ನವದೆಹಲಿ, ಏಪ್ರಿಲ್ 1: ಹೊಸ ಹಣಕಾಸು ವರ್ಷದ ಮೊದಲ ದಿನದಂದು ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್ಫರ್ ಅಥವಾ ಎನ್ಇಎಫ್ಟಿ (NEFT) ಹಣ ವಹಿವಾಟು ಇರುವುದಿಲ್ಲ ಎಂದು ಎಚ್ಡಿಎಫ್ಸಿ ಬ್ಯಾಂಕ್ ತನ್ನ ಗ್ರಾಹಕರಿಗೆ ತಿಳಿಸಿದೆ. ಹೊಸ ಹಣಕಾಸು ವರ್ಷ ಆರಂಭದ ಹಿನ್ನೆಲೆಯಲ್ಲಿ ಕೆಲ ವಿಧಾನಗಳ (procedures) ಕಾರಣಕ್ಕೆ ಎನ್ಇಎಫ್ಟಿ ಟ್ರಾನ್ಸಾಕ್ಷನ್ ಲಭ್ಯ ಇರುವುದಿಲ್ಲ ಎನ್ನಲಾಗಿದೆ. ಕೆಲ ಆಯ್ದ ಗ್ರಾಹಕರಿಗೆ ಎನ್ಇಎಫ್ಟಿ ಟ್ರಾನ್ಸಾಕ್ಷನ್ ಸಾಧ್ಯವಾದರೂ ಕೂಡ ಹಣ ವರ್ಗಾವಣೆ ವಿಳಂಬವಾಗುತ್ತದೆ. ಹೀಗಾಗಿ, ಇವತ್ತು ಗ್ರಾಹಕರು ಎನ್ಇಎಫ್ಟಿ ಬಳಕೆ ಸಾಧ್ಯವಾದಷ್ಟೂ ಕೈಬಿಡುವುದು ಉತ್ತಮ. ಆದರೆ, ಬೇರೆ ಮಾದರಿಯ ಪಾವತಿ ವ್ಯವಸ್ಥೆಯನ್ನು ಬಳಸಲು ಯಾವ ಅಡ್ಡಿ ಇರುವುದಿಲ್ಲ.
ಎಚ್ಡಿಎಫ್ಸಿ ಗ್ರಾಹಕರಿಗೆ ಎನ್ಇಎಫ್ಟಿ ಪಾವತಿ ವಿಧಾನ ಏಪ್ರಿಲ್ ಒಂದರಂದು ಅಲಭ್ಯ ಇದ್ದರೂ ಐಎಂಪಿಎಸ್, ಆರ್ಟಿಜಿಎಸ್ ಪಾವತಿ ವಿಧಾನಗಳು ಲಭ್ಯ ಇರುತ್ತವೆ. ಯುಪಿಐ ಮೂಲಕವೂ ಹಣದ ವಹಿವಾಟು ನಡೆಸಬಹುದು.
‘ಹಣಕಾಸು ವರ್ಷಾಂತ್ಯದ ವಿಧಿವಿಧಾನಗಳ ಕಾರಣಕ್ಕೆ ಎನ್ಇಎಫ್ಟಿ ವಹಿವಾಟು ಸಾಧ್ಯವಾಗದೇ ಹೋಗಬಹುದು, ಅಥವಾ ವಿಳಂಬಗೊಳ್ಳಬಹುದು. ಈ ಅವಧಿಯಲ್ಲಿ ಐಎಂಪಿಎಸ್, ಆರ್ಟಿಜಿಎಸ್ ಅಥವಾ ಯುಪಿಐ ಮೂಲಕ ವಹಿವಾಟು ನಡೆಸಬೇಕೆಂದು ಕೋರುತ್ತೇವೆ. ಈ ವೇಳೆ ನಿಮಗೆ ತೊಂದರೆ ಆಗಿದ್ದರೆ ವಿಷಾದಿಸುತ್ತೇವೆ,’ ಎಂದು ಎಚ್ಡಿಎಫ್ಸಿ ಬ್ಯಾಂಕ್ ತನ್ನ ಎಲ್ಲಾ ಗ್ರಾಹಕರಿಗೆ ಇಮೇಲ್ ಮೂಲಕ ಅಲರ್ಟ್ ಮಾಡಿದೆ.
ಇದನ್ನೂ ಓದಿ: ಏಪ್ರಿಲ್ 1ರಿಂದ ಆದಾಯ ತೆರಿಗೆ ಹಾಗೂ ಹಣಕಾಸು ನಿಯಮಗಳಲ್ಲಿ ಈ ಪ್ರಮುಖ ಬದಲಾವಣೆಗಳಿವೆ, ಗಮನಿಸಿ
ಏಪ್ರಿಲ್ 1ರಂದು ಎಚ್ಡಿಎಫ್ಸಿ ಬ್ಯಾಂಕ್ ಕಡೆಯಿಂದ ಹಣ ವರ್ಗಾವಣೆ ಮಾಡಲು ಯಾರಿಗಾದರೂ ಸಮಸ್ಯೆ ಎದುರಾದರೆ ಈ ಕೆಳಗಿನ ಸಹಾಯವಾಣಿ ನಂಬರ್ ಡಬಲ್ ಮಾಡಬಹುದು:
ಹಣಕಾಸು ವರ್ಷ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ವಾರ್ಷಿಕ ಲೆಕ್ಕ ಮುಕ್ತಾಯಗೊಳಿಸುವ ಪ್ರಕ್ರಿಯೆ ಇರುವುದರಿಂದ ಏಪ್ರಿಲ್ 1ರಂದು ಬ್ಯಾಂಕುಗಳು ಸಾರ್ವಜನಿಕ ಸೇವೆಗೆ ಲಭ್ಯ ಇರುವುದಿಲ್ಲ. ಹಿಮಾಚಲಪ್ರದೇಶ, ಬಂಗಾಳ ಮೊದಲಾದ ಐದಾರು ರಾಜ್ಯಗಳನ್ನು ಬಿಟ್ಟು ಉಳಿದೆಡೆ ಬ್ಯಾಂಕ್ ಬಂದ್ ಆಗಿರುತ್ತವೆ.
ಇದನ್ನೂ ಓದಿ: ಚಿನ್ನ ವರ್ಸಸ್ ಷೇರು, 2023-24ರಲ್ಲಿ ಹೆಚ್ಚು ಲಾಭ ತಂದಿದ್ದು ಯಾವುದು? ಇಂಟ್ರೆಸ್ಟಿಂಗ್ ವಿಷಯ
ಇಂದು ಏಪ್ರಿಲ್ 1ರಂದು ಎರಡು ಸಾವಿರ ರೂ ಮುಖಬೆಲೆಯ ನೋಟುಗಳನ್ನು ಹಿಂದಿರುಗಿಸಲು ಅಥವಾ ಡೆಪಾಸಿಟ್ ಮಾಡಲು ಅವಕಾಶ ಇರುವುದಿಲ್ಲ ಎಂದು ಆರ್ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