AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಎಂ ಕಿಸಾನ್: ಆ. 2ರಂದು 9.7 ಕೋಟಿಗೂ ಅಧಿಕ ರೈತರಿಗೆ 20ನೇ ಕಂತಿನ ಹಣ

PM Kisan scheme 20th installment release date: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿ 20ನೇ ಕಂತಿನ ಹಣವನ್ನು ಆಗಸ್ಟ್ 2ರಂದು ಬಿಡುಗಡೆ ಮಾಡಲಾಗುತ್ತಿದೆ. ಉತ್ತರಪ್ರದೇಶದ ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಸ್ಕೀಮ್​ನಲ್ಲಿ 20,500 ಕೋಟಿ ರೂ ಹಣ ಬಿಡುಗಡೆ ಮಾಡಲಿದ್ದಾರೆ. ಪಿಎಂ ಕಿಸಾನ್ ಯೋಜನೆ ಅಡಿ ಕೇಂದ್ರ ಸರ್ಕಾರ ವರ್ಷಕ್ಕೆ 3 ಕಂತುಗಳಲ್ಲಿ ಒಟ್ಟು 6,000 ರೂ ಹಣವನ್ನು ರೈತರಿಗೆ ನೀಡುತ್ತದೆ.

ಪಿಎಂ ಕಿಸಾನ್: ಆ. 2ರಂದು 9.7 ಕೋಟಿಗೂ ಅಧಿಕ ರೈತರಿಗೆ 20ನೇ ಕಂತಿನ ಹಣ
ರೈತ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 01, 2025 | 3:03 PM

Share

ನವದೆಹಲಿ, ಆಗಸ್ಟ್ 1: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM Kisan scheme) 20ನೇ ಕಂತಿನ ಹಣವನ್ನು ಕೇಂದ್ರ ಸರ್ಕಾರ ನಾಳೆ, ಶನಿವಾರ (ಆಗಸ್ಟ್ 2) ಬಿಡುಗಡೆ ಮಾಡಲಿದೆ. ಉತ್ತರಪ್ರದೇಶದ ವಾರಾಣಸಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಈ 20ನೇ ಕಂತಿನ ಹಣ ಬಿಡುಗಡೆ ಮಾಡಲಿದ್ದಾರೆ. 9.7 ಕೋಟಿಗೂ ಅಧಿಕ ರೈತರ (farmers) ಖಾತೆಗಳಿಗೆ ಒಟ್ಟಾರೆ 20,500 ರೂ ಬಿಡುಗಡೆ ಆಗಲಿದೆ. ಪ್ರತೀ ರೈತರ ಖಾತೆಗೆ 2,000 ರೂ ಸಿಗುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 2ರಂದು ಬೆಳಗ್ಗೆ 11 ಗಂಟೆಗೆ ಹಣ ಬಿಡುಗಡೆ ಮಾಡಲಿದ್ದಾರೆ. ವಾರಾಣಸಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅವರು ರೈತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ದೇಶದ ಗ್ರಾಮೀಣ ಭಾಗದ ವಿವಿಧೆಡೆ ಪ್ರಧಾನಿ ಭಾಷಣಗಳನ್ನು ಕೇಳಲು ವ್ಯವಸ್ಥೆ ಮಾಡಲಾಗಿದೆ.

2019ರಲ್ಲಿ ಆರಂಭವಾದ ಪಿಎಂ ಕಿಸಾನ್ ಯೋಜನೆಯಲ್ಲಿ ಕೃಷಿಕರಿಗೆ ಕೇಂದ್ರ ಸರ್ಕಾರ ವರ್ಷಕ್ಕೆ 6,000 ರೂ ನೀಡುತ್ತದೆ. ವರ್ಷದಲ್ಲಿ ಮೂರು ಕಂತುಗಳಲ್ಲಿ ಈ ಹಣವನ್ನು ನೀಡಲಾಗುತ್ತದೆ. ಈವರೆಗೆ 19 ಕಂತುಗಳನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಒಟ್ಟಾರೆ 3.69 ಲಕ್ಷ ಕೋಟಿ ರೂ ಹಣವನ್ನು ರೈತರ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಿದೆ.

