ನವದೆಹಲಿ, ಏಪ್ರಿಲ್ 28: ರೆಗ್ಯುಲರ್ ಬ್ಯಾಂಕ್ ಅಥವಾ ಸಾರ್ವತ್ರಿಕ ಬ್ಯಾಂಕ್ ಆಗಿ ಬದಲಾಗಲು ಸ್ಮಾಲ್ ಫೈನಾನ್ಸ್ ಬ್ಯಾಂಕ್ಗಳಿಂದ (small finance bank) ಆರ್ಬಿಐ ಅರ್ಜಿ ಆಹ್ವಾನಿಸಿದೆ. ಒಂದಷ್ಟು ಮಾನದಂಡಗಳಿಗೆ ತಾಳೆಯಾದರೆ ಈ ಸಣ್ಣ ಬ್ಯಾಂಕುಗಳು ರೆಗ್ಯುಲರ್ ಬ್ಯಾಂಕಿಂಗ್ ಲೈಸೆನ್ಸ್ ಪಡೆಯಬಹುದು. ನಿವ್ವಳ ಮೌಲ್ಯ ಕನಿಷ್ಠ ಒಂದು ಸಾವಿರ ಕೋಟಿ ರೂ ಇರುವುದು ಈ ಪ್ರಮುಖ ಮಾನದಂಡಗಳಲ್ಲಿ ಒಂದು. ಭಾರತದಲ್ಲಿ 10ಕ್ಕೂ ಹೆಚ್ಚು ಸ್ಮಾಲ್ ಫೈನಾನ್ಸ್ ಬ್ಯಾಂಕುಗಳಿವೆ. ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್, ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮೊದಲಾದವು ಇವೆ.
ಇದನ್ನೂ ಓದಿ: ಭಾರತದಲ್ಲಿ ಗೃಹಸಾಲ ದುಂದು ವೆಚ್ಚವಾಗುತ್ತಿದೆ, ನಿಯಂತ್ರಣ ಮಾಡಲು ಬ್ಯಾಂಕ್ಗಳಿಗೆ ಆರ್ಬಿಐ ಎಚ್ಚರಿಕೆ
ಇನ್ನು, ಷೇರುಪಾಲುದಾರಿಕೆಯ ವಿಧಾನದ ಬಗ್ಗೆ ಆರ್ಬಿಐನಲ್ಲಿ ಒಂದು ನಿಯಮ ಇದೆ. ಸ್ಮಾಲ್ ಫೈನಾನ್ಸ್ ಬ್ಯಾಂಕ್ವೊಂದು ರೆಗ್ಯುಲರ್ ಬ್ಯಾಂಕ್ ಆಗಿ ಪರಿವರ್ತನೆ ಆಗುವಾಗ ಅದಕ್ಕೆ ಹೊಸ ಪ್ರೊಮೋಟರ್ಸ್ ಸೇರ್ಪಡೆಯಾಗುವಂತಿಲ್ಲ. ಅಥವಾ ಇರುವ ಪ್ರೊಮೋಟರ್ಸ್ನಲ್ಲಿ ಬದಲಾವಣೆ ಮಾಡುವಂತಿಲ್ಲ.
ಇಲ್ಲಿ ಪ್ರೊಮೋಟರ್ಸ್ ಎಂದರೆ ಕಂಪನಿಯ ಸಂಸ್ಥಾಪಕ ವರ್ಗಕ್ಕೆ ಸೇರಿದವರು. ಅಂದರೆ ಮಾಲೀಕರಾಗಿರಬಹುದು. ಸ್ಮಾಲ್ ಫೈನಾನ್ಸ್ ಬ್ಯಾಂಕ್ನಲ್ಲಿ ನಿರ್ದಿಷ್ಟ ಪ್ರೊಮೋಟರ್ಸ್ ಇರಲೇಬೇಕೆಂದು ಕಡ್ಡಾಯ ಏನಿರುವುದಿಲ್ಲ.
2019ರಲ್ಲೇ ಸ್ಮಾಲ್ ಫೈನಾನ್ಸ್ ಬ್ಯಾಂಕ್ಗಳಿಗೆ ಯೂನಿವರ್ಸಲ್ ಬ್ಯಾಂಕ್ ಆಗಿ ಪರಿವರ್ತನೆಯಾಗಲು ದಾರಿ ತೆರೆಯಲಾಗಿತ್ತು. ಅದಕ್ಕೆ ಬೇಕಾದ ಮಾನದಂಡಗಳಿಗೆ ಬದ್ಧವಾಗಲು ಕಾಲಾವಕಾಶವನ್ನೂ ಕೊಡಲಾಗಿದೆ. ಈಗ ಅರ್ಹ ಎಸ್ಎಫ್ಬಿಗಳು ರೆಗ್ಯುಲರ್ ಬ್ಯಾಂಕ್ ಆಗಿ ಅರ್ಜಿ ಹಾಕಬಹುದಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