ಬ್ಯಾಂಕುಗಳಿಗೆ ಸಿಂಗಲ್ ಡೆಪಾಸಿಟ್ ಮಿತಿ 3 ಕೋಟಿ ರೂಗೆ ಹೆಚ್ಚಳ; ಹೆಚ್ಚಿನ ಮೊತ್ತ ರೀಟೇಲ್ ಎಫ್​ಡಿಗೆ ವರ್ಗ

RBI raises bulk deposit threshold: ಯಾವುದೇ ಕಮರ್ಷಿಯಲ್ ಬ್ಯಾಂಕ್ ಖಾತೆಗೆ ಒಮ್ಮೆಗೆ ಹಣ ಜಮೆ ಮಾಡುವ ಮಿತಿ ಎರಡು ಕೋಟಿ ರೂಗಿಂತ ಕಡಿಮೆ ಇತ್ತು. ಅದಕ್ಕಿಂತ ಹೆಚ್ಚಿನ ಮೊತ್ತದ ಸಿಂಗಲ್ ಡೆಪಾಸಿಟ್ ಅನ್ನು ಬಲ್ಕ್ ಡೆಪಾಸಿಟ್ ಎಂದು ಪರಿಗಣಿಸಲಾಗುತ್ತಿತ್ತು. ಈಗ ನಿಯಮ ಬದಲಿಸಲಾಗಿದ್ದು, ಮೂರು ಕೋಟಿ ರೂಗಿಂತ ಹೆಚ್ಚಿನ ಮೊತ್ತದ ಡೆಪಾಸಿಟ್ ಅನ್ನು ರೀಟೇಲ್ ಫಿಕ್ಸೆಡ್ ಡೆಪಾಸಿಟ್ ಆಗಿ ವರ್ಗೀಕರಿಸಲಾಗುತ್ತದೆ.

ಬ್ಯಾಂಕುಗಳಿಗೆ ಸಿಂಗಲ್ ಡೆಪಾಸಿಟ್ ಮಿತಿ 3 ಕೋಟಿ ರೂಗೆ ಹೆಚ್ಚಳ; ಹೆಚ್ಚಿನ ಮೊತ್ತ ರೀಟೇಲ್ ಎಫ್​ಡಿಗೆ ವರ್ಗ
ಎಸ್​ಬಿಐ
Follow us
|

Updated on: Jun 07, 2024 | 11:55 AM

ನವದೆಹಲಿ, ಜೂನ್ 7: ನೀವು ಒಂದ ಬ್ಯಾಂಕ್ ಖಾತೆಗೆ ಒಮ್ಮೆಗೆ ಕಳುಹಿಸಬಹುದಾದ ಹಣದ ಮೊತ್ತದ ಮಿತಿಯನ್ನು ಆರ್​ಬಿಐ ಹೆಚ್ಚಿಸಿದೆ. ಈಗ ಸಿಂಗಲ್ ಡೆಪಾಸಿಟ್​ನಲ್ಲಿ 3 ಕೋಟಿ ರೂಗೂ ಹೆಚ್ಚು ಹಣವನ್ನು ಇಡಬಹುದು. ಎಂಪಿಸಿ ಸಭೆ ಬಳಿಕ ಅರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈ ವಿಚಾರವನ್ನು ಪ್ರಕಟಿಸಿದ್ದಾರೆ. ಈವರೆಗೆ ಬ್ಯಾಂಕುಗಳಲ್ಲಿ ನೀವು ಸಿಂಗಲ್ ಡೆಪಾಸಿಟ್​ನಲ್ಲಿ ಎರಡು ಕೋಟಿ ರೂವರೆಗೆ ಹಣ ಹಾಕಬಹುದಿತ್ತು. ಅದಕ್ಕೂ ಮೇಲ್ಪಟ್ಟ ಹಣವನ್ನು ಡೆಪಾಸಿಟ್ ಮಾಡಿದರೆ ಅದನ್ನು ಬಲ್ಕ್ ಎಫ್​ಡಿ ಎಂದು ಪರಿಗಣಿಸಲಾಗುತ್ತಿತ್ತು. ಈಗ ಆರ್​ಬಿಐ ಬಲ್ಕ್ ಡೆಪಾಸಿಟ್ ಮಿತಿಯನ್ನು ಮೂರು ಕೋಟಿ ರೂಗೆ ಹೆಚ್ಚಿಸಿದೆ. ಅಂದರೆ ಮೂರು ಕೋಟಿ ರೂ ಹಾಗೂ ಅದಕ್ಕಿಂತ ಕಡಿಮೆ ಮೊತ್ತದ ಸಿಂಗಲ್ ಡೆಪಾಸಿಟ್​ಗಳನ್ನು ಬಲ್ಕ್ ಡೆಪಾಸಿಟ್ ಎಂದು ಪರಿಗಣಿಸಲಾಗುವುದಿಲ್ಲ.

