ಭಾರತೀಯ ರಿಸರ್ವ್ ಬ್ಯಾಂಕ್ 90 ವರ್ಷ ಸಂಸ್ಮರಣಾರ್ಥ 90 ರೂ ವಿಶೇಷ ನಾಣ್ಯ ಬಿಡುಗಡೆ

|

Updated on: Apr 01, 2024 | 2:39 PM

RBI @90 years: ಆರ್​ಬಿಐ ಸ್ಥಾಪನೆಯಾಗಿ ಈಗ 89 ವರ್ಷ ಪೂರ್ಣವಾಗಿದ್ದು, 90ನೇ ವರ್ಷ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ಹಣಕಾಸು ಸಚಿವಾಲಯ 90 ರೂಗಳ ವಿಶೇಷ ಕಾಯಿನ್ ಅನ್ನು ಅನಾವರಣಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆರ್​ಬಿಐನ ಗವರ್ನರ್ ಮೊದಲಾದವರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು. 40 ಗ್ರಾಮ್ ತೂಕದ ಈ ಸ್ಪೆಷಲ್ ಕಾಯಿನ್ ಅನ್ನು ಶೇ. 99.99 ರಷ್ಟು ಶುದ್ಧ ಬೆಳ್ಳಿಯಲ್ಲಿ ತಯಾರಿಸಲಾಗಿದೆ. ಆರ್​ಬಿಐನ ಲಾಂಛನ, ಅಶೋಕ ಸ್ತಂಭದ ನಾಲ್ಕು ಸಿಂಹಗಳ ಲಾಂಛನ ಈ ನಾಣ್ಯದಲ್ಲಿವೆ.

ಭಾರತೀಯ ರಿಸರ್ವ್ ಬ್ಯಾಂಕ್ 90 ವರ್ಷ ಸಂಸ್ಮರಣಾರ್ಥ 90 ರೂ ವಿಶೇಷ ನಾಣ್ಯ ಬಿಡುಗಡೆ
90 ರೂ ನಾಣ್ಯ
Follow us on

ಮುಂಬೈ, ಏಪ್ರಿಲ್ 1: ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಯಾಗಿ 90ನೇ ವರ್ಷಕ್ಕೆ ಅಡಿ ಇಟ್ಟ ಸಂದರ್ಭದ ಸ್ಮರಣಾರ್ಥ 90 ರುಪಾಯಿ ಮುಖಬೆಲೆಯ ವಿಶೇಷ ನಾಣ್ಯ (Rs 90 coin) ತಯಾರಿಸಲಾಗಿದೆ. ಇಂದು ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಸ್ಪೆಷಲ್ ಕಾಯಿನ್ ಬಿಡುಗಡೆ ಮಾಡಿದರು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಹಣಕಾಸು ಸಚಿವಾಲಯ ಅನಾವರಣಗೊಳಿಸಿದ ಈ 90 ರೂ ನಾಣ್ಯವನ್ನು 99.99 ಪ್ರತಿಶತದಷ್ಟು ಶುದ್ಧ ಬೆಳ್ಳಿಯಿಂದ ತಯಾರಿಸಲಾಗಿದೆ. ಈ ನಾಣ್ಯ 40 ಗ್ರಾಮ್ ತೂಗುತ್ತದೆ.

90 ರೂ ನಾಣ್ಯದ ವಿಶೇಷತೆಗಳೇನಿವೆ?

ಶುದ್ಧ ಬೆಳ್ಳಿಯಿಂದ ತಯಾರಿಸಲಾದ 40 ಗ್ರಾಮ್ ತೂಕದ ಈ 90 ರೂ ಮುಖಬೆಲೆಯ ನಾಣ್ಯದಲ್ಲಿ ಆರ್​ಬಿಐನ ಲಾಂಛನವನ್ನು ಕಾಣಬಹುದು. ಲಾಂಛನದ ಕೆಳಗೆ RBI@90 ಎಂದು ಬರೆಯಲಾಗಿದೆ. ಅಶೋಕ ಸ್ತಂಭದ ನಾಲ್ಕು ಸಿಂಹಗಳಿರುವ ಲಾಂಛನ ಇದೆ. ಅದರ ಕೆಳಗೆ ದೇವನಾಗರಿ ಲಿಪಿಯಲ್ಲಿ ಬರೆಯಲಾದ ಸತ್ಯಮೇವ ಜಯತೆ ಇದೆ.

