ರತನ್ ಟಾಟಾ ನಿಧನಕ್ಕೆ ಷೇರುಪೇಟೆ ರಿಯಾಕ್ಷನ್ ಹೇಗಿತ್ತು? 15 ಷೇರುಗಳಲ್ಲಿ ಎದ್ದಿದ್ದೆಷ್ಟು, ಬಿದ್ದಿದ್ದೆಷ್ಟು?

Tata group stocks performance on Oct 10th: ರತನ್ ಟಾಟಾ ಇಹಲೋಕ ತ್ಯಜಿಸಿದ ಬಳಿಕ ಟಾಟಾ ಗ್ರೂಪ್​ಗೆ ಮುಂದ್ಯಾರು ದಿಕ್ಕು ಎಂದು ಶೋಧಿಸಲಾಗುತ್ತಿದೆ. ಇದೇ ವೇಳೆ ಇವತ್ತು ಷೇರು ಮಾರುಕಟ್ಟೆ ಟಾಟಾ ಗ್ರೂಪ್​ನ ಹೆಚ್ಚಿನ ಕಂಪನಿಗಳ ಷೇರಿಗೆ ಪಾಸಿಟಿವ್ ಸ್ಪಂದನೆ ಸಿಕ್ಕಿದೆ. 9 ಸ್ಟಾಕ್​ಗಳು ಗ್ರೀನ್ ಬಣ್ಣದಲ್ಲಿವೆ.

ರತನ್ ಟಾಟಾ ನಿಧನಕ್ಕೆ ಷೇರುಪೇಟೆ ರಿಯಾಕ್ಷನ್ ಹೇಗಿತ್ತು? 15 ಷೇರುಗಳಲ್ಲಿ ಎದ್ದಿದ್ದೆಷ್ಟು, ಬಿದ್ದಿದ್ದೆಷ್ಟು?
ಷೇರು ಮಾರುಕಟ್ಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 10, 2024 | 4:53 PM

ನವದೆಹಲಿ, ಅಕ್ಟೋಬರ್ 10: ರತನ್ ಟಾಟಾ ನಿಧನದಿಂದ ದೇಶದ ಅಮೂಲ್ಯ ರತ್ನವೊಂದು ಇಹಲೋಕ ತ್ಯಜಿಸಿದಂತಾಗಿದೆ. ಭಾರತದಲ್ಲಿ ಕೈಗಾರಿಕೋದ್ಯಮ ಬೆಳವಣಿಗೆಗೆ ಬುನಾದಿ ಹಾಕಿದವರಲ್ಲಿ ಇವರ ಟಾಟಾ ಕುಟುಂಬವೂ ಒಂದು. ದೇಶದ ಗಣ್ಯರು ಇವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಇದೇ ವೇಳೆ, ಇವತ್ತಿನ ಷೇರು ಮಾರುಕಟ್ಟೆಯು ಟಾಟಾ ಗ್ರೂಪ್ ಕಂಪನಿಗಳಿಗೆ ಪೂರಕವಾಗಿ ಸ್ಪಂದಿಸುವ ಮೂಲಕ ರತನ್ ಟಾಟಾ ಅವರನ್ನು ಸಕಾರಾತ್ಮಕವಾಗಿ ಬೀಳ್ಕೊಟ್ಟಿದೆ. ಟಾಟಾ ಗ್ರೂಪ್​ನ ಕಂಪನಿಗಳ ಪೈಕಿ 15-16 ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿವೆ. ಈ ಪೈಕಿ ಒಂಬತ್ತು ಕಂಪನಿಗಳು ಪಾಸಿಟಿವ್ ಆಗಿ ಅಂತ್ಯಗೊಂಡಿವೆ. ಆರು ಷೇರುಗಳ ಬೆಲೆ ಮಾತ್ರ ಇವತ್ತು ಇಳಿಮುಖಗೊಂಡಿದೆ.

ಟಾಟಾ ಇನ್ವೆಸ್ಟ್​ಮೆಂಟ್ ಕಾರ್ಪೊರೇಶನ್ ಮತ್ತು ಟಾಟಾ ಕೆಮಿಕಲ್ಸ್ ಸಂಸ್ಥೆಗಳ ಷೇರುಗಳು ಶೇ. 4ಕ್ಕಿಂತಲೂ ಅಧಿಕ ಬೆಲೆ ಹೆಚ್ಚಳ ಪಡೆದಿವೆ. ಕುಸಿತಗೊಂಡ ಆರು ಟಾಟಾ ಷೇರುಗಳಲ್ಲಿ ಟ್ರೆಂಟ್ ಹೆಚ್ಚು ನಷ್ಟ ಕಂಡಿದೆ. ಒಟ್ಟಾರೆ, ಟಾಟಾ ಗ್ರೂಪ್ ಇವತ್ತು ಉತ್ತಮ ಲಾಭ ಕಂಡಿದೆ. ಗ್ರೂಪ್​ನ ಒಟ್ಟಾರೆ ಮಾರುಕಟ್ಟೆ ಬಂಡವಾಳ 30 ಲಕ್ಷ ಕೋಟಿ ರೂಗೂ ಅಧಿಕ ಇದೆ.

