AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sovereign Gold Bond: ಗೋಲ್ಡ್​ ಬಾಂಡ್​​ ಖರೀದಿಗೆ ಇಂದಿನಿಂದ ಅವಕಾಶ: ಕೊನೆಯ ದಿನ, ದರ ಸೇರಿ ನೀವು ತಿಳಿಯಬೇಕಾದ 10 ಮುಖ್ಯಾಂಶಗಳಿವು

Digital Gold: ಆಗಸ್ಟ್ 22ರಿಂದ 26ರವರೆಗೆ ಸಾವರಿನ್ ಗೋಲ್ಡ್​ ಬಾಂಡ್ ಸ್ಕೀಮ್​ನಡಿ ಚಿನ್ನದ ಬಾಂಡ್ ಖರೀದಿಸಲು ಅವಕಾಶವಿದೆ’ ಎಂದು ಎಸ್​ಬಿಐ ತನ್ನ ಗ್ರಾಹಕರನ್ನು ಟ್ವೀಟ್ ಮೂಲಕ ಹುರಿದುಂಬಿಸಿದೆ

Sovereign Gold Bond: ಗೋಲ್ಡ್​ ಬಾಂಡ್​​ ಖರೀದಿಗೆ ಇಂದಿನಿಂದ ಅವಕಾಶ: ಕೊನೆಯ ದಿನ, ದರ ಸೇರಿ ನೀವು ತಿಳಿಯಬೇಕಾದ 10 ಮುಖ್ಯಾಂಶಗಳಿವು
ಪ್ರಾತಿನಿಧಿಕ ಚಿತ್ರ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Aug 22, 2022 | 10:20 AM

Share

ಬೆಂಗಳೂರು: ಭಾರತೀಯ ರಿಸರ್ವ್​ ಬ್ಯಾಂಕ್ (Reserve Bank of India – RBI) ಸಾವರಿನ್ ಗೋಲ್ಡ್​ ಬಾಂಡ್ ಸ್ಕೀಮ್​ (Sovereign Gold Bond – SGB) ಹೆಸರಿನ ಚಿನ್ನದ ಬಾಂಡ್​ಗಳ ಹೊಸ ಸರಣಿಯನ್ನು ಮಾರುಕಟ್ಟೆ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಚಿನ್ನದ ಬಾಂಡ್​ ಇಂದಿನಿಂದಲೇ (ಆಗಸ್ಟ್ 22) ಖರೀದಿಗೆ ಲಭ್ಯವಿದ್ದು, ಆಗಸ್ಟ್ 26ರವರೆಗೆ ಖರೀದಿಗೆ ಅವಕಾಶ ಇರುತ್ತದೆ. ಈ ಸರಣಿಯಲ್ಲಿ ಒಂದು ಗ್ರಾಂ ಚಿನ್ನಕ್ಕೆ ಆರ್​ಬಿಐ ₹ 5,197 ನಿಗದಿಪಡಿಸಿದೆ. ಭಾರತೀಯ ಸ್ಟೇಟ್​ ಬ್ಯಾಂಕ್ (State Bank of India – SBI) ಸೇರಿದಂತೆ ಹಲವು ಬ್ಯಾಂಕ್​ಗಳು ಡಿಜಿಟಲ್ ರೂಪದಲ್ಲಿ ಬಾಂಡ್ ಖರೀದಿಗೆ ಅವಕಾಶ ಕಲ್ಪಿಸಿವೆ. ಡಿಮ್ಯಾಟ್​ ಖಾತೆ ಇರುವವರು ಡಿಮ್ಯಾಟ್ ಖಾತೆಗೆ ಬಾಂಡ್​ ಜಮಾ ಮಾಡಿಸಿಕೊಳ್ಳಬಹುದು. ಡಿಜಿಟಲ್ ರೂಪದಲ್ಲಿ ಬಾಂಡ್ ಖರೀದಿಸಿದವರಿಗೆ ₹ 50 ರಿಯಾಯ್ತಿಯೂ ಸಿಗುತ್ತದೆ. ‘ಚಿನ್ನ ಖರೀದಿಸುವ ಈ ಸುವರ್ಣಾವಕಾಶವನ್ನು ಕಳೆದುಕೊಳ್ಳಬೇಡಿ. ಆಗಸ್ಟ್ 22ರಿಂದ 26ರವರೆಗೆ ಸಾವರಿನ್ ಗೋಲ್ಡ್​ ಬಾಂಡ್ ಸ್ಕೀಮ್​ನಡಿ ಚಿನ್ನದ ಬಾಂಡ್ ಖರೀದಿಸಲು ಅವಕಾಶವಿದೆ’ ಎಂದು ಎಸ್​ಬಿಐ ತನ್ನ ಗ್ರಾಹಕರನ್ನು ಟ್ವೀಟ್ ಮೂಲಕ ಹುರಿದುಂಬಿಸಿದೆ. ಚಿನ್ನ ಬಾಂಡ್​ ಬಗ್ಗೆ ನೀವು ತಿಳಿಯಬೇಕಾದ 10 ಮುಖ್ಯ ಅಂಶಗಳಿವು…

