AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಸ್ಟಾರ್ಟಪ್​ಗಳಿಗೆಂದೇ ಹೊಸ ಅಡ್ಡೆ ನಿರ್ಮಿಸಲು ಪ್ಲಾನ್; ಸ್ಟಾರ್ಟಪ್ ನಗರಿ ಎಂಬ ಬೆಂಗಳೂರಿನ ಗರಿ ಕಳಚುತ್ತಾ?

Piyush Goyal wants new township to be built for startups: ಭಾರತದಲ್ಲಿ ಅತಿಹೆಚ್ಚು ಸ್ಟಾರ್ಟಪ್​ಗಳಿರುವ ಮತ್ತು ಪ್ರಮುಖ ಉದ್ದಿಮೆಗಳು ನೆಲಸಿರುವ ಬೆಂಗಳೂರು ಬಿಟ್ಟು ಬೇರೆಡೆ ಹೊಚ್ಚಹೊಸ ಸ್ಟಾರ್ಟಪ್ ಟೌನ್​ಶಿಪ್ ನಿರ್ಮಿಸುವ ಆಲೋಚನೆಯನ್ನು ಕೇಂದ್ರ ಸಚಿವ ಪೀಯೂಶ್ ಗೋಯಲ್ ತೋರ್ಪಡಿಸಿದ್ದಾರೆ. ಈ ಅಡ್ಡೆಯಲ್ಲಿ ಯಾವುದೇ ಸ್ಟಾರ್ಟಪ್ ಐಡಿಯಾ ಇರುವವರು ಬಂದು ನೆರವು ಪಡೆಯಲು ಸಾಧ್ಯವಾಗುವಂತಾಗಬೇಕು ಎನ್ನುವುದು ಸಚಿವರ ಅನಿಸಿಕೆ.

ಭಾರತದಲ್ಲಿ ಸ್ಟಾರ್ಟಪ್​ಗಳಿಗೆಂದೇ ಹೊಸ ಅಡ್ಡೆ ನಿರ್ಮಿಸಲು ಪ್ಲಾನ್; ಸ್ಟಾರ್ಟಪ್ ನಗರಿ ಎಂಬ ಬೆಂಗಳೂರಿನ ಗರಿ ಕಳಚುತ್ತಾ?
ಪೀಯೂಶ್ ಗೋಯಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 17, 2024 | 4:55 PM

Share

ನವದೆಹಲಿ, ಸೆಪ್ಟೆಂಬರ್ 17: ಭಾರತದಲ್ಲಿ ಸ್ಟಾರ್ಟಪ್​ಗಳ ಅನುಕೂಲತೆಗೆ ಹೊಸ ಟೌನ್​ಶಿಪ್ ಸ್ಥಾಪಿಸಲು ಸರ್ಕಾರ ಯೋಜಿಸುತ್ತಿದೆ. ನಿನ್ನೆ ಸೋಮವಾರ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಸಚಿವ ಪೀಯೂಶ್ ಗೋಯಲ್, ಹೊಚ್ಚ ಹೊಸ ಸ್ಥಳದಲ್ಲಿ ಸ್ಟಾರ್ಟಪ್​ಗಳಿಗೆ ಸರ್ವೋಪಯೋಗಿ ಎನಿಸುವ ಅಡ್ಡೆಯೊಂದನ್ನು ನಿರ್ಮಿಸುವ ಪ್ರಸ್ತಾಪ ಮಾಡಿದ್ದಾರೆ. ಭಾರತದ್ದೇ ಒಂದು ಸಿಲಿಕಾನ್ ವ್ಯಾಲಿ ನಿರ್ಮಿಸುವ ಮಾತುಗಳನ್ನಾಡಿದ್ದಾರೆ. ಹಾಗಾದರೆ, ಸಿಲಿಕಾನ್ ಸಿಟಿ ಎನಿಸಿರುವ ಬೆಂಗಳೂರು ಪ್ರಾಧಾನ್ಯತೆ ಕಳೆದುಕೊಳ್ಳುತ್ತಾ?

