NBFC: ಶ್ರೀರಾಮ್ ಕ್ಯಾಪಿಟಲ್ ಸೇರಿದಂತೆ 17 ಎನ್​ಬಿಎಫ್​ಸಿಗಳ ಲೈಸೆನ್ಸ್ ರದ್ದು; ಇಲ್ಲಿದೆ ಪಟ್ಟಿ

|

Updated on: Mar 10, 2023 | 5:19 PM

RBI Cancels CoR of 17 NBFCs: ಶ್ರೀರಾಮ್ ಸಿಟಿ ಯೂನಿಯನ್, ಶ್ರೀರಾಮ್ ಕ್ಯಾಪಿಟಲ್ ಸೇರಿದಂತೆ 17 ಎನ್​ಬಿಎಫ್​ಸಿಗಳಿಗೆ ನೀಡಲಾಗಿದ್ದ ಸರ್ಟಿಫಿಕೇಟ್ ಆಫ್ ರಿಜಿಸ್ಟ್ರೇಶನ್ ಅನ್ನು ಆರ್​ಬಿಐ ರದ್ದು ಮಾಡಿದೆ. ಆರ್​ಬಿಐನ ವೆಬ್​ಸೈಟ್​ನಲ್ಲಿ ಪಟ್ಟಿ ನೀಡಲಾಗಿದೆ.

NBFC: ಶ್ರೀರಾಮ್ ಕ್ಯಾಪಿಟಲ್ ಸೇರಿದಂತೆ 17 ಎನ್​ಬಿಎಫ್​ಸಿಗಳ ಲೈಸೆನ್ಸ್ ರದ್ದು; ಇಲ್ಲಿದೆ ಪಟ್ಟಿ
ಆರ್​ಬಿಐ
Follow us on

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಚ್ 10, ಇಂದು 17 ಬ್ಯಾಂಕೇತರ ಹಣಕಾಸು ಸಂಸ್ಥೆಗಳ (NBFC- Non Banking Finance Corporation) ನೊಂದಣಿ ಪ್ರಮಾಣಪತ್ರವನ್ನು (CoR- Certificate of Registration) ರದ್ದು ಮಾಡಿದೆ. ಆರ್​ಬಿಐನ ಪತ್ರಿಕಾಬಿಡುಗಡೆಯಲ್ಲಿ ಈ 17 ಎನ್​ಬಿಎಫ್​ಸಿಗಳ ಪಟ್ಟಿ ಹಾಕಲಾಗಿದೆ. ಆರ್​ಬಿಐನಿಂದ (Reserve Bank of India) ನೀಡಲಾಗಿದ್ದ ನೊಂದಣಿ ಪ್ರಮಾಣಪತ್ರವನ್ನು 17 ಎನ್​ಬಿಎಫ್​ಸಿಗಳು ಮರಳಿಸಿವೆ. 1934ರ ಭಾರತೀಯ ರಿಸರ್ವ್ ಬ್ಯಾಂಕ್ ಕಾಯ್ದೆಯ ಸೆಕ್ಷನ್ 45-1ಎ ಅಡಿಯಲ್ಲಿ ಕೊಡಲಾಗಿರುವ ಅಧಿಕಾರವನ್ನು ಬಳಸಿ ಎನ್​ಬಿಎಫ್​ಸಿಗಳ ನೊಂದಣಿ ಪ್ರಮಾಣಪತ್ರ ಆರ್​​ಬಿಐ ರದ್ದುಗೊಳಿಸಿದೆ.

2022ರ ಡಿಸೆಂಬರ್ 13ರಂದು ಮೂರು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ತಮ್ಮ ಪ್ರಮಾಣಪತ್ರವನ್ನು ಆರ್​ಬಿಐ ವಶಕ್ಕೆ ಹಿಂದಿರುಗಿಸಿದ್ದವು. ಈ ಬಾರಿ ಪ್ರಮಾಣಪತ್ರ ರದ್ದು ಮಾಡಲಾದ 17 ಎನ್​ಬಿಎಫ್​ಸಿಗಳಲ್ಲಿ ಹೆಚ್ಚಿನವು ಪಶ್ಚಿಮ ಬಂಗಾಳ ರಾಜ್ಯಗಳದ್ದಾಗಿವೆ. ತಮಿಳುನಾಡು ಮೂಲದ ಶ್ರೀರಾಮ್ ಕ್ಯಾಪಿಟಲ್ ಮತ್ತು ಶ್ರೀರಾಮ್ ಸಿಟಿ ಯೂನಿಯನ್ ಫೈನಾನ್ಸ್ ಸಂಸ್ಥೆಗಳೂ ಈ ಪಟ್ಟಿಯಲ್ಲಿವೆ.

ಇದನ್ನೂ ಓದಿSensex Crash: ಸೆನ್ಸೆಕ್ಸ್, ನಿಫ್ಟಿ ಮಹಾ ಕುಸಿತ; ಎರಡು ದಿನದಿಂದ ಭಾರತದ ಷೇರುಪೇಟೆ ಅಲುಗಾಡಲು ಏನು ಕಾರಣ? ಕುಸಿತ ಕಂಡ ಪ್ರಮುಖ ಷೇರುಗಳ್ಯಾವುವು?