  1. ಕೇಂದ್ರ ಸರ್ಕಾರದ ಪರವಾಗಿ ಭಾರತೀಯ ರಿಸರ್ವ್​ ಬ್ಯಾಂಕ್ ಚಿನ್ನದ ಬಾಂಡ್​ಗಳನ್ನು ಬಿಡುಗಡೆ ಮಾಡುತ್ತದೆ.
  2. ಬ್ಯಾಂಕ್​ಗಳು, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (Stock Holding Corporation of India Limited – SHCIL), ನಿಗದಿತ ಅಂಚೆ ಕಚೇರಿಗಳು, ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (NSE) ಮತ್ತು ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ (BSE) ಮೂಲಕ ಬಾಂಡ್​ಗಳು ಸಾರ್ವಜನಿಕರಿಗೆ ಲಭ್ಯವಾಗಲಿದೆ.
  3. ಪ್ರತಿ ಬಾಂಡ್​ ಒಂದು ಗ್ರಾಮ್ ಚಿನ್ನದ ಮೌಲ್ಯ ಹೊಂದಿರುತ್ತದೆ. ಈ ಬಾಂಡ್​ನ ಬೆಲೆಯನ್ನೂ ಚಿನ್ನದ ಬೆಲೆ ಆಧರಿಸಿಯೇ ನಿಗದಿಪಡಿಸಲಾಗುತ್ತದೆ. ವರ್ಷಕ್ಕೆ ಶೇ 2.5ರ ಬಡ್ಡಿಯನ್ನೂ ನೀಡಲಾಗುತ್ತದೆ.
  4. ಈ ಬಾಂಡ್​ಗಳ ಪರಿಪಕ್ವತಾ ಅವಧಿ 8 ವರ್ಷ. 5ನೇ ವರ್ಷದ ನಂತರ ಈ ಬಾಂಡ್​ಗಳ ಮಾರಾಟಕ್ಕೆ ಅವಕಾಶ ಇರುತ್ತದೆ. ಬಡ್ಡಿ ಪಾವತಿ ದಿನಾಂಕದಂದು ಬಾಂಡ್​ಗಳನ್ನು ಮಾರಬಹುದು.
  5. ಕನಿಷ್ಠ ಖರೀದಿ ಮೌಲ್ಯ 1 ಗ್ರಾಮ್ ಚಿನ್ನ (1 ಬಾಂಡ್).
  6. ಗರಿಷ್ಠ ಚಿನ್ನ ಖರೀದಿಗೂ ಮಿತಿಗಳಿವೆ. ವ್ಯಕ್ತಿಗಳು ಹಾಗೂ ಅವಿಭಕ್ತ ಕುಟುಂಬಕ್ಕೆ 4 ಕೆಜಿ ಖರೀದಿ ಮಿತಿಯಿದೆ. ಟ್ರಸ್ಟ್​ ಮತ್ತು ಅದೇ ರೀತಿಯ ಇತರ ಸಂಸ್ಥೆಗಳಿಗೆ ಒಂದು ಹಣಕಾಸು ವರ್ಷದಲ್ಲಿ 20 ಕೆಜಿಗೆ ಸರಿಸಮನಾದ ಮೌಲ್ಯದ ಚಿನ್ನದ ಬಾಂಡ್ ಖರೀದಿಗೆ ಅವಕಾಶವಿದೆ.
  7. ಚಿನ್ನದ ಬಾಂಡ್ ಖರೀದಿಗೆ ಕೆವೈಸಿ (Know-your-customer – KYC) ನಿಯಮಾವಳಿಯನ್ನು ಪೂರೈಸುವುದು ಅನಿವಾರ್ಯ.
  8. ಡಿಮ್ಯಾಟ್ ಅಥವಾ ಡಿಜಿಟಲ್ ರೂಪದಲ್ಲಿ ಬಾಂಡ್ ಖರೀದಿಸುವವರಿಗೆ ಕೇಂದ್ರ ಸರ್ಕಾರವು ₹ 50 ರಿಯಾಯ್ತಿ ಕೊಡುತ್ತದೆ. ಅರ್ಜಿಯನ್ನೂ ಆನ್​ಲೈನ್​ನಲ್ಲಿಯೇ ಹಾಕಬೇಕು, ಪಾವತಿಯನ್ನೂ ಡಿಜಿಟಲ್ ರೂಪದಲ್ಲಿಯೇ ಮಾಡಬೇಕು ಎನ್ನುವ ನಿಯಮ ವಿಧಿಸಲಾಗಿದೆ.
  9. ಮೊದಲ ಬಾರಿಗೆ ನವೆಂಬರ್ 2015ರಲ್ಲಿ ಬಾಂಡ್​ ಸರಣಿಯನ್ನು ಬಿಡುಗಡೆ ಮಾಡಲಾಯಿತು. ಭೌತಿಕ ರೂಪದಲ್ಲಿ ಚಿನ್ನ ಖರೀದಿಗೆ ಇರುವ ಬೇಡಿಕೆ ಕಡಿಮೆ ಮಾಡುವುದು ಮತ್ತು ಹೂಡಿಕೆಯ ಭಾಗವಾಗಿ ಚಿನ್ನವನ್ನು ಪರಿಗಣಿಸುವವರಿಗೆ ಮತ್ತೊಂದು ರೀತಿಯ ಅವಕಾಶ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶ.
  10. ಗೋಲ್ಡ್​ ಬಾಂಡ್ ಘೋಷಣೆಯ ಮುನ್ನಾದಿನಕ್ಕೆ ಮೊದಲಿನ ಮೂರು ದಿನಗಳ ಚಿನ್ನದ ಬೆಲೆಯ ಸರಾಸರಿಯನ್ನು ಲೆಕ್ಕಹಾಕಿ ಬಾಂಡ್​ನ ಮೌಲ್ಯ ನಿರ್ಧರಿಸಲಾಗುತ್ತದೆ. ಉಳಿತಾಯ ಮತ್ತು ಹೂಡಿಕೆಗಾಗಿ ಚಿನ್ನ ಖರೀದಿಸುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ.

Published On - 8:15 am, Mon, 22 August 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