AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಮವಾರ ಬೆಳಗ್ಗೆ ಹೊಸ ಎತ್ತರಕ್ಕೆ ಏರಿ ತುಸು ಕುಸಿದ ಷೇರು ಮಾರುಕಟ್ಟೆ; ಇದು ಕಾರಣ

Indian stock market updates on June 10th: ಭಾರತದ ಷೇರು ಮಾರುಕಟ್ಟೆ ಇಂದು ಸೋಮವಾರ (ಜೂನ್ 10) ಹೊಸ ಎತ್ತರಕ್ಕೆ ಏರಿ, ಬಳಿಕ ಕೆಳಗಿದಿವೆ. ಸೆನ್ಸೆಕ್ಸ್ ಮೊದಲ ಬಾರಿ 77,000 ಅಂಕಗಳ ಗಡಿ ಮುಟ್ಟಿದೆ. ನಿಫ್ಟಿ ಸೂಚ್ಯಂಕ 23,411 ಅಂಕಗಳವರೆಗೂ ಏರಿತ್ತು. ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ಹೆಚ್ಚಿನ ಸೂಚ್ಯಂಕಗಳು ತುಸು ಕೆಳಗಿಳಿದಿವೆ. ಆದರೆ, ಎನ್​ಎಸ್​ಇಯಲ್ಲಿ ಹೆಚ್ಚಿನ ಸೂಚ್ಯಂಕಗಳು ಮೇಲೇರಿವೆ.

ಸೋಮವಾರ ಬೆಳಗ್ಗೆ ಹೊಸ ಎತ್ತರಕ್ಕೆ ಏರಿ ತುಸು ಕುಸಿದ ಷೇರು ಮಾರುಕಟ್ಟೆ; ಇದು ಕಾರಣ
ಷೇರು ಮಾರುಕಟ್ಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 10, 2024 | 10:34 AM

ಮುಂಬೈ, ಜೂನ್ 10: ಮೋದಿ 3.0 ಸರ್ಕಾರದ ಹೊಸ ಸಂಪುಟ ರಚನೆ ಆದ ಬೆನ್ನಲ್ಲೇ ಷೇರು ಮಾರುಕಟ್ಟೆ (stock market) ಹೊಸ ದಾಖಲೆ ಎತ್ತರಕ್ಕೆ ಏರಿದೆ. ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನ ಸೆನ್ಸೆಕ್ಸ್, ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನ ನಿಫ್ಟಿ (Nifty50) ಸೇರಿದಂತೆ ಷೇರು ಮಾರುಕಟ್ಟೆ ಪ್ರಮುಖ ಸೂಚ್ಯಂಕಗಳು ಇಂದು ಹೆಚ್ಚಿವೆ. ಬೆಳಗಿನ ಸ್ವಲ್ಪ ಹೊತ್ತಿನಲ್ಲಿ ಸೆನ್ಸೆಕ್ಸ್ 77,000 ಅಂಕಗಳ ಮಟ್ಟ ತಲುಪಿ ಹೊಸ ದಾಖಲೆ ಬರೆಯಿತು. ನಿಫ್ಟಿ50 ಸೂಚ್ಯಂಕ ಕೂಡ 23,411 ಅಂಕಗಳ ಮಟ್ಟ ಮುಟ್ಟಿತು. ನಂತರ ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿತ ಕಂಡವಾದರೂ ದಿನಾಂತ್ಯದ ವೇಳೆಗೆ ಮತ್ತೆ ಎತ್ತರಕ್ಕೆ ಏರುವ ನಿರೀಕ್ಷೆ ಇದೆ.

ನಿಫ್ಟಿ ಮತ್ತು ಸೆನ್ಸೆಕ್ಸ್ ಮೇಲೇರಿ ಕೆಳಗೆ ಇಳಿದರೂ ಬ್ಯಾಂಕ್, ಸ್ಮಾಲ್​ಕ್ಯಾಪ್ ಇತ್ಯಾದಿ ವಿವಿಧ ಸೂಚ್ಯಂಕಗಳು ಪಾಸಿಟಿವ್ ಆಗಿವೆ. ಮಿಡ್​ಕ್ಯಾಪ್ ಸೂಚ್ಯಂಕಗಳೂ ಕೂಡ ಮೇಲೇರಿವೆ. ಆದರೆ, ದೊಡ್ಡ ಮಾರುಕಟ್ಟೆ ಬಂಡವಾಳದ ಕಂಪನಿಗಳ ಷೇರುಗಳು ಸೋಮವಾರ ಹಿನ್ನಡೆ ಕಂಡಿವೆ.

ಇದನ್ನೂ ಓದಿ: ಈ ವಾರ ಎರಡು ಐಪಿಒ; ಇಕ್ಸಿಗೋ, ಯುನೈಟೆಡ್ ಕಾಟ್​ಫ್ಯಾಬ್ ಷೇರು ಬಿಡುಗಡೆ; ದಿನಾಂಕ, ಬೆಲೆ, ಹೂಡಿಕೆ ಮೊತ್ತ ತಿಳಿಯಿರಿ

