PM Kisan Scheme: ಪಿಎಂ ಕಿಸಾನ್: ಇಂದು 14ನೇ ಕಂತಿನ ಹಣ ಬಿಡುಗಡೆ; 8 ಕೋಟಿಗೂ ಹೆಚ್ಚು ಫಲಾನುಭವಿಗಳಲ್ಲಿ ನೀವಿದ್ದೀರಾ? ಪಟ್ಟಿ ನೋಡಿ

|

Updated on: Jul 27, 2023 | 5:28 AM

PM Kisan Samman Nidhi 14th Instalment: ಕೇಂದ್ರ ಸರ್ಕಾರ ರೈತರಿಗೆ ವರ್ಷಕ್ಕೆ 6,000 ರೂ ಅನ್ನು ಸಹಾಯಧನವಾಗಿ ನೀಡುವ ಪಿಎಂ ಕಿಸಾನ್ ಯೋಜನೆಯ 14ನೇ ಕಂತಿನ ಹಣ ಇಂದು ಜುಲೈ 27ಕ್ಕೆ ಬಿಡುಗಡೆ ಆಗುತ್ತಿದೆ. pmkisan.gov.in ವೆಬ್​ಸೈಟ್​ನಲ್ಲಿ ಫಲಾನುಭವಿಗಳ ಪಟ್ಟಿ ನೋಡಿ...

PM Kisan Scheme: ಪಿಎಂ ಕಿಸಾನ್: ಇಂದು 14ನೇ ಕಂತಿನ ಹಣ ಬಿಡುಗಡೆ; 8 ಕೋಟಿಗೂ ಹೆಚ್ಚು ಫಲಾನುಭವಿಗಳಲ್ಲಿ ನೀವಿದ್ದೀರಾ? ಪಟ್ಟಿ ನೋಡಿ
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ
Follow us on

ನವದೆಹಲಿ, ಜುಲೈ 27: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ 14ನೇ ಕಂತಿನ ಹಣ ಇಂದು ಬಿಡುಗಡೆ ಆಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ 14ನೇ ಕಂತಿನ ಹಣ ಬಿಡುಗಡೆಯನ್ನು ಪ್ರಕಟಿಸಲಿದ್ದಾರೆ. 2019ರಲ್ಲಿ ಆರಂಭಗೊಂಡ ಈ ಸ್ಕೀಮ್​ನಲ್ಲಿ ಈವರೆಗೂ 13 ಕಂತುಗಳಲ್ಲಿ ತಲಾ 2,000 ರೂನಂತೆ ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗಿದೆ. 2023ರ ಫೆಬ್ರುವರಿ 27ರಂದು ಬೆಳಗಾವಿಯ ಸಮಾವೇಶ ಕಾರ್ಯಕ್ರಮದ ವೇಳೆ 13ನೇ ಕಂತಿನ ಹಣದ ಬಿಡುಗಡೆ ಆಗಿರುವುದನ್ನು ಪ್ರಧಾನಿಗಳು ಘೋಷಿಸಿದ್ದರು. ಈ ಬಾರಿ ಪಂಜಾಬ್​​ನಲ್ಲಿ ಮೋದಿ 14ನೇ ಕಂತಿನ ಹಣ ಬಿಡುಗಡೆಯನ್ನು ಪ್ರಕಟಿಸುವ ನಿರೀಕ್ಷೆ ಇದೆ.

ಫಲಾನುಭವಿಗಳ ಸಂಖ್ಯೆ 2-3 ಪಟ್ಟು ಹೆಚ್ಚು

2019ರಲ್ಲಿ ಪಿಎಂ ಕಿಸಾನ್ ಯೋಜನೆ ಆರಂಭವಾದಾಗ 3.16 ಕೋಟಿ ರೈತರು ಹೆಸರು ನೊಂದಾಯಿಸಿದ್ದರು. ಅಂದರೆ 3.16 ಕೋಟಿ ರೈತರು ಮೊದಲ ಕಂತಿನ ಹಣ ಸ್ವೀಕರಿಸಿದ್ದರು. ಕಳೆದ ಬಾರಿ ಬಿಡುಗಡೆ ಆದ 13ನೇ ಕಂತಿನ ಹಣವನ್ನು 8.11 ಕೋಟಿ ರೈತರು ಪಡೆದಿದ್ದರು. 3 ವರ್ಷಗಳ ಅಂತರದಲ್ಲಿ ಹೆಚ್ಚೂಕಡಿಮೆ 5 ಕೋಟಿಯಷ್ಟು ಫಲಾನುಭವಿಗಳ ಸಂಖ್ಯೆ ಹೆಚ್ಚಾಗಿದೆ. 14ನೇ ಕಂತಿನ ಹಣ ಪಡೆಯುವವರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: PM Kisan: ಪಿಎಂ ಕಿಸಾನ್: ಶೀಘ್ರದಲ್ಲೇ 14ನೇ ಕಂತಿನ ಹಣ ಬಿಡುಗಡೆ; ಸ್ವಯಂಪ್ರೇರಿತವಾಗಿ ಸ್ಕೀಮ್ ಬಿಟ್ಟುಕೊಡುವ ಅವಕಾಶ

