AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ 5.4 ಕೋಟಿ ರೂ ದಂಡ; ಆರ್​ಬಿಐನ ವಿವಿಧ ನಿಯಮಗಳ ಉಲ್ಲಂಘನೆ ಆರೋಪ

Paytm Payments Bank Faces Penalty: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ಆರ್​ಬಿಐ ಪೆನಾಲ್ಟಿ ಹಾಕಿದೆ. ಕೆವೈಸಿ ಸೇರಿದಂತೆ ಕೆಲ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ 5.39 ಕೋಟಿ ರೂ ಮೊತ್ತದ ದಂಡ ಹಾಕಿರುವುದಾಗಿ ಆರ್​ಬಿಐ ಗುರುವಾರ ಹೇಳಿದೆ. ಆರ್​ಬಿಐನಿಂದ ನಿಗದಿಪಡಿಸಿದ ಆಡಿಟರ್​ಗಳು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನ ಕೆವೈಸಿ ಇತ್ಯಾದಿಯನ್ನು ಸಮಗ್ರವಾಗಿ ಪರಿಶೀಲಿಸಿದ ಬಳಿಕ ಈ ನಿಯಮ ಉಲ್ಲಂಘನೆಗಳು ಬೆಳಕಿಗೆ ಬಂದಿವೆ.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ 5.4 ಕೋಟಿ ರೂ ದಂಡ; ಆರ್​ಬಿಐನ ವಿವಿಧ ನಿಯಮಗಳ ಉಲ್ಲಂಘನೆ ಆರೋಪ
ಪೇಟಿಎಂ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Oct 12, 2023 | 7:17 PM

Share

ಮುಂಬೈ, ಅಕ್ಟೋಬರ್ 13: ಎರಡು ದಿನಗಳ ಹಿಂದೆ ವಿವಿಧ ಸಹಕಾರಿ ಬ್ಯಾಂಕುಗಳಿಗೆ ದಂಡ ವಿಧಿಸಿದ್ದ ಆರ್​ಬಿಐ ಇದೀಗ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ (Paytm Payments Bank) ಮೇಲೆ ಪೆನಾಲ್ಟಿ ಹಾಕಿದೆ. ಕೆವೈಸಿ ಸೇರಿದಂತೆ ಕೆಲ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ 5.39 ಕೋಟಿ ರೂ ಮೊತ್ತದ ದಂಡ ಹಾಕಿರುವುದಾಗಿ ಆರ್​ಬಿಐ ಗುರುವಾರ (ಅ. 13) ಹೇಳಿದೆ.

ಕೆವೈಸಿ ನಿಯಮಗಳಲ್ಲದೇ ಇನ್ನೂ ಕೆಲ ಸಂಗತಿಗಳಲ್ಲಿ ಪೇಟಿಎಂ ಬ್ಯಾಂಕ್ ತಪ್ಪೆಸಗಿರುವುದು ತಿಳಿದುಬಂದಿದೆ. ಪೇಟಿಎಂ ಬ್ಯಾಂಕ್ಸ್​ನ ಪರವಾನಿಗೆ ವಿಚಾರದಲ್ಲಿ ಆರ್​ಬಿಐನ ಮಾರ್ಗಸೂಚಿ ನಿಯಮಗಳ ಉಲ್ಲಂಘನೆಯಾಗಿದೆ. ಸೈಬರ್ ಸೆಕ್ಯೂರಿಟಿ ಫ್ರೇಮ್​ವರ್ಕ್ ನಿಯಮಗಳ ಉಲ್ಲಂಘನೆಯಾಗಿದೆ. ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್​ಗಳ ಸುರಕ್ಷತೆಯ ನಿಯಮಗಳಲ್ಲಿ ಉಲ್ಲಂಘನೆ ಆಗಿದೆ ಎಂಬುದು ಆರ್​ಬಿಐ ಪ್ರಕಟಣೆಯಿಂದ ಗೊತ್ತಾಗಿದೆ.

ಇದನ್ನೂ ಓದಿ: ಸೆಪ್ಟೆಂಬರ್​ನಲ್ಲಿ ಭಾರತದ ರೀಟೇಲ್ ಹಣದುಬ್ಬರ ಶೇ. 5.02ಕ್ಕೆ ಇಳಿಕೆ; 3 ತಿಂಗಳಲ್ಲೇ ಕನಿಷ್ಠ ದರ

ಆರ್​ಬಿಐನಿಂದ ನಿಗದಿಪಡಿಸಿದ ಆಡಿಟರ್​ಗಳು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನ ಕೆವೈಸಿ ಇತ್ಯಾದಿಯನ್ನು ಸಮಗ್ರವಾಗಿ ಪರಿಶೀಲಿಸಿದ ಬಳಿಕ ಈ ನಿಯಮ ಉಲ್ಲಂಘನೆಗಳು ಬೆಳಕಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ 5 ಕೋಟಿ ರೂಗಿಂತ ಹೆಚ್ಚು ಮೊತ್ತದ ದಂಡ ವಿಧಿಸಲಾಗಿದೆ.

ಅಕ್ಟೋಬರ್ 9ರಂದು ಆರ್​ಬಿಐ ದೇಶದ ವಿವಿಧೆಡೆ ಇರುವ ಐದು ಸಹಕಾರಿ ಬ್ಯಾಂಕುಗಳ ಮೇಲೂ ನಿಯಮ ಉಲ್ಲಂಘನೆಗಳ ಕಾರಣಕ್ಕೆ ದಂಡ ವಿಧಿಸಿತ್ತು. ಎಸ್​ಬಿಪಿಪಿ ಕೋ ಆಪರೇಟಿವ್ ಬ್ಯಾಂಕ್, ಸಹ್ಯಾದ್ರಿ ಸಹಕಾರಿ ಬ್ಯಾಂಕ್, ರಹೀಮತ್​ಪುರ್ ಸಹಕಾರಿ ಬ್ಯಾಂಕ್, ಗಾಧಿಂಗ್ಲಜ್ ಅರ್ಬನ್ ಕೋ ಆಪರೇಟಿಂವ್ ಬ್ಯಾಂಕ್, ಕಲ್ಯಾಣ್ ಜನತಾ ಸಹಕಾರಿ ಬ್ಯಾಂಕ್, ಈ ಐದು ಬ್ಯಾಂಕುಗಳು ಆರ್​ಬಿಐನಿಂದ ದಂಡ ಎದುರಿಸಿವೆ.

ಇದನ್ನೂ ಓದಿ: ಗಂಗಾನದಿಯ ನೀರು ಮತ್ತು ಪೂಜಾ ಸಾಮಗ್ರಿ ಮೇಲೆ ಶೇ. 18ರಷ್ಟು ಜಿಎಸ್​ಟಿ ಇದೆಯಾ? ಇಲ್ಲಿದೆ ಕೇಂದ್ರ ಸರ್ಕಾರ ಸ್ಪಷ್ಟನೆ

ಮಹಾರಾಷ್ಟ್ರ ಮತ್ತು ಗುಜರಾತ್​ನಲ್ಲಿರುವ ಈ ಸಹಕಾರಿ ಬ್ಯಾಂಕುಗಳಿಗೆ 1 ಲಕ್ಷ ರೂನಿಂದ ಹಿಡಿದು 13 ಲಕ್ಷ ರೂವರೆಗೆ ಆರ್​ಬಿಐ ದಂಡ ಹಾಕಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:17 pm, Thu, 12 October 23

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More