ಆರ್​ಬಿಐನ ರೀಟೇಲ್ ಡೈರೆಕ್ಟ್ ಸ್ಕೀಮ್​ಗಾಗಿ ಮೊಬೈಲ್ ಆ್ಯಪ್ ಬಿಡುಗಡೆ; ಏನಿದು ಸ್ಕೀಮ್, ಇಲ್ಲಿದೆ ಡೀಟೇಲ್ಸ್

|

Updated on: Apr 05, 2024 | 11:57 AM

RBI Retail Direct Scheme: ಗವರ್ನ್ಮೆಂಟ್ ಸೆಕ್ಯೂರಿಟಿಗಳಲ್ಲಿ ರೀಟೇಲ್ ಹೂಡಿಕೆದಾರರು ವ್ಯವಹರಿಸಲು ಸುಲಭವಾಗಲು ಆರ್​​ಬಿಐ ವಿಶೇಷ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದೆ. ಈ ರೀಟೇಲ್ ಡೈರೆಕ್ಟ್ ಸ್ಕೀಮ್​ಗಾಗಿ ಡೆಡಿಕೇಟೆಡ್ ಪೋರ್ಟಲ್​ವೊಂದು ಈಗಾಗಲೇ ಇದೆ. ಇದರ ಜೊತೆಗೆ ಮೊಬೈಲ್ ಆ್ಯಪ್ ಈಗ ಹೊರತರಲಾಗಿದೆ. 2020ರಿಂದ ಇರುವ ರೀಟೇಲ್ ಡೈರೆಕ್ಟ್ ಸ್ಕೀಮ್​ನಲ್ಲಿ ಹೂಡಿಕೆದಾರರು ಮಧ್ಯವರ್ತಿಗಳ ನೆರವಿಲ್ಲದೆ ನೆರವಾಗಿ ಗವರ್ನ್ಮೆಂಟ್ ಸೆಕ್ಯೂರಿಟಿಗಳನ್ನು ಖರೀದಿಸಬಹುದು ಅಥವಾ ಮಾರಾಟ ಮಾಡಬಹುದು.

ಆರ್​ಬಿಐನ ರೀಟೇಲ್ ಡೈರೆಕ್ಟ್ ಸ್ಕೀಮ್​ಗಾಗಿ ಮೊಬೈಲ್ ಆ್ಯಪ್ ಬಿಡುಗಡೆ; ಏನಿದು ಸ್ಕೀಮ್, ಇಲ್ಲಿದೆ ಡೀಟೇಲ್ಸ್
ಆರ್​ಬಿಐ ರೀಟೇಲ್ ಡೈರೆಕ್ಟ್
Follow us on

ನವದೆಹಲಿ, ಏಪ್ರಿಲ್ 5: ಭಾರತೀಯ ರಿಸರ್ವ್ ಬ್ಯಾಂಕ್​ನ ರೀಟೇಲ್ ಡೈರೆಕ್ಟ್ ಸ್ಕೀಮ್​ಗೆ (RBI retail direct scheme) ವಿಶೇಷ ಮೊಬೈಲ್ ಆ್ಯಪ್​ವೊಂದನ್ನು ಅನಾವರಣಗೊಳಿಸಲಾಗಿದೆ. ಈಗಾಗಲೇ ಈ ಸ್ಕೀಮ್​ಗೆ ಪೋರ್ಟಲ್ ಅಸ್ತಿತ್ವದಲ್ಲಿದೆ. ಇದರ ಜೊತೆಗೆ ಮೊಬೈಲ್ ಅಪ್ಲಿಕೇಶನ್ ಅನ್ನೂ ಬಿಡುಗಡೆ ಮಾಡಲಾಗಿದೆ. ರೀಟೇಲ್ ಹೂಡಿಕೆದಾರರಿಗೆ (retail investors) ಇದು ಅನುಕೂಲ ತರಲಿದೆ. ಎಂಪಿಸಿ ಸಭೆ ಬಳಿಕ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್, ಆರ್​ಡಿಎಸ್​ನ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿರುವ ವಿಚಾರವನ್ನು ಪ್ರಕಟಿಸಿದ್ದಾರೆ.

ಏನಿದು ರೀಟೇಲ್ ಡೈರೆಕ್ಟ್ ಸ್ಕೀಮ್?

