
ನವದೆಹಲಿ, ಮೇ 24: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi Yojana) ಆರಂಭವಾಗಿ ಆರಕ್ಕೂ ಹೆಚ್ಚು ವರ್ಷಗಳಾಗಿದ್ದು, ಇದು ವಿಶ್ವದ ಅತಿದೊಡ್ಡ ಡಿಬಿಟಿ ಸ್ಕೀಮ್ ಎನಿಸಿದೆ. ಅತಿಹೆಚ್ಚು ಜನರಿಗೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಮೂಲಕ ಹಣ ವರ್ಗಾವಣೆ ಮಾಡಲಾಗುತ್ತದೆ. ರೈತರ ವ್ಯವಸಾಯಕ್ಕೆ ಸಹಾಯಧನ ನೀಡಲೆಂದು ಶುರುವಾದ ಈ ಯೋಜನೆಯಲ್ಲಿ ಈವರೆಗೂ ಫಲಾನುಭವ ಪಡೆದಿರುವವರ ಸಂಖ್ಯೆ 11 ಕೋಟಿಗೂ ಅಧಿಕ ಇದೆ. ಸದ್ಯ 9.46 ಕೋಟಿ ಜನರು ಇದರ ಫಲಾನುಭವ ಪಡೆಯುತ್ತಿದ್ದಾರೆ.
ಈ ಯೋಜನೆಯಲ್ಲಿ ಕೇಂದ್ರ ಸರ್ಕಾರ ವರ್ಷಕ್ಕೆ ಮೂರು ಕಂತುಗಳಲ್ಲಿ ಒಟ್ಟು 6,000 ರೂ ಅನ್ನು ಫಲಾನುಭವಿ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡುತ್ತದೆ. ಇಲ್ಲಿಯವರೆಗೆ 22 ಕಂತುಗಳನ್ನು ಬಿಡುಗಡೆ ಮಾಡಲಾಗಿದೆ. 2026ರ ಮಾರ್ಚ್ 13ರಂದು ಕೊನೆಯ ಕಂತು ಬಿಡುಗಡೆಯಾಗಿದ್ದು. 23ನೇ ಕಂತು 2026ರ ಜೂನ್ ಅಥವಾ ಜುಲೈನಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ: ಹತ್ತು ದಿನಗಳಲ್ಲಿ ಮೂರನೇ ಬಾರಿಗೆ ಪೆಟ್ರೋಲ್, ಡೀಸೆಲ್ ದರ ಏರಿಕೆ, ಬೆಂಗಳೂರಲ್ಲಿಎಷ್ಟಿದೆ?
ಪಿಎಂ ಕಿಸಾನ್ ಸ್ಕೀಮ್ನಲ್ಲಿ ದೇಶಾದ್ಯಂತ ಸದ್ಯ 9.46 ಕೋಟಿ ಫಲಾನುಭವಿಗಳಿದ್ದು, ಇದರಲ್ಲಿ ಕರ್ನಾಟಕದ 44-45 ಲಕ್ಷ ಮಂದಿ ರೈತರು ನೊಂದಾಯಿಸಿಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ರಾಜ್ಯದಲ್ಲಿ ಎರಡು ಕೋಟಿಗೂ ಅಧಿಕ ಫಲಾನುಭವಿಗಳಿದ್ದಾರೆ. ಇದರಲ್ಲಿ ಯುಪಿ ನಂಬರ್ ಒನ್. ಕೇರಳದಲ್ಲಿ ತಮಿಳುನಾಡಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪಿಎಂ ಕಿಸಾನ್ ಪ್ರಯೋಜನ ಪಡೆಯುತ್ತಿದ್ದಾರೆ. ಈ ಸ್ಕೀಮ್ನಲ್ಲಿ ಅತಿಹೆಚ್ಚು ಫಲಾನುಭವಿಗಳನ್ನು ಹೊಂದಿರುವ ರಾಜ್ಯಗಳಿವು:
ಇದನ್ನೂ ಓದಿ: ದೇಶದ ಅರ್ಧದಷ್ಟು ಜಿಡಿಪಿಗೆ ಹೊಟ್ಟೆ ತುಂಬಿಸುತ್ತಿರೋದು ಕರ್ನಾಟಕ ಸೇರಿ 5 ರಾಜ್ಯಗಳು ಮಾತ್ರ; ಇಲ್ಲಿವೆ ವರದಿಯ ಅಂಶಗಳು
ಸ್ವಂತ ಕೃಷಿ ಜಮೀನು ಹೊಂದಿರುವ ಯಾವುದೇ ಭಾರತೀಯ ರೈತರು ಈ ಯೋಜನೆಗೆ ಅರ್ಹರಾಗಿರುತ್ತಾರೆ. ಆದರೆ, ಕೆಲ ಷರತ್ತುಗಳಿವೆ. ಒಂದು ಕುಟುಂಬದಲ್ಲಿ ಒಬ್ಬರೇ ಫಲಾನುಭವಿ ಇರಲು ಸಾಧ್ಯ. ಕುಟುಂಬದಲ್ಲಿ ಇಬ್ಬರ ಹೆಸರಲ್ಲಿ ಜಮೀನು ಇದ್ದರೂ ಒಬ್ಬರಿಗೆ ಮಾತ್ರ ಸಿಗುತ್ತದೆ. ಆದಾಯ ತೆರಿಗೆ ಪಾವತಿದಾರರು, ವೃತ್ತಿಪರರು, ಸರ್ಕಾರಿ ಉದ್ಯೋಗಿಗಳು, ಪಿಂಚಣಿದಾರರು, ಶಾಸಕರು, ಸಂಸದರು ಮೊದಲಾದವರು ಸ್ವಂತ ಕೃಷಿಭೂಮಿ ಹೊಂದಿದ್ದರೂ ಅವರು ಫಲಾನಭವಕ್ಕೆ ಅರ್ಹರಾಗಿರುವುದಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:33 am, Sun, 24 May 26