AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೋನಿಲ್ಲ, ಸಿಂಪಲ್ ಲೈಫ್.. ರತನ್ ಟಾಟಾ ಸಹೋದರ ಜಿಮ್ಮಿಯದ್ದು ಎಲ್ಲಾ ಇದ್ದೂ ಏನೂ ಇಲ್ಲದಂಥ ಜೀವನ

Ratan Tata's brother Jimmy simple life: ರತನ್ ಟಾಟಾ ಅವರ ಕಿರಿಯ ಸಹೋದರ ಜಿಮ್ಮಿ ಟಾಟಾ ಯಾವತ್ತೂ ಪ್ರಚಾರಕ್ಕೆ ಸಿಲುಕಿದವರಲ್ಲ. ಮುಂಬೈನಲ್ಲಿ ಬಹಳ ಸರಳ ಜೀವನ ನಡೆಸುತ್ತಿದ್ದಾರೆ. ಡಬಲ್ ಬೆಡ್​ರೂಮ್ ಅಪಾರ್ಟ್ಮೆಂಟ್​ನಲ್ಲಿ ಬದುಕು ಸವೆಸುತ್ತಿರುವ ಅವರ ಬಳಿ ಒಂದು ಮೊಬೈಲ್ ಫೋನ್ ಕೂಡ ಇಲ್ಲ.

ಫೋನಿಲ್ಲ, ಸಿಂಪಲ್ ಲೈಫ್.. ರತನ್ ಟಾಟಾ ಸಹೋದರ ಜಿಮ್ಮಿಯದ್ದು ಎಲ್ಲಾ ಇದ್ದೂ ಏನೂ ಇಲ್ಲದಂಥ ಜೀವನ
ಜಿಮ್ಮಿ ಟಾಟಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 10, 2024 | 1:41 PM

Share

ಮುಂಬೈ, ಅಕ್ಟೋಬರ್ 10: ರತನ್ ಟಾಟಾ ನಂತರ ಮುಂದ್ಯಾರು ಎನ್ನುವ ಪ್ರಶ್ನೆ ಎದ್ದ ಬೆನ್ನಲ್ಲೇ ಎಲ್ಲರ ಚಿತ್ತ ಟಾಟಾ ಫ್ಯಾಮಿಲಿಯತ್ತ ಹೊರಳಿದೆ. ರತನ್ ಟಾಟಾ ಅವರ ತಂದೆ ನವಲ್ ಟಾಟಾಗೆ ಇಬ್ಬರು ಪತ್ನಿಯರು. ಮೊದಲ ಪತ್ನಿಯ ಮಕ್ಕಳೇ ರತನ್ ಮತ್ತು ಜಿಮ್ಮಿ ಟಾಟಾ. ಎರಡನೇ ಪತ್ನಿಯ ಮಗ ನೋಯಲ್ ಟಾಟಾ. ಈಗ ನೋಯಲ್ ಟಾಟಾದ ಮೂವರು ಮಕ್ಕಳಲ್ಲಿ ಒಬ್ಬರಿಗೆ ಟಾಟಾ ವಾರಸುದಾರಿಕೆ ಸಿಗಬಹುದು ಎನ್ನಲಾಗುತ್ತಿದೆ. ಹಾಗಾದರೆ, ರತನ್ ಅವರ ಕಿರಿಯ ಸಹೋದರ ಜಿಮ್ಮಿ ಟಾಟಾ ಅವರದ್ದೇನು ಪಾತ್ರ..?

ಜಿಮ್ಮಿ ಟಾಟಾ ಎಲ್ಲಾ ಇದ್ದೂ ಏನೂ ಇಲ್ಲದಂತಹ ಸರಳ ಜೀವನ ನಡೆಸುತ್ತಿದ್ದಾರೆ. ಟಾಟಾ ಗ್ರೂಪ್​ನ ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್, ಟಾಟಾ ಸನ್ಸ್, ಟಿಸಿಎಸ್, ಟಾಟಾ ಪವರ್, ಇಂಡಿಯನ್ ಹೋಟೆಲ್ಸ್ ಇತ್ಯಾದಿ ಕಂಪನಿಗಳಲ್ಲಿ ಸಾಕಷ್ಟು ಷೇರುಪಾಲು ಹೊಂದಿದ್ದಾರೆ. ಹಲವು ಸಾವಿರ ಕೋಟಿ ರೂಗಳ ಮೌಲ್ಯದ ಸಂಪತ್ತು ಅವರಲ್ಲಿದೆ. ಒಂದು ಅಂದಾಜು ಪ್ರಕಾರ ರತನ್ ಟಾಟಾ ಮತ್ತು ಜಿಮ್ಮಿ ಟಾಟಾ ಇಬ್ಬರ ನಿವ್ವಳ ಆಸ್ತಿ ಸೇರಿಸಿದರೆ 20,000 ಕೋಟಿ ರೂಗೂ ಅಧಿಕ ಇದೆ. ಆದರೂ ಕೂಡ ಜಿಮ್ಮಿ ಬಹಳ ಸರಳ ಜೀವನ ನಡೆಸುತ್ತಿದ್ದಾರೆ. ಬಿಸಿನೆಸ್​ನ ರಗಳೆಗಳಿಂದ ದೂರವೇ ಉಳಿದು ನೆಮ್ಮದಿಯಲ್ಲಿದ್ದಾರೆ.

