ಭಾರತೀಯ ರಿಸರ್ವ್ ಬ್ಯಾಂಕ್ನಿಂದ (RBI) ಓಲಾ ಫೈನಾನ್ಷಿಯಲ್ ಸರ್ವೀಸಸ್ ಮೇಲೆ 1.7 ಕೋಟಿ ರೂಪಾಯಿ ದಂಡ ಹಾಕಲಾಗಿದೆ. ಆರ್ಬಿಐನ ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ (KYC) ಮಾರ್ಗದರ್ಶಿ ಸೂಚಿಗಳಿಗೆ ಬದ್ಧವಾಗಿಲ್ಲ ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ. ಪ್ರೀಪೇಯ್ಡ್ ಇನ್ಸ್ಟ್ರುಮೆಂಟ್ಸ್ ವಿತರಿಸುವುದಕ್ಕೆ ಓಲಾ ಫೈನಾನ್ಷಿಯಲ್ ಸರ್ವೀಸಸ್ಗೆ ಪರವಾನಗಿ ಇದೆ. ಸಂಚಾರಕ್ಕಾಗಿ ಓಲಾ ಆ್ಯಪ್ ಬಳಸುವಂಥ ಅದರ ಪ್ರಯಾಣಿಕರಿಗಾಗಿ ಪ್ರೀಪೇಯ್ಡ್ ವ್ಯಾಲೆಟ್ ಮಾಡಿದೆ. ಆರ್ಬಿಐ ನಿಯಮಾವಳಿಯಂತೆ ಪ್ರೀಪೇಯ್ಡ್ ವ್ಯಾಲೆಟ್ನಲ್ಲಿ ಕನಿಷ್ಠ ಮಾಹಿತಿಯೊಂದಿಗೆ 10 ಸಾವಿರ ರೂಪಾಯಿ ತನಕ ಮೊತ್ತ ಹಾಕುವುದಕ್ಕೆ ಅವಕಾಶ ನೀಡಲಾಗಿದೆ.
ತಿಂಗಳಿಗೆ 10 ಸಾವಿರ ರೂಪಾಯಿ ತನಕ ಮೊತ್ತ ಅದಕ್ಕೆ ಹಾಕಲು ಓಲಾ ಕನಿಷ್ಠ ಮಾಹಿತಿಯನ್ನು ಪಡೆಯಬೇಕು. ಅದರಲ್ಲಿ ದೃಢೀಕೃತ ಮೊಬೈಲ್ ಫೋನ್ ಸಂಖ್ಯೆ ಮತ್ತು ಸ್ವಘೋಷಿತವಾದ ಹೆಸರು ಮತ್ತು ಮಾನ್ಯತೆ ಪಡೆದ ದಾಖಲೆಯ ಯೂನಿಕ್ ಐಡೆಂಟಿಫಿಕೇಷನ್ ನಂಬರ್ ಇವುಗಳನ್ನು ಪಡೆಯಬೇಕು.
ಅಂಥ ಖಾತೆಗಳಲ್ಲಿ ಒಂದು ಹಣಕಾಸು ವರ್ಷದಲ್ಲಿ 1 ಲಕ್ಷಕ್ಕಿಂತ ಹೆಚ್ಚು ಮೊತ್ತವನ್ನು ತುಂಬುವಂತಿಲ್ಲ. ಪೂರ್ಣ ಪ್ರಮಾಣದ ಕೆವೈಸಿ ಖಾತೆಗೆ ಗ್ರಾಹಕರು ವಿಳಾಸ ಮತ್ತು ಗುರುತಿನ ಪುರಾವೆಗಳನ್ನು ಒದಗಿಸಬೇಕು. ಬ್ಯಾಂಕ್ ಖಾತೆ ಸೇರಿದಂತೆ ವಿವಿಧ ಹಣಕಾಸು ಸೇವೆಗಳಿಗೆ ಇದು ಅಗತ್ಯ. ಜಿಪ್ಕ್ಯಾಶ್ (ZipCash) ಕಾರ್ಡ್ ಸೇವೆಗಳನ್ನು ಸ್ವಾಧೀನ ಮಾಡಿಕೊಂಡಿರುವ ಓಕಾ ಹಣಕಾಸು ಸೇವೆಗಳ ವ್ಯವಹಾರದಲ್ಲಿದೆ. ಕಂಪೆನಿಯನ್ನು ಎಎನ್ಐ ಟೆಕ್ನಾಲಜೀಸ್ ವಶಪಡಿಸಿಕೊಂಡಿತು. ಅದರ ಮಾಲೀಕ ಓಲಾ.
Published On - 1:20 pm, Wed, 13 July 22