ಬಲ್ಕ್ ಡೆಪಾಸಿಟ್ ವ್ಯಾಖ್ಯಾನದಲ್ಲಿ ಬದಲು

ಈ ಮೊದಲು ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕುಗಳು ಮತ್ತು ಸ್ಮಾಲ್ ಫೈನಾನ್ಸ್ ಬ್ಯಾಂಕುಗಳಲ್ಲಿ ಸಿಂಗಲ್ ಡೆಪಾಸಿಟ್​​ನಲ್ಲಿ ಎರಡು ಕೋಟಿ ರೂಗಿಂತ ಹೆಚ್ಚು ಹಣ ಇಟ್ಟರೆ ಅದನ್ನು ಬಲ್ಕ್ ಡೆಪಾಸಿಟ್ ಆಗಿ ಪರಿಗಣಿಸಲಾಗುತ್ತಿತ್ತು. ಈಗ ಅದರ ವ್ಯಾಖ್ಯಾನ ಬದಲಿಸಲಾಗಿದೆ.

ಇದನ್ನೂ ಓದಿ: ಬಡ್ಡಿದರ ಯಥಾಸ್ಥಿತಿ ಮುಂದುವರಿಸಲು ಆರ್​ಬಿಐ ನಿರ್ಧಾರ

‘ಎಸ್​ಸಿಬಿ ಮತ್ತು ಎಸ್​ಎಫ್​ಬಿಗಳಲ್ಲಿ 3 ಕೋಟಿ ರೂ ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತದ ಠೇವಣಿಯನ್ನು ಸಿಂಗಲ್ ರುಪೀ ಟರ್ಮ್ ಡೆಪಾಸಿಟ್ ಎಂದು ಪರಿಗಣಿಸಲಾಗುತ್ತದೆ,’ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಶುಕ್ರವಾರ ಹೇಳಿದ್ದಾರೆ.

ಅಂದರೆ, ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕುಗಳು ಮತ್ತು ಸ್ಮಾಲ್ ಫೈನಾನ್ಸ್ ಬ್ಯಾಂಕುಗಳ ಠೇವಣಿಗಳಿಗೆ 3 ಲಕ್ಷ ರೂಗಿಂತ ಕಡಿಮೆ ಮೊತ್ತದ ಹಣವನ್ನು ಸಿಂಗಲ್ ಡೆಪಾಸಿಟ್​ನಲ್ಲಿ ಜಮೆ ಮಾಡಬಹುದು. ಮೂರು ಲಕ್ಷ ರೂ ಹಾಗೂ ಅದಕ್ಕೆ ಮೇಲ್ಪಟ್ಟ ಹಣವಾದರೆ ಅದು ಬಲ್ಕ್​ ಡೆಪಾಸಿಟ್ ಎನಿಸುವುದಿಲ್ಲ. ಬದಲಾಗಿ ರೀಟೇಲ್ ಎಫ್​ಡಿಯಾಗಿ ವರ್ಗೀಕೃತವಾಗುತ್ತದೆ. ಈ ಎಫ್​ಡಿಗೆ ಮಾಮೂಲಿಗಿಂತ ಕಡಿಮೆ ಬಡ್ಡಿ ಸಿಗುತ್ತದೆ.

ಗ್ರಾಮೀಣ ಬ್ಯಾಂಕುಗಳಲ್ಲಿ ಬಲ್ಕ್ ಡೆಪಾಸಿಟ್ ಮಿತಿ 1 ಕೋಟಿ ರೂ

ಪ್ರಾದೇಶಿಕ ಬ್ಯಾಂಕುಗಳು ಮತ್ತು ಗ್ರಾಮೀಣ ಬ್ಯಾಂಕುಗಳಲ್ಲಿ ಒಂದು ಕೋಟಿ ರೂಗಿಂತ ಹೆಚ್ಚು ಠೇವಣಿಗಳನ್ನು ಬಲ್ಕ್ ಡೆಪಾಸಿಟ್ ಆಗಿ ಪರಿಗಣಿಸಲಾಗುತ್ತದೆ. ಹಿಂದೆಯೂ ಅದಕ್ಕೆ ಅಷ್ಟು ಮಿತಿ ಇತ್ತು. ಅದನ್ನು ಮುಂದುವರಿಸಲಾಗಿದೆ.

ಇಲ್ಲಿ ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕುಗಳೆಂದರೆ ಎಸ್​ಬಿಐ, ಎಚ್​ಡಿಎಫ್​ಸಿ, ಐಸಿಐಸಿಐ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಇತ್ಯಾದಿ ಬ್ಯಾಂಕ್​ಗಳು.

ಇದನ್ನೂ ಓದಿ: ಒಂದೇ ದಿನ ಅತಿಹೆಚ್ಚು ಷೇರು ವಹಿವಾಟು; ಭಾರತದ ಎನ್​ಎಸ್​ಇ ಹೊಸ ವಿಶ್ವದಾಖಲೆ

ಬ್ಯಾಂಕ್ ಎಫ್​ಡಿ ದರಗಳಲ್ಲಿ ಪರಿಷ್ಕರಣೆ?

ಬಲ್ಕ್ ಡೆಪಾಸಿಟ್​ಗಳಿಗೆ ಮಾಮೂಲಿಯ ಎಫ್​ಡಿಗಿಂತ ಹೆಚ್ಚು ಬಡ್ಡಿಯನ್ನು ಬ್ಯಾಂಕುಗಳು ನೀಡುತ್ತವೆ. ಈಗ ಬಲ್ಕ್ ಡೆಪಾಸಿಟ್ ಮಿತಿ ಹೆಚ್ಚಿರುವುದರಿಂದ ಬ್ಯಾಂಕುಗಳು ಟರ್ಮ್ ಡೆಪಾಸಿಟ್​ಗಳಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