ದರ ಲೀಟರ್‌ಗೆ 82 ಪೈಸೆ ಇಳಿಕೆಯಾಗಿ 107.30 ರೂ.ಗೆ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 77 ಪೈಸೆ ಇಳಿಕೆಯಾಗಿ 94.09 ರೂ.ಗೆ ತಲುಪಿದೆ.
ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ. ಹೊಸ ದರಗಳು ಬೆಳಗ್ಗೆ 6 ಗಂಟೆಯಿಂದಲೇ ಅನ್ವಯವಾಗಲಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕ, ಡೀಲರ್ ಕಮಿಷನ್, ವ್ಯಾಟ್ ಮತ್ತು ಇತರ ವಸ್ತುಗಳನ್ನು ಸೇರಿಸಿದ ನಂತರ, ಅದರ ಬೆಲೆ ಮೂಲ ಬೆಲೆಗಿಂತ ಸುಮಾರು ಎರಡು ಪಟ್ಟು ಹೆಚ್ಚಾಗುತ್ತದೆ.
ಇದನ್ನೂ ಓದಿ: Petrol Price Today: ಮುಂಬೈನಲ್ಲಿ ಪೆಟ್ರೋಲ್ ಬೆಲೆ 5 ರೂ. ಇಳಿಕೆ; ಇತರೆ ರಾಜ್ಯಗಳ ಇಂದಿನ ಬೆಲೆ ಹೀಗಿದೆ
ಸರ್ಕಾರಿ ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪರಿಶೀಲಿಸಿದ ನಂತರ ದರವನ್ನು ನಿಗದಿಪಡಿಸುತ್ತವೆ. ನಿಮ್ಮ ನಗರದ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಪ್ರತಿದಿನ SMS ಮೂಲಕ ಪರಿಶೀಲಿಸಬಹುದು. ನೀವು ಇಂಡಿಯನ್ ಆಯಿಲ್‌ನ ಗ್ರಾಹಕರಾಗಿದ್ದರೆ, ನೀವು RSP ಡೀಲರ್ ಕೋಡ್ ಅನ್ನು ಬರೆಯುವ ಮೂಲಕ 9224992249 ಸಂಖ್ಯೆಗೆ SMS ಕಳುಹಿಸಬಹುದು ಮತ್ತು ನೀವು HPCL ಗ್ರಾಹಕರಾಗಿದ್ದರೆ ನೀವು HPPRICE ಡೀಲರ್ ಕೋಡ್ ಅನ್ನು ಟೈಪ್ ಮಾಡುವ ಮೂಲಕ 9222201122 ಸಂಖ್ಯೆಗೆ SMS ಕಳುಹಿಸಬಹುದು. BPCL ಗ್ರಾಹಕರು ಡೀಲರ್ ಕೋಡ್ ಅನ್ನು ನಮೂದಿಸುವ ಮೂಲಕ 9223112222ಗೆ RSP ಅನ್ನು ಕಳುಹಿಸಬಹುದು.