AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಎಂ ಕಿಸಾನ್: ಈ ಬಾರಿ ಕೆಲ ರೈತರಿಗೆ 2,000 ಬದಲು 4,000 ರೂ ಸಿಗುತ್ತಾ? ಇಲ್ಲಿದೆ ಕಾರಣ

PM Kisan Samman Nidhi Yojana: ಪಿಎಂ ಕಿಸಾನ್ ಯೋಜನೆಯಲ್ಲಿ ಈ ಬಾರಿ 21ನೇ ಕಂತಿನ ಹಣ ಈ ತಿಂಗಳೇ ಬಿಡುಗಡೆ ಆಗುವ ನಿರೀಕ್ಷೆಯಲ್ಲಿ ರೈತರಿದ್ದಾರೆ. ಕಳೆದ ಬಾರಿ ಹಲವು ರೈತರಿಗೆ 20ನೇ ಕಂತಿನ ಹಣ ಸಿಕ್ಕಿರಲಿಲ್ಲ. ಕೆವೈಸಿ ದಾಖಲೆಗಳು ಸರಿ ಇಲ್ಲದೇ ಇರುವುದು ಮತ್ತಿತರ ಕಾರಣಕ್ಕೆ ಕಂತಿನ ಹಣ ಕೆಲವರಿಗೆ ಸಿಕ್ಕಿರಲಿಲ್ಲ. ಅನರ್ಹರನ್ನು ಫಿಲ್ಟರ್ ಮಾಡಲಾಗುತ್ತಿದೆ. ಅರ್ಹರಿದ್ದೂ 20ನೇ ಕಂತಿನ ಸಿಕ್ಕಿಲ್ಲದೇ ಇದ್ದವರಿಗೆ ಈ ಬಾರಿ ಎರಡು ಕಂತುಗಳ ಹಣ ಒಟ್ಟಿಗೆ ಸಿಗಬಹುದು.

ಪಿಎಂ ಕಿಸಾನ್: ಈ ಬಾರಿ ಕೆಲ ರೈತರಿಗೆ 2,000 ಬದಲು 4,000 ರೂ ಸಿಗುತ್ತಾ? ಇಲ್ಲಿದೆ ಕಾರಣ
ರೈತ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 12, 2025 | 9:10 PM

Share

ನವದೆಹಲಿ, ನವೆಂಬರ್ 12: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ (PM Kisan Yojana) ಸುಮಾರು 10 ಕೋಟಿ ರೈತರು (Farmers) 21ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. ಫೆಬ್ರುವರಿಯಲ್ಲಿ 19ನೇ ಕಂತು ಬಿಡುಗಡೆ ಆಗಿತ್ತು. 20ನೇ ಕಂತು ವಿಳಂಬಗೊಂಡು ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಆಯಿತು. 21ನೇ ಕಂತು ಅಕ್ಟೋಬರ್ ಕೊನೆಯ ವಾರ ಅಥವಾ ನವೆಂಬರ್ ಮೊದಲ ವಾರದಲ್ಲಿ ಬಿಡುಗಡೆ ಆಗುವ ನಿರೀಕ್ಷೆ ಇತ್ತು. ಆದರೆ, ಇನ್ನೂ ಆಗಿಲ್ಲ. ಕೆವೈಸಿ ದಾಖಲೆಗಳನ್ನು ಸರ್ಕಾರ ಪರಿಶೀಲಿಸುತ್ತಿರುವುದರಿಂದ ಈ ವಿಳಂಬವಾಗಿರಬಹುದು.

ಪಿಎಂ ಕಿಸಾನ್ ಸ್ಕೀಮ್​ನ ಮಾರ್ಗಸೂಚಿಯಲ್ಲಿ ನೀಡಲಾಗಿರುವ ನಿಯಮಗಳನ್ನು ಉಲ್ಲಂಘಿಸಿ ನೊಂದಾಯಿಸಿಕೊಂಡು ಫಲಾನುಭವಿಸುತ್ತಿರುವ ರೈತರನ್ನು ಗುರುತಿಸಲಾಗುತ್ತಿದೆ. ಈ ಅನರ್ಹ ಫಲಾನುಭವಿಗಳ ಹೆಸರನ್ನು ಪಟ್ಟಿಯಿಂದ ತೆಗೆದುಹಾಕುವ ಕೆಲಸ ನಡೆಯುತ್ತಿದೆ. ಈ ರೀತಿ ಅನರ್ಹರಿದ್ದೂ ಹಣ ಪಡೆಯುತ್ತಿರುವ ರೈತರ ಸಂಖ್ಯೆ ಹಲವು ಲಕ್ಷಗಳಿವೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಏಳು ಕೋಟಿಗೂ ಅಧಿಕ ರೈತರಿಗೆ ಕಿಸಾನ್ ಪೆಹಚಾನ್ ಪತ್ರ; ಏನಿದರ ವಿಶೇಷತೆ?

