AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಾರ ಎರಡು ಐಪಿಒ; ಇಕ್ಸಿಗೋ, ಯುನೈಟೆಡ್ ಕಾಟ್​ಫ್ಯಾಬ್ ಷೇರು ಬಿಡುಗಡೆ; ದಿನಾಂಕ, ಬೆಲೆ, ಹೂಡಿಕೆ ಮೊತ್ತ ತಿಳಿಯಿರಿ

Ixigo and United CotFab IPOs: ಜೂನ್ 10ರಿಂದ ಆರಂಭವಾಗುವ ವಾರದಲ್ಲಿ ಎರಡು ಸಂಸ್ಥೆಗಳ ಐಪಿಒ ಬಿಡುಗಡೆ ಆಗುತ್ತಿವೆ. ಆನ್ಲೈನ್ ಟ್ರಾವಲ್ ಬುಕಿಂಗ್ ಪ್ಲಾಟ್​ಫಾರ್ಮ್ ಆದ ಇಕ್ಸಿಗೋ ಸಂಸ್ಥೆಯ ಐಪಿಒ ಜೂನ್ 10ರಂದು ಬಿಡುಗಡೆ ಆಗುತ್ತದೆ. ಜವಳಿ ಉದ್ಯಮಕ್ಕೆ ಸೇರಿದ ಯುನೈಟೆಡ್ ಕಾಟ್​ಫ್ಯಾಬ್ ಕಂಪನಿಯ ಐಪಿಒ ಜೂನ್ 13ರಂದು ಆರಂಭವಾಗುತ್ತದೆ. ಇಕ್ಸಿಗೋ ಐಪಿಒ ಖರೀದಿಸಲು ಕನಿಷ್ಠ ಹೂಡಿಕೆ 14,973 ರೂ ಬೇಕಾಗುತ್ತದೆ. ಯುನೈಟೆಡ್ ಕಾಟ್​ಫ್ಯಾಬ್ ಐಪಿಒ ಪಡೆಯಲು 1.4 ಲಕ್ಷ ರೂ ಬಂಡವಾಳ ಬೇಕಾಗುತ್ತದೆ.

ಈ ವಾರ ಎರಡು ಐಪಿಒ; ಇಕ್ಸಿಗೋ, ಯುನೈಟೆಡ್ ಕಾಟ್​ಫ್ಯಾಬ್ ಷೇರು ಬಿಡುಗಡೆ; ದಿನಾಂಕ, ಬೆಲೆ, ಹೂಡಿಕೆ ಮೊತ್ತ ತಿಳಿಯಿರಿ
ಇಕ್ಸಿಗೋ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 09, 2024 | 5:09 PM

Share

ನವದೆಹಲಿ, ಜೂನ್ 9: ಚುನಾವಣೆಯ ಸಂದರ್ಭದ ಏರಿಳಿತದ ಬಳಿಕ ಸ್ಥಿರಗೊಂಡಂತಿರುವ ಷೇರು ಮಾರುಕಟ್ಟೆಯಲ್ಲಿ ಈ ವಾರ ಎರಡು ಐಪಿಒಗಳು ಪದಾರ್ಪಣೆ ಮಾಡುತ್ತಿವೆ. ಜೂನ್ 10, ಸೋಮವಾರ ಇಕ್ಸಿಗೋ ಅಥವಾ ಲೀ ಟ್ರಾವೆನ್ಯೂಸ್ ಟೆಕ್ನಾಲಜಿ ಲಿ ಸಂಸ್ಥೆಯ ಐಪಿಒ (Ixigo IPO) ಬಿಡುಗಡೆ ಆಗುತ್ತಿದೆ. ಜೂನ್ 13, ಗುರುವಾರ ಯುನೈಟೆಡ್ ಕಾಟ್​ಫ್ಯಾಬ್ ಲಿ ಸಂಸ್ಥೆಯ ಐಪಿಒ (United Cotfab IPO) ಲಭ್ಯವಾಗಲಿದೆ. ಇಂಡಿಜೀನ್, ವಿನ್ಸೋಲ್, ಟಿಬಿಒ ಟೆಕ್ ಮೊದಲಾದ ಐಪಿಒಗಳು ಇತ್ತೀಚೆಗೆ ಭರ್ಜರಿ ಯಶಸ್ವಿ ಕಂಡಿವೆ. ಈ ಹಿನ್ನೆಲೆಯಲ್ಲಿ ಈ ವಾರ ಎರಡು ಐಪಿಒಗಳು ಎಷ್ಟು ಮಂದಿ ಹೂಡಿಕೆದಾರರನ್ನು ಆಕರ್ಷಿಸುತ್ತವೆ ಎಂಬುದು ಕುತೂಹಲದ ಸಂಗತಿ.

