
ನವದೆಹಲಿ, ನವೆಂಬರ್ 17: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ (PM Kisan scheme) 21ನೇ ಕಂತಿನ ಹಣವನ್ನು ಸರ್ಕಾರ ಇನ್ನೆರಡು ದಿನಗಳಲ್ಲಿ ಬಿಡುಗಡೆ ಮಾಡಲಿದೆ. ವರದಿಗಳ ಪ್ರಕಾರ 2025ರ ನವೆಂಬರ್ 19, ಬುಧವಾರದಂದು ಪ್ರಧಾನಿ ನರೇಂದ್ರ ಮೋದಿ ಅವರು ಸುಮಾರು 10 ಕೋಟಿ ರೈತರ (farmers) ಬ್ಯಾಂಕ್ ಖಾತೆಗಳಿಗೆ ತಲಾ 2,000 ರೂ ಹಣ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ಕೊಡಲಿದ್ದಾರೆ. ಹಿಂದಿನ ಕಂತಿನ ಹಣವನ್ನು ವಾರಾಣಸಿಯಿಂದ ಪ್ರಧಾನಿಗಳು ಆ. 2ರಂದು ಬಿಡುಗಡೆ ಮಾಡಿದ್ದರು.
ಕೃಷಿ ಕಾಯಕದಲ್ಲಿ ನಿರತರಾಗಿರುವ ರೈತರಿಗೆ ಧನ ಸಹಾಯ ನೀಡುವ ಯೋಜನೆ ಪಿಎಂ ಕಿಸಾನ್. 2019ರಲ್ಲಿ ಆರಂಭವಾದ ಈ ಸ್ಕೀಮ್ ಅಡಿಯಲ್ಲಿ ಅರ್ಹ ರೈತರಿಗೆ ವರ್ಷದಲ್ಲಿ 2,000 ರೂಗಳ 3 ಕಂತುಗಳಲ್ಲಿ, ವರ್ಷಕ್ಕೆ ಒಟ್ಟು 6,000 ರೂ ಹಣ ನೀಡಲಾಗುತ್ತದೆ. ಪ್ರತೀ ಬೆಳೆ ಸೀಸನ್ಗೆ ಮುಂಚೆ ರೈತರಿಗೆ ಸರ್ಕಾರ ನೀಡುವ ನೆರವಿನ ಹಣ ಇದು. ಬೀಜ, ರಸಗೊಬ್ಬರ ಮತ್ತಿತರ ವೆಚ್ಚಗಳಿಗೆ ನೆರವಾಗಲೆಂದು ಈ ಸ್ಕೀಮ್ ಇದೆ.
ಇದನ್ನೂ ಓದಿ: ಪಿಎಂ ಕಿಸಾನ್: ಈ ಬಾರಿ ಕೆಲ ರೈತರಿಗೆ 2,000 ಬದಲು 4,000 ರೂ ಸಿಗುತ್ತಾ? ಇಲ್ಲಿದೆ ಕಾರಣ
ನೀವು ಪಿಎಂ ಕಿಸಾನ್ ಯೋಜನೆಯಲ್ಲಿ ಇತ್ತೀಚೆಗೆ ನೊಂದಾಯಿಸಿದ್ದು, ಮೊದಲ ಕಂತಿನ ನಿರೀಕ್ಷೆಯಲ್ಲಿದ್ದರೆ ಮೊದಲು ಪಿಎಂ ಕಿಸಾನ್ ವೆಬ್ಸೈಟ್ನಲ್ಲಿ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಪರಿಶೀಲಿಸಿ.
ಪಿಎಂ ಕಿಸಾನ್ ವೆಬ್ಸೈಟ್ ವಿಳಾಸ ಇಂತಿದೆ: pmkisan.gov.in/
ನಿಮಗೆ ಈ 21ನೇ ಕಂತಿನ ಹಣ ಬಿಡುಗಡೆಗೆ ಅನುಮೋದನೆ ಸಿಕ್ಕಿದೆಯಾ ಇಲ್ಲವಾ ಎಂಬುದನ್ನೂ ಪರಿಶೀಲಿಸಬಹುದು. ಅದಕ್ಕೆ ಇದೇ ಫಾರ್ಮರ್ಸ್ ಕಾರ್ನರ್ನಲ್ಲಿ ‘ನೋ ಯುವರ್ ಸ್ಟೇಟಸ್’ ಅನ್ನು ಕ್ಲಿಕ್ ಮಾಡಿ. ಇಲ್ಲಿ ನಿಮ್ಮ ಆಧಾರ್ ನಂಬರ್, ಮೊಬೈಲ್ ನಂಬರ್ ಅಥವಾ ರಿಜಿಸ್ಟ್ರೇಶನ್ ಐಡಿಯನ್ನು ನಮೂದಿಸಿ. ಇಲ್ಲಿ ನಿಮ್ಮ ಕಂತಿನ ಹಣ ಬಿಡುಗಡೆಗೆ ಅನುಮೋದನೆ ಕೊಡಲಾಗಿದೆಯಾ, ಪೆಂಡಿಂಗ್ನಲ್ಲಿದೆಯಾ ಅಥವಾ ತಡೆ ಹಿಡಿಯಲಾಗಿದೆಯಾ ಎಂಬ ಮಾಹಿತಿ ಸಿಗುತ್ತದೆ.
ಇದನ್ನೂ ಓದಿ: ಕೋಟಿ ರೂ ಸಂಬಳ ಕೊಡ್ತೀನಂದ್ರೂ ಅಮೆರಿಕದಲ್ಲಿ ಸಿಗುತ್ತಿಲ್ಲ ಕೆಲಸಗಾರರು; ಮೆಕ್ಯಾನಿಕ್ಸ್ ಇತ್ಯಾದಿ ಕಾರ್ಮಿಕರಿಗೆ ಸಖತ್ ಬೇಡಿಕೆ
ಈ ಮೇಲಿನ ಕಾರಣಗಳಿಂದ ನಿಮ್ಮ ಹೆಸರು ಪಟ್ಟಿಯಲ್ಲಿ ಇಲ್ಲದೇ ಇರಬಹುದು. ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಎಲ್ಲಾ ಮಾಹಿತಿ ಅಪ್ಡೇಟ್ ಮಾಡಿಸಿ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:56 pm, Mon, 17 November 25