ಇದನ್ನೂ ಓದಿ: ಅಮೆರಿಕದೊಂದಿಗೆ ಎಫ್-35 ಫೈಟರ್ ಜೆಟ್ ಡೀಲ್​ನಿಂದ ಹಿಂದಕ್ಕೆ ಸರಿದ ಭಾರತ; ಇದು ಟ್ರಂಪ್ ಟ್ಯಾರಿಫ್​ಗೆ ಭಾರತ ಕೊಟ್ಟ ಪ್ರತ್ಯುತ್ತರವಾ?

ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ?

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಮಂದಿ ನೊಂದಾಯಿತ ರೈತರಿದ್ದಾರೆ. ಈ ಪೈಕಿ ಇ-ಕೆವೈಸಿ ಮಾಡಿಕೊಳ್ಳದವರಿಗೆ ಹಣ ಸಿಕ್ಕೋದಿಲ್ಲ. ಈ ಸ್ಕೀಮ್​ನಲ್ಲಿ ನೊಂದಾಯಿತರಾದ ಪ್ರತಿಯೊಬ್ಬರೂ ಕೂಡ ಫಲಾನುಭವಿಗಳ ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು ಖಾತ್ರಿಪಡಿಸಿಕೊಳ್ಳಬಹುದು. ಪಿಎಂ ಕಿಸಾನ್ ವೆಬ್​ಸೈಟ್​ನಲ್ಲಿ ಈ ಪಟ್ಟಿಯನ್ನು ಕಾಣಬಹುದು.

  • ಪಿಎಂ ಕಿಸಾನ್ ವೆಬ್​ಸೈಟ್ ವಿಳಾಸ: pmkisan.gov.in/homenew.aspx
  • ಇಲ್ಲಿ ಮುಖ್ಯಪುಟದಲ್ಲಿ ತುಸು ಕೆಳಗೆ ಸ್ಕ್ರೋಲ್ ಮಾಡಿದರೆ ಫಾರ್ಮರ್ಸ್ ಕಾರ್ನರ್ ಕಾಣುತ್ತದೆ. ಆ ಬಾಕ್ಸ್​ನಲ್ಲಿ ಬೆನಿಫಿಯರಿ ಲಿಸ್ಟ್ ಅನ್ನು ಒತ್ತಿರಿ.
  • ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಗ್ರಾಮವನ್ನು ಆಯ್ದುಕೊಂಡು ಫೆಚ್ ಡಾಟಾ ಒತ್ತಿರಿ.
  • ಇಲ್ಲಿ ನೀವು ಆಯ್ಕೆ ಮಾಡಿದ ಗ್ರಾಮದಲ್ಲಿ ಪಿಎಂ ಕಿಸಾನ್ ಸ್ಕೀಮ್​ಗೆ ನೊಂದಾಯಿಸಿಕೊಂಡವರೆಲ್ಲರ ಹೆಸರುಗಳ ಪಟ್ಟಿ ಬರುತ್ತದೆ.
  • ಈ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ನೋಡಿ.

ಇದನ್ನೂ ಓದಿ: LPG Cylinder Price: ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್ ಬೆಲೆ ಇಳಿಕೆ

ಪಟ್ಟಿಯಲ್ಲಿ ಹೆಸರಿದ್ದೂ ಬ್ಯಾಂಕ್ ಖಾತೆಗೆ ಹಣ ಬರದೇ ಹೋಗುವ ಸಾಧ್ಯತೆಯೂ ಇರುತ್ತದೆ. ಹಾಗೇನಾದರೂ ಆಗಿದ್ದಲ್ಲಿ ಇಕೆವೈಸಿ ಆಗಿಲ್ಲದೇ ಇರುವುದು, ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿಲ್ಲದೇ ಇರುವುದು ಇತ್ಯಾದಿ ಕಾರಣ ಇರಬಹುದು. ನಿಮ್ಮ ಸಮೀಪದ ರೈತರ ಸಂಪರ್ಕ ಕೇಂದ್ರಕ್ಕೆ ಹೋಗಿ ವಿಚಾರಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