ಇಕ್ಸಿಗೋ ಐಪಿಒ ವಿವರ

  • ಬಿಡುಗಡೆ ದಿನಾಂಕ: ಜೂನ್ 10ರಿಂದ 12ರವರೆಗೆ
  • ಮಾರಾಟಕ್ಕಿರುವ ಒಟ್ಟು ಷೇರು: 6.66 ಕೋಟಿ ಈಕ್ವಿಟಿ ಷೇರು
  • ನಿರೀಕ್ಷಿತ ಬಂಡವಾಳ: 620 ಕೋಟಿ ರೂ
  • ಆಫರ್ ಮಾಡಲಾಗಿರುವ ಷೇರುಬೆಲೆ: 88ರಿಂದ 93 ರೂ
  • ಖರೀದಿಸಬೇಕಾದ ಷೇರುಗಳು: 161 ಷೇರುಗಳು
  • ಕನಿಷ್ಠ ಹೂಡಿಕೆ: 14,973 ರೂ

ಇದನ್ನೂ ಓದಿ: ಜೂನ್ 4ರ ಷೇರುಪೇಟೆ ಕುಸಿತ ದೊಡ್ಡ ಹಗರಣವಾ? ಮಾರುಕಟ್ಟೆ ಬಿದ್ದೆದ್ದಿದ್ದು ನಷ್ಟ ಯಾರಿಗೆ? ಕಾಂಗ್ರೆಸ್ ಆರೋಪಕ್ಕೆ ಸರ್ಕಾರದ ಉತ್ತರ ಏನು?

ಯುನೈಟೆಡ್ ಕಾಟ್​ಫ್ಯಾಬ್ ಐಪಿಒ ವಿವರ

  • ಐಪಿಒ ದಿನಾಂಕ: ಜೂನ್ 13ರಿಂದ 19ರವರೆಗೆ
  • ಷೇರುಬೆಲೆ: 70 ರೂ
  • ಒಟ್ಟು ಷೇರು: 51,84,000 ಷೇರುಗಳು
  • ಕನಿಷ್ಠ ಖರೀದಿ: 2,000 ಷೇರುಗಳು
  • ಕನಿಷ್ಠ ಹೂಡಿಕೆ: 1,40,000 ರೂ

ಯಾವುದಿದು ಯುನೈಟೆಡ್ ಕಾಟ್​ಫ್ಯಾಬ್ ಸಂಸ್ಥೆ?

ಗುಜರಾತ್ ಮೂಲದ ಸಣ್ಣ ಕೈಗಾರಿಕೆಯಾದ ಯುನೈಟೆಡ್ ಕಾಟ್​ಫ್ಯಾಬ್ ಲಿ ಸಂಸ್ಥೆ ಜವಳಿ ಕ್ಷೇತ್ರದ್ದಾಗಿದೆ. ಉಚ್ಚ ಗುಣಮಟ್ಟದ ಓಪನ್ ಎಂಡೆ ನೂಲುಗಳನ್ನು ತಯಾರಿಸುತ್ತದೆ. ಗಾರ್ಮೆಂಟ್ಸ್ ಕ್ಷೇತ್ರದ ಕಂಪನಿಗಳು ಇದರ ಗ್ರಾಹಕರು. 2015ರಲ್ಲಿ ಆರಂಭವಾದ ಈ ಸಂಸ್ಥೆ 2023ರ ಸೆಪ್ಟಂಬರ್ 30ರಲ್ಲಿ 2.95 ಕೋಟಿ ರೂ ನಿವ್ವಳ ಲಾಭ ತೋರಿಸಿತ್ತು.

ಇದನ್ನೂ ಓದಿ: ಷೇರು ಮಾರುಕಟ್ಟೆಯ ಬಂಪರ್ ಫಲ ಪಡೆದ ಚಂದ್ರಬಾಬು ನಾಯ್ಡು ಪತ್ನಿ; ಐದು ದಿನದಲ್ಲಿ 584 ಕೋಟಿ ರೂ ಸಂಪತ್ತು ಹೆಚ್ಚಿಸಿಕೊಂಡ ಭುವನೇಶ್ವರಿ

ಇಕ್ಸಿಗೋ ಕಂಪನಿ ಬಗ್ಗೆ…

ಸೋಮವಾರ ಐಪಿಒ ಬಿಡುಗಡೆ ಮಾಡುತ್ತಿರುವ ಇಕ್ಸಿಗೋ ಸಂಸ್ಥೆ ಆನ್ಲೈನ್ ಟ್ರಾವಲ್ ಬುಕಿಂಗ್ ಪ್ಲಾಟ್​ಫಾರ್ಮ್ ಆಗಿದೆ. ವಿಮಾನ ಬುಕಿಂಗ್, ಟ್ರೈನ್ ಬುಕಿಂಗ್, ಬಸ್ ಬುಕಿಂಗ್, ಹೋಟೆಲ್ ಬುಕಿಂಗ್ ಹೀಗೆ ಪ್ರವಾಸಕ್ಕೆ ಅಗತ್ಯ ಇರುವ ಎಲ್ಲಾ ಸೇವೆಗಳ ಬುಕಿಂಗ್ ಅನ್ನು ಲಭ್ಯವಾಗಿಸುವ ಆನ್ಲೈನ್ ಟ್ರಾವಲ್ ಏಜೆನ್ಸಿ ಇದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