ಅಮೆರಿಕದಲ್ಲಿ ಉದ್ಯೋಗ ಹೆಚ್ಚಳ

ಅಮೆರಿಕದಲ್ಲಿ ಕಾರ್ಪೊರೇಟ್ ವಲಯದಲ್ಲಿ ನೇಮಕಾತಿ ಹೆಚ್ಚುತ್ತಿರುವುದು ವರದಿಯಾಗಿದೆ. ಹಾಗೆಯೇ, ಸಂಬಳ ಹೆಚ್ಚಳವೂ ಆಗುತ್ತಿದೆ. ಇದು ಭಾರತ ಸೇರಿದಂತೆ ಏಷ್ಯಾದ ಷೇರು ಮಾರುಕಟ್ಟೆಗಳ ಮೇಲೆ ತುಸು ಪ್ರಭಾವ ಬೀರಿರಬಹುದು ಎಂದು ಹೇಳಲಾಗುತ್ತಿದೆ. ಯಾಕೆಂದರೆ, ಅಮೆರಿಕದಲ್ಲಿ ಉದ್ಯೋಗ ವಾತಾವರಣ ಆಶಾದಾಯಕ ವಾಗಿರುವುದರಿಂದ ಅಲ್ಲಿಯ ಫೆಡರಲ್ ರಿಸರ್ವ್ ಸಂಸ್ಥೆ ಬಡ್ಡಿದರವನ್ನು ಸದ್ಯಕ್ಕಂತೂ ಇಳಿಸದೇ ಇರಬಹುದು. ಇದು ಹೂಡಿಕೆದಾರರನ್ನು ಗೊಂದಲಕ್ಕೆ ಕೆಡವಿರುವ ಅಂದಾಜಿದೆ.

ಭಾರತದಲ್ಲಿ ಹೆಚ್ಚು ಬೇಡಿಕೆ ಪಡೆದಿರುವ ಷೇರುಗಳು

ಪಿಎಸ್​ಯು ಷೇರುಗಳು ಹೆಚ್ಚು ಬೇಡಿಕೆ ಪಡೆದಿವೆ. ಐಟಿ ವಲಯದ ಷೇರುಗಳಿಗೆ ನಷ್ಟವಾಗಿದೆ. ಪವರ್ ಗ್ರಿಡ್, ಎನ್​ಟಿಪಿಸಿ, ಎಸ್​ಬಿಐ, ಟಾಟಾ ಮೋಟಾರ್ಸ್, ಅಲ್ಟ್ರಾಟೆಕ್ ಸಿಮೆಂಟ್, ಎಕ್ಸಿಸ್ ಬ್ಯಾಂಕ್ ಹೆಚ್ಚು ಲಾಭ ಮಾಡಿರುವ ಷೇರುಗಳಾಗಿವೆ. ರಿಲಾಯನ್ಸ್, ಅದಾನಿ ಪೋರ್ಟ್ಸ್, ಐಸಿಐಸಿಐ ಬ್ಯಾಂಕ್ ಸ್ಟಾಕುಗಳೂ ಕೂಡ ಮೇಲೇರಿವೆ.

ಇದನ್ನೂ ಓದಿ: ಚಿಕ್ಕಂದಿನಲ್ಲಿ ಸಹಪಾಠಿಗಳಿಂದ ಅವಹೇಳನಕ್ಕೊಳಗಾಗುತ್ತಿದ್ದ ಹುಡುಗಿ ಇವತ್ತು ಮೈನಿಂಗ್ ಸಾಮ್ರಾಜ್ಯದ ಒಡತಿ

ಟಿಸಿಎಸ್ ಕುಸಿತ ಮುಂದುವರಿದಿದೆ. ವಿಪ್ರೋ, ಇನ್ಫೋಸಿಸ್, ಟೆಕ್ ಮಹೀಂದ್ರ, ಟೈಟಾನ್ ಕಂಪನಿ, ಎಲ್​ಟಿಐ ಮೈಂಡ್ ಟ್ರೀ ಮೊದಲಾದ ಕಂಪನಿಗಳ ಷೇರುಗಳಿಗೆ ನಷ್ಟವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವ ಅಭಿನಂದನಾರ್ಹ: ಈಶ್ವರಪ್ಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವ ಅಭಿನಂದನಾರ್ಹ: ಈಶ್ವರಪ್ಪ
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್
ಚಿನ್ನಸ್ವಾಮಿಯಲ್ಲಿ ಮೊದಲ ಗೆಲುವು; ಕುಣಿದು ಕುಪ್ಪಳಿಸಿದ ಕೊಹ್ಲಿ
ಚಿನ್ನಸ್ವಾಮಿಯಲ್ಲಿ ಮೊದಲ ಗೆಲುವು; ಕುಣಿದು ಕುಪ್ಪಳಿಸಿದ ಕೊಹ್ಲಿ
ಜನರಿಗೆ ಮೋಸ ಮಾಡುವ ಕೆಲಸಕ್ಕೆ ಯಾರೂ ಮುಂದಾಗಬಾರದು: ಕುಲಕರ್ಣಿ
ಜನರಿಗೆ ಮೋಸ ಮಾಡುವ ಕೆಲಸಕ್ಕೆ ಯಾರೂ ಮುಂದಾಗಬಾರದು: ಕುಲಕರ್ಣಿ
ಪಹಲ್ಗಾಮ್​ನಲ್ಲಿ ದಾಳಿಯ ನಡುವೆಯೇ ಉಗ್ರನ ಫೋಟೊ ಕ್ಲಿಕ್ಕಿಸಿದ ಮಹಿಳೆ
ಪಹಲ್ಗಾಮ್​ನಲ್ಲಿ ದಾಳಿಯ ನಡುವೆಯೇ ಉಗ್ರನ ಫೋಟೊ ಕ್ಲಿಕ್ಕಿಸಿದ ಮಹಿಳೆ
ಇದು ದೋಷಾರೋಪಣೆ ಮಾಡುವ ಸಮಯ ಅಲ್ಲ: ಶಿವಕುಮಾರ್
ಇದು ದೋಷಾರೋಪಣೆ ಮಾಡುವ ಸಮಯ ಅಲ್ಲ: ಶಿವಕುಮಾರ್