ಈ 90 ರೂ ನಾಣ್ಯವನ್ನು ವಿಶೇಷ ದಿನದ ಸ್ಮರಣೆಗಾಗಿ ತಯಾರಿಸಲಾಗಿದೆ. ಇದು ಸಾರ್ವಜನಿಕ ಬಳಕೆಗೆ ಲಭ್ಯ ಇರುವ ಸಾಧ್ಯತೆ ಕಡಿಮೆ. ಕಾಯಿನ್ ಕಲೆಕ್ಟರ್​ಗಳಿಗೆ ಒಂದು ಸೇರ್ಪಡೆಯಾಗಬಹುದು.

ಇದನ್ನೂ ಓದಿ: RBI 90ನೇ ಸಂಸ್ಥಾಪನಾ ದಿನ: ಐತಿಹಾಸಕ್ಕೆ ಹಂತಕ್ಕೆ ಆರ್​ಬಿಐ ಪ್ರವೇಶ ಎಂದ ಪ್ರಧಾನಿ ಮೋದಿ

ಆರ್​ಬಿಐ ಹುಟ್ಟಿದ ಇತಿಹಾಸ

ಭಾರತೀಯ ರಿಸರ್ವ್ ಬ್ಯಾಂಕ್ 1935ರ ಎಪ್ರಿಲ್ 1ರಂದು ಕಾರ್ಯಾರಂಭಿಸಿತು. ಬ್ರಿಟಿಷರ ಆಡಳಿತದಲ್ಲಿ ಹಿಲ್ಟನ್ ಯಂಗ್ ಕಮಿಷನ್ ಶಿಫಾರಸುಗಳ ಆಧಾರದ ಮೇಲೆ ಆರ್​ಬಿಐ ಅನ್ನು ಸ್ಥಾಪಿಸಲಾಯಿತು.

ಹಣಕಾಸು ಸ್ಥಿರತೆಗೆ ಬೇಕಾದ ಮೀಸಲು ನಿಧಿಯನ್ನು ಸ್ಥಾಪಿಸಲು, ಬ್ಯಾಂಕ್ ನೋಟು, ನಾಣ್ಯಗಳನ್ನು ತಯಾರಿಸಲು ಇವೇ ಮುಂತಾದ ಕಾರ್ಯಗಳ ಹೊಣೆಗಾರಿಕೆ ರಿಸರ್ವ್ ಬ್ಯಾಂಕ್​ಗೆ ಇರುತ್ತದೆ. ಯಾವುದೇ ದೇಶದಲ್ಲೂ ರಿಸರ್ವ್ ಬ್ಯಾಂಕ್ ಅಲ್ಲಿಯ ಸೆಂಟ್ರಲ್ ಬ್ಯಾಂಕ್ ಆಗಿರುತ್ತದೆ. ಅಮೆರಿಕದಲ್ಲಿ ಫೆಡರಲ್ ರಿಸರ್ವ್ ಇರುವಂತೆ ಭಾರತದಲ್ಲಿ ಆರ್​ಬಿಐ ಇದೆ.

ಇದನ್ನೂ ಓದಿ: ಭಾರತದ ಫಾರೆಕ್ಸ್ ರಿಸರ್ವ್ಸ್ 642.631 ಬಿಲಿಯನ್ ಡಾಲರ್​ಗೆ ಏರಿಕೆ; ಇದು ಸಾರ್ವಕಾಲಿಕ ಗರಿಷ್ಠ ಮಟ್ಟ

ಭಾರತದಲ್ಲಿ ಆರ್ಬಿಐ ಹಲವು ಸಾಂಸ್ಥಿಕ ಅಭಿವೃದ್ಧಿಗೆ ಅಂಕಿತ ಹಾಕಿದೆ. ಯೂನಿಟ್ ಟ್ರಸ್ಟ್ ಆಫ್ ಇಂಡಿಯಾ, ಐಡಿಬಿಐ, ನಬಾರ್ಡ್, ಡಿಎಫ್​ಎಚ್​ಐ ಇತ್ಯಾದಿ ಸಂಸ್ಥೆಗಳನ್ನು ಸ್ಥಾಪಿಸಿ ಅಭಿವೃದ್ಧಿಗೆ ಎಡೆ ಮಾಡಿಕೊಟ್ಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:32 pm, Mon, 1 April 24