ಅ. 10ರ ಷೇರುಮಾರುಕಟ್ಟೆಯಲ್ಲಿ ಲಾಭ ಮಾಡಿದ ಟಾಟಾ ಗ್ರೂಪ್ ಕಂಪನಿಗಳಿವು

  1. ಟಾಟಾ ಸ್ಟೀಲ್ ಲಿ: 159.72 ರೂ (ಶೇ. 0.41ರಷ್ಟು ಏರಿಕೆ)
  2. ಟಾಟಾ ಕೆಮಿಕಲ್ಸ್: 1,151.2 ರೂ (ಶೇ. 4.15ರಷ್ಟು ಏರಿಕೆ)
  3. ಟಾಟಾ ಪವರ್: 465.65 ರೂ (ಶೇ. 1.04ರಷ್ಟು ಏರಿಕೆ)
  4. ಇಂಡಿಯನ್ ಹೋಟೆಲ್ಸ್ ಕಂಪನಿ: 706.25 ರೂ (ಶೇ. 1.82ರಷ್ಟು ಏರಿಕೆ)
  5. ಟಾಟಾ ಕಮ್ಯೂನಿಕೇಶನ್ಸ್: 1951.8 ರೂ (ಶೇ. 0.13ರಷ್ಟು ಏರಿಕೆ)
  6. ಟಾಟಾ ಇನ್ವೆಸ್ಟ್​ಮೆಂಟ್ ಕಾರ್ಪೊರೇಶನ್: 6,923.25 ರೂ (ಶೇ. 5.71ರಷ್ಟು ಏರಿಕೆ)
  7. ಟಾಟಾ ಎಲ್​ಕ್ಸಿ: 7,759.3 ರೂ (ಶೇ. 1.9ರಷ್ಟು ಏರಿಕೆ)
  8. ನೆಲ್ಕೋ ಲಿಮಿಟೆಡ್: 1,006.6 ರೂ (ಶೇ. 1.05ರಷ್ಟು ಏರಿಕೆ)
  9. ಟಾಟಾ ಟೆಕ್ನಾಲಜೀಸ್ ಲಿ: 1,064.7 ರೂ (ಶೇ. 1.53ರಷ್ಟು ಏರಿಕೆ)

ಇದನ್ನೂ ಓದಿ: ಫೋನಿಲ್ಲ, ಸಿಂಪಲ್ ಲೈಫ್.. ರತನ್ ಟಾಟಾ ಸಹೋದರ ಜಿಮ್ಮಿಯದ್ದು ಎಲ್ಲಾ ಇದ್ದೂ ಏನೂ ಇಲ್ಲದಂಥ ಜೀವನ

ಅ. 10ರ ಷೇರುಮಾರುಕಟ್ಟೆಯಲ್ಲಿ ನಷ್ಟ ಕಂಡ ಟಾಟಾ ಗ್ರೂಪ್ ಕಂಪನಿಗಳಿವು

  1. ಟಾಟಾ ಮೋಟಾರ್ಸ್: 928.5 ರೂ (ಶೇ. 1.13ರಷ್ಟು ಇಳಿಕೆ)
  2. ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ (ಟಿಸಿಎಸ್): 4,227.4 ರೂ (ಶೇ. 0.6ರಷ್ಟು ಇಳಿಕೆ)
  3. ಟ್ರೆಂಟ್ ಲಿ: 8,028.85 ರೂ (ಶೇ. 2.34ರಷ್ಟು ಇಳಿಕೆ)
  4. ವೋಲ್ಟಾಸ್ ಲಿ: 1,776.7 ರೂ (ಶೇ. 0.55ರಷ್ಟು ಇಳಿಕೆ)
  5. ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್: 1,114.15 ರೂ (ಶೇ. 0.33ರಷ್ಟು ಇಳಿಕೆ)
  6. ಟೈಟಾನ್ ಕಂಪನಿ: 3,447.25 ರೂ (ಶೇ. 1.32ರಷ್ಟು ಇಳಿಕೆ)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