ಇದನ್ನೂ ಓದಿ: ರತನ್ ನಂತರ ಟಾಟಾ ಗ್ರೂಪ್ ವಾರಸುದಾರರು ಯಾರು? ಮಾಯಾ, ಲಿಯಾ, ನೆವಿಲ್ಲೆ ಟಾಟಾ ಪೈಕಿ ಯಾರಿಗೆ ಸಿಗುತ್ತೆ ಮುಂದಾಳತ್ವ?

ಮುಂಬೈನ ಕೊಲಾಬದಲ್ಲಿ ಸರಳವಾದ ಡಬಲ್ ಬೆಡ್​ರೂಮ್​ನ ಅಪಾರ್ಟ್ಮೆಂಟ್​ವೊಂದರಲ್ಲಿ ಅವರು ವಾಸಿಸುತ್ತಿದ್ದಾರೆ. ತಾನಾಯಿತು, ಓದಾಯಿತು, ಆಟವಾಯಿತು, ಇದೇ ಅವರ ಜೀವನ. ಬಿಸಿನೆಸ್ ಮಾತ್ರವಲ್ಲ, ಸೆಲ್ ಫೋನ್ ರಗಳೆಯಿಂದಲೂ ಅವರು ದೂರ ಉಳಿದಿದ್ದಾರೆ. ಅವರ ಬಳಿ ಮೊಬೈಲ್ ಫೋನೇ ಇಲ್ಲವಂತೆ. ಓದುವುದೇ ಅವರ ಪ್ರಮುಖ ಟೈಮ್ ಪಾಸ್.

ಜಿಮ್ಮಿ ಟಾಟಾ ಅಪ್ರತಿಮ ಸ್ಕ್ವಾಷ್ ಆಟಾಗಾರನಂತೆ. ಈ ವಿಚಾರ ಹೊರಗಿನವರಿಗೆ ಗೊತ್ತಾಗಿದ್ದೇ ಎರಡು ವರ್ಷದ ಹಿಂದೆ ಉದ್ಯಮಿ ಹರ್ಷ್ ಗೋಯಂಕಾ ಮಾಡಿದ ಟ್ವೀಟ್​ನಿಂದ. ಟಾಟಾ ಗ್ರೂಪ್ ರೀತಿಯಲ್ಲಿ ಜಿಮ್ಮಿ ಟಾಟಾ ಕೂಡ ಪ್ರಚಾರಕ್ಕೆ ಹಾತೊರೆದವರಲ್ಲ ಎಂದು ಹರ್ಷ್ ಗೋಯಂಕಾ 2022ರಲ್ಲಿ ತಮ್ಮ ಎಕ್ಸ್ ಪೋಸ್ಟ್​ವೊಂದರಲ್ಲಿ ಬರೆದಿದ್ದರು.

ಇದನ್ನೂ ಓದಿ: ಕರ್ನಾಟಕದ ಬಗ್ಗೆ ಗೌರವ, ಆದರ ಹೊಂದಿದ್ದ ರತನ್ ಟಾಟಾ; ಹೇಗಿತ್ತು ಈ ರಾಜ್ಯದೊಂದಿಗೆ ಅವರ ಸಂಬಂಧ?

View this post on Instagram

A post shared by Ratan Tata (@ratantata)

ಕುತೂಹಲ ಮೂಡಿಸಿದ ರತನ್ ಪೋಸ್ಟ್

ರತನ್ ಟಾಟಾ 2023ರ ಜನವರಿ 10ರಂದು ಇನ್ಸ್​ಟಾಗ್ರಾಮ್​ನಲ್ಲಿ ತಾನು ಹಾಗೂ ಜಿಮ್ಮಿ ಇರುವ ಹಳೆಯ ಫೋಟೋವೊಂದನ್ನು ಹಾಕಿದ್ದರು. 1945ರಲ್ಲಿ ಕ್ಲಿಕ್ಕಿಸಿದ ಆ ಫೋಟೋದಲ್ಲಿ ರತನ್ ಮತ್ತು ಜಿಮ್ಮಿ ಇದ್ದಾರೆ. ಜೊತೆಗೆ ನಾಯಿಯೂ ಇದೆ. ‘ಅಂದಿನ ಖುಷಿಯ ದಿನಗಳು. ನಮ್ಮಿಬ್ಬರ ಮಧ್ಯೆ ಯಾವುದೂ ಅಡ್ಡಿ ಇರಲಿಲ್ಲ,’ ಎಂದು ರತನ್ ಟಾಟಾ ಬರೆದಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ
ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ
ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಬಿಗ್ ಬಾಸ್ ಫಿನಾಲೆಗೆ ಗಿಲ್ಲಿ, ಧನುಷ್: ಭವಿಷ್ಯ ನುಡಿದ ಸ್ಪಂದನಾ ಸೋಮಣ್ಣ
ಬಿಗ್ ಬಾಸ್ ಫಿನಾಲೆಗೆ ಗಿಲ್ಲಿ, ಧನುಷ್: ಭವಿಷ್ಯ ನುಡಿದ ಸ್ಪಂದನಾ ಸೋಮಣ್ಣ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಮೂಳೆ ಬಿದ್ದು ಹೋಗೋಕಿಂತ ಮೊದಲು ಮದುವೆ ಆಗು: ಗಿಲ್ಲಿ ಮೇಲೆ ಅಶ್ವಿನಿ ಆಕ್ರೋಶ
ಮೂಳೆ ಬಿದ್ದು ಹೋಗೋಕಿಂತ ಮೊದಲು ಮದುವೆ ಆಗು: ಗಿಲ್ಲಿ ಮೇಲೆ ಅಶ್ವಿನಿ ಆಕ್ರೋಶ