‘ನಾವು ಸೀಮೆ ದಾಟಿ ಹೋಗುವುದು ಆಕಾಂಕ್ಷೆಯಾಗಬೇಕು. ನಮ್ಮದೇ ಆದಂಥ ಸಿಲಿಕಾನ್ ವ್ಯಾಲಿ ಸ್ಥಾಪಿಸಲು ಬಯಸಬೇಕು. ಬೆಂಗಳೂರು ಭಾರತದ ಸಿಲಿಕಾನ್ ವ್ಯಾಲಿ ಎನಿಸಿರುವುದು ನನಗೆ ಗೊತ್ತು. ಆದರೆ, ನ್ಯಾಷನಲ್ ಇನ್​ಫ್ರಾಸ್ಕ್ರಕ್ಚರ್ ಕಾರಿಡಾರ್ ಡೆವಲಪ್ಮೆಂಟ್ ಕಾರ್ಪೊರೇಶನ್ ಜೊತೆಗೂಡಿ ಆಂಟ್ರಪ್ರನ್ಯೂರ್​ಗಳು, ಸ್ಟಾರ್ಟಪ್​ಗಳು, ಇನ್ನೋವೇಟರ್​ಗಳು ಮತ್ತು ಡಿಸ್ರಪ್ಟರ್​ಗಳಿಗೆಂದೇ ಕೇಂದ್ರಿತವಾಗಿರುವ ಹೊಸ ಟೌನ್​ಶಿಪ್​ವೊಂದನ್ನು ಸ್ಥಾಪಿಸಲು ಯೋಜಿಸುವ ಸಮಯ ಬಂದಿದೆ’ ಎಂದು ಪಿಯೂಶ್ ಗೋಯಲ್ ಹೇಳಿದ್ದಾರೆ.

ಇದನ್ನೂ ಓದಿ: ಅನಿಲ್ ಅಂಬಾನಿಯ ಎರಡು ಕಂಪನಿಗಳ ಷೇರುಬೆಲೆ ಏರುಗತಿಯಲ್ಲಿ; ರಿಲಾಯನ್ಸ್ ಪವರ್​ಗೆ ಸಿಕ್ಕಿದೆ ಹೊಸ ಗುತ್ತಿಗೆ

ಕೇಂದ್ರ ಸಚಿವರು ಯಾವ ರಾಜ್ಯದಲ್ಲಿ ಅಥವಾ ನಗರದಲ್ಲಿ ಅವರ ಪರಿಕಲ್ಪನೆಯ ಸಿಲಿಕಾನ್ ವ್ಯಾಲಿ ಸ್ಥಾಪನೆಯಾಗಬೇಕು ಎಂದು ತಿಳಿಸಲಿಲ್ಲ. ಆದರೆ, 500 ಎಕರೆ ಪ್ರದೇಶದಲ್ಲಿ ಈ ಸ್ಟಾರ್ಟಪ್ಸ್ ಅಡ್ಡೆ ಇರಬೇಕು ಎನ್ನುವುದು ಅವರ ಸಲಹೆ.

‘ಇಡೀ 200 ಎಕರೆ, ಅಥವಾ 100 ಅಥವಾ 500 ಎಕರೆ ಪ್ರದೇಶದಲ್ಲಿ ಒಂದು ಸೊಸೈಟಿ ನಿರ್ಮಿಸಲು ಸಾಧ್ಯವಾ. ಎಲ್ಲಾ ರೀತಿಯ ನೆರವು ಸಿಗಬಲ್ಲಂತಹ ಇಂದು ಇಕೋ ಸಿಸ್ಟಂ ತಯಾರಿಸಲು ಸಾಧ್ಯವಾ… ಅಥವಾ ಹಿಂದೆಲ್ಲಾ ಜನರು ಮುಂಬೈಗೆ ಕೆಲಸ ಅರಸಿ ಬರುತ್ತಿರುವ ರೀತಿಯಲ್ಲಿ, ಯಾರಾದರೂ ಕೂಡ ಯಾವುದೂ ಸ್ಟಾರ್ಟಪ್ ಐಡಿಯಾವನ್ನು ತಲೆಯಲ್ಲಿ ಇಟ್ಟುಕೊಂಡು ದೂರದ ಜಾಗದಿಂದ ಬಂದು ನೆರವು ಪಡೆಯಲು ಸಾಧ್ಯವಾಗುವಂತಹ ಸ್ಥಳ ನಿರ್ಮಿಸಲು ಸಾಧ್ಯವಾ, ಆ ನಿಟ್ಟಿನಲ್ಲಿ ಯೋಚಿಸಬೇಕು,’ ಎಂದು ಪೀಯೂಶ್ ಗೋಯಲ್ ತಮ್ಮ ಮನದ ಅಭಿಪ್ರಾಯವನ್ನು ತೋರ್ಪಡಿಸಿದ್ದಾರೆ.