ಸರ್ಟಿಫಿಕೇಟ್ ಆಫ್ ರಿಜಿಸ್ಟ್ರೇಶನ್ ಹಿಂಪಡೆಯಲಾದ ಎನ್​ಬಿಎಫ್​ಸಿಗಳ ಪಟ್ಟಿ

  1. ಧನಬಾದ್ ಪ್ರಾಪರ್ಟೀಸ್ ಪ್ರೈ ಲಿ.: ಜಾರ್ಖಂಡ್
  2. ಸೂರ್ಯ ವಾಣಿಜ್ಯ ಅಂಡ್ ಇನ್ವೆಸ್ಟ್​ಮೆಂಟ್ಸ್ ಲಿ.: ಪಶ್ಚಿಮ ಬಂಗಾಳ
  3. ಜೈನೆಕ್ಸ್ ಇಂಡಿಯಾ ಲಿ: ಅಸ್ಸಾಂ
  4. ಜಯಮ್ ವ್ಯಾಪಾರ್ ಪ್ರೈ ಲಿ: ಪಶ್ಚಿಮ ಬಂಗಾಳ
  5. ಜೆಎಂ ಹೋಲ್ಡಿಂಗ್ಸ್ ಪ್ರೈ ಲಿ: ಪಶ್ಚಿಮ ಬಂಗಾಳ
  6. ವೈಡ್ ರೇಂಜ್ ಸೇಲ್ಸ್ ಪ್ರೈ ಲಿ: ಪಶ್ಚಿಮ ಬಂಗಾಳ
  7. ಸಿನ್ ಪ್ಯಾಕ್ ಫೈನಾನ್ಸ್ ಪ್ರೈ ಲಿ: ಪಶ್ಚಿಮ ಬಂಗಾಳ
  8. ಬಿ ಡಿ ವಾಣಿಜ್ಯ ಉದ್ಯೋಗ್ ಪ್ರೈ ಲಿ: ಪಶ್ಚಿಮ ಬಂಗಾಳ
  9. ಕ್ವೆನ್ಸಿ ಕನ್ಸಲ್ಟೆನ್ಸಿ ಪ್ರೈ ಲಿ: ಪಶ್ಚಿಮ ಬಂಗಾಳ
  10. ಎಸ್ ಜಿ ಪ್ರಾಜೆಕ್ಟ್ಸ್ ಪ್ರೈ ಲಿ: ಪಶ್ಚಿಮ ಬಂಗಾಳ
  11. ನ್ಯೂ ಏಜ್ ಇಂಪೋರ್ಟ್ ಪ್ರೈ ಲಿ: ಪಶ್ಚಿಮ ಬಂಗಾಳ
  12. ಜುಬಿಲೆಂಟ್ ಸೆಕ್ಯೂರಿಟೀಸ್ ಪ್ರೈ ಲಿ: ನೋಯಿಡಾ, ದೆಹಲಿ
  13. ಶ್ರೀರಾಮ್ ಸಿಟಿ ಯೂನಿಯನ್ ಫೈನಾನ್ಸ್ ಲಿ: ತಮಿಳುನಾಡು
  14. ಶ್ರೀರಾಮ್ ಕ್ಯಾಪಿಟಲ್ ಲಿ: ತಮಿಳುನಾಡು
  15. ಅಂತರಿಕ್ಷ್ ಕಾಮರ್ಸ್ ಪ್ರೈ ಲಿ: ಛತ್ತೀಸ್​ಗಡ
  16. ಡಿಆರ್​ಪಿ ಟ್ರೇಡಿಂಗ್ ಅಂಡ್ ಇನ್ವೆಸ್ಟ್​ಮೆಂಟ್ ಪ್ರೈ ಲಿ: ಪಶ್ಚಿಮ ಬಂಗಾಳ
  17. ಜನಸಾಗರ್ ಸೇಲ್ಸ್ ಏಜೆನ್ಸಿ ಪ್ರೈ ಲಿ: ಪಶ್ಚಿಮ ಬಂಗಾಳ

ಇದನ್ನೂ ಓದಿELSS: ತೆರಿಗೆ ಉಳಿಸಲು ಎಸ್​ಐಪಿಗೆ ಹಣ ಹಾಕುತ್ತಿದ್ದೀರಾ? ಇಎಲ್​ಎಸ್​ಎಸ್ ಅಂಶದತ್ತ ಗಮನ ಇರಲಿ

