ನವದೆಹಲಿ, ಅಕ್ಟೋಬರ್ 10: ರತನ್ ಟಾಟಾ ನಿಧನದಿಂದ ದೇಶದ ಅಮೂಲ್ಯ ರತ್ನವೊಂದು ಇಹಲೋಕ ತ್ಯಜಿಸಿದಂತಾಗಿದೆ. ಭಾರತದಲ್ಲಿ ಕೈಗಾರಿಕೋದ್ಯಮ ಬೆಳವಣಿಗೆಗೆ ಬುನಾದಿ ಹಾಕಿದವರಲ್ಲಿ ಇವರ ಟಾಟಾ ಕುಟುಂಬವೂ ಒಂದು. ದೇಶದ ಗಣ್ಯರು ಇವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಇದೇ ವೇಳೆ, ಇವತ್ತಿನ ಷೇರು ಮಾರುಕಟ್ಟೆಯು ಟಾಟಾ ಗ್ರೂಪ್ ಕಂಪನಿಗಳಿಗೆ ಪೂರಕವಾಗಿ ಸ್ಪಂದಿಸುವ ಮೂಲಕ ರತನ್ ಟಾಟಾ ಅವರನ್ನು ಸಕಾರಾತ್ಮಕವಾಗಿ ಬೀಳ್ಕೊಟ್ಟಿದೆ. ಟಾಟಾ ಗ್ರೂಪ್ನ ಕಂಪನಿಗಳ ಪೈಕಿ 15-16 ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿವೆ. ಈ ಪೈಕಿ ಒಂಬತ್ತು ಕಂಪನಿಗಳು ಪಾಸಿಟಿವ್ ಆಗಿ ಅಂತ್ಯಗೊಂಡಿವೆ. ಆರು ಷೇರುಗಳ ಬೆಲೆ ಮಾತ್ರ ಇವತ್ತು ಇಳಿಮುಖಗೊಂಡಿದೆ.
ಟಾಟಾ ಇನ್ವೆಸ್ಟ್ಮೆಂಟ್ ಕಾರ್ಪೊರೇಶನ್ ಮತ್ತು ಟಾಟಾ ಕೆಮಿಕಲ್ಸ್ ಸಂಸ್ಥೆಗಳ ಷೇರುಗಳು ಶೇ. 4ಕ್ಕಿಂತಲೂ ಅಧಿಕ ಬೆಲೆ ಹೆಚ್ಚಳ ಪಡೆದಿವೆ. ಕುಸಿತಗೊಂಡ ಆರು ಟಾಟಾ ಷೇರುಗಳಲ್ಲಿ ಟ್ರೆಂಟ್ ಹೆಚ್ಚು ನಷ್ಟ ಕಂಡಿದೆ. ಒಟ್ಟಾರೆ, ಟಾಟಾ ಗ್ರೂಪ್ ಇವತ್ತು ಉತ್ತಮ ಲಾಭ ಕಂಡಿದೆ. ಗ್ರೂಪ್ನ ಒಟ್ಟಾರೆ ಮಾರುಕಟ್ಟೆ ಬಂಡವಾಳ 30 ಲಕ್ಷ ಕೋಟಿ ರೂಗೂ ಅಧಿಕ ಇದೆ.
ಇದನ್ನೂ ಓದಿ: ಫೋನಿಲ್ಲ, ಸಿಂಪಲ್ ಲೈಫ್.. ರತನ್ ಟಾಟಾ ಸಹೋದರ ಜಿಮ್ಮಿಯದ್ದು ಎಲ್ಲಾ ಇದ್ದೂ ಏನೂ ಇಲ್ಲದಂಥ ಜೀವನ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