ಇದನ್ನೂ ಓದಿ: 1,900 ಕೋಟಿ ರೂಗೆ ಕಟ್ಟಿದ ರಸ್ತೆಗೆ 8,000 ಕೋಟಿ ರೂ ಟೋಲ್? ನಿತಿನ್ ಗಡ್ಕರಿ ಉತ್ತರ ಇದು

ಭಾರತದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ನೊಂದಾಯಿತ ಸ್ಟಾರ್ಟಪ್​ಗಳಿವೆ. ಬೆಂಗಳೂರಿನಲ್ಲೇ ಅತಿಹೆಚ್ಚು ಸ್ಟಾರ್ಟಪ್​ಗಳು ನೆಲಸಿವೆ. ಬಹಳ ವೈಬ್ರೆಂಟ್ ಆದ ಸ್ಟಾರ್ಟಪ್ ಇಕೋಸಿಸ್ಟಂಗಳನ್ನು ಹೊಂದಿರುವ ದೇಶಗಳಲ್ಲಿ ಭಾರತವೂ ಒಂದು. ಹೊಸ ಉದ್ದಿಮೆಗಳ ಉತ್ತೇಜನಕ್ಕೆ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ಬಿಸಿನೆಸ್ ವಾತಾವರಣ ಸುಲಭಗೊಳಿಸಲು ಭಾಸ್ಕರ್ ಪೋರ್ಟಲ್ ಸೇರಿದಂತೆ ಬಹಳಷ್ಟು ಪ್ರಯತ್ನಗಳು ಸರ್ಕಾರದ ವತಿಯಿಂದ ಆಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ
ಇದು ಯಾವ ಸೀಮೆಯ ಬೌಲಿಂಗ್: ಪಾಕ್ ಸ್ಪಿನ್ನರ್ ಶೈಲಿಗೆ ಗ್ರೀನ್​ ಆಕ್ರೋಶ
ಇದು ಯಾವ ಸೀಮೆಯ ಬೌಲಿಂಗ್: ಪಾಕ್ ಸ್ಪಿನ್ನರ್ ಶೈಲಿಗೆ ಗ್ರೀನ್​ ಆಕ್ರೋಶ
ಬಲೂಚ್ ಬಂಡುಕೋರರು ನಡೆಸಿದ ದಾಳಿಯಲ್ಲಿ 80ಕ್ಕೂ ಹೆಚ್ಚು ಪಾಕ್ ಸೈನಿಕರು ಸಾವು
ಬಲೂಚ್ ಬಂಡುಕೋರರು ನಡೆಸಿದ ದಾಳಿಯಲ್ಲಿ 80ಕ್ಕೂ ಹೆಚ್ಚು ಪಾಕ್ ಸೈನಿಕರು ಸಾವು
ಇಂದೇ ಮಾಘ ಹುಣ್ಣಿಮೆ ಇದರ ಮಹತ್ವ ತಿಳಿದುಕೊಳ್ಳಿ
ಇಂದೇ ಮಾಘ ಹುಣ್ಣಿಮೆ ಇದರ ಮಹತ್ವ ತಿಳಿದುಕೊಳ್ಳಿ