ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank Of India)ದಿಂದ ಆಗಸ್ಟ್ 23ರಂದು ಕೇರಳ ಮೂಲದ ಖಾಸಗಿ ವಲಯದ ಬ್ಯಾಂಕ್ ಆದ ಧನಲಕ್ಷ್ಮಿ ಬ್ಯಾಂಕ್‌ಗೆ 27.50 ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗಿದೆ. ಬ್ಯಾಂಕ್ನ ನಿಗಾ ಮೌಲ್ಯಮಾಪನಕ್ಕಾಗಿ ಶಾಸನಬದ್ಧ ತಪಾಸಣೆ (ISE)ಯನ್ನು ಮಾರ್ಚ್ 31, 2020ರ ವೇಳೆಗೆ ಅದರ ಆರ್ಥಿಕ ಸ್ಥಿತಿಯನ್ನು ಉಲ್ಲೇಖಿಸಿ, ಆರ್‌ಬಿಐ ನಡೆಸಿತು. ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿ ಯೋಜನೆಯ ಕೆಲವು ನಿಬಂಧನೆಗಳನ್ನು ಧನಲಕ್ಷ್ಮೀ ಬ್ಯಾಂಕ್ನಿಂದ ಉಲ್ಲಂಘಿಸಲಾಗಿದೆ ಎಂದು ರಿಸ್ಕ್ ಅಸೆಸ್‌ಮೆಂಟ್ ವರದಿ ಮತ್ತು ತಪಾಸಣೆ ವರದಿ ಪರೀಕ್ಷೆಯಲ್ಲಿ ಆರ್‌ಬಿಐ ಹೇಳಿದೆ.
ಈಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಕೈಗೊಂಡ ಕ್ರಮವು ನಿಯಂತ್ರಕ (ಆರ್‌ಬಿಐ) ನಿಯಮಾನುಸಾರ ಆಗಿರುವ ನ್ಯೂನತೆಗಳನ್ನು ಆಧರಿಸಿದೆ ಮತ್ತು ಬ್ಯಾಂಕ್ ತನ್ನ ಗ್ರಾಹಕರೊಂದಿಗೆ ಮಾಡಿಕೊಂಡ ಯಾವುದೇ ವಹಿವಾಟು ಅಥವಾ ಒಪ್ಪಂದದ ಸಿಂಧುತ್ವದ ಬಗ್ಗೆ ತಿಳಿಸುವುದು ಇದರ ಉದ್ದೇಶ ಅಲ್ಲ ಎನ್ನಲಾಗಿದೆ. ಇದರ ಮುಂದುವರಿಕೆಯಾಗಿ, ಬ್ಯಾಂಕ್‌ಗೆ ನೋಟಿಸ್ ನೀಡಲಾಗಿದೆ. ನೋಟಿಸ್‌ಗೆ ಬ್ಯಾಂಕ್ ನೀಡಿದ ಉತ್ತರ ಮತ್ತು ವಿಚಾರಣೆಯ ಸಮಯದಲ್ಲಿ ಮಾಡಿದ ಮೌಖಿಕ ಸಲ್ಲಿಕೆಗಳನ್ನು ಪರಿಗಣಿಸಿದ ನಂತರ, ನಿಯಮಗಳ ಉಲ್ಲಂಘನೆಯ ಆರೋಪವು ದೃಢಪಟ್ಟಿದೆ. ಬ್ಯಾಂಕ್ನ ಮೇಲೆ ವಿತ್ತೀಯ ದಂಡವನ್ನು ವಿಧಿಸುವುದಕ್ಕೆ ಕಾರಣಗಳು ಸಮರ್ಥನೀಯವಾಗಿದೆ ಎಂದು ತೀರ್ಮಾನಿಸಲಾಯಿತು ಎಂಬುದಾಗಿ ಆರ್‌ಬಿಐ ಹೇಳಿದೆ.
