Petrol Price Today: ದೇಶದಲ್ಲಿ ಇಂಧನ ದರ ಸ್ಥಿರ; ವಿವಿಧ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ? ಇಲ್ಲಿದೆ ನೋಡಿ

| Updated By: shivaprasad.hs

Updated on: May 25, 2022 | 9:26 AM

Petrol price in Bengaluru | Diesel Price on 25.05.2022: ಮೇ 21ರ ಶನಿವಾರದಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 8 ರೂಪಾಯಿ ಮತ್ತು ಪ್ರತಿ ಲೀಟರ್ ಡೀಸೆಲ್ ಮೇಲೆ 6 ರೂಪಾಯಿ ಸುಂಕವನ್ನು ಇಳಿಸಿ ಕೇಂದ್ರ ಘೋಷಿಸಿತ್ತು. ಅದರ ನಂತರ ಇಂಧನ ದರದಲ್ಲಿ ವ್ಯತ್ಯಾಸವಾಗಿಲ್ಲ.

Petrol Price Today: ದೇಶದಲ್ಲಿ ಇಂಧನ ದರ ಸ್ಥಿರ; ವಿವಿಧ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ? ಇಲ್ಲಿದೆ ನೋಡಿ
ಪ್ರಾತಿನಿಧಿಕ ಚಿತ್ರ
Follow us on

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರದಂದು (ಮೇ.21) ಪೆಟ್ರೋಲ್ ಮೇಲಿನ ಸುಂಕವನ್ನು ಲೀಟರ್‌ಗೆ 8 ಮತ್ತು ಡೀಸೆಲ್‌ಗೆ 6 ರೂಪಾಯಿ ಕಡಿತಗೊಳಿಸುವುದಾಗಿ ಘೋಷಿಸಿದ್ದರು. ಇದರಿಂದ ದೇಶದಲ್ಲಿ ಇಂಧನ ದರ ಕಡಿಮೆಯಾಗಿತ್ತು. ನಂತರದಲ್ಲಿ ಇಂಧನ ದರದಲ್ಲಿ ವ್ಯತ್ಯಾಸಗಳು ಕಂಡುಬಂದಿಲ್ಲ. ದೇಶದ ಪ್ರಮುಖ ನಗರಗಳಲ್ಲಿ ಇಂದು (ಮೇ.25) ಪೆಟ್ರೋಲ್ (Petrol Price), ಡೀಸೆಲ್​ ದರ (Diesel Price) ಸ್ಥಿರವಾಗಿದ್ದು, ದೆಹಲಿ, ಬೆಂಗಳೂರು, ಮುಂಬೈ ಮೊದಲಾದ ನಗರಗಳಲ್ಲಿ ಬೆಲೆ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ. ಬೆಂಗಳೂರಿನಲ್ಲಿ ಲೀಟರ್​ ಪೆಟ್ರೋಲ್​ಗೆ 101.94 ರೂ ಇದ್ದು, ಡೀಸೆಲ್ ಪ್ರತಿ ಲೀಟರ್‌ಗೆ 87.89 ರೂ ದಾಖಲಾಗಿದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 111.35 ರೂ ಹಾಗೂ ಡೀಸೆಲ್ ಬೆಲೆ ಪ್ರತಿ ಲೀಟರ್​ಗೆ 97.28 ರೂ ಇದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ ರೂ 96.72 ಇದ್ದು, ಡೀಸೆಲ್ ಪ್ರತಿ ಲೀಟರ್‌ಗೆ ರೂ 89.62 ದಾಖಲಾಗಿದೆ.

ದೇಶದ ವಿವಿಧ ನಗರಗಳಲ್ಲಿ ಇಂಧನ ದರ ಎಷ್ಟಿದೆ?

ಚೆನ್ನೈ: ಪೆಟ್ರೋಲ್: ಲೀಟರ್‌ಗೆ 102.63 ರೂ, ಡೀಸೆಲ್: ಲೀಟರ್‌ಗೆ 94.24 ರೂ

ಇದನ್ನೂ ಓದಿ
INR USD Exchange Rate: ಅಮೆರಿಕ ಡಾಲರ್ ವಿರುದ್ಧ ಭಾರತದ ರೂಪಾಯಿ ಮೇ 24ಕ್ಕೆ ಯಾವ ದೇಶದ ವಿರುದ್ಧ ಎಷ್ಟಿದೆ?
Jobs: 2023ರಲ್ಲಿ ಪ್ರತಿ ಐವರಲ್ಲಿ ಒಬ್ಬರು ಹೊಸ ಕೆಲಸ ಹುಡುಕುವ ಸಾಧ್ಯತೆ ಎನ್ನುತ್ತಿದೆ ಈ ಸಮೀಕ್ಷೆ
Gold Price Today: ಇದ್ದಕ್ಕಿದ್ದಂತೆ ಭಾರೀ ಏರಿಕೆ ಕಂಡ ಚಿನ್ನದ ಬೆಲೆ; ಬೆಳ್ಳಿ ದರ 500 ರೂ. ಕುಸಿತ
ಗುಣಮಟ್ಟದ ವ್ಯವಹಾರಕ್ಕಾಗಿ ‘ISO’ ಪ್ರಮಾಣೀಕರಣ ಪಡೆಯಿರಿ, ಇದರ ಅನುಕೂಲಗಳು ಇಲ್ಲಿವೆ ನೋಡಿ

ಕೋಲ್ಕತ್ತಾ: ಪೆಟ್ರೋಲ್: ಲೀಟರ್‌ಗೆ 106.03 ರೂ, ಡೀಸೆಲ್: 92.76 ರೂ

ಲಕ್ನೋ: ಪೆಟ್ರೋಲ್: ಪ್ರತಿ ಲೀಟರ್‌ಗೆ ₹ 96.57, ಡೀಸೆಲ್: ಪ್ರತಿ ಲೀಟರ್‌ಗೆ ₹ 89.76

ನೋಯ್ಡಾ: ಪ್ರತಿ ಲೀಟರ್ ಪೆಟ್ರೋಲ್: ₹ 96.79, ಡೀಸೆಲ್: ₹ 89.96 ಪ್ರತಿ ಲೀಟರ್

ಗುರುಗ್ರಾಮ್: ಪ್ರತಿ ಲೀಟರ್ ಪೆಟ್ರೋಲ್: ₹ 97.18, ಡೀಸೆಲ್: ₹ 90.05 ಪ್ರತಿ ಲೀಟರ್

ಚಂಡೀಗಢ: ಪೆಟ್ರೋಲ್: ಪ್ರತಿ ಲೀಟರ್‌ಗೆ ₹ 96.20, ಡೀಸೆಲ್: ಪ್ರತಿ ಲೀಟರ್‌ಗೆ ₹ 84.26

ಇಂಧನ ದರದ ಕುರಿತು ಮತ್ತಷ್ಟು ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪರಿಷ್ಕರಣೆ:

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಿಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್​ಪಿಸಿಎಲ್) ಇಂಧನ ಬೆಲೆಗಳನ್ನು ಪ್ರತಿದಿನ ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ವಿದೇಶಿ ವಿನಿಮಯ ದರಗಳೊಂದಿಗೆ ಪರಿಷ್ಕರಿಸುತ್ತವೆ. ಆ ಮೂಲಕ ವಿದೇಶಿ ವಿನಿಮಯ ದರಗಳ ಜತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳು ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