Narendra Modi: ಭಾರತದ ಆಹಾರ ವೈವಿಧ್ಯತೆಯಿಂದ ಜಾಗತಿಕ ಹೂಡಿಕೆದಾರರಿಗೆ ಅನುಕೂಲ: ಎರಡನೇ ಆವೃತ್ತಿಯ ವರ್ಲ್ಡ್ ಫುಡ್ ಇಂಡಿಯಾ ಉದ್ಘಾಟನೆಯಲ್ಲಿ ನರೇಂದ್ರ ಮೋದಿ

World Food India 2023: ಸರ್ಕಾರದ ಹೂಡಿಕೆದಾರ ಸ್ನೇಹಿ ನೀತಿಗಳಿಂದಾಗಿ ದೇಶದ ಆಹಾರ ವಲಯ ಹೊಸ ಎತ್ತರಕ್ಕೆ ಹೋಗಿದೆ. ಭಾರತ ಆಹಾರ ವೈವಿಧ್ಯತೆಯು ಜಾಗತಿಕ ಹೂಡಿಕೆದಾರರಿಗೆ ಲಾಭಾಂಶ (ಡಿವಿಡೆಂಡ್) ತಂದುಕೊಡುತ್ತದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿಯಲ್ಲಿ ನವೆಂಬರ್ 3ರಂದು ಅವರು ಎರಡನೇ ಆವೃತ್ತಿಯ ವರ್ಲ್ಡ್ ಫೂಡ್ ಇಂಡಿಯಾ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟು ಮಾತನಾಡುತ್ತಿದ್ದರು.

Narendra Modi: ಭಾರತದ ಆಹಾರ ವೈವಿಧ್ಯತೆಯಿಂದ ಜಾಗತಿಕ ಹೂಡಿಕೆದಾರರಿಗೆ ಅನುಕೂಲ: ಎರಡನೇ ಆವೃತ್ತಿಯ ವರ್ಲ್ಡ್ ಫುಡ್ ಇಂಡಿಯಾ ಉದ್ಘಾಟನೆಯಲ್ಲಿ ನರೇಂದ್ರ ಮೋದಿ
ನರೇಂದ್ರ ಮೋದಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 03, 2023 | 4:50 PM

ನವದೆಹಲಿ, ನವೆಂಬರ್ 3: ರಾಷ್ಟ್ರರಾಜಧಾನಿಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಆವೃತ್ತಿಯ ವಿಶ್ವ ಆಹಾರ ಭಾರತ (World Food India) ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟಿದ್ದಾರೆ. ಈ ವೇಳೆ ಮಾತನಾಡಿದ ಅವರು, ‘ಸರ್ಕಾರದ ಹೂಡಿಕೆದಾರ ಸ್ನೇಹಿ ನೀತಿಗಳಿಂದಾಗಿ ದೇಶದ ಆಹಾರ ವಲಯ ಹೊಸ ಎತ್ತರಕ್ಕೆ ಹೋಗಿದೆ. ಭಾರತ ಆಹಾರ ವೈವಿಧ್ಯತೆಯು ಜಾಗತಿಕ ಹೂಡಿಕೆದಾರರಿಗೆ ಲಾಭಾಂಶ (dividend) ತಂದುಕೊಡುತ್ತದೆ’ ಎಂದು ಹೇಳಿದ್ದಾರೆ.

21ನೇ ಶತಮಾನದಲ್ಲಿ ಇಡೀ ವಿಶ್ವಕ್ಕೆ ಎದುರಾಗಿರುವ ಪ್ರಮುಖ ಸವಾಲುಗಳಲ್ಲಿ ಆಹಾರ ಭದ್ರತೆಯದ್ದೂ ಒಂದು. ಆಹಾರ ವಲಯದಲ್ಲಿ ಒಳ್ಳೆಯ ಅವಕಾಶಗಳು ಈಗ ಇವೆ. ಆಹಾರ ಸಂಸ್ಕರಣೆಯ ಉದ್ಯಮದ ಎಲ್ಲಾ ಸೆಕ್ಟರ್​ನಲ್ಲೂ ಭಾರತ ಉತ್ತಮ ಪ್ರಗತಿ ಕಂಡಿದೆ. ಭಾರತದಲ್ಲಿ ಪ್ಯಾಕೇಜ್ಡ್ ಆಹಾರಕ್ಕೆ ಬಹಳ ಬೇಡಿಕೆ ಹೆಚ್ಚಿದ್ದು, ಇದರಿಂದ ರೈತರು, ಸ್ಟಾರ್ಟಪ್​ಗಳು ಮತ್ತು ಉದ್ದಿಮೆದಾರರಿಗೆ ಅವಕಾಶ ಹೆಚ್ಚುವಂತಾಗಿದೆ ಎಂದು ನರೇಂದ್ರ ಮೋದಿ ಅವರು ವರ್ಲ್ಡ್ ಫೂಡ್ ಇಂಡಿಯಾ 2023 ಕಾರ್ಯಕ್ರಮದ ಉದ್ಘಾಟನೆ ವೇಳೆ ತಿಳಿಸಿದ್ದಾರೆ.

ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಅಮೋಘ ‘ಕಾರ್ಯ’ ವೈಖರಿ; ಬೆಂಗಳೂರಿನ ಈ ಸ್ಟಾರ್ಟಪ್ ಜೊತೆ ಗೂಗಲ್, ಮೈಕ್ರೋಸಾಫ್ಟ್ ಕೈಜೋಡಿಸಿರೋದು ಯಾಕೆ ನೋಡಿ..!

ಭಾರತದ ಉದಯೋನ್ಮುಖ ವಲಯ (sunrise sector) ಎಂದು ಆಹಾರ ಸಂಸ್ಕರಣೆ ವಲಯವನ್ನು ಪರಿಗಣಿಸಲಾಗಿದೆ. ಕಳದ 9 ವರ್ಷದಲ್ಲಿ ಈ ವಲಯದಲ್ಲಿ 50,000 ಕೋಟಿ ರೂಗೂ ಹೆಚ್ಚು ಮೊತ್ತದ ವಿದೇಶೀ ನೇರ ಹೂಡಿಕೆಗಳಾಗಿವೆ. ಸರ್ಕಾರದ ಉದ್ಯಮಪರ ಮತ್ತು ರೈತಪರ ನೀತಿಗಳು ಇದಕ್ಕೆ ಕಾರಣ. ಕಳೆದ 9 ವರ್ಷದಲ್ಲಿ ಭಾರತದ ಕೃಷಿ ಉತ್ಪನ್ನಗಳ ರಫ್ತಿನಲ್ಲಿ ಸಂಸ್ಕರಿತ ಆಹಾರದ ಪ್ರಮಾಣ ಶೇ. 13ರಿಂದ 23ಕ್ಕೆ ಹೆಚ್ಚಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಾಹಿತಿ ನೀಡಿದ್ದಾರೆ.

ಆಹಾರ ಉದ್ಯಮದಲ್ಲಿ ಮಹಿಳೆಯರ ನೇತೃತ್ವ…

ಭಾರತದ ಆಹಾರ ಸಂಸ್ಕರಣೆ ಉದ್ಯಮದಲ್ಲಿ ಮಹಿಳೆಯರ ನಾಯಕತ್ವದ ಸಾಮರ್ಥ್ಯ ಬಹಳ ಸಹಜವಾದದ್ದಾಗಿದೆ. ಮಹಿಳಾ ಉದ್ದಿಮೆದಾರರು, ಸ್ವಸಹಾಯ ಗುಂಪುಗಳಿಗೆ ಪ್ರತಿಯೊಂದು ಹಂತದಲ್ಲೂ ಉತ್ತೇಜಿಸಲಾಗುತ್ತಿದೆ ಎಂದೂ ಪ್ರಧಾನಿಗಳು ಹೇಳಿದ್ದಾರೆ.

ಇದನ್ನೂ ಓದಿ: ಭಾರತದ 14 ಮಹಾದಾನಿಗಳಲ್ಲಿ ಕನ್ನಡಿಗರೇ ಹೆಚ್ಚು; ಇಲ್ಲಿದೆ ಹುರುನ್ ಫಿಲಾಂತ್ರೋಪಿ ಪಟ್ಟಿ ಮುಖ್ಯಾಂಶ

ಇದೇ ವೇಳೆ, ಅವರು ಭಾರತದ ಆಹಾರ ಸಂಸ್ಕೃತಿ ಸಾವಿರಾರು ವರ್ಷಗಳಿಂದ ಬೆಳೆದು ನಿರ್ಮಿತವಾಗಿದ್ದು, ಅಹಾರ ಅಭ್ಯಾಸಗಳಿಗೆ ಆಯುರ್ವೇದ ಮೂಲವಾಗಿರುವುದು, ಭಾರತದ ಆಹಾರ ಜ್ಞಾನಭಂಡಾರದಿಂದ ಹೇಗೆ ವಿಶ್ವ ಲಾಭ ಮಾಡಿಕೊಳ್ಳಬಹುದು ಎಂಬುದನ್ನು ವರ್ಲ್ಡ್ ಫೂಡ್ ಇಂಡಿಯಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿವರಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