ಈ ಬಾರಿ ಕೆಲ ರೈತರಿಗೆ 2,000 ರೂ ಬದಲು 4,000 ರೂ ಪೇಮೆಂಟ್

ಕಳೆದ ಬಾರಿ ಕೆವೈಸಿ ಮತ್ತಿತರ ಸಮಸ್ಯೆಗಳಿಂದ ಕೆಲ ಅರ್ಹ ರೈತರಿಗೂ 20ನೇ ಕಂತಿನ ಹಣ ಬಂದಿರಲಿಲ್ಲ. ಕೆವೈಸಿ ದಾಖಲೆಗಳನ್ನು ಭೌತಿಕವಾಗಿ ಪರಿಶೀಲಿಸುವ ಕೆಲಸ ಮಾಡಲಾಗುತ್ತಿದೆ. ಅಂದರೆ, ಫಲಾನುಭವಿಗಳು ತಮ್ಮ ನಾಡಕಚೇರಿಗೆ ಮುಖತಃ ಭೇಟಿ ನೀಡಿ ಕೆವೈಸಿ ದಾಖಲೆಗಳನ್ನು ಕೊಡಬೇಕಾಗುತ್ತದೆ. ಈ ದಾಖಲೆಗಳು ಸರಿಯಾಗಿದ್ದರೆ, ಅಂಥ ರೈತರಿಗೆ ಕಳೆದ ಬಾರಿ ತಪ್ಪಿ ಹೋಗಿದ್ದ ಕಂತಿನ ಹಣ ಸೇರಿ ಎರಡು ಕಂತುಗಳ ಹಣವು ಈ ಬಾರಿ ಸಿಕ್ಕಲಿದೆ. ಅಂದರೆ, 4,000 ರೂ ಹಣವು ಈ ರೈತರ ಅಕೌಂಟ್​ಗೆ ಕ್ರೆಡಿಟ್ ಆಗಬಹುದು.

ಹೊಸದಾಗಿ ಜಮೀನು ಮಾಲಕತ್ವ ಪಡೆದವರಿಗೆ ಸಿಗಲ್ಲ ಕಿಸಾನ್ ಹಣ

ಕೃಷಿ ಜಮೀನು ಮಾಲಕತ್ವ ಹೊಂದಿದ ರೈತರು ಪಿಎಂ ಕಿಸಾನ್ ಯೋಜನೆಗೆ ಅರ್ಹರಾಗಿರುತ್ತಾರೆ. ಆದರೆ ಅದರಲ್ಲೂ ಕೆಲ ನಿರ್ಬಂಧಗಳಿವೆ. 2019ರ ಫೆಬ್ರುವರಿ 1ಕ್ಕಿಂತ ಮುಂಚೆ ಜಮೀನು ಮಾಲಕತ್ವ ಹೊಂದಿದ್ದವರು ಮಾತ್ರ ಯೋಜನೆಗೆ ಅರ್ಹರಾಗಿರುತ್ತಾರೆ. ಆ ನಂತರ ಮಾಲಕತ್ವ ಪಡೆದವರಿಗೆ ಸಿಕ್ಕೋದಿಲ್ಲ.

ಇದನ್ನೂ ಓದಿ: ಪಿಎಂ ಕಿಸಾನ್ 21ನೇ ಕಂತಿನ ಹಣ ಯಾಕೆ ವಿಳಂಬವಾಗುತ್ತಿದೆ ಗೊತ್ತಾ? ಇಲ್ಲಿದೆ ಕಾರಣ

ಅಪ್ಪನಿಂದ ಮಗನಿಗೆ ಜಮೀನು ವರ್ಗಾವಣೆ ಆಗಿದ್ದು, ಅಪ್ಪ ಜೀವಂತ ಇದ್ದರೆ ಆಗ ಮಗನಿಗೆ ಹಣ ಸಿಗಲ್ಲ. ಅಪ್ಪ ನಿಧನರಾದ ಬಳಿಕ ಜಮೀನು ಮಗನಿಗೆ ವರ್ಗಾವಣೆ ಆಗಿದ್ದಾಗ ಮಾತ್ರ ಫಲಾನುಭವಿಯಾಗಲು ಅರ್ಹರಾಗುತ್ತಾರೆ.

ಹಾಗೆಯೇ, ಸರ್ಕಾರಿ ನೌಕರರು, ವೈದ್ಯರು, ವಕೀಲರು ಮುಂತಾದ ವೃತ್ತಿಪರರು, ಶಾಸಕರು ಸಂಸದರು ಮೊದಲಾದ ಜನಪ್ರತಿನಿಧಿಗಳು ಕೃಷಿ ಜಮೀನು ಹೊಂದಿದ್ದರೂ ಪಿಎಂ ಕಿಸಾನ್ ಯೋಜನೆಗೆ ಅನರ್ಹರಾಗಿರುತ್ತಾರೆ. ಆದಾಯ ತೆರಿಗೆ ಪಾವತಿಸುವವರೂ ಕೂಡ ಅರ್ಹರಿರುವುದಿಲ್ಲ. ಇಂಥವರನ್ನು ಗುರುತಿಸಿ ಅವರನ್ನು ಪಟ್ಟಿಯಿಂದ ತೆಗೆದುಹಾಕುವ ಕೆಲಸ ಮಾಡಲಾಗುತ್ತಿದೆ.

ಪಿಎಂ ಕಿಸಾನ್ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ, ಅದರ ವಿಳಾಸ ಇಂತಿದೆ: pmkisan.gov.in/

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