ಇಕೆವೈಸಿ ಮಾಡಿಸಿದ್ದವರಿಗೆ ಸಿಗುತ್ತೆ ಪಿಎಂ ಕಿಸಾನ್ ಹಣ

12ನೇ ಕಂತಿನ ಹಣ ಬಿಡುಗಡೆ ಆದ ಬಳಿಕ ಸರ್ಕಾರ ಇಕೆವೈಸಿ ಮಾಡುವಂತೆ ಎಲ್ಲಾ ಫಲಾನುಭವಿಗಳಿಗೂ ತಿಳಿಸಿತ್ತು. ಅದರಂತೆ ಇಕೆವೈಸಿ ಅಪ್​ಡೇಟ್ ಮಾಡಿದವರಿಗೆ 13ನೇ ಕಂತಿನ ಹಣ ಸಿಕ್ಕಿತ್ತು. ಕೆವೈಸಿ ಪರಿಷ್ಕರಿಸದ ರೈತರಿಗೆ 13ನೇ ಕಂತಿನ ಹಣ ಸಿಕ್ಕಿರಲಿಲ್ಲ.

ಈಗಲೂ ಕೂಡ ಇಕೆವೈಸಿ ಮಾಡದವರಿಗೆ 14ನೇ ಕಂತಿನ ಹಣವೂ ಸಿಗುವುದಿಲ್ಲ. ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್​ಸೈಟ್​ಗೆ ಹೋಗಿ ಫಲಾನುಭವಿಗಳು ಸುಲಭವಾಗಿ ಕೆವೈಸಿ ಅಪ್​ಡೇಟ್ ಮಾಡಬಹುದು.

ಇದನ್ನೂ ಓದಿ: PM Kisan Update: ಪಿಎಂ ಕಿಸಾನ್ ಅಪ್​ಡೇಟ್; 14ನೇ ಕಂತು ಬಿಡುಗಡೆಗೆ ಮುನ್ನ ಈ 3 ಸಂಗತಿ ಖಚಿತಪಡಿಸಿಕೊಳ್ಳಿ

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿ ನೋಡುವುದು ಹೇಗೆ?

ನೀವು ಪಿಎಂ ಕಿಸಾನ್ ಸ್ಕೀಮ್​ನಲ್ಲಿ ಇಕೆವೈಸಿ ಅಪ್​ಡೇಟ್ ಮಾಡಿದ್ದರೆ ಫಲಾನುಭವಿಗಳ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿದೆಯಾ ಎಂದು ತಿಳಿಯಬಹುದು. ಅದಕ್ಕಾಗಿ ಯೋಜನೆಯ ವೆಬ್​ಸೈಟ್​ಗೆ ಭೇಟಿ ನೀಡಬೇಕು.

pmkisan.gov.in ವೆಬ್​ಸೈಟ್​ನಲ್ಲಿರುವ ಫಾರ್ಮರ್ಸ್ ಕಾರ್ನರ್ ಸೆಕ್ಷನ್​ನಲ್ಲಿ ಬೆನಿಫಿಶಿಯರಿ ಲಿಸ್ಟ್ ಮೇಲೆ ಕ್ಲಿಕ್ ಮಾಡಿ. ಅಲ್ಲಿ ರಾಜ್ಯ, ಜಿಲ್ಲೆ, ತಾಲೂಕು, ಊರು ಇತ್ಯಾದಿಯನ್ನು ಆಯ್ಕೆ ಮಾಡಿ. ಆಗ ಆ ಊರಿನ ಎಲ್ಲಾ ಫಲಾನುಭವಿಗಳ ಪಟ್ಟಿಯನ್ನು ನೋಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