ಗವರ್ನ್ಮೆಂಟ್ ಸೆಕ್ಯೂರಿಟಿ ಅಥವಾ ಸರ್ಕಾರಿ ಸಾಲಪತ್ರಗಳನ್ನು ರೀಟೇಲ್ ಹೂಡಿಕೆದಾರರು ನೇರವಾಗಿ ಖರೀದಿಸಲು ಅಥವಾ ಮಾರಾಟ ಮಾಡಲು ರೀಟೇಲ್ ಡೈರೆಕ್ಟ್ ಸ್ಕೀಮ್ ಅವಕಾಶ ಕಲ್ಪಿಸುತ್ತದೆ. 2020ರಲ್ಲಿ ಆರ್​ಬಿಐ ಈ ಸ್ಕೀಮ್ ಅನ್ನು ಆರಂಭಿಸಿತು. ಕೇಂದ್ರ ಸರ್ಕಾರದ ಸಾಲಪತ್ರಗಳು, ರಾಜ್ಯ ಸರ್ಕಾರಗಳ ಸಾಲಪತ್ರಗಳು, ಜಿಪಿಎನ್, ಬೇರರ್ ಬಾಂಡ್, ಬಿಎಲ್​ಎ ಇತ್ಯಾದಿಗಳು ಗವರ್ನ್ಮೆಂಟ್ ಸೆಕ್ಯೂರಿಟಿಗಳ ಪಟ್ಟಿಗೆ ಬರುತ್ತದೆ. ಸಾವರೀನ್ ಗೋಲ್ಡ್ ಬಾಂಡ್​ಗಳೂ ಕೂಡ ಇದರಡಿ ಬರುತ್ತವೆ.

ಇದನ್ನೂ ಓದಿ: ರೆಪೋ ದರದಲ್ಲಿ ಬದಲಾವಣೆ ಇಲ್ಲ; ಶೇ. 6.5ರ ಬಡ್ಡಿದರ ಮುಂದುವರಿಕೆ

ಸರ್ಕಾರಗಳು ಸಾರ್ವಜನಿಕರಿಂದ ಸಾಲ ಪಡೆಯಲು ಈ ಸೆಕ್ಯೂರಿಟಿಗಳನ್ನು ವಿತರಿಸುತ್ತವೆ. ಬ್ಯಾಂಕುಗಳು, ಸಹಕಾರಿ ಸಂಸ್ಥೆಗಳು, ಗ್ರಾಮೀಣ ಬ್ಯಾಂಕುಗಳು, ಪ್ರಾವಿಡೆಂಟ್ ಫಂಡ್​ಗಳು, ಇನ್ಷೂರೆನ್ಸ್ ಕಂಪನಿಗಳು, ಮ್ಯೂಚುವಲ್ ಫಂಡ್​ಗಳು, ಎನ್​ಬಿಎಫ್​ಸಿಗಳು, ಪೆನ್ಷನ್ ಫಂಡ್​ಗಳು ಇತ್ಯಾದಿ ಸಾಂಸ್ಥಿಕ ಹೂಡಿಕೆದಾರರು ಮಾತ್ರವೇ ಗವರ್ನ್ಮೆಂಟ್ ಸೆಕ್ಯೂರಿಟಿಗಳನ್ನು ಖರೀದಿಸುತ್ತಿದ್ದರು. 2020ರಲ್ಲಿ ರೀಟೇಲ್ ಡೈರೆಕ್ಟ್ ಸ್ಕೀಮ್ ಅನ್ನು ಆರಂಭಿಸಲಾಗಿದ್ದು ಜನಸಾಮಾನ್ಯ ರೀಟೆಲ್ ಹೂಡಿಕೆದಾರರೂ ಕೂಡ ಈ ಸೆಕ್ಯೂರಿಟಿಗಳನ್ನು ಖರೀದಿಸಬಹುದು. ಈ ಸ್ಕೀಮ್​ನಿಂದ ಸರ್ಕಾರಕ್ಕೆ ಅನುಕೂಲವೆಂದರೆ, ಕಡಿಮೆ ಬಡ್ಡಿದರಕ್ಕೆ ಅದಕ್ಕೆ ಸಾಲ ಸಿಗುತ್ತದೆ.

ರೀಟೇಲ್ ಡೈರೆಕ್ಟ್ ಸ್ಕೀಮ್ ಬಳಸುವುದು ಹೇಗೆ?

ಗವರ್ನ್ಮೆಂಟ್ ಸೆಕ್ಯೂರಿಟಿಗಳಲ್ಲಿ ಹೂಡಿಕೆ ಮಾಡಬಯಸುವವರು ರೀಟೇಲ್ ಡೈರೆಕ್ಟ್ ಗಿಲ್ಟ್ ಅಕೌಂಟ್ ಅನ್ನು ತೆರೆಯಬೇಕಾಗುತ್ತದೆ. ಅದರ ಪೋರ್ಟಲ್ ವಿಳಾಸ ಇಲ್ಲಿದೆ: rbiretaildirect.org.in

ಖಾತೆ ತೆರೆಯುವವರ ಬಳಿ ಈ ಕೆಳಕಾಣಿಸಿದವು ಇರಬೇಕು:

  • ಭಾರತದಲ್ಲಿ ಬ್ಯಾಂಕ್ ಅಕೌಂಟ್ ಹೊಂದಿರಬೇಕು
  • ಪ್ಯಾನ್ ಕಾರ್ಡ್
  • ಆಧಾರ್, ಪಾಸ್​ಪೋರ್ಟ್, ಡಿಎಲ್ ಇತ್ಯಾದಿ ಅಧಿಕೃತ ಕೆವೈಸಿ ದಾಖಲೆ
  • ಸಕ್ರಿಯ ಇಮೇಲ್ ಐಡಿ
  • ನೊಂದಾಯಿತ ಮೊಬೈಲ್ ನಂಬರ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