ವಿವಿಧ ನಿಯಮ ಉಲ್ಲಂಘನೆಗಳಿಗಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಜುಲೈ 7ರಂದು ಬಂಧನ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸೇರಿದಂತೆ 14 ಬ್ಯಾಂಕ್‌ಗಳಿಗೆ ದಂಡ ವಿಧಿಸಿತ್ತು. ಈ 14 ಬ್ಯಾಂಕ್ಗಳಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು, ಖಾಸಗಿ ಬ್ಯಾಂಕ್ಗಳು, ವಿದೇಶೀ ಬ್ಯಾಂಕ್, ಸಹಕಾರಿ ಬ್ಯಾಂಕುಗಳು ಮತ್ತು ಒಂದು ಸಣ್ಣ ಹಣಕಾಸು ಬ್ಯಾಂಕ್ ಸೇರಿದ್ದವು. ಬ್ಯಾಂಕೇತರ ಹಣಕಾಸು ಕಂಪೆನಿಗಳಿಗೆ ಸಾಲ ನೀಡುವುದು (ಎನ್‌ಬಿಎಫ್‌ಸಿ), ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪೆನಿಗಳಿಗೆ ಬ್ಯಾಂಕ್ ಹಣಕಾಸು (ಎನ್‌ಬಿಎಫ್‌ಸಿ) ಒದಗಿಸುವುದು ಮತ್ತು ಸಾಲಗಳು ಮತ್ತು ಮುಂಗಡಗಳು ಶಾಸನಬದ್ಧ ಮತ್ತು ಇತರ ನಿರ್ಬಂಧಗಳು ಕುರಿತು ಆರ್‌ಬಿಐ ಹೊರಡಿಸಿರುವ ಕೆಲವು ನಿಬಂಧನೆಗಳ ಉಲ್ಲಂಘನೆ ಮಾಡಿರುವುದು ಇದರಲ್ಲಿ ಒಳಗೊಂಡಿದ್ದವು ಎಂದು ಆರ್‌ಬಿಐ ಹೇಳಿತ್ತು.
1949ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಸೆಕ್ಷನ್ 46 ಎ (1) (ಸಿ) ಸೆಕ್ಷನ್ 46 (4) (ಐ) ಮತ್ತು 51(1)ರೊಂದಿಗೆ ಸೆಕ್ಷನ್ 47 ಎ (1) (ಸಿ) ನಿಬಂಧನೆಗಳ ಅಡಿಯಲ್ಲಿ ಆರ್‌ಬಿಐಗೆ ನೀಡಲಾಗಿರುವ ಅಧಿಕಾರವನ್ನು ಚಲಾಯಿಸಿ, ತಲಾ 50 ಲಕ್ಷದಿಂದ 2 ಕೋಟಿ ರೂಪಾಯಿ ತನಕ ದಂಡ ವಿಧಿಸಲಾಗಿದೆ ಎಂದು ಆರ್‌ಬಿಐ ಹೇಳಿದೆ.
ಇದನ್ನೂ ಓದಿ: Axis Bank: ನಿಯಮಾವಳಿಗಳ ಉಲ್ಲಂಘನೆಗಾಗಿ ಆಕ್ಸಿಸ್ ಬ್ಯಾಂಕ್‌ಗೆ 10 ಕೋಟಿ ರೂ. ದಂಡ ಹಾಕಿದ ಆರ್‌ಬಿಐ
ಇದನ್ನೂ ಓದಿ: ಎಸ್‌ಬಿಐ ಸೇರಿದಂತೆ ಒಟ್ಟು 14 ಬ್ಯಾಂಕ್‌ಗಳಿಗೆ ಒಂದೇ ದಿನದಲ್ಲಿ 50 ಲಕ್ಷದಿಂದ 2 ಕೋಟಿ ತನಕ ದಂಡ ವಿಧಿಸಿದ ಆರ್‌ಬಿಐ
(RBI Imposed Monetary Penalty Of Rs 27 Lakhs On Dhanalakshmi Bank)
Published On - 10:04 pm, Mon, 23 August 21