ಕರ್ನಾಟಕದ ಯಾವ ಎನ್​ಬಿಎಫ್​ಸಿಗಳೂ ಈ ಪಟ್ಟಿಯಲ್ಲಿಲ್ಲ. ಇವುಗಳ ಸಿಒಆರ್ ಅನ್ನು ಫೆಬ್ರುವರಿ ತಿಂಗಳ ವಿವಿಧ ದಿನಾಂಕಗಳಲ್ಲಿ ರದ್ದು ಮಾಡಿರುವುದು ಆರ್​ಬಿಐ ಬಿಡುಗಡೆ ಮಾಡಿದ ವಿವರದಲ್ಲಿ ತಿಳಿದುಬರುತ್ತದೆ. ಈ ಪಟ್ಟಿಯಲ್ಲಿರುವ 17 ಸಂಸ್ಥೆಗಳ ಪೈಕಿ ಮೊದಲ 10 ಎನ್​ಬಿಎಫ್​ಸಿಗಳು ಈ ಕ್ಷೇತ್ರದ ಹಣಕಾಸು ವ್ಯವಹಾರದಿಂದಲೇ ನಿರ್ಗಮಿಸಿದ್ದರಿಂದ ಸಿಒಆರ್ ಅನ್ನು ಆರ್​ಬಿಐಗೆ ಒಪ್ಪಿಸಿವೆ.

ಪಟ್ಟಿಯಲ್ಲಿ 11 ಮತ್ತು 12ರಲ್ಲಿರುವ ನ್ಯೂ ಏಜ್ ಇಂಪೋರ್ಟ್ ಮತ್ತು ಜುಬಿಲೆಂಡ್ ಸೆಕ್ಯೂರಿಟೀಸ್ ಸಂಸ್ಥೆಗಳು ಕೋರ್ ಇನ್ವೆಸ್ಟ್​ಮೆಂಟ್ ಕಂಪನಿ ನಿಯಮಗಳಿಗೆ ಬದ್ಧವಾಗಿರುವುದರಿಂದ ಎನ್​ಬಿಎಫ್​ಸಿಯ ಸರ್ಟಿಫಿಕೇಟ್ ಆಫ್ ರಿಜಿಸ್ಟ್ರೇಶನ್​ನ ಅಗತ್ಯ ಇಲ್ಲ. ಹೀಗಾಗಿ, ಅವುಗಳಿಗೆ ನೀಡಿದ್ದ ಸಿಒಆರ್ ಅನ್ನು ಹಿಂಪಡೆಯಲಾಗಿದೆ.

ಇದನ್ನೂ ಓದಿCampa Cola: ಎಪ್ಪತ್ತದ ದಶಕದಲ್ಲಿ ಜನಪ್ರಿಯವಾಗಿದ್ದ ಕ್ಯಾಂಪಾ ಕೋಲ, ಆರೆಂಜ್, ಲೆಮನ್ ಪಾನೀಯಗಳು ಮತ್ತೆ ಮಾರುಕಟ್ಟೆಗೆ

ಇನ್ನು, ಕೆಳಗಿರುವ ಇತರ ಐದು ಸಂಸ್ಥೆಗಳು ವಿಲೀನ ಇತ್ಯಾದಿ ಕಾರಣಕ್ಕೆ ಲೈಸೆನ್ಸ್ ಅನ್ನು ಹಿಂಪಡೆಯಲಾಗಿದೆ. ಇದರಲ್ಲಿ ಶ್ರೀರಾಮ್ ಸಿಟಿ ಯೂನಿಯನ್ ಫೈನಾನ್ಸ್, ಶ್ರೀರಾಮ್ ಕ್ಯಾಪಿಟಲ್, ಅಂತರಿಕ್ಷ್ ಕಾಮರ್ಸ್ ಇತ್ಯಾದಿ ಐದು ಎನ್​ಬಿಎಫ್​ಸಿಗಳಿವೆ.

ಸರ್ಟಿಫಿಕೇಟ್ ಆಫ್ ರಿಜಿಸ್ಟ್ರೇಶನ್ ರದ್ದಾಗಿರುವ 17 ಎನ್​ಬಿಎಫ್​ಸಿಗಳಲ್ಲಿ ಕರ್ನಾಟಕದ್ದು ಒಂದೂ ಇಲ್ಲ. ದೇಶಾದ್ಯಂತ ಸದ್ಯ 10,000ದಷ್ಟು ಎನ್​ಬಿಎಫ್​ಸಿಗಳು ಆರ್​ಬಿಐಗೆ ನೊಂದಾಯಿತವಾಗಿವೆ. ಇದರಲ್ಲಿ ಜನರಿಂದ ಠೇವಣಿ ಸಂಗ್ರಹಿಸುವ ಎನ್​ಬಿಎಫ್​ಸಿಗಳು ಕಡಿಮೆ ಸಂಖ್ಯೆಯಲ್ಲಿವೆ. ಬಹುತೇಕ ಎನ್​ಬಿಎಫ್​ಸಿಗಳು ವಿವಿಧ ರೀತಿಯ ಹೂಡಿಕೆ, ಸಾಲ ಇತ್ಯಾದಿಯನ್ನು ಒದಗಿಸುತ್ತವೆ.

ಹೆಚ್ಚಿನ ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:19 pm, Fri, 10 March 23