PM Kisan 17th installment: ಪಿಎಂ ಕಿಸಾನ್ 17ನೇ ಕಂತು ಬಂತು; 20,000 ಕೋಟಿ ರೂ ಹಣ ಬಿಡುಗಡೆ

PM Kisan Scheme 17th Installment Released: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ 17ನೇ ಕಂತಿನ ಹಣ ಬಿಡುಗಡೆ ಆಗಿದೆ. ಪ್ರಧಾನಿಗಳು ಇಂದು ಸೋಮವಾರ (ಜೂನ್ 10) ಒಟ್ಟು 20,000 ಕೋಟಿ ರೂ ಹಣ ಬಿಡುಗಡೆ ಮಾಡಲು ಕಡತಕ್ಕೆ ಸಹಿಹಾಕಿದ್ದಾರೆ. ಮೂರನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅವರು ತೆಗೆದುಕೊಂಡ ಮೊದಲ ಕ್ರಮ ಇದು. ಒಂಬತ್ತು ಕೋಟಿಗೂ ಹೆಚ್ಚು ಸಂಖ್ಯೆಯ ಫಲಾನುಭವಿಗಳ ಬ್ಯಾಂಕ್ ಖಾತೆಗೆ 2,000 ರೂ ಹಣ ಜಮೆ ಆಗಲಿದೆ.

PM Kisan 17th installment: ಪಿಎಂ ಕಿಸಾನ್ 17ನೇ ಕಂತು ಬಂತು; 20,000 ಕೋಟಿ ರೂ ಹಣ ಬಿಡುಗಡೆ
ನರೇಂದ್ರ ಮೋದಿ
Follow us
|

Updated on: Jun 10, 2024 | 12:47 PM

ನವದೆಹಲಿ, ಜೂನ್ 10: ರೈತರಿಗೆ ವ್ಯವಸಾಯಕ್ಕೆ ಧನಸಹಾಯವಾಗುವ ಪಿಎಂ ಕಿಸಾನ್ ಯೋಜನೆಯಲ್ಲಿ (PM Kisan Samman Nidhi Yojana) 17ನೇ ಕಂತಿನ ಹಣ ಬಿಡುಗಡೆ ಆಗಿದೆ. ಮೂರನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನರೇಂದ್ರ ಮೋದಿ ಕೈಗೊಂಡ ಮೊದಲ ಕ್ರಮ ಇದು ಎಂಬುದು ವಿಶೇಷ. ಇಂದು ಪ್ರಧಾನಿಗಳು ಪಿಎಂ ಕಿಸಾನ್ ನಿಧಿಯ ಹಣ ವಿಲೇವಾರಿ ಕಡತಕ್ಕೆ ಸಹಿಹಾಕಿದ್ದಾರೆ. ಇದರೊಂದಿಗೆ 9.3 ಕೋಟಿ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ 17ನೇ ಕಂತಿನ ಹಣವಾದ 2,000 ಕೋಟಿ ರೂ ಜಮೆಯಾಗಲಿದೆ. ಸರ್ಕಾರ ಒಟ್ಟು 20,000 ಕೋಟಿ ರೂ ಹಣವನ್ನು ಬಿಡುಗಡೆ ಮಾಡಿದೆ.

ನೀವು ಪಿಎಂ ಕಿಸಾನ್ ಯೋಜನೆಯ ಫಲಾನುಭವಿಯಾಗಿದ್ದರೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂದಿದೆಯಾ ಎಂದು ಖಾತ್ರಿಪಡಿಸಿಕೊಳ್ಳಿ. ಕೆಲವೊಮ್ಮೆ ಖಾತೆಗೆ ಹಣ ಜಮೆ ಆಗಲು ಒಂದು ವಾರದವರೆಗೂ ಸಮಯ ಆಗಬಹುದು. ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ನೀವಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಕೆಳಗಿನ ಕ್ರಮ ಅನುಸರಿಸಿ:

  • ಪಿಎಂ ಕಿಸಾನ್ ಯೋಜನೆಯ ವೆಬ್​ಸೈಟ್​ಗೆ ಹೋಗಿ: pmkisan.gov.in/
  • ಇಲ್ಲಿ ಕೆಳಗೆ ತುಸು ಸ್ಕ್ರಾಲ್ ಮಾಡಿದರೆ ಫಾರ್ಮರ್ಸ್ ಕಾರ್ನರ್ ಕಾಣಬಹುದು. ಅದರಲ್ಲಿ ಬೆನಿಫಿಶಿಯರಿ ಲಿಸ್ಟ್ ಅನ್ನು ಕ್ಲಿಕ್ ಮಾಡಿ
  • ಇದರಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು, ಊರನ್ನು ಆಯ್ದುಕೊಳ್ಳಿ.
  • ನಿಮ್ಮ ಊರಿನಲ್ಲಿರುವ ಎಲ್ಲಾ ಫಲಾನುಭವಿಗಳ ಪಟ್ಟಿ ಕಾಣುತ್ತದೆ. ಇದರಲ್ಲಿ ನಿಮ್ಮ ಹೆಸರಿದೆಯಾ ಪರಿಶೀಲಿಸಿ.

ಇದನ್ನೂ ಓದಿ: ಮೋದಿ 3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ತೆಗೆದುಕೊಂಡ ಮೊದಲ ನಿರ್ಧಾರ ಇದು

ಹಣ ಬಂದಿಲ್ಲದಿದ್ದರೆ ಅಥವಾ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಹೇಗೆ?

ಒಂದು ವೇಳೆ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದೇ ಇದ್ದರೆ ಅದಕ್ಕೆ ಬೇರೆ ಬೇರೆ ಕಾರಣಗಳಿರಬಹುದು. ಒಂದು, ನೀವು ಇಕೆವೈಸಿ ಪೂರ್ಣಗೊಳಿಸದೇ ಇರಬಹುದು, ಅಥವಾ ಮಾಡಿಲ್ಲದೇ ಇರಬಹುದು. ಇನ್ನೊಂದು, ನೀವು ಈ ಯೋಜನೆಯ ಫಲಾನುಭವಿಯಾಗಲು ಇರುವ ಅರ್ಹತೆಯ ಅಂಶಗಳು ನಿಮಗೆ ಅನ್ವಯ ಆಗದೇ ಇರಬಹುದು.

ಪಿಎಂ ಕಿಸಾನ್ ಫಲಾನುಭವಿಗಳೆಲ್ಲರೂ ಇಕೆವೈಸಿ ಮಾಡುವುದು ಕಡ್ಡಾಯ. ಕಳೆದ ಒಂದು ವರ್ಷದಲ್ಲಿ ನೀವು ಒಮ್ಮೆ ಇಕೆವೈಸಿ ಮಾಡಿಸಿದ್ದರೆ ಸಾಕು. ಇನ್ನೂ ನೀವು ಕೆವೈಸಿ ಅಪ್​ಡೇಟ್ ಮಾಡದೇ ಹೋಗಿದ್ದರೆ ಕೂಡಲೇ ಮಾಡಿರಿ. ಪಿಎಂ ಕಿಸಾನ್ ವೆಬ್​ಸೈಟ್​ಗೆ ಹೋಗಿ ಅಲ್ಲಿಂದಲೇ ಇಕೆವೈಸಿ ಅಪ್​ಡೇಟ್ ಮಾಡಬಹುದು. ಇದಕ್ಕೆ ನಿಮ್ಮ ಆಧಾರ್ ಕಾರ್ಡ್ ಇದ್ದರೆ ಸಾಕು. ಈ ಆಧಾರ್​ಗೆ ಮೊಬೈಲ್ ನಂಬರ್ ಜೋಡಿತವಾಗಿರಬೇಕು. ಒಟಿಪಿ ಮೂಲಕ ಇಕೆವೈಸಿ ಅಪ್​ಡೇಟ್ ಮಾಡಬಹುದು.

ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಅಲ್ಲಿಂದಲೂ ನೀವು ಇಕೆವೈಸಿ ಅಪ್​ಡೇಟ್ ಮಾಡಲು ಸಾಧ್ಯ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ
Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ
‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ?
‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ?
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್